• Home
  • »
  • News
  • »
  • jobs
  • »
  • Foreign Study: ವಿದೇಶದಲ್ಲಿ ಅಲೆಮಾರಿಗಳಾದ ಭಾರತೀಯ ವಿದ್ಯಾರ್ಥಿಗಳು, ಇವರು ಅನುಭವಿಸುವ ಕಷ್ಟ ಹೇಗಿದೆ ನೋಡಿ

Foreign Study: ವಿದೇಶದಲ್ಲಿ ಅಲೆಮಾರಿಗಳಾದ ಭಾರತೀಯ ವಿದ್ಯಾರ್ಥಿಗಳು, ಇವರು ಅನುಭವಿಸುವ ಕಷ್ಟ ಹೇಗಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹನ್ನೆರಡನೇ ತರಗತಿ ಓದುತ್ತಿರುವ ಸ್ಕಂದಾ ರಾಜೀವ್ ಅವರು ಮೊದಲಿನಿಂದಲೂ ಯುಕೆಯಿಂದ ಪದವಿಗಳಿಸುವ ಕನಸು ಕಂಡಿದ್ದರು. ಆದರೆ, ಈಗ ವಿಪರೀತವಾಗಿ ಆರ್ಥಿಕ ಹೀನಾಯ ಪರಿಸ್ಥಿತಿಯನ್ನು ಕಾಣುತ್ತಿರುವ ಯುಕೆಯನ್ನು ಕಂಡು ತಮ್ಮ ನಿರ್ಧಾರ ಬದಲಿಸಿದ್ದಾರೆ.

  • Trending Desk
  • Last Updated :
  • New Delhi, India
  • Share this:

ಕೆಲ ಕೈಗಾರಿಕಾ ಪರಿಣಿತರು ಹಾಗೂ ಹಲವು ವಿದ್ಯಾರ್ಥಿಗಳ ಪ್ರಕಾರ ವಿದೇಶದಲ್ಲಿ ಅಧ್ಯಯನ ಎಂಬ ಪ್ರಯಾಣವು ಭಾರತೀಯ (Indian) ಮೂಲಸ ವಿದ್ಯಾರ್ಥಿಗಳಿಗೆ (Students) ಆಘಾತಕಾರಿ ಸ್ವಪ್ನವಾದಂತಾಗಿದೆ.  ದಿಕ್ಕು ದೆಸೆಯಿಲ್ಲದ  ಅಕ್ಷರಶಃ ನುಂಗಲಾರದ ತುಪ್ಪವಾದಂತಾಗಿದೆ. ಇತ್ತೀಚಿಗಷ್ಟೇ ಯುಕೆ ಭಾರತೀಯ ವಿದ್ಯಾರ್ಥಿಗಳಿಗೆ ತನ್ನ ದೇಶದಲ್ಲಿ ಉನ್ನತ ಶಿಕ್ಷಣ (Higher Education) ಪಡೆಯಲು ನೆರವಾಗುವಂತೆ ಹೆಚ್ಚಿನ ಸಂಖ್ಯೆ ವಿಸಾ ನೀಡಿತ್ತು. ಇದರಿಂದ ವಿದ್ಯಾರ್ಥಿಗಳೂ ಸಹ ಸಾಕಷ್ಟು ಖುಷಿಯಾಗಿದ್ದರು. ಆದರೆ, ಯುಕೆಯಲ್ಲೀಗ ಹಣದುಬ್ಬರದ ಏರಿಕೆಯಿಂದಾಗಿ ಗಗನಕ್ಕೇರಿದ ಮೂಲ ಸೌಕರ್ಯಗಳಾದಿಗಳ ಬೆಲೆಗಳಿಂದ  ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ಕಾಲೇಜು (College) ಅಥವಾ ವಿವಿಗಳಿರುವ ನಗರಗಳಲ್ಲಿ ವಾಸಿಸಲು ಸೂರುಗಳು ಸಿಗದೆ, ಜೀವನ ಸಾಗಿಸಲು ದೊಡ್ಡ ಸವಾಲನ್ನೆದುರಿಸುವಂತಾಗಿದೆ.


ಕೆಲ ಕೈಗಾರಿಕಾ ಪರಿಣಿತರು ಹಾಗೂ ಹಲವು ವಿದ್ಯಾರ್ಥಿಗಳು ಹೇಳುವಂತೆ ವಿದೇಶದಲ್ಲಿ ಅಧ್ಯಯನ ಎಂಬುದು ಬಹಳಷ್ಟು ವಿದ್ಯಾರ್ಥಿಗಳ ಪಾಲಿಗೆ ಇದು ಕಷ್ಟವಾಗುತ್ತಿದೆ.  ತಲೆಗೆ ಸೂರಿಲ್ಲದೆ, ದಿಕ್ಕು ದೆಸೆಯಿಲ್ಲದ ಪ್ರಥಮ ಬಾರಿಗೆ ಕಾಲಿಟ್ಟ ವಿದ್ಯಾರ್ಥಿಗಳಿಗೆ ದೇಶವು ಆತಂಕ ತರುತ್ತಿದೆ. ಅಕ್ಷರಶಃ ನುಂಗಲಾರದ ತುಪ್ಪವಾದಂತಾಗಿದೆ.


ಸಾಕಷ್ಟು ವಿದ್ಯಾರ್ಥಿಗಳಿಗೆ ವಾಸಿಸಲು ಮನೆಯನ್ನು ಹುಡುಕುವುದೇ ಒಂದು ದೊಡ್ಡ ಸವಾಲಾಗಿದ್ದರೆ ಹಣದುಬ್ಬರದಿಂದಾಗಿ ಗಗನಕ್ಕೇರಿದ ಆಹಾರ, ತಿಂಡಿ-ತಿನಿಸುಗಳ ಬೆಲೆಗಳಿಂದಾಗಿ ಜೀವನ ನಿರ್ವಹಣೆಯೂ ದೊಡ್ಡ ತಲೆನೋವಾಗಿ ಪರಿಣಮಿಸಿದೆ. 2022 ರಲ್ಲಿ ಯುಕೆಯ ಹಣದುಬ್ಬರವು ದಾಖಲೆ ಮಟ್ಟದ ಏರಿಕೆ ಕಂಡಿದೆ. ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ ಪ್ರಕಾರ, ವಾಸದ ಮನೆಗಳ ಬೆಲೆಯು ಕಳೆದ ಹನ್ನೆರಡು ತಿಂಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಸೆಪ್ಟೆಂಬರ್ 2022 ರವರೆಗೆ 8.8% ರಷ್ಟು ಏರಿದೆ. ಇತ್ತೀಚಿನ ನವೆಂಬರ್ ಅಂಕಿಅಂಶಗಳನ್ನು ಪರಿಗಣಿಸಿದರೆ ದೇಶದಲ್ಲಿ ಹಣದುಬ್ಬರದ ಪ್ರಮಾಣವು 9.3ಗೆ ಮುಟ್ಟಿದೆ.


ಇದನ್ನೂ ಓದಿ: UGCET: ಫಾರ್ಮ್ ಸೈನ್ಸ್, ವೆಟರಿನರಿ ಕೋರ್ಸ್‌ಗಳ ಸೀಟು ಹಂಚಿಕೆ ಮಾಹಿತಿ ಇಲ್ಲಿದೆ


ಬ್ರಿಟಿಷ್ ಹೈ ಕಮಿಷನ್ ಅಂಕಿ ಅಂಶಗಳ ಪ್ರಕಾರ, ಈ ಬಾರಿ ಯುಕೆ ಭಾರತೀಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿಸಾಗಳನ್ನು ನೀಡಿದ್ದು ಇದು ಹಿಂದಿದ್ದ ಚೀನಾ ದೇಶಕ್ಕೆ ನೀಡಲಾಗುತ್ತಿದ್ದ ವಿಸಾಗಳ ಸಂಖ್ಯೆಗಿಂತಲೂ ಹೆಚ್ಚಿನದ್ದಾಗಿದೆ. ಸೆಪ್ಟೆಂಬರ್ 2022ರ ವರ್ಷಾಂತ್ಯದವರೆಗೆ ಯುಕೆ ಸುಮಾರು 1.27 ಲಕ್ಷ ಭಾರತೀಯರಿಗೆ ವಿದ್ಯಾರ್ಥಿ ವಿಸಾ ನೀಡಿದೆ.


ಅಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳ ಮಾತು


Airbnb ಗಳ ಮಧ್ಯೆ ಸ್ಥಳಾಂತರಗೊಳ್ಳಲು ಕೇವಲ ಒಂದು ತಿಂಗಳಿನಲ್ಲಿ ಒಂದು ಲಕ್ಷ ರೂಪಾಯಿಗಿಂತಲೂ ವೆಚ್ಚ ಮಾಡಬೇಕಾಗಿ ಬಂದಿತು ಎಂಬ ಅಳಲನ್ನು ಚಾಯನಿಕಾ ದುಬೆ ತೋಡಿಕೊಳ್ಳುತ್ತಾರೆ. ಅವರು ಮೂರು ತಿಂಗಳ ಹಿಂದಷ್ಟೇ ಸಾಂಸ್ಕೃತಿಕ ನೀತಿಯಲ್ಲಿ ಗೋಲ್ಡ್ ಸ್ಮಿತ್ ವಿವಿಯಿಂದ ತಮ್ಮ ಮಾಸ್ಟರ್ ಪದವಿಯನ್ನು ಪೂರ್ಣಗೊಳಿಸಲು ಲಂಡನ್ ಗೆ ಬಂದಿದ್ದಾರೆ.


ಬಯಕೆ ಹಾಗೂ ಆಸೆಗಳನ್ನು ನಿಯಂತ್ರಿಸುತ್ತಿರುವುದಾಗಿ ಹೇಳಿದ್ದಾರೆ


ಪ್ರತಿನಿತ್ಯ ಅವರು ಕಾಲೇಜು ಮುಗಿಸಿಕೊಂಡು ವಾಸಕ್ಕಾಗಿ ಕಡಿಮೆ ವೆಚ್ಚದ ಮನೆಗಳ ಶೋಧಕ್ಕಾಗಿ ಹುಡುಕಾಡುತ್ತಿರುವುದಾಗಿ ಹೇಳುತ್ತಾರೆ. ಇನ್ನು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಎಂಎಸ್ಸಿ ಮಾಡುತ್ತಿರುವ ನಮನ್ ಮಕ್ಕರ್ ಅವರು ಹೆಚ್ಚುತ್ತಿರುವ ಬೆಲೆಗಳಿಂದ  ಮುಂದೆ ಪರಿಸ್ಥಿತಿ ಸುಧಾರಿಸಬಹುದೆಂಬ ಆಶಾಭಾವನೆ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಅವರು ಕೇವಲ ಅನಿವಾರ್ಯವಾದ ವಸ್ತುಗಳಿಗೆ ಮಾತ್ರವೇ ಹಣ ವ್ಯಯಿಸುತ್ತಿದ್ದು ತಮ್ಮ ಹಲವು ಬಯಕೆ ಹಾಗೂ ಆಸೆಗಳನ್ನು ನಿಯಂತ್ರಿಸುತ್ತಿರುವುದಾಗಿ ಹೇಳುತ್ತಾರೆ.


ಹಣ ಸಾಲುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ


ಇನ್ನು ರಿಯಾ ಜೈನ್ ಅವರು ಏಳು ವರ್ಷಗಳ ಹಿಂದೆ ತಮ್ಮ ಪದವಿಯನ್ನು ಲಂಡನ್ನಿನಲ್ಲಿ ಗಳಿಸಿದ್ದರು. ಈಗ ಹೆಚ್ಚಿನ ಅಧ್ಯಯನಕ್ಕಾಗಿ ಅವರು ತಾವು ಈ ಹಿಂದಿದ್ದ ಅದೇ ಸ್ಥಳವನ್ನೇ ಮತ್ತೆ ಆಯ್ಕೆ ಮಾಡಿದ್ದಾರೆ. ಅವರು ಹೇಳುವಂತೆ ಈ ಹಿಂದೆ ಅವರು ಒಂದು ವಾರಕ್ಕೆ ವ್ಯಯಿಸುತ್ತಿದ್ದ ಆಹಾರದ ವೆಚ್ಚವು ಈಗ ಕೇವಲ ನಾಲ್ಕು ದಿನಗಳಿಗೆ ಮಾತ್ರವೇ ಸಾಕಾಗುತ್ತಿದೆ ಎನ್ನುತ್ತಾರೆ.


ಪದವಿಗಳಿಸುವ ಕನಸು ನನಸಾಗುವುದು ಕಷ್ಟ


ಹನ್ನೆರಡನೇ ತರಗತಿ ಓದುತ್ತಿರುವ ಸ್ಕಂದಾ ರಾಜೀವ್ ಅವರು ಮೊದಲಿನಿಂದಲೂ ಯುಕೆಯಿಂದ ಪದವಿಗಳಿಸುವ ಕನಸು ಕಂಡಿದ್ದರು. ಆದರೆ, ಈಗ ವಿಪರೀತವಾಗಿ ಆರ್ಥಿಕ ಹೀನಾಯ ಪರಿಸ್ಥಿತಿಯನ್ನು ಕಾಣುತ್ತಿರುವ ಯುಕೆಯನ್ನು ಕಂಡು ಇದೀಗ ಅವರು ಯುಕೆಗಿಂತಲೂ ಆರ್ಥಿಅಕವಾಗಿ ಕಡಿಮೆ ಬಳಲುತ್ತಿರುವ ದೇಶದಲ್ಲಿ ತಮ್ಮ ವ್ಯಾಸಂಗ ಮುಂದುವರೆಸಲು ನಿರ್ಧರಿಸಿದ್ದಾರೆ.


ಯುಕೆ ನೆಚ್ಚಿನ ಶಿಕ್ಷಣ ದೇಶವಾಗಿ ಹೊರಹೊಮ್ಮಿದೆ


ಹಾಗೆ ನೋಡಿದರೆ ಯುಎಸ್, ಯುಕೆ, ಕೆನಡಾ ಹಾಗೂ ಆಸ್ಟ್ರೇಲಿಯಾ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯುವ ನೆಚ್ಚಿನ ದೇಶಗಳಾಗಿವೆ. ಕೆನಡಾದಲ್ಲಿನ ಹೆಚ್ಚಿನ ವಿಸಾ ತಿರಸ್ಕರಣೆಗಳಿಂದಾಗಿ ಯುಕೆ ನೆಚ್ಚಿನ ಶಿಕ್ಷಣ ದೇಶವಾಗಿ ಹೊರಹೊಮ್ಮಿದೆ ಎನ್ನುವ ರಾಜೀವ್ ಅವರು ಕೆನಡಾದಲ್ಲಿ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಪದವಿ ಪಡೆಯುವ ಗುರಿ ಹೊಂದಿದ್ದಾರೆ.


ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಹಣಕಾಸು ವ್ಯವಸ್ಥೆ ಮಾಡುವ ಗ್ಯಾನ್ ಧನ್ ಸಂಸ್ಥೆಯ ಸಹ-ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ಅಂಕಿತ್ ಮೆಹ್ರಾ ಅವರ ಪ್ರಕಾರ, ಯುಕೆಯ ಗೃಹ ಮಂತ್ರಾಲಯವು ವಿದ್ಯಾರ್ಥಿ ವಿಸಾಗಾಗಿ ಬದಲಾಯಿರುವ ನೀತಿ-ನಿಯಮಗಳು ಉತ್ತಮವಾಗಿದ್ದು ಭಾರತೀಯ ವಿದ್ಯಾರ್ಥಿಗಳಿಗೆ ನೇರವಾಗಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.


ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ


ಆದರೆ, ವಾಸಿಸಲು ಸೂರುಗಳ ಬೆಲೆ ಹೆಚ್ಚಾಗಿದ್ದು ಇದು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಉಂಟು ಮಾಡುತ್ತಿದೆ. ಇದು ಟಾಪ್-ಅಪ್ ಲೋನ್ ಗಳನ್ನು ಹೆಚ್ಚು ಹೆಚ್ಚು ಪಡೆದುಕೊಳ್ಳುವಂತೆ ಮಾಡುತ್ತಿದ್ದು ಈ ಪ್ರಕ್ರಿಯೆಯಲ್ಲಿ ಟಾಪ್-ಅಪ್ ಲೋನ್ ಯೋಜನೆಗಳು ವೃದ್ಧಿಯಾಗುತ್ತಿವೆ ಎಂದು ಮೆಹ್ರಾ ಹೇಳುತ್ತಾರೆ.


ಕಳೆದ 8-10 ವರ್ಷಗಳಿಂದ ಯುಕೆ ಮನೆಗಳ ಸಮಸ್ಯೆಯನ್ನು ಎದುರಿಸುತ್ತಿದೆ


ವಿದ್ಯಾರ್ಥಿಗಳಿಗೆ ಹೊರದೇಶಗಳಲ್ಲಿ ಸಮರ್ಪಕ ವಾಸಸ್ಥಾನಗಳನ್ನು ಹೊಂದಿಸಿಕೊಡುವ UniAcco ಸಂಸ್ಥೆಯ ಅಮಿತ್ ಸಿಂಗ್ ಹೇಳುವಂತೆ ಕಳೆದ 8-10 ವರ್ಷಗಳಿಂದ ಯುಕೆ ಮನೆಗಳ ಸಮಸ್ಯೆಯನ್ನು ಎದುರಿಸುತ್ತಿದೆ.ಇದರಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತಲ್ಲಣ ಉಂಟಾಗಿದೆ ಎಂದು ವಿವರಿಸುತ್ತಾರೆ. ಒಟ್ಟಿನಲ್ಲಿ ಯುಕೆಗೆ ಈಗ ಭಾರತೀಯ ವಿದ್ಯಾರ್ಥಿಗಳು ಹೆಚ್ಚಿನ ಶಿಕ್ಷಣಕ್ಕಾಗಿ ಹೋಗಲು ಸುಲಭವಾಗಿದ್ದರೂ ಅಲ್ಲಿ ನೆಲೆಸಿ ಜೀವನ ನಿರ್ವಹಣೆ ಮಾಡುವುದು ಕಷ್ಟವೇ ಆಗುತ್ತಿದೆ. ಪರಿಸ್ಥಿತಿ ಮುಂದೆ ಯಾವ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಷ್ಟೆ.

First published: