• Home
 • »
 • News
 • »
 • jobs
 • »
 • DRDO Scholarship: 1 ಲಕ್ಷ ವಿದ್ಯಾರ್ಥಿವೇತನ! ಈ ವರ್ಷ ನೀವು ಅಪ್ಲೈ ಮಾಡಬಹುದಾದ ಕೊನೆಯ ಸ್ಕಾಲರ್​ ಶಿಪ್​ ಇದು

DRDO Scholarship: 1 ಲಕ್ಷ ವಿದ್ಯಾರ್ಥಿವೇತನ! ಈ ವರ್ಷ ನೀವು ಅಪ್ಲೈ ಮಾಡಬಹುದಾದ ಕೊನೆಯ ಸ್ಕಾಲರ್​ ಶಿಪ್​ ಇದು

ಸ್ಕಾಲರ್​ ಶಿಪ್​

ಸ್ಕಾಲರ್​ ಶಿಪ್​

ಭಾರತ ಸರ್ಕಾರವು ವಿದ್ಯಾರ್ಥಿಗಳಿಗಾಗಿ DRDO ಸ್ಕಾಲರ್‌ಶಿಪ್ 2022ಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ. ನೀವೂ ಸಹ ಈ ವಿದ್ಯಾರ್ಥಿ ವೇತನಕ್ಕೆ ಅಪ್ಲೈ ಮಾಡಿ. ಫಲಾನುಭವಿಗಳಾಗಿ.

 • News18 Kannada
 • 5-MIN READ
 • Last Updated :
 • Karnataka, India
 • Share this:

ಭಾರತ ಸರ್ಕಾರವು ವಿದ್ಯಾರ್ಥಿಗಳಿಗಾಗಿ DRDO ಸ್ಕಾಲರ್‌ಶಿಪ್ (Scholarship) 2022ಕ್ಕಾಗಿ ಅರ್ಜಿಯನ್ನು ಆಹ್ವಾನಿಸಿದೆ. ಹೆಸರಿಗೆ ಅನುಗುಣವಾಗಿ ಈ ಯೋಜನೆಯು (Plan) ಪದವಿಪೂರ್ವ (BE/B.Tech) ಮೊದಲ ವರ್ಷದಲ್ಲಿ ಅಥವಾ ಸ್ನಾತಕೋತ್ತರ (M.Tech/ME) ಕೋರ್ಸ್‌ಗಳಾಗಿದ್ದರೆ ಮೊದಲ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ (Students) ನೀಡಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿಗಳು ವಾರ್ಷಿಕವಾಗಿ ಸುಮಾರು 1,86,000ರೂಗಳ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತಾರೆ.

ವಿದ್ಯಾರ್ಥಿ ವೇತನDRDO ವಿದ್ಯಾರ್ಥಿವೇತನ
ಮೊತ್ತ1,20,000
ವಿದ್ಯಾರ್ಹತೆUG/ PG
ಅರ್ಜಿ ಸಲ್ಲಿಕೆಗೆ ಕೊನೆ ದಿನ31-12-2022
ಫಲಾನುಭವಿಗಳುವಿದ್ಯಾರ್ಥಿನಿಯರು
ಅಧಿಕೃತ ಜಾಲತಾಣಇಲ್ಲಿ ಕ್ಲಿಕ್ ಮಾಡಿ

DRDO ವಿದ್ಯಾರ್ಥಿವೇತನ 2022 ಪಡೆಯಲು ಇರಬೇಕಾದ ಅರ್ಹತೆ
ಭಾರತೀಯ ಪ್ರಜೆಯಾಗಿರಬೇಕು.
ಏರೋಸ್ಪೇಸ್ ಎಂಜಿನಿಯರಿಂಗ್ / ಏರೋನಾಟಿಕಲ್ ಎಂಜಿನಿಯರಿಂಗ್ / ಬಾಹ್ಯಾಕಾಶ ಎಂಜಿನಿಯರಿಂಗ್ ಮತ್ತು ರಾಕರಿ / ಏರ್‌ಕ್ರಾಫ್ಟ್ ಎಂಜಿನಿಯರಿಂಗ್ / ಏವಿಯಾನಿಕ್ಸ್ ಸ್ಟ್ರೀಮ್‌ನಲ್ಲಿ ಯುಜಿ / ಪಿಜಿ ಕೋರ್ಸ್​ ಮಾಡುತ್ತಿರುವ ಹುಡುಗಿಯರಾಗಿರಬೇಕು.


ನೀವು ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಬಯಸುವಿರಾ? ಹಾಗಿದ್ದಲ್ಲಿ, ಬಾಲಕಿಯರ DRDO ಸ್ಕಾಲರ್‌ಶಿಪ್ 2023 ಗೆ ಅರ್ಜಿ ಸಲ್ಲಿಸುವ ಸಮಯ ಇದೀಗ ಬಂದಿದೆ. ಈ ವಿದ್ಯಾರ್ಥಿವೇತನವು ಕಾಮನ್‌ವೆಲ್ತ್‌ನ ಸದಸ್ಯ ರಾಷ್ಟ್ರದಲ್ಲಿ ಮಾನ್ಯತೆ ಪಡೆದ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾದ ಮಹಿಳಾ ವಿದ್ಯಾರ್ಥಿಗಳಿಗೆ ದೊರೆಯುತ್ತದೆ.


DRDO ಸ್ಕಾಲರ್‌ಶಿಪ್ 2022 ಪ್ರಯೋಜನ
UG ವಿದ್ಯಾರ್ಥಿಗಳಿಗೆ INR 1,20,000 ಹಣ ದೊರೆಯುತ್ತದೆ. ನೀವು ಯು.ಜಿ ಅಥವಾ ಪಿ.ಜಿ ಯಾವ ಕೋರ್ಸ್​ ಮಾಡುತ್ತಿದ್ದರೂ ಸಹ ಪ್ರಥಮ ವರ್ಷದವರಾಗಿರಬೇಕು. ಆಗ ಮಾತ್ರ ಈ ವಿದ್ಯಾರ್ಥಿ ವೇತನ ಪಡೆಯಲು ಸಾಧ್ಯವಾಗುತ್ತದೆ.


ಇದನ್ನೂ ಓದಿ: Fail In Exam: ಪರೀಕ್ಷೆಯಲ್ಲಿ ಫೇಲ್​ ಆದ್ರೆ ಏನ್ಮಾಡ್ಬೇಕು ಗೊತ್ತಾ? ಇದನ್ನು ಓದಿ


ಹುಡುಗಿಯರಿಗೆ ವಿದ್ಯಾರ್ಥಿವೇತನ
ಡಿಆರ್‌ಡಿಒ ರಕ್ಷಣಾ ವೃತ್ತಿಯನ್ನು ಮುಂದುವರಿಸಲು ಆಸಕ್ತಿ ಹೊಂದಿರುವ ಹುಡುಗಿಯರಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತದೆ. ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿಪೂರ್ವ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವು ಅರ್ಹವಾಗಿರುತ್ತದೆ. ನೀವು ವಿದ್ಯಾರ್ಥಿವೇತನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು ಮತ್ತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
31-12-2022


ದಾಖಲೆಗಳ ಪಟ್ಟಿ
1. ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಕಲರ್​ ಫೋಟೋ
2. ಪ್ರಮಾಣಪತ್ರ.
3. ಆಧಾರ್ ಕಾರ್ಡ್
4. ಪ್ರವೇಶ ಪುರಾವೆ
5. ಶುಲ್ಕದ ವಿವರಗಳು
6. ಸಂಸ್ಥೆಯಿಂದ ಪ್ರಮಾಣಪತ್ರ
7. ನಿಮ್ಮ ಉಲ್ಲೇಖಕ್ಕಾಗಿ ಅಂತಿಮವಾಗಿ ಸಲ್ಲಿಸಿದ ಅಪ್ಲಿಕೇಷನ್​
ಈ ಮೇಲೆ ನೀಡಿರುವ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕು.


 
DRDO ವಿದ್ಯಾರ್ಥಿವೇತನ ಅರ್ಜಿ ಸಲ್ಲಿಸುವುದು ಹೇಗೆ?
DRDO ವಿದ್ಯಾರ್ಥಿವೇತನ ಅಧಿಕೃತ ವೆಬ್‌ಸೈಟ್ ಅಂದರೆ drdo.gov.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಆನ್​ಲೈನ್​ ಅಪ್ಲಿಕೇಷನ್​ ತೆರೆಯಿರಿ.
ನೋಂದಣಿ ಫಾರ್ಮ್ ಭರ್ತಿ ಮಾಡಿ.
ಎಲ್ಲಾ ಪ್ರಮುಖ ದಾಖಲೆಗೂ ಸಹ ನಿಮ್ಮ ಇತ್ತೀಚಿನ ಭಾವ ಚಿತ್ರ ಲಗತ್ತಿಸಿ.
ಅರ್ಜಿ ಸಲ್ಲಿಸಿದ ಮೇಲೆ ಸೇವ್​ ಮಾಡಿ
ಸೇವ್​ ಮಾಡಿರುವ ದಾಖಲೆಯ ಹಾರ್ಡ್​ ಕಾಫಿ ತೆಗೆದುಕೊಳ್ಳಿ.


ಎಲ್ಲಿನ ವಿದ್ಯಾರ್ಥಿಗಳಿಗೆ ಈ ಸ್ಕಾಲರ್​ ಶಿಪ್​ ದೊರಕುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಭಾರತದಾದ್ಯಂತ ಇರುವ ಎಲ್ಲಾ ರಾಜ್ಯದ ವಿದ್ಯಾರ್ಥಿನಿಯರಿಗೂ  ಈ ಸ್ಕಾಲರ್​ ಶಿಪ್​ ಲಭಿಸುತ್ತದೆ. ಈ ವರ್ಷದ ಅಂತಿಮ ವಿದ್ಯಾರ್ಥಿವೇತನ ಇದಾಗಿದ್ದು. ನೀವು ಈ ವರ್ಷ ಯಾವುದೇ ವಿದ್ಯಾರ್ಥಿವೇತನಕ್ಕೂ ಅರ್ಜಿ ಸಲ್ಲಿಸದೇ ಇದ್ದರೆ ಖಂಡಿತವಾಗಿ ಈ ಸ್ಕಾಲರ್ಶಿಪ್​ಗೆ ಅರ್ಜಿ ಸಲ್ಲಿಸಿ. 1ಲಕ್ಷಕ್ಕೂ ಅಧಿಕ ವಿದ್ಯಾರ್ಥಿ ವೇತನದ ಪ್ರಯೋಜನ ಪಡೆದುಕೊಳ್ಳಿ. ಬೇಗ ಅಪ್ಲೈ ಮಾಡಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು