• Home
  • »
  • News
  • »
  • jobs
  • »
  • Education: ಮಕ್ಕಳ ಶಾಲಾ ಬ್ಯಾಗ್‌ಗಳಲ್ಲಿ ಕಾಂಡೋಮ್‌ ಪತ್ತೆ ಪ್ರಕರಣ: ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಅತ್ಯಗತ್ಯ ಎನ್ನುತ್ತಿದ್ದಾರೆ ತಜ್ಞರು

Education: ಮಕ್ಕಳ ಶಾಲಾ ಬ್ಯಾಗ್‌ಗಳಲ್ಲಿ ಕಾಂಡೋಮ್‌ ಪತ್ತೆ ಪ್ರಕರಣ: ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಅತ್ಯಗತ್ಯ ಎನ್ನುತ್ತಿದ್ದಾರೆ ತಜ್ಞರು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಬೆಂಗಳೂರು ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ಘಟನೆಯ ಬೆನ್ನಲ್ಲೇ ತಜ್ಞರು ಲೈಂಗಿಕ ಶಿಕ್ಷಣವನ್ನು ಪರಿಚಯಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ, ಸರ್ಕಾರವು ಸೂಚಿಸಿದ ಲೈಂಗಿಕ ಶಿಕ್ಷಣವನ್ನು ಹೊಂದಿಲ್ಲ. ಕೆಲವು ಶಾಲೆಗಳು ಲೈಂಗಿಕ ಶಿಕ್ಷಣ ಕ್ಲಾಸ್‌ಗಳನ್ನು ಸ್ವಯಂ ತೆಗೆದುಕೊಳ್ಳುತ್ತಿವೆ. ಈ ಕ್ರಮ ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಬೇಕು.

ಮುಂದೆ ಓದಿ ...
  • Share this:

ಬೆಂಗಳೂರಿನ (Bengaluru) ಹಲವು ಶಾಲೆಗಳಲ್ಲಿ ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ  (School Bag Checking) ಕಾಂಡೋಮ್ಸ್‌, ಗರ್ಭನಿರೋಧಕಗಳು ಪತ್ತೆಯಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಘಟನೆ ಬಗ್ಗೆ ಪರ-ವಿರೋಧ ಎರಡೂ ವ್ಯಕ್ತವಾಗಿವೆ. ಕೆಲವರು ಕನಿಷ್ಠ ಕಾಂಡೋಮ್ ಬಳಸುವ ಬಗ್ಗೆ ವಿದ್ಯಾರ್ಥಿಗಳಿಗೆ (Students) ಅರಿವು ಇದೆ ಎಂದು ಅಭಿಪ್ರಾಯ ಪಟ್ಟಿದ್ದರೆ, ಇನ್ನೂ ಕೆಲವರು 14 ಮತ್ತು 16 ರ ವಯಸ್ಸಿನ ಮಕ್ಕಳ ಬ್ಯಾಗ್‌ಲ್ಲಿ (Bag) ಇವೆಲ್ಲಾ ಈಗಲೇ ಏಕೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಈ ಘಟನೆಯ ಬೆನ್ನಲ್ಲೇ ತಜ್ಞರು ಲೈಂಗಿಕ ಶಿಕ್ಷಣವನ್ನು ಪರಿಚಯಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪ್ರಸ್ತುತ, ಸರ್ಕಾರವು ಸೂಚಿಸಿದ ಲೈಂಗಿಕ ಶಿಕ್ಷಣವನ್ನು ಹೊಂದಿಲ್ಲ. ಕೆಲವು ಶಾಲೆಗಳು ಲೈಂಗಿಕ ಶಿಕ್ಷಣ ಕ್ಲಾಸ್‌ಗಳನ್ನು ಸ್ವಯಂ ತೆಗೆದುಕೊಳ್ಳುತ್ತಿವೆ. ಈ ಕ್ರಮ ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಬೇಕು. ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ಅಗತ್ಯವಾಗಿ ನೀಡಬೇಕು ಎನ್ನುತ್ತಿದ್ದಾರೆ ತಜ್ಞರು


ಹದಿ ಹರೆಯದವರಿಗೆ ಲೈಂಗಿಕ ಶಿಕ್ಷಣದ ಅರಿವು ಮೂಡಿಸುವ ಅಗತ್ಯ ಇದೆ
ಹದಿಹರೆಯದ ಮಕ್ಕಳಿಗೆ ಸರಿಯಾದ ಲೈಂಗಿಕ ಶಿಕ್ಷಣ ದೊರೆಯದೇ ಇರುವ ಕಾರಣದಿಂದ ಅವರು ಕಾಮುಕತೆಯ ದೃಷ್ಟಿಯಲ್ಲಿಯೇ ಲೈಂಗಿಕತೆಯನ್ನು ನೋಡುವ ಬಹಳ ಆತಂಕಕಾರಿ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಸದ್ಯದ ವಿದ್ಯಾಮಾನಗಳನ್ನು ಗಮನಿಸಿದರೆ ಲೈಂಗಿಕ ಶಿಕ್ಷಣಕ್ಕೆ ತುಂಬಾನೇ ಒತ್ತು ನೀಡಬೇಕಾದ ಪರಿಸ್ಥಿತಿ ಇದೆ ಎಂದಿದ್ದಾರೆ.


ಇದನ್ನೂ ಓದಿ: ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆಗೆ ಇಳಿದ ಶಿಕ್ಷಕರಿಗೆ ಶಾಕ್; ಕಾಂಡೋಮ್, ಗರ್ಭನಿರೋಧಕ ಮಾತ್ರೆ ಪತ್ತೆ!


ಸ-ಮುದ್ರಾ ಫೌಂಡೇಶನ್‌ನ ಭಾರತಿ ಸಿಂಗ್ ಮಾತನಾಡಿ, "ಲೈಂಗಿಕ ಶಿಕ್ಷಣ ಅತ್ಯಗತ್ಯ. ನಾವು ನಿರ್ದಿಷ್ಟ ವಯಸ್ಸಿನ ನಂತರ ಲೈಂಗಿಕ ಶಿಕ್ಷಣವನ್ನು ಶಿಫಾರಸು ಮಾಡುತ್ತೇವೆ" ಎಂದಿದ್ದಾರೆ. ಶೇಕಡಾ 60ರಷ್ಟು ಪೋಷಕರು ಇನ್ನೂ ಸಹ ಸಾಂಪ್ರದಾಯಿಕ ಪೋಷಕರಂತೆ ನಡೆದುಕೊಳ್ಳುತ್ತಿದ್ದಾರೆ, ಇದು ಸರಿಯಾದ ಕ್ರಮವಲ್ಲ. ನಮ್ಮ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಮುಜುಗರ ಪಡದೇ ಮುಕ್ತವಾಗಿ ಹೇಳಬೇಕು. ಮಕ್ಕಳೂ ಸಹ ಈಗ ತುಂಬಾ ಪ್ರಬುದ್ಧರಾಗಿದ್ದು, ಅವರು ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾರತಿ ಸಿಂಗ್ ಲೈಂಗಿಕ ಶಿಕ್ಷಣದ ಅಗತ್ಯವನ್ನು ಹೇಳಿದ್ದಾರೆ.


ಪ್ರಗತಿಪರ ಘಟನೆ ಎಂದ ಲೇಖಕ ವಸುಧೇಂದ್ರ
ಇನ್ನೂ ಲೇಖಕ ವಸುಧೇಂದ್ರ ಅವರು ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್‌, ಗರ್ಭನಿರೋಧಕ ಮಾತ್ರೆ ಸಿಕ್ಕಿರುವ ವಿಚಾರವನ್ನು ಉಲ್ಲೇಖಿಸಿ ಮಕ್ಕಳ ಜಾಗೃತರಾಗಿರುವ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. "ಎಲ್ಲವೂ ಬೆರಳ ತುದಿಯಲ್ಲಿ ಲಭ್ಯವಿರುವಾಗ ಲೈಂಗಿಕ ಸಮಸ್ಯೆಗಳನ್ನು ರಹಸ್ಯವಾಗಿಡುವುದು ಅಸಾಧ್ಯ. ಸುರಕ್ಷತೆಯ ಬಗ್ಗೆ ಜ್ಞಾನದ ಕೊರತೆಯಿಂದಾಗಿ ಕೆಲವು ಮುಗ್ಧ ಮಕ್ಕಳು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹಾಗಾಗಿ ನಾನು ಇದನ್ನು ಪ್ರಗತಿಪರ ಎಂದು ಪರಿಗಣಿಸುತ್ತೇನೆ" ಎಂದು ಪೋಸ್ಟ್‌ ಮಾಡಿದ್ದಾರೆ.


ಮಕ್ಕಳ ಹಕ್ಕುಗಳ ಹೋರಾಟಗಾರ ನಾಗಸಿಂಹ ಜಿ ರಾವ್ ಮಾತನಾಡಿ, ಲೈಂಗಿಕ ಶಿಕ್ಷಣದ ಮೂಲಕ ಮಕ್ಕಳಿಗೆ ಮಾನವ ದೇಹ, ಭಾವನೆಗಳು, ಮುಟ್ಟಿನ ನೈರ್ಮಲ್ಯ ಮತ್ತು ಮನಸ್ಸು ಮತ್ತು ದೇಹದ ಮೇಲೆ ನಿಯಂತ್ರಣವನ್ನು ಕಲಿಸಬೇಕು ಎಂದಿದ್ದಾರೆ.


ಸರ್ಕಾರಕ್ಕೆ ಒಕ್ಕೊರಲ ಆಗ್ರಹ
ಶಿಕ್ಷಣತಜ್ಞರು ಹಾಗೂ ಸಾಹಿತಿಗಳಾದ ವಿ.ಪಿ.ನಿರಂಜನಾರಾಧ್ಯ, ಕೆ.ಮರುಳಸಿದ್ದಪ್ಪ, ವಸುಂದರಾ ಭೂಪತಿ, ಜಿ.ರಾಮಕೃಷ್ಣ, ಎಸ್.ಜಿ.ಸಿದ್ದರಾಮಯ್ಯ, ಕಾಳೇಗೌಡ ನಾಗವಾರ, ಸುರೇಂದ್ರರಾವ್ ಮತ್ತು ವಿಜಯ, ಜಂಟಿ ಹೇಳಿಕೆ ನೀಡಿ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ಆರಂಭಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದರು. ಇದು ಬಹುಕಾಲದ ಬೇಡಿಕೆಯಾಗಿದ್ದು, ಸರಕಾರ ಈಗಲೇ ಇದನ್ನು ಪರಿಗಣಿಸಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.


ಶಾಲೆಗಳಲ್ಲಿ ಸಲಹೆಗಾರರ ನೇಮಕ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಶಾಲೆಗಳಲ್ಲಿ ಸಲಹೆಗಾರರ ನೇಮಕವನ್ನು ಕಡ್ಡಾಯಗೊಳಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ನಿರ್ದೇಶಿಸಿದೆ. ಅಲ್ಲದೆ, ಖಾಸಗಿ ಶಾಲಾ ಕಾಲೇಜುಗಳ ಪೋಷಕರ ಸಂಘಗಳ ಸಮನ್ವಯ ಸಮಿತಿಯು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್ ಅವರಿಗೆ ಲೈಂಗಿಕ ಶಿಕ್ಷಣದ ಅಗತ್ಯತೆಯ ಕುರಿತು ಚರ್ಚಿಸಲು ಮಧ್ಯಸ್ಥಗಾರರ ಸಭೆಯನ್ನು ಕರೆಯುವಂತೆ ಮನವಿಯನ್ನು ಸಲ್ಲಿಸಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು