• ಹೋಂ
  • »
  • ನ್ಯೂಸ್
  • »
  • jobs
  • »
  • Bengaluru: ನಕಲಿ ಪಠ್ಯಕ್ರಮಕ್ಕೆ ಕಡಿವಾಣ ಹಾಕಿದ ಶಿಕ್ಷಣ ಇಲಾಖೆ, ಖಡಕ್ ಆದೇಶ ಪ್ರಕಟ

Bengaluru: ನಕಲಿ ಪಠ್ಯಕ್ರಮಕ್ಕೆ ಕಡಿವಾಣ ಹಾಕಿದ ಶಿಕ್ಷಣ ಇಲಾಖೆ, ಖಡಕ್ ಆದೇಶ ಪ್ರಕಟ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಎರಡು ವಿಧದ ಶಾಲೆಗಳಿವೆ. ಒಂದು ನೋಂದಾಯಿಸದ ಮತ್ತು ನೋಂದಾಯಿತ. ನೋಂದಾಯಿಸದ ಶಾಲೆಗಳಲ್ಲಿ ಅನುಮೋದಿತವಲ್ಲದ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ. ನೋಂದಣಿಯಾಗದ ಶಾಲೆಗಳನ್ನು ಮುಚ್ಚಬೇಕು. ಆದರೆ, ನೋಂದಾಯಿತ ಶಾಲೆಗಳಲ್ಲಿ ಅನುಮೋದಿತವಲ್ಲದ ಪಠ್ಯಕ್ರಮವನ್ನು ಬೋಧಿಸುವ ಸಮಸ್ಯೆಯನ್ನು ಬಗೆಹರಿಸಿ ಯಾವದಕ್ಕೆ ಅನುಮತಿ ಇದೆಯೋ ಆ ಪಠ್ಯಕ್ರಮದಲ್ಲೇ ಪಾಠ ಮಾಡಬೇಕು ಎಂದು ತಿಳಿಸಿದ್ದಾರೆ. 

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • New Delhi, India
  • Share this:

ಬೆಂಗಳೂರಿನಲ್ಲಿ (Bengaluru) ಅನುಮತಿ ನೀಡಿದ ಪಠ್ಯ ಬಿಟ್ಟು ಬೇರೆ ಸಿಲೆಬಸ್​ ಪಾಠ ಮಾಡಲಾಗುತ್ತಿದೆ ಎಂದು ಸುಮಾರು 500 ಶಾಲೆಗಳಿಗೆ (School) ನೋಟೀಸ್​ ಜಾರಿ ಮಾಡಲಾಗಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಬೆಂಗಳೂರು ನಗರದ ಶಾಲೆಗಳಲ್ಲಿ ಹಲವಾರು ಇತರ ಮಂಡಳಿಗೊಂದಿಗೆ ನಕಲಿ ಪಠ್ಯಕ್ರಮ ಪ್ರಕರಣಗಳು ವರದಿಯಾಗುತ್ತಿದ್ದು (Report), ಸಾರ್ವಜನಿಕರಿಗೆ ಮಾಹಿತಿ (Information) ಸುಲಭವಾಗಿ ಸಿಗುವಂತೆ ಮಾಡಲು ಶಿಕ್ಷಣ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಮಾಹಿತಿ ನೀಡಿದೆ.


ಇಲಾಖೆಯು ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತದೆ. ಸದ್ಯ, ನಾವು ರಾಜ್ಯ ಮಂಡಳಿಯನ್ನು ಹೊರತುಪಡಿಸಿ ಇತರ ಮಂಡಳಿಗಳಿಗೆ ಸಂಯೋಜಿತವಾಗಿಲ್ಲದ ಶಾಲೆಗಳನ್ನು ಶಾರ್ಟ್‌ಲಿಸ್ಟ್ ಮಾಡುತ್ತಿದ್ದೇವೆ  ಎಂದು ಸಾರ್ವಜನಿಕ ಶಿಕ್ಷಣ ಆಯುಕ್ತ ಆರ್. ವಿಶಾಲ್ ಮಾತನಾಡಿ ಈ ವಿಚಾರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಿದ್ದೇವೆ ಎಂದಿದ್ದಾರೆ.


ಇದನ್ನು ಪರಿಗಣಿಸಿ ಸಾರ್ವಜನಿಕರಿಗೆ ಶಾಲೆ ಪಠ್ಯಕ್ರಮದ ಬಗ್ಗೆ ಮಾಹಿತಿ ಲಭ್ಯವಾಗುವಂತೆ ಮಾಡಲು ನಮ್ಮ ವೆಬ್‌ಸೈಟ್‌ನಲ್ಲಿ ಶಾಲೆಗಳ ವಿವರಗಳನ್ನು ಪ್ರಕಟಿಸಲು ಅನುಮತಿಗಾಗಿ ನಾವು ಸರ್ಕಾರವನ್ನು ಸಂಪರ್ಕಿಸುತ್ತೇವೆ ಎಂದು ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ನೂರಾರು ಶಾಲೆಗಳು ತಮ್ಮ ಶಾಲೆಗಳಲ್ಲಿ ಅನುಮೋದಿತವಲ್ಲದ ಪಠ್ಯಕ್ರಮವನ್ನು ಬೋಧಿಸಿದ ಕಾರಣಕ್ಕಾಗಿ ನೋಟಿಸ್‌ಗಳನ್ನು ನೀಡಲಾಗಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ.


ಇದನ್ನೂ ಓದಿ: Science: ಈ ಫೀಲ್ಡ್​ನಲ್ಲೂ ಹುಡುಗಿಯರದ್ದೇ ಮೇಲುಗೈ!


ಒಮ್ಮೆ ನೋಟಿಸ್​  ಜಾರಿಗೊಳಿಸಿದರೆ ಏನೂ ಪ್ರಯೋಜನವಾಗಿಲ್ಲ ಎಂದು ಶಿಕ್ಷಣ ಇಲಾಖೆ ಇತ್ತೀಚಿಗೆ ಹಲವು ಶಾಲೆಗಳಿಗೆ ಈ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಮಾಹಿತಿಯೊಂದಿಗೆ ನೋಟಿಸ್​ ನೀಡಿತ್ತು.  ಪ್ರತಿ ತಿಂಗಳು ಶಾಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಲು ಅಥವಾ ಮುಚ್ಚಲು ಇಲಾಖೆಯು ನೋಟಿಸ್ ಕಳುಹಿಸುತ್ತಿದೆ ಎಂದು ಆಯುಕ್ತರು ಹೇಳಿದ್ದಾರೆ.


ನೋಂದಾಯಿತ ಶಾಲೆಗಳ ಗಮನಕ್ಕೆ


ಎರಡು ವಿಧದ ಶಾಲೆಗಳಿವೆ. ಒಂದು ನೋಂದಾಯಿಸದ ಮತ್ತು ನೋಂದಾಯಿತ. ನೋಂದಾಯಿಸದ ಶಾಲೆಗಳಲ್ಲಿ ಅನುಮೋದಿತವಲ್ಲದ ಪಠ್ಯಕ್ರಮವನ್ನು ಬೋಧಿಸಲಾಗುತ್ತಿದೆ. ನೋಂದಣಿಯಾಗದ ಶಾಲೆಗಳನ್ನು ಮುಚ್ಚಬೇಕು. ಆದರೆ, ನೋಂದಾಯಿತ ಶಾಲೆಗಳಲ್ಲಿ ಅನುಮೋದಿತವಲ್ಲದ ಪಠ್ಯಕ್ರಮವನ್ನು ಬೋಧಿಸುವ ಸಮಸ್ಯೆಯನ್ನು ಬಗೆಹರಿಸಿ ಯಾವದಕ್ಕೆ ಅನುಮತಿ ಇದೆಯೋ ಆ ಪಠ್ಯಕ್ರಮದಲ್ಲೇ ಪಾಠ ಮಾಡಬೇಕು ಎಂದು ತಿಳಿಸಿದ್ದಾರೆ.




ಸದ್ಯ ಎಸ್ಎಸ್ಎಲ್‌ಸಿ ಬೋರ್ಡ್ ಅಡಿಯಲ್ಲಿ ಬರುವ ಶಾಲೆಗಳ ವಿವರಗಳನ್ನು ಎಸ್ಎಸ್ಎಲ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅದೇ ರೀತಿ ಪೋಷಕರಿಗೆ ಪಾರದರ್ಶಕತೆಯನ್ನು ತೋರುವ ಸಲುವಾಗಿ ಶಾಲೆಗಳ ವೆಬ್‌ಸೈಟ್‌ನಲ್ಲಿ ಪಠ್ಯಕ್ರಮದ ಮಾಹಿತಿ ನೀಡಬೇಕು ಎಂದು ಸೂಚಿಸಲಾಗಿದೆ. ರಾಜ್ಯದ ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್ಇ/ಐಪಿಎಸ್ಇ ಪಠ್ಯಕ್ರಮ ಬೋಧನೆ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿರುವ ಧೋನಿ ಗ್ಲೋಬರ್ ಶಾಲೆ ಸೇರಿದಂತೆ ನಗರದ 500ಕ್ಕೂ ಹೆಚ್ಚು ಶಾಲೆಗಳಿಗೆ ಈಗಾಗಲೇ ನೋಟಿಸ್​ ಜಾರಿಯಾಗಿದೆ.


ಒಂದನೇ ತರಗತಿಯಿಂದ 8 ನೇ ತರಗತಿಯವರೆಗೂ ಪಾಠ


ಒಂದನೇ ತರಗತಿಯಿಂದ 8 ನೇ ತರಗತಿಯವರೆಗೂ ಈ ಶಾಲೆಯಲ್ಲಿ ಪಾಠ ಹೇಳಲಾಗುತ್ತೆ. ಬೆಂಗಳೂರಿನ ಸಿಂಗಸಂದ್ರದಲ್ಲಿರೋ ಮಹೇಂದ್ರ ಸಿಂಗ್ ಧೋನಿ ಗ್ಲೋಬಲ್ ಸ್ಕೂಲ್‌ನಲ್ಲಿ ಈ ವರ್ಷ 248 ವಿದ್ಯಾರ್ಥಿಗಳು ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಆದ್ರೆ ಹೇಳೋ ಪಾಠ ಸಿಎಬಿಎಸ್ಸಿದು. ಪಡೆದ ಅನುಮತಿ ಮಾತ್ರ ರಾಜ್ಯ ಪಠ್ಯಕ್ರಮದ್ದು ಅನ್ನೋದು ನೋಟಿಸ್ ಜಾರಿಯಿಂದ ತಿಳಿದುಬಂದಿದೆ.


ಶುಲ್ಕ ಕೇಳಿದ್ರೆ ದಂಗಾಗ್ತಿರಾ


ಈ ಗ್ಲೋಬಲ್ ಶಾಲೆಯಲ್ಲಿ ಒಂದನೇ ತರಗತಿಗೆ ಮಗುವನ್ನು ಸೇರಿಸೋಕೆ ಬರೋಬ್ಬರಿ 1,47,000 ರೂ. ಶುಲ್ಕ ವಿಧಿಸಲಾಗುತ್ತದೆ. ಎರಡನೇ ತರಗತಿಗೆ ಈ ಫೀಸ್ ಮೊತ್ತ ಇನ್ನಷ್ಟು ಹೆಚ್ಚು. ಪಠ್ಯ ಪುಸ್ತಕ ಮತ್ತು ಯುನಿಫಾರ್ಮ್ ಎಲ್ಲ ಸೇರಿ 2ನೇ ತರಗತಿಗೆ ಮಗುವನ್ನು ಸೇರಿಸಲಹ 1,56,000 ಹಣ ಪಾವತಿಸಬೇಕಿದೆ. ಇಷ್ಟೊಂದು ದುಬಾರಿ ಶುಲ್ಕ ನೀಡಿದರೂ ಸಹ ಪಾಠ ಮಾತ್ರ ಅಂದುಕೊಂಡ ಹಾಗೆ ಆಗ್ತಿಲ್ಲ ಈ ಕಾರಣದಿಂದ ನೋಟೀಸ್​ ಜಾರಿ ಮಾಡಲಾಗಿದೆ.

First published: