• Home
  • »
  • News
  • »
  • jobs
  • »
  • Education In 2023: ಶೈಕ್ಷಣಿಕ ಕ್ಷೇತ್ರದಲ್ಲಿ ಈ ವರ್ಷ ಆಗಲಿದೆಯಂತೆ ಕ್ರಾಂತಿ! ವಿವರ ಇಲ್ಲಿದೆ ನೋಡಿ

Education In 2023: ಶೈಕ್ಷಣಿಕ ಕ್ಷೇತ್ರದಲ್ಲಿ ಈ ವರ್ಷ ಆಗಲಿದೆಯಂತೆ ಕ್ರಾಂತಿ! ವಿವರ ಇಲ್ಲಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಶಾಲೆಗಳು ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಯನ್ನು ಮುಂದಿನ ವರ್ಷಗಳಲ್ಲಿ ಪ್ರಮುಖ ಕೇಂದ್ರವಾಗಿ ಸೇರಿಸಲು ಮ್ಯಾಪಿಂಗ್ ಮಾಡುತ್ತಿವೆ. 2023 ರಲ್ಲಿ ಕಲಿಕೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ಡಾ ಕವಿತಾ ನಾಗ್ಪಾಲ್ ಅವರು ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

2022 ವರ್ಷವು ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಕಂಡಿತು. ಹಿಂದಿನ ವರ್ಷಕ್ಕಿಂತ ಈ ವರ್ಷ ಶೈಕ್ಷಣಿಕವಾಗಿ (Education) ಹಲವು ಪ್ರಗತಿಗಳಾಗಲಿವೆ. ಕೆಲವು ಶೈಕ್ಷಣಿಕ ಗುಣಮಟ್ಟ ಹಾಗೂ ಕಲಿಕೆಗಳಲ್ಲಿ ವ್ಯತ್ಯಾಸ ಕಂಡುಬರಲಿದೆ. ಇದರಿಂದ ಹಲವಾರು ಅನುಕೂಲತೆಗಳು ವಿದ್ಯಾರ್ಥಿಗಳಿಗೆ (Students) ಸಿಗಲಿದೆ. ಹಾಗಾದರೆ ಹಿಂದಿನ ವರ್ಷಕ್ಕಿಂತ ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಯಾವ ರೀತಿ ಬದಲಾವಣೆಯಾಗಲಿದೆ (Changes) ತಿಳಿಯೋಣ. 


ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ (ಯುಜಿಸಿ) ಹೊಸ ನೀತಿಗಳು, ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ) ಅನುಷ್ಠಾನ ಹೀಗೆ ಹಲವಾರು ಶೈಕ್ಷಣಿಕ ಪ್ರಗತಿಗಳಿಗೆ ಸಾಕ್ಷಿಯಾಗಲಿದೆ ಹೊಸ ವರ್ಷ. ಶಿಕ್ಷಣದಲ್ಲಿ ಹೆಚ್ಚಿನ ಸುಧಾರಣೆಗಳನ್ನು ದೊಡ್ಡ ರೀತಿಯಲ್ಲಿ ಕಾಣುವ ಭರವಸೆಯನ್ನು ಭಾರತ ಹೊಂದಿದೆ. ಕರ್ನಾಟಕ ಶಿಕ್ಷಣವೂ ಸಹ 13ನೇ ಸ್ಥಾನದಿಂದ ಹೊರಬಂದು ಹೆಚ್ಚಿನ ಗುಣಮಟ್ಟ ಸಾಧಿಸಲಿದೆ.


ತಂತ್ರಜ್ಞಾನ ಬಳಕೆಯ ಶಿಕ್ಷಣ


ಶಾಲೆಗಳು ಮಾನಸಿಕ, ಸಾಮಾಜಿಕ ಮತ್ತು ಭಾವನಾತ್ಮಕ ಕಲಿಕೆಯನ್ನು ಮುಂದಿನ ವರ್ಷಗಳಲ್ಲಿ ಪ್ರಮುಖ ಕೇಂದ್ರವಾಗಿ ಸೇರಿಸಲು ಮ್ಯಾಪಿಂಗ್ ಮಾಡುತ್ತಿವೆ. 2023 ರಲ್ಲಿ ಕಲಿಕೆಗೆ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು ಎಂದು ಡಾ ಕವಿತಾ ನಾಗ್ಪಾಲ್ ಅವರು ಹೇಳಿದ್ದಾರೆ.


ಇದನ್ನೂ ಓದಿ: Jobs In Shivamogga: ಡಿಗ್ರಿ ಪಾಸ್ ಆದವರಿಗೆ ಸರ್ಕಾರಿ ಉದ್ಯೋಗ, ಶಿವಮೊಗ್ಗದಲ್ಲಿ ಕೆಲಸ


ಕೌಶಲ್ಯ-ಆಧಾರಿತ ಶಿಕ್ಷಣವು ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ. ಆದ್ದರಿಂದ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ ಕೌಶಲ್ಯಾಧಾರಿತ ಶಿಕ್ಷಣವನ್ನು ಹೆಚ್ಚಾಗಿ ನೀಡಲಾಗುತ್ತದೆ. ಹೊಸ ಹೊಸ ರೀತಿಯ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಯತ್ನಗಳು ನಡೆಯಲಿದೆ. STEM-ಆಧಾರಿತ ಕಲಿಕೆಯು ಜಾರಿಯಾಗಲಿದೆ. NEP ಈ ಬಾರಿ ಸಂಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲಿದೆ.


ಪ್ರಾಯೋಗಿಕ ಕಲಿಕೆಗೆ ಸಿಗಲಿದೆ ಆದ್ಯತೆ


ಪ್ರಾಯೋಗಿಕ ಕಲಿಕೆಯು ಹೆಚ್ಚು ಜನಪ್ರಿಯತೆಯನ್ನು ಗಳಿಸಿದಂತೆ ಪಠ್ಯಕ್ರಮದಲ್ಲೂ ಸಹ ಬದಲಾವಣೆ ತರಲಾಗುತ್ತದೆ. ಮುಂದಿನ ದಿನಗಳಲ್ಲಿ ಶಾಲೆಗಳು ಹೊಸ ಶಿಕ್ಷಣ ನೀತಿಯನ್ನು  ಪರಿಚಯಿಸುವ ಕಾರ್ಯಕ್ರಮಗಳ ಹಿಂದಿನ ಮುಖ್ಯ ಉದ್ದೇಶ ಕಲಿಕೆಯನ್ನು ಆನಂದದಾಯಕವಾಗಿಸುವುದಾಗಿದೆ. ಮೌಲ್ಯಾಧಾರಿತ ಶಿಕ್ಷಣ ರೂಪಿಸುವುದು ಈ ಎಲ್ಲಾ ಕಾರ್ಯಗಳೂ ಸಹ ಈ ಬಾರಿ ಜರುಗಲಿದೆ.


2023 ರಲ್ಲಿ ಸಾಕಷ್ಟು ಮಹತ್ವದ ರೂಪಾಂತರಗಳು ಸಂಭವಿಸುವ ಸಾಧ್ಯತೆಯಿದೆ
ಕೋವಿಡ್ ಯುಗವು ಶಿಕ್ಷಣದ ಆಯಾಮಗಳನ್ನು ದೊಡ್ಡ ರೀತಿಯಲ್ಲಿ ಬದಲಾಯಿಸಿದೆ. ಕೊರೊನಾ ಕಾರಣದಿಂದ ಹಲವಾರು ರೀತಿಯ ಬದಲಾವಣೆಗಳು ನಡೆದವು. ಆನ್​ಲೈನ್ ಶಿಕ್ಷಣ ಹೆಚ್ಚಿನ ಮಹತ್ವ ಪಡೆದುಕೊಂಡಿತು. ಹಲವಾರು ರೀತಿಯ ಬದಲಾವಣೆಯಾಯಿತು. ಶಾಲೆಗಳೇ ಮುಚ್ಚುವ ಪರಿಸ್ಥಿತಿ ಬಂತು ಆದರೂ ಸಹ ಶಿಕ್ಷಣದಿಂದ ಮಕ್ಕಳು ವಂಚಿತರಾಗದಂತೆ ಜಾಗರೂಕತೆ ವಹಿಸಿ ಹೊಸ ಬದಲಾವಣೆಯನ್ನು ಮಾಡಲಾಯಿತು. ಅದರಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಯೇ ಜರುಗಿತು.


ಕೆಲವೊಮ್ಮೆ ಇದು ಶೈಕ್ಷಣಿಕ ಪ್ರಗತಿಗೆ ಪೆಟ್ಟು ನೀಡಿದೆ
ಕೊರೊನಾ ಶೈಕ್ಷಣಿಕ ಪ್ರಗತಿಗೆ ಹೊಡೆತ ನೀಡಿದ್ದೂ ಇದೆ. ಇದರಿಂದ ಹಲವಾರು ಭಾಗದಲ್ಲಿ ಆನ್​ಲೈನ್ ಕಲಿಕೆಯೂ ಸಹ ಕಷ್ಟ ಸಾಧ್ಯವಾಗಿತ್ತು. ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಆರು ಅಗತ್ಯ ಅಂಶಗಳು ಮತ್ತು 2023 ರಲ್ಲಿ ಕೌಶಲ್ಯವು ಹೆಚ್ಚು ಪ್ರಸ್ತುತವಾಗುತ್ತದೆ. 2023 ರಲ್ಲಿ ಶಿಕ್ಷಣವು ಆನ್‌ಲೈನ್ ಕಲಿಕೆ ಮತ್ತು ಬೋಧನೆಯ ಜಗತ್ತಿನಲ್ಲಿ AI, ವರ್ಚುವಲ್ ಲರ್ನಿಂಗ್ ಮತ್ತು ಮೆಟಾವರ್ಸ್‌ನಂತಹ ಪ್ರಮುಖ ತಾಂತ್ರಿಕ ಪ್ರಗತಿಗಳಿಗೆ ಸಾಕ್ಷಿಯಾಗಲಿದೆ. ಇದು ಭಾರತದಾದ್ಯಂತ ಮಾಧ್ಯಮ ಮತ್ತು ಮನರಂಜನಾ ಉದ್ಯಮದ ಕಡೆಗೆ ಒಲವು ತೋರುವ ಜನರಿಗೆ ಹೆಚ್ಚಿನ ವೃತ್ತಿಪರ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.

First published: