• Home
  • »
  • News
  • »
  • jobs
  • »
  • Mid Day Meal: ಶಾಲಾ ಮಕ್ಕಳ ಬಿಸಿಯೂಟದ ಮೊಟ್ಟೆಗೂ ತಟ್ಟಿದ ದರ ಏರಿಕೆಯ ಬರೆ!

Mid Day Meal: ಶಾಲಾ ಮಕ್ಕಳ ಬಿಸಿಯೂಟದ ಮೊಟ್ಟೆಗೂ ತಟ್ಟಿದ ದರ ಏರಿಕೆಯ ಬರೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಲ್ಯಾಣ ಕರ್ನಾಟಕ ಪ್ರದೇಶದ ಕೆಲವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ಮೊಟ್ಟೆಗಳನ್ನು ವಿತರಿಸದ ಘಟನೆಗಳು ವರದಿಯಾಗಿವೆ. ಅಕ್ಟೋಬರ್‌ನಲ್ಲಿ ಒಂದು ಮೊಟ್ಟೆಯ ಬೆಲೆ 4 ರೂ. ಇದ್ದು, ಡಿಸೆಂಬರ್‌ನಲ್ಲಿ 5 ರೂ.ಗೆ ಏರಿಕೆಯಾಗಿದೆ. ಆದ್ದರಿಂದ ಶಾಲಾ ಆಡಳಿತ ಮಂಡಳಿಯು ಮೊಟ್ಟೆಗಳನ್ನು ಖರೀದಿಸಲು ಹಿಂದಿನ ತಿಂಗಳುಗಳ ಉಳಿತಾಯವನ್ನು ಬಳಸಬಹುದು.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Karnataka, India
  • Share this:

ಕರ್ನಾಟಕದ ಎಲ್ಲಾ ಶಾಲೆಗಳಲ್ಲಿ ಮೊಟ್ಟೆ (Egg) ವಿತರಿಸಲಾಗುತ್ತಿದೆ. ಆದರೆ ಮೊಟ್ಟೆ ದರ ಏರಿಕೆಯಿಂದಾಗಿ ಇದನ್ನು ಸ್ಥಗಿತಗೊಳಿಸುವ ಕೆಲವು ವಿಚಾರ ಕೂಡಾ ಕೇಳಿ ಬರುತ್ತಿದೆ. ಕಲ್ಯಾಣ ಕರ್ನಾಟಕ (Karnataka) ಪ್ರದೇಶಗಳಾದ ಬೀದರ್, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು  ಮತ್ತು ಯಾದಗಿರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆ ಎಂದು ಮಧ್ಯಾಹ್ನದ ಊಟದ ಯೋಜನೆಯಲ್ಲಿ (Mid Day Meal) ಕೆಲಸ ಮಾಡುವ ಹಿರಿಯ ಶಿಕ್ಷಣಾಧಿಕಾರಿಯೊಬ್ಬರು (Education Minister) ತಿಳಿಸಿದ್ದಾರೆ.


ಕರ್ನಾಟಕದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಜ್ಞಾಪಕ ಪತ್ರದಲ್ಲಿ ಮಕ್ಕಳಿಗೆ ಪೂರಕ ಪೌಷ್ಟಿಕಾಂಶ ಕಾರ್ಯಕ್ರಮವನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು ಮತ್ತು ಹೆಚ್ಚಿನ ವೆಚ್ಚದ ಕಾರಣ ಮೊಟ್ಟೆಗಳ ವಿತರಣೆಯನ್ನು ನಿಲ್ಲಿಸಬಾರದು ಎಂದು ಹೇಳಲಾಗಿದೆ. ಕೆಲವು ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಜೊತೆಗೆ ಮೊಟ್ಟೆ ವಿತರಿಸದಿರುವ ಬಗ್ಗೆ ವರದಿಯಾದ ಹಿನ್ನೆಲೆಯಲ್ಲಿ ಮೆಮೊ ನೀಡಲಾಗಿದೆ.


ವಿವಿಧ ಜಿಲ್ಲೆಗಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಘಟಕ ಶಿಕ್ಷಣಾಧಿಕಾರಿಗಳು ಹಾಗೂ ಇತರೆ ಅಧಿಕಾರಿಗಳು ನಿಯಮಿತ ತಪಾಸಣೆಗಾಗಿ ಕೆಲವು ಶಾಲೆಗಳಿಗೆ ಭೇಟಿ ನೀಡಿದಾಗ ಶಾಲಾ ಅಧಿಕಾರಿಗಳು ಮಧ್ಯಾಹ್ನದ ಊಟದ ಭಾಗವಾಗಿ ಮೊಟ್ಟೆ ವಿತರಿಸದಿರುವುದು ಕಂಡುಬಂದಿದೆ.


ಇದನ್ನೂ ಓದಿ: PUC Practical Exam: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆ ದಿನಾಂಕ ಪ್ರಕಟ


ಜುಲೈ 2022 ರ ಸರ್ಕಾರಿ ಆದೇಶದ ಪ್ರಕಾರ ಶಾಲಾ ಶಿಕ್ಷಣ ಇಲಾಖೆ ಪ್ರತಿ ವಿದ್ಯಾರ್ಥಿಗೆ ಮೊಟ್ಟೆಯ ಬೆಲೆ 6 ರೂ. ಆದರೆ ಒಂದು ಮೊಟ್ಟೆಯ ಬೆಲೆ ಈಗ 4.20 ರೂ.ನಿಂದ 5.80 ರೂ.ಗೆ ಏರಿಕೆಯಾಗಿದೆ. ಸಾರಿಗೆ ಮತ್ತು ಇತರ ಸಾಗಣೆ ಶುಲ್ಕವನ್ನು ಸೇರಿರುವುದರಿಂದ ಶಾಲಾ ಅಧಿಕಾರಿಗಳು, ಮಧ್ಯಾಹ್ನದ ಊಟ ಯೋಜನೆ ಅಧಿಕಾರಿಗಳು ಮತ್ತು ಅಡುಗೆಯವರು ಮೊಟ್ಟೆ ವಿತರಣೆಗೆ ಒಟ್ಟು ಖರ್ಚು ಹೆಚ್ಚಾಗಿದೆ ಎಂದು ದೂರಿದ್ದಾರೆ.


ಇದರಿಂದ ಪ್ರತಿ ಯೂನಿಟ್‌ಗೆ 6 ರೂಪಾಯಿಯೊಳಗೆ ಮೊಟ್ಟೆ ವಿತರಣೆಯಾಗದಂತೆ ಶಾಲಾ ಶಿಕ್ಷಣ ಇಲಾಖೆ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶಗಳಾದ ಬೀದರ್, ಕಲಬುರಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಈ ಸಮಸ್ಯೆಗಳು ಹೆಚ್ಚಾಗಿ ಕಂಡುಬಂದಿವೆ. ಪ್ರದೇಶವು ಮಕ್ಕಳಲ್ಲಿ ಅಪೌಷ್ಟಿಕತೆಯ ಬಗ್ಗೆ ಕಳವಳ ಉಂಟಾಗಿ ಅದನ್ನು ತಡೆಯುವ ನಿಟ್ಟಿನಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು.




ಕಲ್ಯಾಣ ಕರ್ನಾಟಕ ಪ್ರದೇಶದ ಕೆಲವು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಾತ್ರ ಮೊಟ್ಟೆಗಳನ್ನು ವಿತರಿಸದ ಘಟನೆಗಳು ವರದಿಯಾಗಿವೆ. ಅಕ್ಟೋಬರ್‌ನಲ್ಲಿ ಒಂದು ಮೊಟ್ಟೆಯ ಬೆಲೆ 4 ರೂ. ಇದ್ದು, ಡಿಸೆಂಬರ್‌ನಲ್ಲಿ 5 ರೂ.ಗೆ ಏರಿಕೆಯಾಗಿದೆ. ಆದ್ದರಿಂದ ಶಾಲಾ ಆಡಳಿತ ಮಂಡಳಿಯು ಮೊಟ್ಟೆಗಳನ್ನು ಖರೀದಿಸಲು ಹಿಂದಿನ ತಿಂಗಳುಗಳ ಉಳಿತಾಯವನ್ನು ಬಳಸಬಹುದು. ಅಲ್ಲದೆ ವಿದ್ಯಾರ್ಥಿಗಳ ಹಾಜರಾತಿಯು ಪ್ರತಿದಿನ 100 ಪ್ರತಿಶತದಷ್ಟು ಇರುವುದಿಲ್ಲ ಆದರೆ ಶಾಲಾ ಅಧಿಕಾರಿಗಳು ಎಲ್ಲಾ ವಿದ್ಯಾರ್ಥಿಗಳಿಗೆ ಮೊಟ್ಟೆಗಳನ್ನು ಖರೀದಿಸುತ್ತಾರೆ. ಆ ಹಣ ಎಲ್ಲಿ ಹೋಗುತ್ತದೆ? ಅದರ ಹಣದಿಂದಲೂ ಸಹ ಈಗ ಮೊಟ್ಟೆ ಖರೀದಿಸುವ ಅವಕಾಶವಿದೆ ಎಂದು ಹೇಳಲಾಗುತ್ತಿದೆ.


ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ (ಎಸ್‌ಡಿಎಂಸಿ) ಅಭಿವೃದ್ಧಿ ನಿಧಿಯನ್ನು ಮೊಟ್ಟೆಗಳನ್ನು ಖರೀದಿಸಲು ಬಳಸಬಹುದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಆರ್ ಅವರು ಜನವರಿ 10ರಂದು ತಿಳಿಸಿದ್ದಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಹ ಮೊಟ್ಟೆ ವಿತರಣೆ ನಿಲ್ಲಬಾರದು ಎಂಬುದು ಇವರ ನಿಲುವಾಗಿದೆ. ಕೆಲವು ಶಾಲೆಗಳು ಮೊಟ್ಟೆಗಳನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಮತ್ತು ಚಿಕ್ಕಿಗಳನ್ನು ವಿತರಿಸುತ್ತಿವೆ ಎಂಬುದು ತಿಳಿದು ಬಂದಿದೆ.

First published: