• ಹೋಂ
  • »
  • ನ್ಯೂಸ್
  • »
  • Jobs
  • »
  • ICSE Topper ಅನನ್ಯಾ ಹೆಚ್ಚಿನ ಅಂಕ ಗಳಿಸಲು ಯಾವ ರೀತಿ ತಯಾರಿ ನಡೆಸಿದ್ದರು ಗೊತ್ತಾ? ಇಲ್ಲಿದೆ ಮಾಹಿತಿ

ICSE Topper ಅನನ್ಯಾ ಹೆಚ್ಚಿನ ಅಂಕ ಗಳಿಸಲು ಯಾವ ರೀತಿ ತಯಾರಿ ನಡೆಸಿದ್ದರು ಗೊತ್ತಾ? ಇಲ್ಲಿದೆ ಮಾಹಿತಿ

ಅನನ್ಯಾ ಕಾರ್ತಿಕ್​

ಅನನ್ಯಾ ಕಾರ್ತಿಕ್​

ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ) ಸೋಮವಾರ 12ನೇ ತರಗತಿ ಮತ್ತು ಹತ್ತನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದ್ದು ಬಾಲಕಿಯರು ಮತ್ತೊಮ್ಮೆ ಹುಡುಗರನ್ನು ಹಿಂದಿಕ್ಕಿದ್ದಾರೆ.

  • Share this:

ಬೆಂಗಳೂರಿನ ಅನ್ನನ್ಯಾ ಕಾರ್ತಿಕ್ ಭಾನುವಾರ ಪ್ರಕಟವಾದ ಐಸಿಎಸ್‌ಇ ಪರೀಕ್ಷೆಯ ಫಲಿತಾಂಶಗದಲ್ಲಿ 99.8% ನೊಂದಿಗೆ ಉತ್ತೀರ್ಣರಾಗಿದ್ದಾರೆ. ರಾಷ್ಟ್ರೀಯ ಮಟ್ಟದ ಟಾಪರ್‌ಗಳ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಭದ್ರಗೊಳಿಸಿಕೊಂಡಿದ್ದಾರೆ. ಹೆಬ್ಬಾಳದ ವಿದ್ಯಾ ನಿಕೇತನ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಇವಳು ಒಂಬತ್ತು ಜನ ರಾಷ್ಟ್ರೀಯ ಟಾಪರ್​ಗಳಲ್ಲಿ ಒಬ್ಬರಾಗಿದ್ದಾರೆ.  ಒಟ್ಟು ಒಂಬತ್ತು ವಿದ್ಯಾರ್ಥಿಗಳು ದೇಶಾದ್ಯಂತ ಪ್ರಥಮ ಸ್ಥಾನ ಗಳಿಸಿದ್ದಾರೆ ಅವರಲ್ಲಿ ಇವರೂ ಒಬ್ಬರಾಗಿದ್ದಾರೆ. 


ರಾಷ್ಟ್ರೀಯ ಟಾಪರ್ ಆಗುವ ನಿರೀಕ್ಷೆ ಇರಲಿಲ್ಲ ಎಂದಿದ್ದಾರೆ. ಅವರು ಪರೀಕ್ಷೆಗೆ ಯಾವ ರೀತಿ ಸಿದ್ಧತೆ ನಡೆಸಿದ್ದರು ಎಂದು ನೀವು ತಿಳಿದುಕೊಳ್ಳಲು ಇಷ್ಟ ಪಡುವುದಾದರೆ ಅವರು ಪರೀಕ್ಷೆ ಒಂದು ಕಠಿಣ ವಿಷಯ ಎಂದು ಭಾವಿಸಿಯೇ ಇರಲಿಲ್ಲ. ಪರೀಕ್ಷೆಯನ್ನು ಸುಲಭವಾಗಿ ಎದುರಿಸುವ ತಯಾರಿ ನಡೆಸಿದ್ದರು. ಪರೀಕ್ಷೆಯಲ್ಲಿ ಪ್ರಶ್ನೆಗಳು ಅಷ್ಟೇನೂ ಕಠಿಣವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.


ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ) ಸೋಮವಾರ 12ನೇ ತರಗತಿ ಮತ್ತು ಹತ್ತನೇ ತರಗತಿಯ ಫಲಿತಾಂಶಗಳನ್ನು ಪ್ರಕಟಿಸಿದ್ದು ಬಾಲಕಿಯರು ಮತ್ತೊಮ್ಮೆ ಹುಡುಗರನ್ನು ಹಿಂದಿಕ್ಕಿದ್ದಾರೆ.


ಇದನ್ನೂ ಓದಿ: CBSE: ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗೆ ಇವರೇ ಸ್ಪೂರ್ತಿಯಂತೆ


ಅನನ್ಯಾ ಅವರು ಶಿಕ್ಷಕರು ಪಾಠ ಮಾಡುವ ಸಂದರ್ಭದಲ್ಲಿ ಗಮನವಿಟ್ಟು ಪಾಠ ಕೇಳುತ್ತಿದ್ದರಂತೆ. ಆ ವಿಷಯವೇ ನನಗೆ ತುಂಬಾ ಸಹಾಯವಾಯಿತು ಎಂದು ಹೇಳಿದ್ದಾರೆ. ಯಾವುದನ್ನೂ ಕಂಠಪಾಟ ಮಾಡಲು ಹೋಗಬಾರದು ಎಲ್ಲಾ ವಿಷಯಗಳನ್ನು ಗಮನವಿಟ್ಟು ಕೇಳಬೇಕು ಎಂಬ ಸಲಹೆ ನೀಡಿದ್ದಾರೆ.


ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ಸ್ (CISCE) ಇಂದು ಎಲ್ಲಾ ವಿದ್ಯಾರ್ಥಿಗಳಿಗೆ ICSE 10 ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಿದೆ. ಈ ವರ್ಷ, ದಾಖಲಾದ ಒಟ್ಟಾರೆ ಉತ್ತೀರ್ಣ ಶೇಕಡಾವಾರು ಪ್ರಮಾಣವನ್ನು ಬಿಡುಗಡೆ ಮಾಡಲಾಗಿದೆ.  ಈ ವರ್ಷ, ರುಶಿಲ್ ಕುಮಾರ್ ಮತ್ತು ಅನನ್ಯ ಕಾರ್ತಿಕ್ 99.8% ಗಳಿಸಿದರು. ಐಸಿಎಸ್‌ಇ 10ನೇ ತರಗತಿಯ ಫಲಿತಾಂಶ 2023ರಲ್ಲಿ ಒಟ್ಟು 9 ವಿದ್ಯಾರ್ಥಿಗಳು ರ್ಯಾಂಕ್ 1 ಸ್ಥಾನವನ್ನು ಪಡೆದುಕೊಂಡಿದ್ದಾರೆ.




CBSE 10 ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಹಲವಾರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅತಿ ಹೆಚ್ಚು ಅಂಕ (Marks) ತೆಗೆದುಕೊಂಡ ವಿದ್ಯಾರ್ಥಿಯೊಬ್ಬನ ಗುರಿಯ (Goal) ಕಥೆ ಇಲ್ಲಿದೆ ನೋಡಿ. ಬೆಂಗಳೂರಿನ ಸನತ್ ಕೌಂಡಿಲಿಯಾ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಯಾಗಿದ್ದಾರೆ (Student). ಅವರಿಗೆ ತಾನು ಉತ್ತಮ ಅಂಕ ಗಳಿಸುತ್ತೇನೆ ಎಂಬ ನಂಬಿಕೆ ಇತ್ತು ಆದರೆ ಇಷ್ಟೊಂದು ಹೆಚ್ಚಿನ ಅಂಕ ಗಳಿಸುತ್ತೇನೆ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.


ಸನತ್ ಅವರು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ನೇ ತರಗತಿ ಪರೀಕ್ಷೆಗಳಲ್ಲಿ ಗಣಿತ, ವಿಜ್ಞಾನ ಐಟಿ ಮತ್ತು ಸಂಸ್ಕೃತದಲ್ಲಿ 100 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ನಂತರ ಇಂಗ್ಲಿಷ್‌ನಲ್ಲಿ 99 ಮತ್ತು ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ, ಅದರ ಫಲಿತಾಂಶವು ಮೇ 12 ರಂದು ಬಿಡುಗಡೆಯಾಗಿದೆ.

top videos


    ಸನತ್​ ಅವರು ಪರೀಕ್ಷೆಗೆ ಯಾವ ರೀತಿ ಸಿದ್ಧತೆ ನಡೆಸಿದ್ದರು ಎಂದು ನೀವು ತಿಳಿದುಕೊಳ್ಳಲು ಇಷ್ಟ ಪಡುವುದಾದರೆ ಅವರು ಪರೀಕ್ಷೆ ಒಂದು ಕಠಿಣ ವಿಷಯ ಎಂದು ಭಾವಿಸಿಯೇ ಇರಲಿಲ್ಲ. ಪರೀಕ್ಷೆಯನ್ನು ಸುಲಭವಾಗಿ ಎದುರಿಸುವ ತಯಾರಿ ನಡೆಸಿದ್ದರು. ಪರೀಕ್ಷೆಯಲ್ಲಿ ಪ್ರಶ್ನೆಗಳು ಅಷ್ಟೇನೂ ಕಠಿಣವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

    First published: