• Home
  • »
  • News
  • »
  • jobs
  • »
  • Education: ಇದೇನಿದು ಹೊಸ ಸಂಶೋಧನೆ? ಕರುಳಿನ ಆರೋಗ್ಯಕ್ಕೆ ಶಿಕ್ಷಣ ಸಹಕಾರಿಯಂತೆ!

Education: ಇದೇನಿದು ಹೊಸ ಸಂಶೋಧನೆ? ಕರುಳಿನ ಆರೋಗ್ಯಕ್ಕೆ ಶಿಕ್ಷಣ ಸಹಕಾರಿಯಂತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶಿಕ್ಷಣ ಹಾಗೂ ಹೆಚ್ಚಿನ ಜ್ಞಾನ, ಕರುಳಿನ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಗ್ಯಾಸ್ಟ್ರೊಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD) ಬುದ್ಧಿವಂತಿಕೆ ಶೈಕ್ಷಣಿಕ ಅರ್ಹತೆ ಸೇರಿದಂತೆ ಹಲವಾರು ಗುಣಲಕ್ಷಣಗಳ ಮೇಲೆ GERD ಅರಿವಿನ ಕುಸಿತವನ್ನು ಉಂಟುಮಾಡಿದೆ ಎಂಬುದನ್ನು ತಿಳಿಸಿದೆ. ಹಾಗಾಗಿ ಕರುಳು ಹಾಗೂ ಮೆದುಳಿಗೆ ಒಂದಕ್ಕೊಂದು ಸಂಬಂಧವಿದೆ ಎಂಬುದನ್ನು ಅಧ್ಯಯನ ತಂಡ ತಿಳಿಸಿದೆ.

ಮುಂದೆ ಓದಿ ...
  • Share this:

ಶಿಕ್ಷಣ ಎಂಬುದು ಎಲ್ಲಾ ಸ್ವತ್ತುಗಳಿಗಿಂತ ಹಿರಿದಾದ ಆಸ್ತಿಯಾಗಿದೆ. ಶಿಕ್ಷಣಕ್ಕಿರುವ ಗೌರವ ಹಾಗೂ ಸ್ಥಾನಮಾನ ಬಹುಶಃ ಲೋಕದಲ್ಲಿ ಯಾವ ಸ್ಥಾನಕ್ಕೂ (Place) ಇರಲಾರದು. ಒಬ್ಬ ಶಿಕ್ಷಿತ ವ್ಯಕ್ತಿ (Educated Man) ಸಮಾಜದಲ್ಲಿ ಸ್ಥಾನಮಾನ ಹಾಗೂ ಗೌರವ ಎರಡನ್ನೂ ಸಂಪಾದಿಸಲು ಅರ್ಹನಾಗಿರುತ್ತಾನೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಉತ್ತಮ ಶಿಕ್ಷಣ (Education) ಎಂಬುದು ಕರುಳಿನ ಸ್ವಾಸ್ಥ್ಯಕ್ಕೂ ಸಹಕಾರಿಯಾಗಿದೆ ಎಂಬ ಅಂಶ ಬಯಲಾಗಿದೆ. ಅಲ್ಝೈಮರ್ ಕಾಯಿಲೆ ಹಾಗೂ ಜಠರಗರುಳಿನ ಆರೋಗ್ಯ (Health) ಸಮಸ್ಯೆಗಳು ಒಂದಕ್ಕೊಂದು ಸಂಬಂಧ ಹೊಂದಿದೆ ಎಂದು ತಿಳಿಸಿರುವ ಸಂಶೋಧಕರ ತಂಡವು ಶಿಕ್ಷಣವು ಕರುಳಿನ (Gut) ಸ್ವಾಸ್ಥ್ಯಕ್ಕೂ ಆಧಾರವಾಗಿದೆ ಎಂಬ ಮಾಹಿತಿಯನ್ನು ಹೊರಹಾಕಿದೆ.


ಮೆದುಳು ಹಾಗೂ ಕರುಳಿನ ಕಾಯಿಲೆ
ಸಂಶೋಧನೆಗಳಲ್ಲಿ ತೊಡಗಿಸಿಕೊಂಡಿರುವ 766,345 ಜನರ ಡೇಟಾವನ್ನು ಅಧ್ಯಯನ ತಂಡವು ಸಂಗ್ರಹಿಸಿದ್ದು, ಅಲ್ಝೈಮರ್ ಕಾಯಿಲೆ, ನಿರ್ದಿಷ್ಟ ಅರಿವಿನ ಲಕ್ಷಣ ಹಾಗೂ ಕರುಳಿನ ಕಾಯಿಲೆಗಳಿಗೆ ಸಾಮ್ಯತೆ ಇದೆಯೇ ಎಂಬುದನ್ನು ಪರಿಶೀಲಿಸಿದೆ. ತಂಡವು ಕರುಳಿನ ಕಾಯಿಲೆಗಳಾದ ಜಠರ ಹುಣ್ಣು, ಜಠರದುರಿತ-ಡ್ಯುಯೊಡೆನಿಟಿಸ್, ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆಗಳನ್ನು ಪಟ್ಟಿಮಾಡಿವೆ.


ಕರುಳಿನ ಅಸ್ವಸ್ಥತೆ ಮೆದುಳಿನ ಮೇಲೆ ಪರಿಣಾಮಕಾರಿ
ಶಿಕ್ಷಣ ಹಾಗೂ ಹೆಚ್ಚಿನ ಜ್ಞಾನ, ಕರುಳಿನ ಅಸ್ವಸ್ಥತೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಗ್ಯಾಸ್ಟ್ರೊಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD) ಬುದ್ಧಿವಂತಿಕೆ ಶೈಕ್ಷಣಿಕ ಅರ್ಹತೆ ಸೇರಿದಂತೆ ಹಲವಾರು ಗುಣಲಕ್ಷಣಗಳ ಮೇಲೆ GERD ಅರಿವಿನ ಕುಸಿತವನ್ನು ಉಂಟುಮಾಡಿದೆ ಎಂಬುದನ್ನು ತಿಳಿಸಿದೆ. ಹಾಗಾಗಿ ಕರುಳು ಹಾಗೂ ಮೆದುಳಿಗೆ ಒಂದಕ್ಕೊಂದು ಸಂಬಂಧವಿದೆ ಎಂಬುದನ್ನು ಅಧ್ಯಯನ ತಂಡ ತಿಳಿಸಿದೆ.


ಇದನ್ನೂ ಓದಿ: Mid Day Meal: ಶಾಲಾ ಮಕ್ಕಳ ಬಿಸಿಯೂಟದ ಮೊಟ್ಟೆಗೂ ತಟ್ಟಿದ ದರ ಏರಿಕೆಯ ಬರೆ!


ವೈದ್ಯರಿಗೆ ತಜ್ಞರ ತಂಡ ಸೂಚಿಸಿರುವ ಅಂಶಗಳೇನು?


ಅರಿವಿನ ದುರ್ಬಲತೆಗೆ GERD ಅಪಾಯಕಾರಿಯಾಗಿರಬಹುದು ಹಾಗಾಗಿ ಕರುಳಿನ ಅಸ್ವಸ್ಥೆಯನ್ನು ಪತ್ತೆಹಚ್ಚುವಾಗ ರೋಗಿಗಳಲ್ಲಿ ಕಡಿಮೆ ಅರಿವಿನ  ಚಿಹ್ನೆಗಳು ಅಥವಾ ರೋಗಲಕ್ಷಣಗಳು ಕಂಡುಬಂದಿದೆಯೇ ಎಂಬುದನ್ನು ವೈದ್ಯರು ಪತ್ತೆಹಚ್ಚಬೇಕು ಎಂದು ಅಧ್ಯಯನ ತಂಡ ತಿಳಿಸಿದೆ.


ಕರುಳು ಹಾಗೂ ಮೆದುಳು ಒಂದಕ್ಕೊಂದು ಸಂಬಂಧವನ್ನು ಹೊಂದಿದ್ದು, ಇವುಗಳನ್ನು ಸಮಾನವಾಗಿ ಹೇಗೆ ನಿರ್ವಹಿಸಬಹುದು ಎಂಬುದನ್ನು ಹಿಂದಿನ ಅಧ್ಯಯನಗಳಿಂದ ಖಾತ್ರಿಪಡಿಸಲಾಗಿದೆ.  ಈ ಕುರಿತು ಎಡಿತ್ ಕೋವನ್ ವಿಶ್ವವಿದ್ಯಾನಿಲಯದ ತಳಿಶಾಸ್ತ್ರಜ್ಞ ಎಮ್ಯಾನುಯೆಲ್ ಅಡೆವುಯಿ ತಿಳಿಸಿದ್ದಾರೆ.


ಮೆದುಳಿನ ಒತ್ತಡದ ನಿವಾರಣೆ ಹೇಗೆ ಸಾಧ್ಯ?


ಆರೋಗ್ಯಕರ ಆಹಾರ, ವ್ಯಾಯಮ, ದೈಹಿಕ ಚಟುವಟಿಕೆಗಳು ಕರುಳು ಹಾಗೂ ಮೆದುಳಿನ ಆರೋಗ್ಯವನ್ನು ಸುಸ್ಥಿರವಾಗಿಡುವಲ್ಲಿ ಸಹಕಾರಿಯಾಲಿದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಮೆದುಳಿನಲ್ಲಿ ಒತ್ತಡವುಂಟಾದಾಗ ಅದು ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಜ್ಞರ ಹೇಳಿಕೆಯಾಗಿದೆ.


ಮೆದುಳು ಹಾಗೂ ಜೀರ್ಣಾಂಗ ವ್ಯವಸ್ಥೆಗಳ ನಡುವಿನ ಸಂಪರ್ಕವು ಪ್ರಬಲವಾಗಿದೆ


ಕರುಳು ಹಾಗೂ ಮೆದುಳಿನ ಆರೋಗ್ಯ ಪರಿಸ್ಥಿತಿಗಳು ಒಂದಕ್ಕೊಂದು ಹೇಗೆ ಸಂಬಂಧ ಹೊಂದಿವೆ ಎಂಬುದಕ್ಕೆ ನಿಖರವಾದ ಸಾಕ್ಷ್ಯಗಳಿಲ್ಲ.  ಇದು ಇನ್ನೂ ಸ್ಪಷ್ಟವಾಗಿಲ್ಲ ಎಂದು ತಿಳಿಸಿರುವ ಅಧ್ಯಯನ ತಂಡವು ಮೆದುಳು ಹಾಗೂ ಜೀರ್ಣಾಂಗ ವ್ಯವಸ್ಥೆಗಳ ನಡುವಿನ ಸಂಪರ್ಕವು ಪ್ರಬಲವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.




ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಹಾಗೂ ಶಾಲಾ ಶಿಕ್ಷಣದ ಅವಧಿಯ ಹೆಚ್ಚಳ


ಉತ್ತಮ ಮಟ್ಟದ ಶಿಕ್ಷಣ ಹಾಗೂ ಆರೋಗ್ಯಕರ ಅರಿವಿನ ಅಂಶಗಳು ಕರುಳಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಪ್ರಮುಖವಾಗಿವೆ. ಸರಕಾರದ ಶಿಕ್ಷಣ ನೀತಿಗಳ ಮೇಲೆ ಈ ಸಂಶೋಧನೆಗಳು ಪ್ರಭಾವ ಬೀರಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಸಂಶೋಧನೆಗಳಿಂದ ತಿಳಿದು ಬಂದಿರುವ ಅಂಶವೆಂದರೆ ಉತ್ತಮ ಶಿಕ್ಷಣ ಕರುಳಿನ ಆರೋಗ್ಯಕ್ಕೆ ಸಹಕಾರಿ ಎಂದಾಗಿದೆ. ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಶಾಲಾ ಶಿಕ್ಷಣದ ಅವಧಿಯನ್ನು ಹೆಚ್ಚಿಸುವ ಮೂಲಕ ಕರುಳಿನ ಸಾಕಷ್ಟು ಅನಾರೋಗ್ಯಗಳನ್ನು ಕಡಿಮೆ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

First published: