• ಹೋಂ
  • »
  • ನ್ಯೂಸ್
  • »
  • Jobs
  • »
  • Udupi ಜಿಲ್ಲೆಯಲ್ಲಿ ಮುಂದುವರಿದ ನೀರಿನ ಅಭಾವ; ಶಾಲಾ ಮಕ್ಕಳಿಗೆ ಕುಡಿಯುವ ನೀರೇ ಇಲ್ಲ

Udupi ಜಿಲ್ಲೆಯಲ್ಲಿ ಮುಂದುವರಿದ ನೀರಿನ ಅಭಾವ; ಶಾಲಾ ಮಕ್ಕಳಿಗೆ ಕುಡಿಯುವ ನೀರೇ ಇಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರಿನ ಸಮಸ್ಯೆಯಾಗಿದೆ ಎಂದು ತಿಳಿದರೂ ಕೂಡಾ ಸಹಕರಿಸುತ್ತಿಲ್ಲಾ ಎಂದು ದೂರಲಾಗಿದೆ. ಕುಡಿಯಲು ನೀರಿಲ್ಲದೆ 400 ಮಕ್ಕಳು ಈ ಸರ್ಕಾರಿ ಶಾಲೆಯಲ್ಲಿ ಪರದಾಡುವಂತಾಗಿದೆ.

  • Share this:

ಉಡುಪಿ: ಜಿಲ್ಲೆಯಲ್ಲಿ ಮುಂದುವರಿದ ಕುಡಿಯುವ ನೀರಿನ ಸಮಸ್ಯೆಯಿಂದ (Problem) ಹಲವಾರು ಶಾಲೆಗಳಿಗೆ ತೊಂದರೆಯಾಗುತ್ತಿದೆ. ಬಿಸಿ ಊಟಕ್ಕೆ ಹಾಗು ಮಕ್ಕಳಿಗೆ ಅವಶ್ಯ ಇರುವ ಕೆಲ ಕಾರಣಗಳಿಗೆ ನೀರು (Water) ಸಿಗುತ್ತಿಲ್ಲ. ಇನ್ನು ಕೆಲ ಶಾಲೆಗಳಲ್ಲಿ ನೀರಿನ ಸಮಸ್ಯೆಯಿಂದಾಗಿ ಮಕ್ಕಳು ಶೌಚಾಲಯವನ್ನೂ ಸಹ ಬಳಸಲು ಆಗುತ್ತಿಲ್ಲ. ಊಟ, ಬಾಯಾರಿಕೆ, ಇವೆಲ್ಲದಕ್ಕೂ ನೀರಿನಿಂದ ಸಮಸ್ಯೆಯಾಗುತ್ತಿದೆ. ಅಂತಹದೇ ಇನ್ನೊಂದು ಘಟನೆ ಉಡುಪಿಯಲ್ಲೂ (Udupi) ನಡೆದಿದೆ. ನೀರಿನ ಪೂರೈಕೆಗೆ ಅವಕಾಶ ಇದ್ದರು ನೀರು ನೀಡದೇ ಇರುವುದು ತಿಳಿದು ಬಂದಿದೆ.


ನೀರಿನ‌ ಸಮಸ್ಯೆಯಿಂದ ತತ್ತರಿಸಿದೆ ಜಿಲ್ಲೆಯ ಹಲವು ಸರ್ಕಾರಿ ಶಾಲೆಗಳು ಇಂದಿಗೂ ಅದೇ ಸಮಸ್ಯೆಯನ್ನು ಎದುರಿಸುತ್ತಲೇ ಇದೆ. ನೀರಿನ ಸಮಸ್ಯೆ ಇದ್ರೂ ಟ್ಯಾಂಕರ್ ಮೂಲಕ ನೀರು ಒದಗಿಸದೆ ಪಂಚಾಯತ್ ಅಧ್ಯಕ್ಷ ದರ್ಪ ತೋರಿದ್ದಾರೆ. ಶಾಲಾ ಮಕ್ಕಳಿಗೆ ನೀರು ಒದಗಿಸದೆ ವಂಡ್ಸೆ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ‌ಶೆಟ್ಟಿ ದರ್ಪ ತೋರಿರುವುದಾಗಿ ಶಾಲೆಯವರು ದೂರಿದ್ದಾರೆ. ಇದು ನಿಜವಾಗಿಗೂ ಅಧ್ಯಕ್ಷನ ಬೇಜವಾಬ್ದಾರಿ. ಆದರೂ ಕೂಡಾ ನೀರು ಪೂರೈಕೆ ಮಾಡುತ್ತಿಲ್ಲ.


ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರಿನ ಸಮಸ್ಯೆಯಾಗಿದೆ ಎಂದು ತಿಳಿದರೂ ಕೂಡಾ ಸಹಕರಿಸುತ್ತಿಲ್ಲಾ ಎಂದು ದೂರಲಾಗಿದೆ. ಕುಡಿಯಲು ನೀರಿಲ್ಲದೆ 400 ಮಕ್ಕಳು ಈ ಸರ್ಕಾರಿ ಶಾಲೆಯಲ್ಲಿ ಪರದಾಡುವಂತಾಗಿದೆ.
ಶಾಲೆಯ ಮಕ್ಕಳಿಗೆ ಕುಡಿಯಲು ನೀರು ಕೇಳಿ ಪಂಚಾಯತ್ ಗೆ ಪತ್ರ ಬರೆದಿದ್ದ ಶಿಕ್ಷಕರು ಈ ಕುರಿತು ಬೇಸರಗೊಂಡಿದ್ದಾರೆ.


ಇದನ್ನೂ ಓದಿ: Teachers Recruitment: ಬಿಎಡ್​ ಆದವರಿಗೆ ಇಲ್ಲಿದೆ ಶುಭ ಸುದ್ದಿ! 58 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ ಸರ್ಕಾರ


ಶಾಲೆಗೆ ನೀರಿನ ವಾಹನದಲ್ಲಿ ನೀರು ತಲುಪಿಸಿದ್ದ ಪಂಚಾಯತ್ ಪಿಡಿಓ
ಆದರೆ ಪಂಚಾಯತ್ ಅಧ್ಯಕ್ಷರು ಶಾಲೆಗೆ ನೀರು ಬಿಡುವುದು ಬೇಡ ಎಂದು ಟ್ಯಾಂಕರ್ ವಾಪಾಸ್ ಕರೆಸಿಕೊಂಡಿದ್ದಾರೆ. ನೀರಿನ ವಾಹನ ಚಾಲಕನನ್ನು ತರಾಟೆ ತೆಗೆದುಕೊಂಡಿದ್ದ ಪಂಚಾಯತ್ ಸದಸ್ಯ ಪ್ರಶಾಂತ್ ಪೂಜಾರಿ. ಅಧ್ಯಕ್ಷರು ಶಾಲೆಗೆ ನೀರು ಬಿಟ್ಟರೆ ಬಿಲ್ ಮಾಡುವುದಿಲ್ಲ ಎಂದಿದ್ದಾರೆ ಎಂದು ವಾಹನ ಚಾಲಕ ಹೇಳಿದ್ದಾನೆ.


ಶಾಲೆಗೆ ನೀರು ಬಿಡದಂತೆ ಪಿಡಿಓ ಮತ್ತು ನೀರಿನ ಚಾಲಕನಿಗೆ ವಾರ್ನ್ ಮಾಡಿದ್ದ ಅಧ್ಯಕ್ಷ
ಸದ್ಯ ಚಾಲಕ ಮತ್ತು ಪಂಚಾಯತ್ ಸದಸ್ಯರ ನಡುವಿನ ಪೋನ್ ಸಂಭಾಷಣೆ ವೈರಲ್ ಆಗಿದೆ. ಇದರಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.




ಹರಸಾಹಸ ಪಟ್ಟು ಶಾಲೆಗೆ ನೀರಿನ ವ್ಯವಸ್ಥೆ ಮಾಡಿಸಿದ ಪಂಚಾಯತ್ ಸದಸ್ಯ ಪ್ರಶಾಂತ್ ಮಕ್ಕಳಿಗೆ ಕುಡಿಯುವ ನೀರು ದೊರೆಯುವಂತೆ ಮಾಡಿದ್ದಾರೆ. ವಂಡ್ಸೆ ಪಂಚಾಯತ್ ಅಧ್ಯಕ್ಷರ ಮೇಲೆ ಜಿಲ್ಲಾಡಳಿತಕ್ಕೆ ದೂರು ನೀಡಿರುವ ಪಂಚಾಯತ್ ಸದಸ್ಯ ಇವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.


ವರದಿ: ಪರೀಕ್ಷಿತ್​ ಶೇಟ್​
ನ್ಯೂಸ್​ 18 ಕನ್ನಡ ಉಡುಪಿ

First published: