• Home
  • »
  • News
  • »
  • jobs
  • »
  • Dress Code: ಅಧ್ಯಾಪಕರಿಗೆ ಜಾರಿಯಾಯ್ತು ಹೊಸ ಡ್ರೆಸ್ ಕೋಡ್!

Dress Code: ಅಧ್ಯಾಪಕರಿಗೆ ಜಾರಿಯಾಯ್ತು ಹೊಸ ಡ್ರೆಸ್ ಕೋಡ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಲವು ಖಾಸಗಿ ಮತ್ತು ಸ್ವಾಯತ್ತ ವಿದ್ಯಾ ಸಂಸ್ಥೆಗಳು ಈಗಾಗಲೇ ಈ ಡ್ರೆಸ್ ಕೋಡ್ ಪಾಲಿಸುತ್ತಿವೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಅದೇ ನಿಯಮವನ್ನು ಜಾರಿ ಮಾಡಲು ಹೊರಟಿರುವುದು ತುಸು ಚರ್ಚೆಗೆ ಕಾರಣವಾಗಿದೆ.

  • News18 Kannada
  • Last Updated :
  • Tamil Nadu, India
  • Share this:

ಶಾಲೆಯಲ್ಲಿ ಮಕ್ಕಳಿಗಷ್ಟೇ (Childrens) ಸಮವಸ್ತ್ರವಲ್ಲ ಶಿಕ್ಷಕರಿಗೂ ಈಗ ಹೊಸ ಡ್ರೆಸ್​​ ಕೋಡ್​ ಜಾರಿಯಾಗಿದೆ. ತಮಿಳುನಾಡಿನ ಶಾಲೆಗಳಲ್ಲಿ ವಿದ್ಯಾರ್ಥಿಗಳೊಟ್ಟಿಗೆ ಈಗ ಶಿಕ್ಷಕರೂ ಸಹ ಹೊಸ ಡ್ರೆಸ್​ ಕೋಡ್ (Dress Code)​ ಅನುಸರಿಸಲಿದ್ದಾರೆ. ತಮಿಳುನಾಡಿನ ಕಾಲೇಜುಗಳಲ್ಲಿ (Collage) ಅಧ್ಯಾಪಕರು  ತಮ್ಮ ದೇಹ ಕಾಣದಂತೆ 'ಓವರ್ ಕೋಟ್' (over coat) ಧರಿಸುವಂತೆ ಉನ್ನತ ಶಿಕ್ಷಣ ಇಲಾಖೆಯು ಆದೇಶಿಸಿದೆ. ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯು ಕಾಲೇಜು ಶಿಕ್ಷಣ ನಿರ್ದೇಶನಾಲಯಕ್ಕೆ (ಡಿಸಿಇ) ಪತ್ರ ಬರೆದಿದ್ದು, ತಮಿಳುನಾಡಿನ ಎಲ್ಲಾ ಕಾಲೇಜುಗಳ ಪ್ರಾಧ್ಯಾಪಕರು ಓವರ್ ಕೋಟ್ ಧರಿಸುವಂತೆ ಕೇಳಿಕೊಂಡಿದ್ದಾರೆ. 


ಈ ನೀತಿ ಪ್ರಕಾರ ಸಾರ್ವಜನಿಕವಾಗಿ ಭಾರೀ ಚರ್ಚೆಗೆ ಶಿಕ್ಷಣ ಇಲಾಖೆಯ ಆದೇಶ ಕಾರಣವಾಗುತ್ತಿದೆ. ಈಗಾಗಲೇ ಖಾಸಗಿ, ಸ್ವಾಯತ್ತ ಶಿಕ್ಷಣ ಸಂಸ್ಥೆಗಳಲ್ಲಿ ಡ್ರೆಸ್ ಕೋಡ್ ಜಾರಿಯಲ್ಲಿದೆ. ತಮಿಳುನಾಡು ಸರ್ಕಾರ ಬರೆದ ಪತ್ರದಲ್ಲಿ ‘ಸಭ್ಯ ವಸ್ತ್ರ ಸಂಹಿತೆ’ ಎಂಬ ಪದವನ್ನು ಮಾತ್ರ ಬಳಸಲಾಗಿದೆ. ಪ್ರತ್ಯೇಕ ಮಾರ್ಗಸೂಚಿಗಳಿಲ್ಲ.


ಮಹಿಳಾ ಸಿಬ್ಬಂದಿಗೆ ಓವರ್​ ಕೋಟ್​
ಮಹಿಳಾ ಸಿಬ್ಬಂದಿ ಸೀರೆ ಧರಿಸಿ ತರಗತಿಗಳನ್ನು ತೆಗೆದುಕೊಳ್ಳುವಾಗ ಅವರು ಕಿರಿಕಿರಿ ಅನುಭವಿಸಬಹುದು. ಕೆಲವು ವಿದ್ಯಾರ್ಥಿಗಳು ಅವರನ್ನು ಚುಡಾಯಿಸಬಹುದು. ಇದನ್ನು ತಪ್ಪಿಸುವ ನಿಲುವಂಗಿ ಅಥವಾ ಓವರ್ ಕೋಟ್ಗಳನ್ನು ಧರಿಸುವುದು ಒಳ್ಳೆಯದು ಎಂಬ ಅಭಿಪ್ರಾಯವು ಕೆಲವು ಅಧ್ಯಾಪಕರಿಂದ ವ್ಯಕ್ತವಾಗಿದೆ.


ಬೋಧಕ ಸಿಬ್ಬಂದಿಗೆ ಡ್ರೆಸ್ ಕೋಡ್
ಮೊದಲು ಶಿಕ್ಷಣ ಇಲಾಖೆ ಬೋಧಕ ಸಿಬ್ಬಂದಿ ಡ್ರೆಸ್ ಕೋಡ್ ಗೆ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಬೇಕು. ಟೈ ಧರಿಸದಿದ್ದಕ್ಕೆ ಎರಡು ವರ್ಷಗಳ ಹಿಂದೆ ರೂ. 500 ದಂಡ ಪಾವತಿಸಬೇಕಾಗುತ್ತಿತ್ತು. ಅದಕ್ಕೂ ಮುನ್ನ ಇಂತಹ ನೀತಿ ರೂಪಿಸುವಾಗ ಮೊದಲಿಗೆ ವಸ್ತ್ರ ಸಂಹಿತೆಯ ನಿಯಮಗಳನ್ನು ಇಲಾಖೆ ರೂಪಿಸಬೇಕು ಎಂದು ಹೇಳಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಆಯಾಯ ವಿಭಾಗಗಳ ನಿರ್ದೇಶಕರು ಈ ಡ್ರೆಸ್ ಕೋಡ್ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ.


ಇದನ್ನೂ ಓದಿ: ನಿಮ್ಹಾನ್ಸ್​​ನಲ್ಲಿ ಕೆಲಸ ಖಾಲಿ ಇದೆ: ಅರ್ಜಿ ಸಲ್ಲಿಕೆಗೆ ಎರಡೇ ದಿನ ಬಾಕಿ


ಶಿಕ್ಷಣ ಇಲಾಖೆಯ ಹೊಸ ನೀತಿ
ಶಿಕ್ಷಣ ಇಲಾಖೆಯ ಈ ನೀತಿ ಸೂಚನೆಗೆ ಭಿನ್ನಾಭಿಪ್ರಾಯವೂ ವ್ಯಕ್ತವಾಗುತ್ತಿದೆ. ಪ್ರೊಫೆಸರ್‌ಗಳು ತಮ್ಮ ದೇಹವನ್ನು ಮುಚ್ಚಿಕೊಳ್ಳಲು ಓವರ್‌ಕೋಟ್ ಧರಿಸಲು ಹೇಳುವುದು ಅವಮಾನಕರವಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಮಕ್ಕಳಿಗೂ ಶಿಕ್ಷರಿಗೂ ಒಂದೇ ನೀತಿ ಜಾರಿಯಾದಂತಾಗುತ್ತದೆ ಎಂದೂ ಸಹ ಹೇಳಲಾಗುತ್ತಿದೆ.


ಮಕ್ಕಳು ಅಪಹಾಸ್ಯ ಮಾಡಬಹುದು
ಮಕ್ಕಳು ಇನ್ನು ಶಿಕ್ಷಕರನ್ನು ಅಪಹಾಸ್ಯ ಕೂಡ ಮಾಡಬಹುದು. ಕಲಿಸುವಾಗ ಇರುಸುಮುರುಸಾಗಬಹುದು. ಒಟ್ಟಾರೆಯಾಗಿ ತಮಿಳುನಾಡು‌ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಇನ್ನು ಕೆಲವರಿಗೆ ಇದು ಸರಿ ಎನಿಸುತ್ತಿದೆ.


ನಿಯಮದ ಪಾಲನೆ ಆಗುತ್ತಾ?
ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಖಾಸಗಿ ಮತ್ತು ಸ್ವಾಯತ್ತ ವಿದ್ಯಾ ಸಂಸ್ಥೆಗಳು ಈಗಾಗಲೇ ಈ ಡ್ರೆಸ್ ಕೋಡ್ ಪಾಲಿಸುತ್ತಿವೆ. ಸರ್ಕಾರಿ ಶಾಲಾ ಕಾಲೇಜುಗಳಿಗೆ ಅದೇ ನಿಯಮವನ್ನು ಜಾರಿ ಮಾಡಲು ಹೊರಟಿರುವುದು ತುಸು ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹುದು. ಎಷ್ಟರ ಮಟ್ಟಿಗೆ ಇದು ಜಾರಿಗೆ ಬರುತ್ತೆ ಅನ್ನೋ ಕುತೂಹಲ ಮೂಡಿದೆ. ಈ ನಿಯಮದ ಪಾಲನೆ ಎಷ್ಟರ ಮಟ್ಟಿಗೆ ನಡೆಯುತ್ತದೆ ಎಂದೂ ಸಹ ಕಾದು ನೋಡಬೇಕಾಗಿದೆ.


ತಮಿಳುನಾಡಿನ ಶಿಕ್ಷಕರಲ್ಲಿ ಈ ಕುರಿತು ಚರ್ಚೆ ಆರಂಭವಾಗಿದೆ. ಈ ನಿಯಮವನ್ನು ಸರ್ಕಾರ ಜಾರಿಗೊಳಿಸಿದರೂ ಸಹ ಪಾಲನೆ ಮಾಡುವ ಮತ್ತು ಪಾಲಿಸದೇ ಇರುವ ಎರಡೂ ಸಾಧ್ಯತೆಗಳು ಕಂಡು ಬರುತ್ತಿದೆ ಎನ್ನಬಹುದು.

First published: