PHD ಮಾಡುತ್ತಿರುವ ಅಭ್ಯರ್ಥಿಗಳಿಗೆ ನಕಲಿ ಅಂಕಪಟ್ಟಿಯನ್ನು (Marks Card) ನೀಡುತ್ತಿರುವ ಸುದ್ಧಿ (News) ತಿಳಿದುಬಂದಿದೆ. ಅಷ್ಟೇ ಅಲ್ಲ ಇದೊಂದು ದುಡ್ಡು ಮಾಡುವ ದಂದೆಯಾಗಿ ಬದಲಾಗುತ್ತಿದೆ. ಈ ಅಂಕ ಪಟ್ಟಿಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶಾದ್ಯಂತ ಸುಮಾರು 18 ವಿಶ್ವವಿದ್ಯಾನಿಲಯಗಳ ನಕಲಿ ಅಂಕಪಟ್ಟಿಗಳನ್ನು (Fake Marks Card) ವಾಟ್ಸಾಪ್ (WhatsApp) ಮತ್ತು ಇತರ ವೇದಿಕೆಗಳಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ಅನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಈ ಗ್ಯಾಂಗ್ ಬಗ್ಗೆ ನಗರದ ಮೂರು ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದು ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಮಾರಾಟ (Sold) ಮಾಡುತ್ತಿದೆ ಎಂದು ಬೆಂಗಳೂರು ಪೊಲೀಸರ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ತಿಳಿಸಿದೆ.
ಬಂಧಿತರನ್ನು ಶ್ರೀ ವೆಂಕಟೇಶ್ವರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ (40), ರಾಜಣ್ಣ (28), ಶಿಲ್ಪಾ (27) ಮತ್ತು ಶಾರದಾ (30) ಎಂದು ಗುರುತಿಸಲಾಗಿದೆ. ಸಂಸ್ಥೆಯ ಮಾಲೀಕ ಆಂಧ್ರಪ್ರದೇಶ ಮೂಲದ ಶ್ರೀನಿವಾಸ್ ರೆಡ್ಡಿ ಹಾಗೂ ಸಂಬಂಧಿಸಿದ ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
1097 ನಕಲಿ ಮಾರ್ಕ್ಸ್ ಕಾರ್ಡ್ ಸೇಲ್
ಪೊಲೀಸರು 1097 ನಕಲಿ ಮಾರ್ಕ್ಸ್ ಕಾರ್ಡ್ಗಳು, ಸೀಲುಗಳು ಮತ್ತು ಇತರ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ಹಾರ್ಡ್ ಡಿಸ್ಕ್ ಮತ್ತು ಪಿಎಚ್ಡಿ ಪ್ರಬಂಧ ಪುಸ್ತಕಗಳನ್ನು ಸಹ ವಶಪಡಿಸಿಕೊಂಡಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸಿಎಚ್ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ: DRDO Scholarship: 1 ಲಕ್ಷ ವಿದ್ಯಾರ್ಥಿವೇತನ! ಈ ವರ್ಷ ನೀವು ಅಪ್ಲೈ ಮಾಡಬಹುದಾದ ಕೊನೆಯ ಸ್ಕಾಲರ್ ಶಿಪ್ ಇದು
ಆರೋಪಿಗಳು ದೇಶಾದ್ಯಂತ 18 ವಿಶ್ವವಿದ್ಯಾನಿಲಯಗಳ ಪ್ರಿ-ಯೂನಿವರ್ಸಿಟಿ, ಬಿಎ, ಬಿಕಾಮ್, ಬಿಎಸ್ಸಿ, ಬಿಬಿಎ, ಎಂಜಿನಿಯರಿಂಗ್ ಮತ್ತು ಎಂಬಿಎ ಪದವಿಗಳ ಅಂಕಪಟ್ಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪದವಿ ಆಕಾಂಕ್ಷಿಗಳಿಂದ 50,000 ರಿಂದ 1,00,000 ರೂಪಾಯಿಗಳವರೆಗೆ ಹಣವನ್ನು ಸಂಗ್ರಹಿಸುತ್ತಿದ್ದರಂತೆ. ಅಷ್ಟೇ ಅಲ್ಲ ಡಾಕ್ಟರೇಟ್ ಎಂದರೆ ಪಿಎಚ್ಡಿ ಪ್ರಮಾಣಪತ್ರಗಳು ಬೇಕು ಎಂದವರಿಂದ 10 ಲಕ್ಷದಿಂದ 20 ಲಕ್ಷ ರೂಪಾಯಿಗಳಿಗೆ ಹಣ ಪಡೆಯುತ್ತಿದ್ದರಂತೆ.
ಪ್ರಶ್ನೆ ಪತ್ರಿಕೆಯೊಟ್ಟಿಗೆ ಉತ್ತರ ಪತ್ರಿಕೆಯೂ ಸಿದ್ಧವಿರುತ್ತೆ
ಕೆಲವು ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವಂತೆ ಹೇಳಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಅವರ ಮನೆಗೆ ಕಳುಹಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ನವೆಂಬರ್ 2 ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನಲ್ಲಿರುವ ಅವರ ಕಚೇರಿಗೆ ಬಿಕಾಮ್ ಪರೀಕ್ಷೆ ತೆಗೆದುಕೊಳ್ಳಲು ಆಕಾಂಕ್ಷಿಯೊಬ್ಬರು ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಿಬ್ಬಂದಿ ಪ್ರಮಾಣ ಪತ್ರ ನೀಡುವುದಾಗಿ ಭರವಸೆ ನೀಡಿದ್ದು, ಆಕಾಂಕ್ಷಿ 40 ಸಾವಿರ ರೂ.ಹಣ ಪಡೆದಿದ್ದಾರೆ.
ಉಳಿದ 60,000 ಸಾವಿರ ಕೊಟ್ರೇನೆ ಮಾರ್ಕ್ಸ್ ಕಾರ್ಡ್
ಪರೀಕ್ಷೆಗೆ ಯಾವಾಗ ಹಾಜರಾಗಬೇಕು ಎಂದು ಆಕಾಂಕ್ಷಿ ಕೇಳಿದಾಗ, ಸಿಬ್ಬಂದಿ ನೀವು ಪರೀಕ್ಷೆ ಬರೆಯಬೇಕು ಎಂಬ ಅಗತ್ಯವಿಲ್ಲ. ನಿಮ್ಮ ಪರವಾಗಿ ಯಾರಾದರೂ ಬಂದು ಪರೀಕ್ಷೆ ಬರೆದು ಹೋಗಬಹುದು ಎಂದರಂತೆ. ಅದಾದ ನಂತರ ನಿಮಗೆ ಅಂಕ ಪಟ್ಟಿ ಬರುತ್ತದೆ ಎಂದು ತಿಳಿಸಿದರಂತೆ. ನವೆಂಬರ್ 26 ರಂದು, ಆಕಾಂಕ್ಷಿಯು ಪ್ರಥಮ ಮತ್ತು ದ್ವಿತೀಯ ವರ್ಷದ ಅಂಕಪಟ್ಟಿಗಳನ್ನು ಪಡೆದಿದ್ದು, ಅಂತಿಮ ವರ್ಷದ ಅಂಕಪಟ್ಟಿ ಕೇಳಿದಾಗ, ಉಳಿದ 60,000 ರೂ.ಗಳನ್ನು ಪಾವತಿಸುವಂತೆ ಕೇಳಿದರಂತೆ.
ಸೈಬರ್ ಕ್ರೈಂ ಅಡಿಯಲ್ಲಿ ಕಂಪ್ಲೇಂಟ್
ಈ ಕಾರ್ಯಾಚರಣೆಯ ಸಲುವಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, 12 ಗಂಟೆಗಳ ಕಾರ್ಯಾಚರಣೆಯಲ್ಲಿ ಮಾರತ್ತಹಳ್ಳಿ, ಕೊಡಿಗೇಹಳ್ಳಿ ಮತ್ತು ಮಹಾಲಕ್ಷ್ಮಿ ಲೇಔಟ್ನಲ್ಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಅಂಕ ಪಟ್ಟಿ ಪಡೆದವರ ಪರಿಶೀಲನೆ
ವಶಪಡಿಸಿಕೊಂಡ ಅಂಕಪಟ್ಟಿಗಳು ಬಿಲಾಸ್ಪುರದ ಡಾ.ಸಿ.ವಿ.ರಾಮನ್ ವಿಶ್ವವಿದ್ಯಾಲಯ, ಆಂಧ್ರಪ್ರದೇಶದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ವಿಲಿಯಂ ಕ್ಯಾರಿ ವಿಶ್ವವಿದ್ಯಾಲಯ, ಶಿಲ್ಲಾಂಗ್, ಈಶಾನ್ಯ ಫ್ರಾಂಟಿಯರ್ ತಾಂತ್ರಿಕ ವಿಶ್ವವಿದ್ಯಾಲಯ, ಅರುಣಾಚಲ ಪ್ರದೇಶ, ಗುಜರಾತ್ನ ಕ್ಯಾಲೋರ್ಕ್ಸ್ ಶಿಕ್ಷಕರ ವಿಶ್ವವಿದ್ಯಾಲಯ, ಸ್ವಾಮಿ ವಿವೇಕಾನಂದ ಜಾಗತಿಕ ವಿಶ್ವವಿದ್ಯಾಲಯ, ಪಶ್ಚಿಮ ಬಂಗಾಳ, ಈಸ್ಟರ್ನ್ ಇನ್ಸ್ಟಿಟ್ಯೂಟ್ ಫಾರ್ ಇಂಟಿಗ್ರೇಟೆಡ್ ಲರ್ನಿಂಗ್ ಇನ್ ಮ್ಯಾನೇಜ್ಮೆಂಟ್, ಸಿಕ್ಕಿಂ, EIILM ವಿಶ್ವವಿದ್ಯಾಲಯ, ಸಿಕ್ಕಿಂ, VS ಪ್ರಸನ್ನ ಭಾರತಿ ವಿಶ್ವವಿದ್ಯಾಲಯ, ಹರಿಯಾಣ, IEC ವಿಶ್ವವಿದ್ಯಾಲಯ, ಹಿಮಾಚಲ ಪ್ರದೇಶ, ಇತರ ಸಂಸ್ಥೆಗಳದ್ದಾಗಿದ್ದು ಅಂಕ ಪಟ್ಟಿ ಪಡೆದವರನ್ನು ಪರಿಶೀಲನೆಗೊಳಪಡಿಸಲಾಗುವುದು ಎಂದು ತಿಳಿದು ಬಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ