• Home
  • »
  • News
  • »
  • jobs
  • »
  • Education: ಶಿಕ್ಷಕರ ನೇಮಕಾತಿಗಾಗಿ ಸಮಗ್ರ ಶಿಕ್ಷಣ ಸೇವಾ ಆಯ್ಕೆ ಆಯೋಗ ಸ್ಥಾಪನೆ; ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

Education: ಶಿಕ್ಷಕರ ನೇಮಕಾತಿಗಾಗಿ ಸಮಗ್ರ ಶಿಕ್ಷಣ ಸೇವಾ ಆಯ್ಕೆ ಆಯೋಗ ಸ್ಥಾಪನೆ; ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿಕ್ಷಣ ಸಂಸ್ಥೆಗಳಲ್ಲಿ ಸಕಾಲದಲ್ಲಿ ಶಿಕ್ಷಕರನ್ನು ಆಯ್ಕೆಮಾಡುವುದು, ಸಂಪನ್ಮೂಲದ ಬಳಕೆ ಹಾಗೂ ಆರ್ಥಿಕ ಸದ್ಬಳಕೆಯನ್ನು ಖಚಿತಪಡಿಸಲು ಆಯೋಗವು ಉಪಯುಕ್ತವಾಗಿದೆ ಎಂದು ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನೇರ ನೇಮಕಾತಿಗೆ ಸಂಬಂಧಿಸಿ ಸಮಗ್ರ ಆಯೋಗದಿಂದ ಮಾರ್ಗಸೂಚಿಗಳನ್ನು ನೀಡಲಾಗುತ್ತದೆ.

ಮುಂದೆ ಓದಿ ...
  • News18 Kannada
  • 2-MIN READ
  • Last Updated :
  • Karnataka, India
  • Share this:

ಪ್ರಾಥಮಿಕ, ಮಾಧ್ಯಮಿಕ ಹಾಗೂ ಉನ್ನತ ಶಿಕ್ಷಣ (Education) ಸಂಸ್ಥೆಗಳಿಗೆ ಶಿಕ್ಷಕರನ್ನು ಆಯ್ಕೆಮಾಡಲು ಉತ್ತರ ಪ್ರದೇಶ ಸರಕಾರ ಸಮಗ್ರ ಸೇವಾ ಆಯ್ಕೆ ಆಯೋಗವನ್ನು ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕೃತವಾಗಿ ತಿಳಿಸಿದ್ದಾರೆ. ಆಯೋಗ ರಚನೆಯಿಂದ ಸಮಯ ಉಳಿತಾಯವಾಗಲಿದ್ದು ನೇಮಕಾತಿ (Recruitment) ಪ್ರಕ್ರಿಯೆಯಲ್ಲಿ ನೇರ, ಪಾರದರ್ಶಕ ಕ್ರಮವನ್ನು ಜರುಗಿಸಲಾಗುವುದು ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ (Primary) ಹಾಗೂ ಮಾಧ್ಯಮಿಕ ಶಿಕ್ಷಣವನ್ನು ವಿಲೀನಗೊಳಿಸುವ ಮೂಲಕ ಒಂದೇ ಘಟಕವಾಗಿ ಕಾರ್ಯನಿರ್ವಹಿಸಲು ಆಯೋಗ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.


ಈ ಆಯೋಗವು ಸೂಕ್ತ ಶಿಕ್ಷಕರ ನೇಮಕಾತಿಯನ್ನು ಸಮಯಕ್ಕೆ ಸರಿಯಾಗಿ ಮಾಡಲಿದ್ದು ಅಗತ್ಯ ಮಾರ್ಗಸೂಚಿಗಳಿಗೆ ಅನುಸಾರವಾಗಿ ಆಯೋಗ ಕಾರ್ಯನಿರ್ವಹಿಸಲಿದೆ ಎಂದು ಆದಿತ್ಯನಾಥ್ ತಿಳಿಸಿದ್ದಾರೆ.


ರಾಜ್ಯದ ಪ್ರಾಥಮಿಕ, ಮಾಧ್ಯಮಿಕ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಅರ್ಹ ಶಿಕ್ಷಕರ ಆಯ್ಕೆಗಾಗಿ ವಿವಿಧ ಅಧಿಕಾರಿಗಳು, ಮಂಡಳಿಗಳು ಮತ್ತು ಆಯೋಗಗಳು ಕಾರ್ಯನಿರ್ವಹಿಸುತ್ತವೆ ಎಂಬುದಾಗಿ ಹೇಳಿಕೆ ತಿಳಿಸಿದೆ.


ಶಿಕ್ಷಕರ ಪಾರದರ್ಶಕ ನೇಮಕಾತಿ


ಕಳೆದ ಐದೂವರೆ ವರ್ಷಗಳಲ್ಲಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಆಯ್ಕೆ ಆಯೋಗಗಳ ಕಾರ್ಯನಿರ್ವಹಣೆಯಲ್ಲಿ ಯಾವುದೇ ಅನಗತ್ಯ ಹಸ್ತಕ್ಷೇಪ ನಡೆದಿಲ್ಲ ಎಂದು ತಿಳಿಸಿದ ಆದಿತ್ಯ ನಾಥ್, ಆಯೋಗವು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸಲಿದ್ದು ಪಾರದರ್ಶಕವಾಗಿ ನೇಮಕಾತಿಗಳನ್ನು ನಡೆಸಲಿದೆ. ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದಲ್ಲಿ ಆರಿಸಲಾಗುತ್ತದೆ. ಇದರಿಂದ ರಾಜ್ಯದ ಯುವಜನರಿಗೆ ಹೆಚ್ಚು ಪ್ರಯಜನವುಂಟಾಗಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.


ಪರೀಕ್ಷಾ ನಿಯಂತ್ರಣ ಪ್ರಾಧಿಕಾರ, ಮಾಧ್ಯಮಿಕ ಶಿಕ್ಷಣ ಸೇವಾ ಆಯ್ಕೆ ಆಯೋಗ ಮತ್ತು ಉನ್ನತ ಶಿಕ್ಷಣ ಸೇವಾ ಆಯ್ಕೆ ಆಯೋಗದ ಹೊರತಾಗಿ, ಉತ್ತರ ಪ್ರದೇಶ ಲೋಕಸೇವಾ ಆಯೋಗದ ಮೂಲಕವೂ ಶಿಕ್ಷಕರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಯೋಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: ISRO Recruitment 2023: ಇಸ್ರೋದಲ್ಲಿ ಕೆಲಸ ಮಾಡಬೇಕಾ? ಬೆಂಗಳೂರಿನಲ್ಲೇ ಪೋಸ್ಟಿಂಗ್-ಈಗಲೇ Apply ಮಾಡಿ


ಆಯೋಗ ಹೇಗೆ ಸಹಕಾರಿಯಾಲಿದೆ?


ಶಿಕ್ಷಕರ ನೇಮಕಾತಿಯನ್ನು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಡೆಸಲಾಗುತ್ತದೆ ಎಂದು ಆದಿತ್ಯನಾಥ್ ತಿಳಿಸಿದ್ದು ಆಯೋಗವನ್ನು ಕೂಡ ಇದೇ ಉದ್ದೇಶವನ್ನಿರಿಸಿಕೊಂಡು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. ಉತ್ತರ ಪ್ರದೇಶ ಶಿಕ್ಷಣ ಸೇವಾ ಆಯ್ಕೆ ಆಯೋಗವನ್ನು ಸ್ವತಂತ್ರ ಸಂಸ್ಥೆಯಾಗಿ ರಚಿಸಬೇಕು ಎಂಬುದು ಸರಕಾರದ ಮುಖ್ಯ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ.


ಶಿಕ್ಷಣ ಸಂಸ್ಥೆಗಳಲ್ಲಿ ಸಕಾಲದಲ್ಲಿ ಶಿಕ್ಷಕರನ್ನು ಆಯ್ಕೆಮಾಡುವುದು, ಸಂಪನ್ಮೂಲದ ಬಳಕೆ ಹಾಗೂ ಆರ್ಥಿಕ ಸದ್ಬಳಕೆಯನ್ನು ಖಚಿತಪಡಿಸಲು ಆಯೋಗವು ಉಪಯುಕ್ತವಾಗಿದೆ ಎಂದು ತಿಳಿಸಿದ್ದಾರೆ. ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರ ನೇರ ನೇಮಕಾತಿಗೆ ಸಂಬಂಧಿಸಿ ಸಮಗ್ರ ಆಯೋಗದಿಂದ ಮಾರ್ಗಸೂಚಿಗಳನ್ನು ನೀಡಲಾಗುತ್ತದೆ. ಪ್ರಾಥಮಿಕ ಮತ್ತು ಉನ್ನತ ಪ್ರಾಥಮಿಕ ಹಂತದ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಯನ್ನೂ ಹೊಸ ಆಯೋಗದ ಮೂಲಕ ಆಯೋಜಿಸಬೇಕು ಎಂದು ತಿಳಿಸಿರುವ ಮುಖ್ಯಮಂತ್ರಿಗಳು ಅರ್ಹತಾ ಪರೀಕ್ಷೆಯನ್ನು ನಿಗದಿತ ಸಮಯಕ್ಕೆ ನಡೆಸಬೇಕು ಎಂದು ತಿಳಿಸಿದ್ದಾರೆ.


ವಿವರವಾದ ಪ್ರಸ್ತಾವನೆ ಸಲ್ಲಿಕೆಯಾಗಬೇಕು


ಆಯೋಗವನ್ನು ಸಿದ್ಧಪಡಿಸುವ ಮುನ್ನ ಅಧ್ಯಕ್ಷರು ಮತ್ತು ಸದಸ್ಯರ ಅರ್ಹತೆ ಮತ್ತು ಆಯೋಗದ ಅಧಿಕಾರಗಳು ಮತ್ತು ಕಾರ್ಯಗಳನ್ನು ವಿವರಿಸುವ ವಿವರವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಬೇಕು ಎಂದು ತಿಳಿಸಿರುವ ಮುಖ್ಯಮಂತ್ರಿಗಳು ಶಾಲೆಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯನ್ನು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.


ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರ ವ್ಯಾಪಕ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ನಿರ್ವಹಣಾ ವ್ಯವಸ್ಥೆಯ ನಿರೀಕ್ಷೆಗಳು ಮತ್ತು ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ಉತ್ತಮ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಬೇಕು ಮತ್ತು ಪ್ರಸ್ತುತಪಡಿಸಬೇಕು ಎಂದು ಯೋಗಿ ತಿಳಿಸಿದ್ದಾರೆ.


ಸಂಸ್ಕೃತ ಶಾಲೆಗಳ ಅಭಿವೃದ್ಧಿ


ಸಂಸ್ಕೃತ ಶಾಲೆಗಳ ಅಭಿವೃದ್ಧಿ ರಾಜ್ಯ ಸರಕಾರದ ಆದ್ಯತೆಯಾಗಿದೆ ಎಂದು ತಿಳಿಸಿರುವ ಯೋಗಿ, ಸಂಸ್ಕೃತ ಶಾಲೆಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಜತೆಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿ ವೇತನವನ್ನೂ ಒದಗಿಸುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ವಿಸ್ತೃತ ಕ್ರಿಯಾ ಯೋಜನೆ ಸಿದ್ಧಪಡಿಸಿ ಆದಷ್ಟು ಬೇಗ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆನ್ನಲಾಗಿದೆ.

First published: