ಕೇಂದ್ರ ಬಜೆಟ್ 2023 ಅನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ (Budget) ಹಲವು ವಿಶೇಷತೆಗಳಿಂದ ಕೂಡಿದ್ದು ಕೇಂದ್ರ ಸರ್ಕಾರ ಮಹತ್ವದ ಘೋಷಣೆಗಳನ್ನು ಮಾಡಿದೆ. ಶಿಕ್ಷಣದಲ್ಲಿ ಹೆಚ್ಚಿನ ಸುಧಾರಣೆಗಳನ್ನು ತರಲು ಸದಾ ಹೊಸ ಕಾರ್ಯಕ್ರಮಗಳ ಬಗ್ಗೆ ಚಿಂತನೆ ನಡೆಸುವ ಕೇಂದ್ರ (Central Budget) ಈ ಬಾರಿ ಬಜೆಟ್‌ನಲ್ಲಿ ಭಾರಿ ಮೊತ್ತದ (Amount) ಹಣವನ್ನು (Money) ಘೋಷಣೆ ಮಾಡಿದ್ದು, ಹೊಸ ದಾಖಲೆ ಬರೆದಿದೆ.
ಶಿಕ್ಷಣಕ್ಕೆ 1.12 ಲಕ್ಷ ಕೋಟಿ ಘೋಷಣೆ
ಶಿಕ್ಷಣ ಸಚಿವಾಲಯದ ಬಜೆಟ್ ಹಂಚಿಕೆಯು 2022-23 ರಲ್ಲಿ 1.04 ಲಕ್ಷ ಕೋಟಿ ರೂ ಮೀಸಲಿಟ್ಟಿತ್ತು. ಆದರೆ ಈ ವರ್ಷ 8 ಪ್ರತಿಶತದಷ್ಟು ಹೆಚ್ಚಿನ ಬಜೆಟ್ ಮೀಸಲಿಟ್ಟಿದ್ದು 1.12 ಲಕ್ಷ ಕೋಟಿಯನ್ನು ಘೋಷಣೆ ಮಾಡಿದೆ. ಈವರೆಗೂ ಶಿಕ್ಷಣ ಕ್ಷೇತ್ರಕ್ಕೆ ಘೋಷಣೆಯಾದ ಅತಿದೊಡ್ಡ ಹಣಕಾಸು ಇದಾಗಿದೆ.
ಶಿಕ್ಷಣವನ್ನು ಉತ್ತೇಜಿಸಲು ಹತ್ತಾರು ಮಹತ್ವದ ಯೋಜನೆ ಘೋಷಣೆ
ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಮಕ್ಕಳು ಮತ್ತು ಹದಿಹರೆಯದವರಿಗಾಗಿ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ, ಏಕಲವ್ಯ ಮಾದರಿ ಶಾಲೆಗಳು, ಪಿಎಂ ಕೌಶಲ್ ವಿಕಾಸ್ ಯೋಜನೆ, ICMR ಲ್ಯಾಬ್, ವೈದ್ಯಕೀಯ ಶಿಕ್ಷಣವನ್ನು ಉತ್ತೇಜಿಸಲು, 157 ಹೊಸ ನರ್ಸಿಂಗ್ ಕಾಲೇಜು ಹೀಗೆ ಹತ್ತಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ.
ಶಿಕ್ಷಣ ಕ್ರೇತ್ರದಲ್ಲಿ ಕ್ರಾಂತಿ
ಕೇಂದ್ರದ ಒಟ್ಟಾರೆ ಈ ಕ್ರಮವನ್ನು ಶಿಕ್ಷಣ ತಜ್ಞರು ಪ್ರಶಂಸಿಸಿದ್ದು, ಶಿಕ್ಷಣ ಕ್ಷೇತ್ರವನ್ನು ಉತ್ತೇಜಿಸಲು ಇವು ಅಗತ್ಯ ಘೋಷಣೆಗಳು. ಈ ಎಲ್ಲಾ ಸರ್ಕಾರದ ಕಾರ್ಯಕ್ರಮಗಳು ಶಿಕ್ಷಣ ಕ್ರೇತ್ರದಲ್ಲಿ ಕ್ರಾಂತಿ ಎಬ್ಬಿಸುತ್ತದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಇದನ್ನೂ ಓದಿ: Preparatory Exam: SSLC ವಿದ್ಯಾರ್ಥಿಗಳಿಗೆ ಪೂರ್ವ ಸಿದ್ಧತಾ ಪರೀಕ್ಷೆ ದಿನಾಂಕ ಪ್ರಕಟ; ಇಲ್ಲಿದೆ ಮಹತ್ವದ ಮಾಹಿತಿ
ಬಜೆಟ್ ಯೋಜನೆಗಳಿಗೆ ಶಿಕ್ಷಣ ತಜ್ಞರ ಬಹುಪರಾಕ್
ಎಂಐಟಿ-ವಿಶ್ವ ಶಾಂತಿ ವಿಶ್ವವಿದ್ಯಾಲಯದ ಉಪಕುಲಪತಿ ಆರ್.ಎಂ.ಚಿಟ್ನಿಸ್ ಮಾತನಾಡಿ, ‘‘ಬಜೆಟ್‌ನಲ್ಲಿ ಘೋಷಣೆಯಾದ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ, ಏಕಲವ್ಯ ಮಾದರಿ ಶಾಲೆಗಳು, ಪಿಎಂ ಕೌಶಲ್ ವಿಕಾಸ್ ಯೋಜನೆ, ಪಠ್ಯೇತರ ವಿಷಯಗಳಿಗೆ ಪ್ರಾದೇಶಿಕ ಭಾಷಾ ಪುಸ್ತಕಗಳ ಸೇರ್ಪಡೆಯಂತಹ ವಿವಿಧ ಉಪಕ್ರಮಗಳನ್ನು ಸರ್ಕಾರ ಘೋಷಿಸಿದೆ.
ICMR ಲ್ಯಾಬ್ ಸ್ಥಾಪನೆಗೆ ನಿರ್ಧಾರ
ಸಹಯೋಗದ ಸಂಶೋಧನೆ ಮತ್ತು ನಾವೀನ್ಯತೆ ಯೋಜನೆಗಳಿಗಾಗಿ ICMR ಲ್ಯಾಬ್, ಅಂತರಶಿಸ್ತೀಯ ಸಂಶೋಧನೆಗಾಗಿ ಕೃತಕ ಬುದ್ಧಿಮತ್ತೆ ಸಾಧನಗಳನ್ನು ಬಳಸುವ ಉತ್ಕೃಷ್ಟತೆಯ ಕೇಂದ್ರ, ಹೊಸ ನರ್ಸಿಂಗ್ ಕಾಲೇಜುಗಳು ಮತ್ತು ಶೈಕ್ಷಣಿಕ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಲು 100 ಲ್ಯಾಬ್‌ಗಳು ಸೇರಿ ಇಂತಹ ಪೂರ್ವಭಾವಿ ಕ್ರಮಗಳು ಖಂಡಿತವಾಗಿಯೂ ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತವೆ" ಎಂದು ಬಜೆಟ್‌ನ ಯೋಜನೆಗಳನ್ನು ಮೆಚ್ಚಿಕೊಂಡಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ (NEP 2020), ಈ ಉಪಕ್ರಮಗಳು ಖಂಡಿತವಾಗಿಯೂ ಮರುಕೌಶಲ್ಯ ಮತ್ತು ಕೌಶಲ್ಯವನ್ನು ಪ್ರೋತ್ಸಾಹಿಸುತ್ತವೆ ಎಂದು ಶಿಕ್ಷಣ ತಜ್ಞರು ಹೇಳಿದ್ದಾರೆ.
"ಓದುವ ಸಂಸ್ಕೃತಿಯನ್ನು ಹೆಚ್ಚಿಸುತ್ತದೆ"
ಪುಣೆಯ ಅಕಾಡೆಮಿ ಸ್ಕೂಲ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈಥಿಲಿ ತಾಂಬೆ ಮಾತನಾಡಿ, “ಸರ್ಕಾರವು ಕೋವಿಡ್ ನಂತರದ ಕಲಿಕೆ ಮತ್ತು ಓದಿನ ನಷ್ಟದ ಬಗ್ಗೆ ಯೋಚಿಸಿ ಮಕ್ಕಳಿಗೆ ಮತ್ತು ಹದಿಹರೆಯದವರಿಗೆ ಘೋಷಿಸಿದ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಕಾರ್ಯಕ್ರಮ ನಿಜಕ್ಕೂ ಸ್ವಾಗತಾರ್ಹ ಕ್ರಮವಾಗಿದೆ. ಇದು ಓದುವ ಸಂಸ್ಕೃತಿಯನ್ನು ಹೆಚ್ಚಿಸುತ್ತದೆ" ಎಂದು ಹೇಳಿದರು.
ಆದಿವಾಸಿಗಳ ಶಿಕ್ಷಣಕ್ಕೆ ಉತ್ತೇಜನ
ಆದಿವಾಸಿಗಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ 38,000 ಕ್ಕೂ ಹೆಚ್ಚು ಶಿಕ್ಷಕರನ್ನು ನೇಮಿಸಿಕೊಳ್ಳಲಾಗುವುದು, ಇದರಿಂದಾಗಿ 3.5 ಲಕ್ಷ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಬೋಧನಾ ಉದ್ಯೋಗಾವಕಾಶಗಳೊಂದಿಗೆ ಸಶಕ್ತಗೊಳಿಸಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ತಿಳಿಸಿದ್ದಾರೆ.
ಈ ಘೋಷಣೆಯನ್ನು ಉಲ್ಲೇಖಿಸಿದ ತಾಂಬೆ ಅವರು ಇದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗುತ್ತದೆ ಎಂದಿದ್ದಾರೆ. ಶಿಕ್ಷಕರ ತರಬೇತಿ ಕಾರ್ಯಕ್ರಮವೂ ಒಟ್ಟಾರೆ ಶಿಕ್ಷಣ ಕ್ಷೇತ್ರಕ್ಕೆ ಮತ್ತಷ್ಟು ಪ್ರಯೋಜನವನ್ನು ನೀಡುತ್ತದೆ. ಅದೇ ಸಮಯದಲ್ಲಿ, ತಾಂತ್ರಿಕ ಪ್ರಗತಿಯೊಂದಿಗೆ ವೇಗವನ್ನು ಉಳಿಸಿಕೊಳ್ಳಲು, 'ಮೇಕ್ AI ಫಾರ್ ಇಂಡಿಯಾ' ಅನ್ನು ಸಕ್ರಿಯಗೊಳಿಸಲು AI ಗಾಗಿ ಶ್ರೇಷ್ಠತೆಯ ಕೇಂದ್ರಗಳನ್ನು ಸಹ ಪರಿಚಯಿಸಲು ಸರ್ಕಾರ ಮುಂದಾಗಿದೆ. .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ