• Home
  • »
  • News
  • »
  • jobs
  • »
  • Exam Tips: ಬೋರ್ಡ್​ ಎಕ್ಸಾಂ & ಸ್ಪರ್ಧಾತ್ಮಕ ಪರೀಕ್ಷೆ ಒಟ್ಟಿಗೆ ಎದುರಿಸೋದು ಹೇಗೆ? ಇಲ್ಲಿವೆ ನೋಡಿ ಟಿಪ್ಸ್

Exam Tips: ಬೋರ್ಡ್​ ಎಕ್ಸಾಂ & ಸ್ಪರ್ಧಾತ್ಮಕ ಪರೀಕ್ಷೆ ಒಟ್ಟಿಗೆ ಎದುರಿಸೋದು ಹೇಗೆ? ಇಲ್ಲಿವೆ ನೋಡಿ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಎರಡೂ ಪರೀಕ್ಷೆಗಳಲ್ಲಿ ಸಾಧನೆ ಮಾಡಲು ಹೇಗೆ ಓದಬೇಕು... ಯಾವುದರ ಮೇಲೆ ಹೆಚ್ಚು ಗಮನ ಹರಿಸಬೇಕು, ಯಾವ ವಿಧಾನ ಅನುಸರಿಸಬೇಕು ಎಂಬುದು ವಿದ್ಯಾರ್ಥಿಗಳಿಗೆ ಸವಾಲಾಗಿರುತ್ತದೆ.

  • Share this:

ಮುಂಬರುವ ಮಾರ್ಚ್‌ ತಿಂಗಳಲ್ಲಿ ದ್ವಿತೀಯ ಪಿಯುಸಿ(Second PUC) ವಾರ್ಷಿಕ ಪರೀಕ್ಷೆಗಳು(Annual Exams) ಆರಂಭವಾಗುತ್ತವೆ. ಅದಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ತಯಾರಿ(Preparation) ನಡೆಸುತ್ತಿರುತ್ತಾರೆ. ಈ ಮಧ್ಯೆ ಬೋರ್ಡ್‌ ಎಕ್ಸಾಂ(Board Exam) ನಂತರ ಒಂದಾದ ಮೇಲೊಂದರಂತೆ ವಿವಿಧ ಸ್ಪರ್ಧಾತ್ಮಕ, ಪ್ರವೇಶ ಪರೀಕ್ಷೆಗಳೂ ನಡೆಯುತ್ತಿರುತ್ತವೆ. ಹಾಗಾಗಿ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಗಳಿಗೆ ಪ್ರತ್ಯೇಕವಾಗಿ ತಯಾರಿ ನಡೆಸೋಕೆ ಸಾಕಷ್ಟು ಸಮಯ(Time) ಇರುವುದಿಲ್ಲ.


ಹಾಗಾಗಿ ವಿದ್ಯಾರ್ಥಿಗಳು ಈ ಎರಡೂ ಪರೀಕ್ಷೆಗಳಿಗೆ ತಯಾರಿಯನ್ನು ಏಕಕಾಲದಲ್ಲಿಯೇ ನಡೆಸಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಜೆಇಇ ಮೇನ್‌, ನೀಟ್‌, ಸಿಇಟಿ, ಸಿಯುಇಎಲ್‌, ಸಿಎಲ್‌ಎಟಿ, ಐಪಿ-ಎಂಎಟಿ ಮುಂತಾದ ಪ್ರವೇಶ ಪರೀಕ್ಷೆಗಳು ಬೋರ್ಡ್‌ ಪರೀಕ್ಷೆ ನಂತರದಲ್ಲಿ ನಡೆಯುತ್ತವೆ. ಹೀಗಾಗಿ ವಿದ್ಯಾರ್ಥಿಗಳಿಗೆ ತಯಾರಾಗಲು ಸಾಕಷ್ಟು ಟೈಂ ಇರೋದಿಲ್ಲ. ಪರಿಣಾಮವಾಗಿ, ಬೋರ್ಡ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ಎರಡನ್ನೂ ಅವರು ಮೊದಲೇ ಮಾಡಿಕೊಳ್ಳಬೇಕಾಗುತ್ತದೆ.


ಆದಾಗ್ಯೂ, ಎರಡೂ ಪರೀಕ್ಷೆಗಳಲ್ಲಿ ಸಾಧನೆ ಮಾಡಲು ಹೇಗೆ ಓದಬೇಕು... ಯಾವುದರ ಮೇಲೆ ಹೆಚ್ಚು ಗಮನ ಹರಿಸಬೇಕು, ಯಾವ ವಿಧಾನ ಅನುಸರಿಸಬೇಕು ಎಂಬುದು ವಿದ್ಯಾರ್ಥಿಗಳಿಗೆ ಸವಾಲಾಗಿರುತ್ತದೆ.


ಹಾಗಾದರೆ ಬೋರ್ಡ್ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಹೇಗೆ ಒಟ್ಟಿಗೆ ನಿಭಾಯಿಸಬೇಕು ಎಂಬುದರ ಕುರಿತು ಪ್ರಮುಖವಾದ ಐದು ಸಲಹೆಗಳು ಇಲ್ಲಿವೆ.


1. ಸೂಕ್ತವಾದ ವೇಳಾಪಟ್ಟಿ ರಚಿಸಿ: ನಿಮ್ಮ ಗುರಿಯನ್ನು ತಲುಪಲು ಸರಿಯಾದ ತಯಾರಿ ಮಾಡುವುದು ಹಾಗೂ ಅದಕ್ಕೆ ತಕ್ಕಂತೆ ನಡೆಯುವುದು ಬಹಳ ಮುಖ್ಯ.


ಇದನ್ನೂ ಓದಿ: PUC Preparatory Exam: ಈ ತಿಂಗಳೇ ನಡೆಯಲಿದೆ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ


ಬೋರ್ಡ್ ಎಕ್ಸಾಂಗಾಗಿ ನಿಮ್ಮ ತಯಾರಿಯ ಬಳಿಕ ನೀವು ತೆಗೆದುಕೊಳ್ಳುತ್ತಿರುವ ಪ್ರವೇಶ ಪರೀಕ್ಷೆಯ ಅಧ್ಯಯನಕ್ಕಾಗಿ ದಿನಕ್ಕೆ ಕನಿಷ್ಠ ಎರಡು ಗಂಟೆಗಳನ್ನು ಮೀಸಲಿಡಬೇಕು.


ಹಾಗಾಗಿ ನೀವು ಸರಿಯಾದಂತಹ ವೇಳಾಪಟ್ಟಿ ರಚಿಸುವುದು ಬಹಳ ಮುಖ್ಯ. ಅಂದರೆ, ಬೋರ್ಡ್ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ಅವಶ್ಯಕತೆಗಳನ್ನು ನೋಡಿಕೊಂಡು ಅದಕ್ಕೆ ತಕ್ಕಂತೆ ವೇಳಾಪಟ್ಟಿ ರಚಿಸಿ. ಅದರ ಪ್ರಕಾರ ಅಧ್ಯಯನ ಮಾಡಿ.


2. ಸರಿಯಾದ ವಿಧಾನದ ಬಗ್ಗೆ ತಿಳಿದುಕೊಳ್ಳಿ: ವಿದ್ಯಾರ್ಥಿಗಳು 2023 ರಲ್ಲಿ CUET ಅಥವಾ ಇನ್ಯಾವುದೇ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲು ಬಯಸಿದರೆ ತಮ್ಮ ಅಭ್ಯಾಸ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ತೆಗೆದುಕೊಳ್ಳುವುದು ಉತ್ತಮ.


ಇಲ್ಲಿ ಉತ್ತಮ ವೇಳಾಪಟ್ಟಿಯನ್ನು ನೀಡುವುದರ ಜೊತೆಗೆ ಸರಿಯಾದ ತಯಾರಿಯ ವಿಧಾನವನ್ನು ಹೇಳಿಕೊಡಲಾಗುತ್ತದೆ. ಅಲ್ಲದೇ ಅಣಕು ಪರೀಕ್ಷೆಗಳು ನಿಮ್ಮ ಸಾಮರ್ಥ್ಯ, ನಿಮ್ಮ ದೌರ್ಬಲ್ಯ ಹಾಗೂ ನೀವು ಎಷ್ಟು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ತಿಳಿಸುತ್ತವೆ.



3. ನಿಯಮಿತ ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳಿ: ಪ್ರತಿಯೊಂದು ವಿಷಯಕ್ಕೂ ಸರಿಯಾದ ಗಮನ ನೀಡುವುದು ಮುಖ್ಯ. ಇದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ತಯಾರಿ ಸರಿಯಾಗಿದೆಯೇ ಎಂಬುದು ಖಚಿತಪಡಿಸಿಕೊಳ್ಳಿ.


ಜೊತೆಗೆ ಯಾವುದಕ್ಕೆ ಎಷ್ಟು ಸಮಯ ಮೀಸಲಿಡುತ್ತೀರಿ ಎಂಬುದನ್ನು ಗಮನಿಸಿಕೊಳ್ಳಿ. ಅಲ್ಲದೇ ಪ್ರತಿ ವಿಷಯವನ್ನು ಪರಿಷ್ಕರಿಸಲು ವಾರಕ್ಕೊಮ್ಮೆ ಅಣಕು ಪರೀಕ್ಷೆ ತೆಗೆದುಕೊಳ್ಳಿ.


ಜೊತೆಗೆ ಹಿಂದಿನ ವರ್ಷದ ಪತ್ರಿಕೆಗಳನ್ನು ಪ್ರಯತ್ನಿಸಿ. ಪರೀಕ್ಷೆಯ ತಯಾರಿಯು ಪಠ್ಯಕ್ರಮದ ಪರಿಷ್ಕರಣೆ ಮತ್ತು ಅಣುಕು ಪರೀಕ್ಷೆ ಈ ಎರಡನ್ನೂ ಒಳಗೊಂಡಿರಬೇಕು.


4. ಪ್ರಚಲಿತ ವಿದ್ಯಮಾನಗಳನ್ನು ಅರಿತುಕೊಳ್ಳಿ: ಯುಪಿಎಸ್‌ಸಿ ಪ್ರಿಲಿಮ್ಸ್‌ನಂತಹ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಚಲಿತ ವಿದ್ಯಮಾನಗಳು ವಿಶೇಷವಾಗಿ ನಿರ್ಣಾಯಕವಾಗಿರುತ್ತವೆ.


ಹೀಗಾಗಿ ಪತ್ರಿಕೆಗಳನ್ನು ಓದುವುದು, ವಾರ್ತೆಗಳನ್ನು ನೋಡುವುದರ ಮೂಲಕ ವಿದ್ಯಾರ್ಥಿಗಳು ದಿನನಿತ್ಯದ ಪ್ರಚಲಿತ ಘಟನೆಗಳ ಕುರಿತು ತಿಳಿದುಕೊಂಡಿರಬೇಕು.


5. ಆತ್ಮವಿಶ್ವಾಸದ ಜೊತೆಗೆ ಪ್ರಯತ್ನಿಸಿ: ಬೋರ್ಡ್ ಎಕ್ಸಾಂ ಶ್ರೇಣಿಗಳು ಅಥವಾ ಅಂಕಗಳು ನಿಮ್ಮ ವೃತ್ತಿ ಮಾರ್ಗವನ್ನು ಆಯ್ಕೆ ಮಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ.


ಆದ್ದರಿಂದ, ನಿಮ್ಮ ಉದ್ದೇಶದ ಮೇಲೆ ಗಮನ ಕೇಂದ್ರೀಕರಿಸಿ. ನೀವು ಸಕಾರಾತ್ಮಕ ಮನೋಭಾವ ಮತ್ತು ಆತ್ಮವಿಶ್ವಾಸದಿಂದ ಪ್ರಯತ್ನಿಸಿದರೆ ಖಂಡಿತಾ ಸಾಧನೆ ಮಾಡುತ್ತೀರಿ ಎಂಬುದನ್ನು ನೆನಪಿಡಿ.


ಒಟ್ಟಾರೆ, ಸರಿಯಾದ ವಿಧಾನದಲ್ಲಿ ವೇಳಾಪಟ್ಟಿಯನ್ನು ತಯಾರಿಸಿಕೊಂಡು ಅದಕ್ಕೆ ತಕ್ಕಂತೆ ಓದುತ್ತಾ ಹೋದರೆ ಅರ್ಧ ಗೆದ್ದಂತೆ. ಜೊತೆಗೆ ಈ ಮೇಲಿನ ಎಲ್ಲಾ ಸಲಹೆಗಳನ್ನು ಗಮನದಲ್ಲಿರಿಸಿ ತಯಾರಿ ನಡೆಸಿ, ಆತ್ಮವಿಶ್ವಾಸದಿಂದ ಪರೀಕ್ಷೆ ಬರೆಯಿರಿ.

Published by:Latha CG
First published: