• Home
  • »
  • News
  • »
  • jobs
  • »
  • Exam Tips: ಪಬ್ಲಿಕ್​ ಎಕ್ಸಾಂಗೆ ರೆಡಿ ಆಗ್ತಿದಿರಾ? ಹಾಗಾದ್ರೆ ಈ ಆ್ಯಪ್​ ಡೌನ್​ಲೋಡ್​​ ಮಾಡಿ

Exam Tips: ಪಬ್ಲಿಕ್​ ಎಕ್ಸಾಂಗೆ ರೆಡಿ ಆಗ್ತಿದಿರಾ? ಹಾಗಾದ್ರೆ ಈ ಆ್ಯಪ್​ ಡೌನ್​ಲೋಡ್​​ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಸರಳ ಚಟುವಟಿಕೆಗಳ ಮೂಲಕ ನಿಮ್ಮನ್ನು ಓದಲು ಮತ್ತು ಬರೆಯಲು ಹುರಿದುಂಬಿಸುವ ಗುಣವನ್ನು ಈ ಅಪ್ಲಿಕೇಶನ್​ ಹೊಂದಿದೆ. ಟಾಪರ್ ಲರ್ನಿಂಗ್ ಎಕ್ಸಾಮ್ ಅಪ್ಲಿಕೇಶನ್ ಒಂದು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸ್ನೇಹಿತ ಎಂದೇ ಹೇಳಬಹುದು. ವಿದ್ಯಾರ್ಥಿಗಳಲ್ಲಿ ಮೂಡುವ ಸಂದೇಹಗಳಿಗೆ ಇದು ತ್ವರಿತ ಉತ್ತರ ನೀಡುತ್ತದೆ.

ಮುಂದೆ ಓದಿ ...
  • Share this:

ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿವಿಧ ವಿದ್ಯಾರ್ಥಿಗಳು ಹಲವಾರು ರೀತಿಯಲ್ಲಿ ಅಭ್ಯಾಸಕ್ಕೆ ಪೂರಕವಾಗುವ ವಿಷಯಗಳ (Subject) ಬಗ್ಗೆ ಸರ್ಚ್​ ಮಾಡುತ್ತಾರೆ. ಅಂತವರಿಗೆ ಸಹಾಯವಾಗಲಿ (Help) ಎಂದೇ ನಾವಿಲ್ಲಿ ಕೆಲವೊಂದು ಸಲಹೆಯನ್ನು ನೀಡುತ್ತಿದ್ದೇವೆ. ನೀವು ಈ ವರ್ಷ ಪಬ್ಲಿಕ್​ ಪರೀಕ್ಷೆ (Exam) ಬರೆಯುವ ವಿದ್ಯಾರ್ಥಿಗಳಾಗಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಟಾಪರ್ ಲರ್ನಿಂಗ್ ಎಕ್ಸಾಮ್ ಅಪ್ಲಿಕೇಶನ್ (App) ನಿಮಗೆ ಪರೀಕ್ಷೆಯ ಸಿದ್ಧತೆ ನಡೆಸಲು ತುಂಬಾ ಪೂರಕವಾಗಿದೆ. ಈ ಅಪ್ಲಿಕೇಶನ್​ ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಕೂಡಾ ಲಭ್ಯವಿದೆ ಈಗಲೇ ಡೌನ್​ಲೋಡ್​ ಮಾಡಿ ಇದರ ಲಾಭ ಪಡೆದುಕೊಳ್ಳಬಹುದು. 


ಟಾಪರ್ ಲರ್ನಿಂಗ್ ಎಕ್ಸಾಮ್ ಅಪ್ಲಿಕೇಶನ್ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸುಲಭವಾದ ರೀತಿಯಲ್ಲಿ ಅಧ್ಯಯನ ಮಾಡಲು ಸಹಾಯ ಮಾಡುತ್ತದೆ. ಸುಮಾರು 1 ಲಕ್ಷ ವಿದ್ಯಾರ್ಥಿಗಳು ಈ ಅಪ್ಲಿಕೇಶನ್  ಉಪಯೋಗಿಸುತ್ತಿದ್ದಾರೆ ಎಂದು ಹೇಳಬಹುದು. ಈ ಅಪ್ಲಿಕೇಶನ್ ವಿಷಯಗಳ ಸ್ಪಷ್ಟ ವಿವರಣೆ ಮತ್ತು ತಯಾರಿ ವಿಧಾನ, ಪ್ರಶ್ನೆಗಳನ್ನು ಹೇಗೆ ಎದುರಿಸುವುದು ಎಂಬ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ.


ಅಣಕು ಪರೀಕ್ಷೆ ಅಂದರೆ ಪರೀಕ್ಷೆಯಂತದೇ ಪ್ರಕ್ರಿಯೆಯಲ್ಲಿ ನೀವು ಭಾಗಿಯಾಗಲು ಇದು ಸಹಕರಿಸುತ್ತದೆ. ಹೀಗೆ ಮಾಡಿದರೆ ಪರೀಕ್ಷೆಯ ಅವಧಿಯಲ್ಲಿ ಉತ್ತರ ಬರೆಯಲು ಸುಲಭವಾಗುತ್ತದೆ. ಅಕ್ಷರ ಲೋಪವಾಗುವ ಮತ್ತು ನಾನು ನಿಧಾನವಾಗಿ ಬರೆಯುತ್ತಿದ್ದೇನೆ ಎಂದು ನಿಮಗೆ ಅನಿಸುವ ಸಾಧ್ಯತೆಗಳು ಕಡಿಮೆ ಇರುತ್ತದೆ.


ಇದನ್ನೂ ಓದಿ; Mid Day Meal: ವಿದ್ಯಾರ್ಥಿಗಳಿಗೆ ಸಾತ್ವಿಕ ಆಹಾರ ನೀಡಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ ಮಠಾಧೀಶರು


ಸರಳ ಚಟುವಟಿಕೆಗಳ ಮೂಲಕ ನಿಮ್ಮನ್ನು ಓದಲು ಮತ್ತು ಬರೆಯಲು ಹುರಿದುಂಬಿಸುವ ಗುಣವನ್ನು ಈ ಅಪ್ಲಿಕೇಶನ್​ ಹೊಂದಿದೆ. ಟಾಪರ್ ಲರ್ನಿಂಗ್ ಎಕ್ಸಾಮ್ ಅಪ್ಲಿಕೇಶನ್ ಒಂದು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಸ್ನೇಹಿತ ಎಂದೇ ಹೇಳಬಹುದು. ವಿದ್ಯಾರ್ಥಿಗಳಲ್ಲಿ ಮೂಡುವ ಸಂದೇಹಗಳಿಗೆ ಇದು ತ್ವರಿತ ಉತ್ತರ ನೀಡುತ್ತದೆ. ಇದು ವಿದ್ಯಾರ್ಥಿಗಳಿಗೆ ಕಷ್ಟಕರವಾದ ಪ್ರಶ್ನೆಗಳಿಗೆ ಸರಳವಾದ ಉತ್ತರಗಳನ್ನು ಸಹ ನೀಡುತ್ತದೆ.


ಪರೀಕ್ಷೆ ಭಯ ಕಡಿಮೆ ಮಾಡಲು ಇದು ಸಹಕಾರಿ


ಪರೀಕ್ಷೆಯ ಭಯವನ್ನು ಎದುರಿಸಲು, ನೀವು ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತ, ಸಮಾಜ ವಿಜ್ಞಾನ, ಇತಿಹಾಸ, ಭೂಗೋಳ, ಎಂಜಿನಿಯರಿಂಗ್, ಅರ್ಥಶಾಸ್ತ್ರ ವಿಷಯಗಳಿಗೆ ಆನ್‌ಲೈನ್‌ನಲ್ಲಿ ತಯಾರಿ ನಡೆಸಬಹುದು. ಇದು ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ವ್ಯಾಕರಣಕ್ಕಾಗಿ ಆನ್‌ಲೈನ್ ಪರೀಕ್ಷೆಯನ್ನು ಸಹ ಹೊಂದಿದೆ.


ವಿದ್ಯಾರ್ಥಿಗಳು ಕೋರ್ಸ್ ಟಿಪ್ಪಣಿಗಳು, ಪರೀಕ್ಷೆಯ ಸಲಹೆಗಳು, ಉತ್ತರಿಸಿದ ಪ್ರಶ್ನೆಗಳು, ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಮತ್ತು ವಿಷಯವಾರು ಪರೀಕ್ಷೆಯ ತಯಾರಿಯೊಂದಿಗೆ ಟಾಪರ್ ಲರ್ನಿಂಗ್ ಎಕ್ಸಾಂ ತರಬೇತಿಯನ್ನು ನೀವು ಪಡೆಯಬಹುದು. ಉನ್ನತ ಶಿಕ್ಷಣತಜ್ಞರಿಂದ ತಯಾರಿಸಲ್ಪಟ್ಟ ಪಾಠಗಳು ಅವರ ಸಲಹೆಗಳು ಎಲ್ಲವೂ ಸಹ ಇದರಲ್ಲಿ ಲಭ್ಯವಿದೆ.




CBSE ಮತ್ತು ICSE ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಸಲಹೆ


CBSE ಮತ್ತು ICSE ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಮೊದಲು ಎಲ್ಲಿಂದ ಪ್ರಾರಂಭಿಸಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಪಟ್ಟು ಯಾವುದನ್ನೂ ಸರಿಯಾಗಿ ಓದುವುದಿಲ್ಲ. ಅಷ್ಟೇ ಅಲ್ಲ ಯಾವ ವಿಷಯವನ್ನು ಮೊದಲು ಓದ ಬೇಕು, ಯಾವ ಪ್ರಶ್ನೆ ಮುಖ್ಯ ಎಂದು ತಿಳಿಯದೇ ಕಾಲಹರಣ ಮಾಡುತ್ತಿರುವ ವಿದ್ಯಾರ್ಥಿಗಳು ಇಲ್ಲಿಂದ ಸಲಹೆ ಪಡೆದುಕೊಳ್ಳಬಹುದು. . ಪಠ್ಯಕ್ರಮ ಮತ್ತು ಪ್ರಶ್ನೆ ರಚನೆಯನ್ನು ಮೊದಲು ಅರ್ಥಮಾಡಿಕೊಳ್ಳಿ. ತ್ವರಿತ ತಂತ್ರಗಳು, ಸರಿಯಾದ ಸಲಹೆಗಳು ಬೇಕಿದ್ದರೆ  ಇಲ್ಲಿ ಭೇಟಿ ನೀಡಿ.

First published: