ಆಗಾಗ ಮಾರ್ಕ್ಸ್ ಕಾರ್ಡ್ ಕುರಿತು ಸುದ್ಧಿಯಾಗುತ್ತಲೇ (News) ಇರುತ್ತದೆ. ಈಗಲೂ ಕೂಡ ಅಂತದೇ ಒಂದು ಘಟನೆ ಬೆಳಕಿಗೆ ಬಂದಿದೆ. ಎಷ್ಟೋ ಜನ ವಿದ್ಯಾರ್ಥಿಗಳು ಪ್ರಾಮಾಣಿಕ ಪ್ರಯತ್ನದಿಂದ ಓದಿ ಪಾಸ್ (Pass) ಆದರೆ ಇನ್ನು ಕೆಲವರು ಪರೀಕ್ಷೆಯನ್ನೇ (Exam) ಬರೆಯದೆ ನಕಲಿ ಅಂಕಪಟ್ಟಿ (Marks Card) ಪಡೆದು ಕೆಲಸ ಗಿಟ್ಟಿಸಿಕೊಳ್ತಾರೆ. ಈ ನಕಲಿ ಮಾರ್ಕ್ಸ್ ಕಾರ್ಡ್ ಸಂಬಂಧ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಇನ್ನಷ್ಟು ಮಾಹಿತಿಗಾಗಿ ಪೂರ್ತಿ ಸುದ್ದಿ ಓದಿ.
ಈ ಹಿಂದೆ ಸಿಕ್ಕ ಮಾಹಿತಿಯ ಪ್ರಕಾರ ನಕಲಿ ಮಾರ್ಕ್ಸ್ ಕಾರ್ಡ್ ಜಾಲದ ಮೇಲೆ ದಾಳಿ ನಡೆದಿದೆ. ಈಗಾಗಲೇ 5 ಸಂಸ್ಥೆಗಳ ಮೇಲೆ ದಾಳಿ ಮಾಡಲಾಗಿದೆ. ಮೂರು ದಿನದಿಂದ ನಿರಂತರವಾಗಿ ದಾಳಿ ಹಾಗೂ ಪರಿಶೀಲನೆ ನಡೆಯುತ್ತಲೇ ಇದೆ. 6800 ವಿವಿಧ ಮಾರ್ಕ್ಸ್ ಕಾರ್ಡ್ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
15 ಯೂನಿವರ್ಸಿಟಿಯ ನಕಲಿ ಮಾರ್ಕ್ಸ್ ಕಾರ್ಡ್ ವಶಕ್ಕೆ ಪಡೆದಿದ್ದೇವೆ. 22 ಕಂಪ್ಯೂಟರ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ.ಇದರಲ್ಲೇ ತಿಳಿಯುತ್ತದೆ ಇವರ ಜಾಲ ಎಷ್ಟು ದೊಡ್ಡದಿದೆ ಎಂದು. ಇಷ್ಟೋಂದು ಪರಿಕರಗಳನ್ನು ಬಳಸಿಕೊಂಡು ನಕಲಿ ಅಂಕ ಪಟ್ಟಿಯನ್ನು ಸಿದ್ಧಗೊಳಿಸುವುದೇ ಇವರ ಕಾಯಕವಾಗಿತ್ತಿ ಈ ಸಂಬಂಧ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Union Budget 2023: ಈ ಬಾರಿ ಶಿಕ್ಷಣ ಕ್ಷೇತ್ರಕ್ಕೆ ಸಿಗಲಿದೆ ಬಂಪರ್ ಕೊಡುಗೆ!
ಯಾರಾದ್ರು ಫೇಕ್ ಮಾರ್ಕ್ಸ್ ಕಾರ್ಡ್ ಪಡೆದಿದ್ದರೆ ಅವರ ವಿರುದ್ಧವೂ ಕೇಸ್ ದಾಖಲು ಮಾಡುತ್ತೇವೆ ಎಂದು ತಿಳಿಸಿದ್ದಾರೆ ಈ ಕಾರಣದಿಂದ ನಕಲಿ ಅಂಕ ಪಟ್ಟಿ ಮಾಡಿಸಿಕೊಂಡವರೂ ಸಹ ಭಯ ಪಡುತ್ತಿದ್ದಾರೆ. ತಾವು ಯಾವಾಗ ಸಿಕ್ಕಿ ಬೀಳುತ್ತೇವೋ ಎಂದು ಆತಂಕ ಪಡುತ್ತಿದ್ದಾರೆ. ಈ ಹಿಂದಿನ ಕೇಸಲ್ಲಿ 23 ಯೂನಿವರ್ಸಿಟಿಗೆ ಮಾಹಿತಿಯನ್ನ ನೀಡಿದ್ದೇವೆ. ಯೂನಿವರ್ಸಿಟಿಯಿಂದ ಫೇಕ್ ಮಾರ್ಕ್ಸ್ ಕಾರ್ಡ್ ಅನ್ನೋ ಉತ್ತರ ಬಂದಿದೆ. ಈಗ ಸಿಕ್ಕ ಮಾರ್ಕ್ಸ್ ಕಾರ್ಡ್ ಬಗ್ಗೆ ಸಂಬಂಧಪಟ್ಟ ವಿವಿಗಳಿಗೆ ಮಾಹಿತಿ ನೀಡಲಾಗುತ್ತೆ ಎಂದು ಹೇಳಿದ್ದಾರೆ.ಮಾರ್ಕ್ಸ್ ಕಾರ್ಡ್ ನಕಲಿಯೊ ಅಸಲಿಯೋ ಅನ್ನೋ ಮಾಹಿತಿ ಕೇಳುತ್ತೇವೆ ಎಂದು ಕಮೀಷನರ್ ಪ್ರತಾಪ್ ರೆಡ್ಡಿ ಹೇಳಿಕೆ ನೀಡಿದ್ದಾರೆ.
1097 ನಕಲಿ ಮಾರ್ಕ್ಸ್ ಕಾರ್ಡ್ ಸೇಲ್
ಪೊಲೀಸರು 1097 ನಕಲಿ ಮಾರ್ಕ್ಸ್ ಕಾರ್ಡ್‌ಗಳು, ಸೀಲುಗಳು ಮತ್ತು ಇತರ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಲವು ಹಾರ್ಡ್ ಡಿಸ್ಕ್ ಮತ್ತು ಪಿಎಚ್‌ಡಿ ಪ್ರಬಂಧ ಪುಸ್ತಕಗಳನ್ನು ಸಹ ವಶಪಡಿಸಿಕೊಂಡಿದ್ದೇವೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಸಿಎಚ್ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ. ಈ ಕೇಸ್ ದಾಖಲಾಗಿ ಹಲವಾರು ದಿನ ಕಳೆದಿದೆ.
ಅಂಕಪಟ್ಟಿಗಳನ್ನು ಮಾರಾಟ ಮಾಡಿದ ಆರೋಪಿಗಳು
ಆರೋಪಿಗಳು ದೇಶಾದ್ಯಂತ 18 ವಿಶ್ವವಿದ್ಯಾನಿಲಯಗಳ ಪ್ರಿ-ಯೂನಿವರ್ಸಿಟಿ, ಬಿಎ, ಬಿಕಾಮ್, ಬಿಎಸ್ಸಿ, ಬಿಬಿಎ, ಎಂಜಿನಿಯರಿಂಗ್ ಮತ್ತು ಎಂಬಿಎ ಪದವಿಗಳ ಅಂಕಪಟ್ಟಿಗಳನ್ನು ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪದವಿ ಆಕಾಂಕ್ಷಿಗಳಿಂದ 50,000 ರಿಂದ 1,00,000 ರೂಪಾಯಿಗಳವರೆಗೆ ಹಣವನ್ನು ಸಂಗ್ರಹಿಸುತ್ತಿದ್ದರಂತೆ. ಅಷ್ಟೇ ಅಲ್ಲ ಡಾಕ್ಟರೇಟ್ ಎಂದರೆ ಪಿಎಚ್‌ಡಿ ಪ್ರಮಾಣಪತ್ರಗಳು ಬೇಕು ಎಂದವರಿಂದ 10 ಲಕ್ಷದಿಂದ 20 ಲಕ್ಷ ರೂಪಾಯಿಗಳಿಗೆ ಹಣ ಪಡೆಯುತ್ತಿದ್ದರಂತೆ.
ಪ್ರಶ್ನೆ ಪತ್ರಿಕೆಯೊಟ್ಟಿಗೆ ಉತ್ತರ ಪತ್ರಿಕೆಯೂ ಸಿದ್ಧವಿರುತ್ತೆ
ಕೆಲವು ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯುವಂತೆ ಹೇಳಿ ಪ್ರಶ್ನೆ ಮತ್ತು ಉತ್ತರ ಪತ್ರಿಕೆಗಳನ್ನು ಅವರ ಮನೆಗೆ ಕಳುಹಿಸಿದ್ದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ನವೆಂಬರ್ 2 ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಅವರ ಕಚೇರಿಗೆ ಬಿಕಾಮ್ ಪರೀಕ್ಷೆ ತೆಗೆದುಕೊಳ್ಳಲು ಆಕಾಂಕ್ಷಿಯೊಬ್ಬರು ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ. ಸಿಬ್ಬಂದಿ ಪ್ರಮಾಣ ಪತ್ರ ನೀಡುವುದಾಗಿ ಭರವಸೆ ನೀಡಿದ್ದು, ಆಕಾಂಕ್ಷಿ 40 ಸಾವಿರ ರೂ.ಹಣ ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ