• Home
  • »
  • News
  • »
  • jobs
  • »
  • PUC Science ಮುಗಿಸಿದ್ದೀರಾ? ಹಾಗಾದರೆ ಈ ಕೋರ್ಸ್ ಮಾಡಿ

PUC Science ಮುಗಿಸಿದ್ದೀರಾ? ಹಾಗಾದರೆ ಈ ಕೋರ್ಸ್ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಹನ್ನೆರಡನೇ ತರಗತಿ ಪೂರ್ಣಗೊಂಡ ನಂತರ ನೀವು ಈ ಕೋರ್ಸ್​ಗಳನ್ನು ಮಾಡಬೇಕು. ಹಾಗಾದಾಗ ನಿಮ್ಮ ಮುಂದಿನ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ.

  • News18 Kannada
  • Last Updated :
  • Karnataka, India
  • Share this:

ದ್ವಿತೀಯ ಪಿಯುಸಿ (PUC) ಮುಗಿಸಿದ ವಿದ್ಯಾರ್ಥಿಗಳು ಭವಿಷ್ಯಕ್ಕಾಗಿ ಯಾವ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಚಿಂತೆಯಲ್ಲಿದ್ದರೆ ಇಲ್ಲಿ ಕೆಲವು ಸಲಹೆಗಳನ್ನು ನೀಡಲಾಗಿದೆ. ಇದನ್ನು ಗಮನಿಸಿ ನಿಮ್ಮ ಭವಿಷ್ಯದ (Future) ನಿರ್ಧಾರ ನೀವೆ ಮಾಡಿ. ಸೈನ್ಸ್​ ಮಾಡಿದರೆ ನಿಮಗೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಲು ಹೇರಳವಾದ ಅವಕಾಶ (Opportunity) ಲಭ್ಯವಿದೆ ಕೆಲವು ವಿಷಯಗಳು (Subject)  ಮತ್ತು ಕೊರ್ಸ್​ಗೆ ಸಂಬಂಧಿಸಿದ ಮಾಹಿತಿ ಇಲ್ಲಿದೆ. 


ಪಿಯುಸಿ ಮಾಡಿದ ನಂತರ ನೀವು ಈ ಕೋರ್ಸ್ ಮಾಡಬಹದು
ಪಿಯುಸಿ ವಿಜ್ಞಾನ ಓದಿದ ವಿದ್ಯಾರ್ಥಿಗಳಿಗೆ ನಂತರದಲ್ಲಿ ಮೆಡಿಕಲ್, ಇಂಜಿನಿಯರಿಂಗ್, ಪದವಿಯಂತಹ ಪ್ರಮುಖ ಫೀಲ್ಡ್‌ನಲ್ಲಿ ವಿದ್ಯಾಭ್ಯಾಸ ಮಾಡಲು ಅವಕಾಶಗಳಿವೆ. ದ್ವಿತೀಯ ಪಿಯುಸಿ ಹಂತದಲ್ಲಿ ಓದುವಾಗಲೇ ಮುಂದಿನ ಜೀವನದ ಹಾದಿ ಯಾವುದು ಎಂದು ತಿಳಿದಿರಬೇಕು. ಆಗ ಮಾತ್ರ ಆಯ್ಕೆಗಳ ಬಗ್ಗೆ ಸರಿಯಾಗಿ ಅಲೋಚಿಸಲು ಸಾಧ್ಯವಾಗುತ್ತದೆ.


ಕರಿಯರ್​ ಅವಕಾಶಗಳೂ ಸಹ ಇದೆ
ದ್ವಿತೀಯ ಪಿಯುಸಿ ನಂತರ ಹಲವು ವಿದ್ಯಾರ್ಥಿಗಳು ಸೈನ್ಸ್‌ ಬೇಸಿಕ್ ಅಗತ್ಯವಿಲ್ಲದ ಜಾಬ್‌ ಸೇರುತ್ತಾರೆ. ಇನ್ನೂ ಕೆಲವರು ಮುಂದಿನ ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಹಾಗೆ ಕೆಲವರು ಪಿಯು ಸೈನ್ಸ್‌ ಅಗತ್ಯವೇ ಇಲ್ಲದ ಪದವಿ ಕೋರ್ಸ್‌ಗಳಿಗೆ ಸೇರಿಕೊಳ್ಳುತ್ತಾರೆ. ಹಲವು ಲಾಯರ್‌ಗಳು ಪಿಯುಸಿ, ಪದವಿ ಸೈನ್ಸ್‌ ಓದಿ, ನಂತರ ಎಲ್‌ಎಲ್‌ಬಿ ಓದಿದವರು ಇದ್ದಾರೆ. ಸಿಎ, ಎಂಬಿಎ, ಆರ್ಟಿಸ್ಟ್‌, ಬರಹಗಾರರು ಮತ್ತು ಇತರೆ ಕರಿಯರ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಪಿಯುಸಿ ಸೈನ್ಸ್‌ ಓದಿ ನಂತರದಲ್ಲಿ ಪದವಿಪೂರ್ವ ಕೋರ್ಸ್‌ ಯಾವುದನ್ನು ತೆಗೆದುಕೊಳ್ಳುತ್ತಾರೋ ಆ ಕೋರ್ಸ್‌ ಅವರ ಜೀವನವನ್ನು ರೂಪಿಸುತ್ತದೆ.


ಇದನ್ನೂ ಓದಿ: PUC ಆದ ಬಳಿಕ ಜಾಬ್​ ಮಾಡ್ಬೇಕಾ? ಹಾಗಾದ್ರೆ ಈ ಕೋರ್ಸ್​ ಮಾಡಿ


ಸೈನ್ಸ್‌ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವುದರಿಂದ ಈ ಪ್ರಯೋಜನವಿದೆ
ಪ್ಯೂರ್ ಸೈನ್ಸ್‌ ಅಥವಾ ಅಪ್ಲೈಡ್ ಸೈನ್ಸ್‌ ಅನ್ನು ಪೋಸ್ಟ್‌ ಗ್ರಾಜುಯೇಟ್‌ ಹಂತದಲ್ಲಿ ಓದಬಹುದು. ಪಿಯುಸಿಯಲ್ಲಿ ಸೈನ್ಸ್‌ ಓದಿದವರಿಗೆ ಕಮರ್ಷಿಯಲ್ ಪೈಲಟ್, ಕಂಬೈನ್ಡ್‌ ಡಿಫೆನ್ಸ್‌ ಸೈನ್ಸ್‌, ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ಮುಂತಾದ ಕಡೆಗಳಲ್ಲಿ ಉದ್ಯೋಗಾವಕಾಶ ಲಭ್ಯ. ವಿಜ್ಞಾನ ಮತ್ತು ವಿಜ್ಞಾನೇತರ ಎರಡು ಕೆಟಗರಿಯ ಕರಿಯರ್ ಆಯ್ಕೆ ಮಾಡಿಕೊಂಡು ಅದನ್ನು ಕಲಿಯಬಹುದು.


ಕೋರ್ಸ್​ಗಳ ವಿವರ
ಬಿಸಿಎ, ಐಟಿ ಮತ್ತು ಸಾಫ್ಟ್‌ವೇರ್, ಫಾರ್ಮಸಿ, ಆಂಥ್ರಾಪಾಲಜಿ, ಆಕುಪೇಶನಲ್ ಥೆರಪಿ, ಫಿಸಿಯೋಥೆರಪಿ, ಕಂಪ್ಯೂಟರ್ ಸೈನ್ಸ್, ಇಲೆಕ್ಟ್ರಾನಿಕ್ಸ್‌, ಎಕಾನಾಮಿಕ್ಸ್, ಜೂವಾಲಜಿ / ಬಾಟನಿ, ಬಯೋಕೆಮಿಸ್ಟ್ರಿ, ಮೈಕ್ರೋಬಯೋಲಜಿ, ಬಯೋಮೆಡಿಕಲ್ ಸೈನ್ಸ್‌, ಬಯೋಟೆಕ್ನಾಲಜಿ, ಕೆಮಿಸ್ಟ್ರಿ, ಫಿಸಿಕ್ಸ್‌ ಡಿಗ್ರಿ ಕೋರ್ಸ್‌ಗಳನ್ನು ಓದಬಹುದು. ವಿಜ್ಞಾನ ಪಿಯುಸಿ ಓದಿದವರು ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಇಎಂಎಸ್, ಹೋಮಿಯೋಪತಿ, ಯುನಾನಿ ಮತ್ತು ಇತರೆ ವೈದ್ಯಕೀಯ ಕೋರ್ಸ್‌ಗಳನ್ನು ಓದಬಹುದು. ಸಿವಿಲ್, ಮೆಕ್ಯಾನಿಕ್ಸ್, ಸಿಎಸ್, ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಕಲ್ ಮತ್ತು ಇತರೆ ವಿಭಾಗಗಳಲ್ಲಿ ಬಿಇ, ಬಿ.ಟೆಕ್ ಹಾಗೂ ಬಿ ಆರ್ಚ್‌ ಅಧ್ಯಯನ ಮಾಡಬಹುದು.


ಇದನ್ನೂ ಓದಿ: PUC ನಂತರ ಫಾರೆಸ್ಟ್ರಿ ಕೋರ್ಸ್​ ಮಾಡಿದರೆ ಮುಂದೆ ಒಳ್ಳೆಯ ಉದ್ಯೋಗ ಸಿಗುತ್ತೆ


ಹನ್ನೆರಡನೇ ತರಗತಿ ಪೂರ್ಣಗೊಂಡ ನಂತರ ನೀವು ಈ ಕೋರ್ಸ್​ಗಳನ್ನು ಮಾಡಬೇಕು. ಹಾಗಾದಾಗ ನಿಮ್ಮ ಮುಂದಿನ ಭವಿಷ್ಯ ತುಂಬಾ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲ ನೀವೂ ಒಳ್ಳೆಯ ಉದ್ಯೋಗವನ್ನೂ ಸಹ ಪಡೆದುಕೊಳ್ಳಬಹುದು. ಅದರಲ್ಲೂ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕೋರ್ಸ್ ಮಾಡಿದರೆ ಪ್ರತಿ ತಿಂಗಳೂ ಕೈ ತುಂಬ ಸಂಬಳ ಎಣಿಸಬಹುದು. ನೀವೂ ಸೈನ್ಸ್​ ಮಾಡಿದ ಮಾತ್ರಕ್ಕೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡಬಹುದು.

First published: