• Home
  • »
  • News
  • »
  • jobs
  • »
  • Education: ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಬಂಡವಾಳ ಹೂಡಬೇಕಾದ ಅವಶ್ಯಕತೆ ಇದೆ - ಸಂಜಯ್ ಕುಮಾರ್

Education: ಶಿಕ್ಷಣಕ್ಕೆ ಇನ್ನೂ ಹೆಚ್ಚಿನ ಬಂಡವಾಳ ಹೂಡಬೇಕಾದ ಅವಶ್ಯಕತೆ ಇದೆ - ಸಂಜಯ್ ಕುಮಾರ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿ ಬಜೆಟ್‌ನಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಆದಾಗ್ಯೂ ಶಿಕ್ಷಣಕ್ಕೆ ಮಾಡುತ್ತಿರುವ ಹೂಡಿಕೆ ಸಾಲುತ್ತಿಲ್ಲ, ಶಿಕ್ಷಣದ ಮೇಲೆ ಹೆಚ್ಚಿನ ಹೂಡಿಕೆಯ ಅವಶ್ಯಕತೆಯಿದೆ ಎಂದು ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಕಾರ್ಯದರ್ಶಿ ಸಂಜಯ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಮುಂದೆ ಓದಿ ...
  • Trending Desk
  • 5-MIN READ
  • Last Updated :
  • Share this:

ಒಂದು ದೇಶದ ಸರ್ವತೋಮುಖ ಅಭಿವೃದ್ಧಿಯಲ್ಲಿ (Development) ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ಮಕ್ಕಳು, ಯುವಕರು ಶಿಕ್ಷಣದ ಮೂಲಕ ಅವರ ಒಂದು ಭದ್ರ ಭವಿಷ್ಯ ಜೊತೆಗೆ ದೇಶದ ಬೆಳವಣಿಗೆಗೂ ಕಾರಣರಾಗುತ್ತಾರೆ. ಆದ್ದರಿಂದ ಇಂದಿನ ಯುವ ಪೀಳಿಗೆಯನ್ನು ಸಶಕ್ತಗೊಳಿಸುವುದು ಎಂದರೆ ಭಾರತದ ಭವಿಷ್ಯವನ್ನು ಸಶಕ್ತಗೊಳಿಸುವುದು. ಇದನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಬಜೆಟ್‌ನಲ್ಲೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಆದಾಗ್ಯೂ ಶಿಕ್ಷಣಕ್ಕೆ ಮಾಡುತ್ತಿರುವ ಹೂಡಿಕೆ ಸಾಲುತ್ತಿಲ್ಲ, ಶಿಕ್ಷಣದ ಮೇಲೆ ಹೆಚ್ಚಿನ ಹೂಡಿಕೆಯ ಅವಶ್ಯಕತೆಯಿದೆ ಎಂದು ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಕಾರ್ಯದರ್ಶಿ ಸಂಜಯ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. NEP 2020 (ಹೊಸ ಶಿಕ್ಷಣ ನೀತಿ) "ನಮ್ಮ ಜಿಡಿಪಿಯ ಕನಿಷ್ಠ 6 ಪ್ರತಿಶತವನ್ನು ನಾವು ಶಿಕ್ಷಣಕ್ಕಾಗಿ ಖರ್ಚು ಮಾಡಬೇಕು" ಎಂದು ಹೇಳುತ್ತದೆ ಎಂದು ಸಂಜಯ್ ಕುಮಾರ್ ಹೇಳಿದರು.


ಪ್ರಸ್ತುತ ನಾವು ನಮ್ಮ ಜಿಡಿಪಿಯ ಶೇ.4.6 ರಷ್ಟು ಶಿಕ್ಷಣಕ್ಕೆ ವಿನಿಯೋಗಿಸುತ್ತಿದ್ದೇವೆ. ಆದಾಗ್ಯೂ ಆರ್ಥಿಕತೆ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ಶಿಕ್ಷಣದ ಮೇಲೆ ಹೆಚ್ಚಿನ ಹೂಡಿಕೆ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಅವರು ಪ್ರಸ್ತುತವಿರುವ ಸ್ಥಿತಿಯ ಬಗ್ಗೆ ಒತ್ತಿ ಹೇಳಿದರು.


ಪುಸ್ತಕ ಆಧಾರಿತ ಶಿಕ್ಷಣ ವ್ಯವಸ್ಥೆ ಸರಿದು ತಂತ್ರಜ್ಞಾನ ಬಂದಿದೆ


'5ನೇ FICCI ARISE ಸ್ಕೂಲ್ ಎಜುಕೇಶನ್ ಕಾನ್ಫರೆನ್ಸ್ 2022' ಅನ್ನು ಉದ್ದೇಶಿಸಿ ಮಾತನಾಡಿದ ಸಂಜಯ್ ಕುಮಾರ್, ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಪಾತ್ರವನ್ನು ಹೇಳುತ್ತಾ ಪುಸ್ತಕದ ಮಾಹಿತಿಯನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ ಎಂಬುವುದನ್ನು ಹೇಳಿದರು.


ಇದನ್ನೂ ಓದಿ: ಹಣಕಾಸು ಸಚಿವಾಲಯ ನೇಮಕಾತಿ- ಸೀನಿಯರ್ ಪ್ರೈವೇಟ್ ಸೆಕ್ರೆಟರಿ ಹುದ್ದೆಗೆ ಅರ್ಜಿ ಹಾಕಿ-1.50 ಲಕ್ಷ ಸಂಬಳ


"ನಾವು ಪುಸ್ತಕ ಆಧಾರಿತ ಶಿಕ್ಷಣ ವ್ಯವಸ್ಥೆಯಿಂದ ದೂರ ಸರಿಯುತ್ತಿದ್ದೇವೆ ಮತ್ತು ಪುಸ್ತಕದ ಬದಲಿಗೆ ತಂತ್ರಜ್ಞಾನವು ಅದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ" ಎಂದು ಅವರು ಹೇಳಿದರು.


ಹೀಗಾಗಿ ಉದಾರ ಕಲೆಗಳು ತನ್ನ ನೆಲೆಯನ್ನು ಮರಳಿ ಪಡೆಯಬೇಕು ಮತ್ತು ಉದ್ಯಮ, ಅಕಾಡೆಮಿಗಳು ಅದರತ್ತ ಕೆಲಸ ಮಾಡಬೇಕು ಎಂದು ಅವರು ಹೇಳಿದರು.




ಭಾರತದಲ್ಲಿ 1 ರಿಂದ 12 ನೇ ತರಗತಿಯವರೆಗೆ ಸುಮಾರು 260 ಮಿಲಿಯನ್ ವಿದ್ಯಾರ್ಥಿಗಳು 1.05 ಮಿಲಿಯನ್ ಸರ್ಕಾರಿ ಶಾಲೆಗಳು ಸೇರಿದಂತೆ 1.48 ಮಿಲಿಯನ್ ಶಾಲೆಗಳಿಗೆ ಹೋಗುತ್ತಿದ್ದಾರೆ.


ಈ ಶಾಲೆಗಳ ಭಾಗವಾಗಿ ಸುಮಾರು 9.6 ಮಿಲಿಯನ್ ಶಿಕ್ಷಕರಿದ್ದಾರೆ, ಆದ್ದರಿಂದ ಅವರ ತರಬೇತಿ ಮತ್ತು ಮೂಲಸೌಕರ್ಯಗಳ ಬಗ್ಗೆಯೂ ಗಮನಹರಿಸಬೇಕು. ಕ್ಷೇತ್ರಕ್ಕೆ ಅಗತ್ಯ ನೆರವು ನೀಡಲು ಸರಕಾರ ಬದ್ಧವಾಗಿದೆ ಎಂದರು.


ಹೊಸ ಶಿಕ್ಷಣ ನೀತಿ 2020 ರ ಬಗ್ಗೆ ಮೆಚ್ಚುಗೆ


ಹೊಸ ಶಿಕ್ಷಣ ನೀತಿ 2020 ರ ಪ್ರಾಮುಖ್ಯತೆಯನ್ನು ಎತ್ತಿ ಹಿಡಿದ ಕುಮಾರ್, "ನಾವು NEP ಅನ್ನು ನೋಡುವ ಮತ್ತು ಬಂಡವಾಳ ಮಾಡಿಕೊಳ್ಳುವ ಸಮಯ ಇದು" ಎಂದರು. ಎನ್‌ಇಪಿ 2020 ಸಮಾಜದ ದಿಕ್ಕನ್ನು ಮತ್ತು ಶಿಕ್ಷಣದ ಸುತ್ತ ಸಮಾಜವು ಹೇಗೆ ಅಭಿವೃದ್ಧಿ ಹೊಂದಬೇಕು ಮತ್ತು ನಿರ್ಮಿಸಬೇಕು ಎಂಬುದರ ಕಲ್ಪನೆಯು ಅದರಲ್ಲಿ ಇದೆ ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಶ್ಲಾಘಿಸಿದರು.


ಇನ್ನೂ ಎಫ್‌ಐಸಿಸಿಐ ಮತ್ತು ಇಂಡಿಯನ್ ಮೆಟಲ್ಸ್ ಮತ್ತು ಫೆರೋ ಅಲಾಯ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಸುಭ್ರಕಾಂತ್ ಪಾಂಡಾ ಮಾತನಾಡಿ, "ಜೀವನದ ಪ್ರತಿಯೊಂದು ಹಂತದಲ್ಲೂ ಕಲಿಯುವ ಮತ್ತು ಮರು ಕಲಿಯುವ ಸಾಮರ್ಥ್ಯವನ್ನು ಹೊಂದಿರುವುದು ಮುಖ್ಯ.


ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನದ ಚೌಕಟ್ಟನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಸರ್ಕಾರದ ಕೆಲಸದ ಜೊತೆ FICCI ಕೂಡ ಕೈಜೋಡಿಸಲು ಖುಷಿ ಮತ್ತು ಸದಾ ಸಿದ್ಧವಾಗಿರುತ್ತದೆ" ಎಂದು ಹೇಳಿದರು.

First published: