• Home
  • »
  • News
  • »
  • jobs
  • »
  • Basavaraj Bommai: ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ, ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸಂವಾದ

Basavaraj Bommai: ಚರ್ಚೆ ವಿತ್ ಕಾಮನ್ ಮ್ಯಾನ್ ಸಿಎಂ, ವಿದ್ಯಾರ್ಥಿಗಳೊಂದಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸಂವಾದ

ಬಸವರಾಜ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ

ಹಲವು ಕಾಲೇಜಿನಿಂದ ಆಗಮಿಸಿದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದಾರೆ. ನಾವು ಸ್ಕಿಲ್​ ಹೊಂದಿದ್ದೇವೆ ಯುವಜನತೆಯ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ ಸ್ಟಾರ್ಟ್​ಅಪ್​ಗಳನ್ನು ಆರಂಭಿಸಿ ಎಲ್ಲಾ ಕ್ಷೇತ್ರಗಳನ್ನು ನಾವು ತಲುಪಬಹುದು. ಭಾರತದ ಗ್ರೌಥ್​​ ಇಂಜಿನ್ ಯಾವುದಾದರೂ ಇದ್ದರೆ ಅದು ಕರ್ನಾಟಕ ಎಂಬ ಅಭಿಪ್ರಾಯ ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಯುವ ಸಂಭಾಷಣೆ ಚರ್ಚೆ  ವಿತ್ ಕಾಮನ್ ಮ್ಯಾನ್ ಸಿಎಂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವಾರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಪ್ರತಿಯೊಂದು ವಿದ್ಯಾರ್ಥಿಗಳು (Students) ತಮ್ಮ ಆಸಕ್ತಿ ಹಾಗೂ ಅಗತ್ಯತೆಯ ವಿಷಯವನ್ನು ಸಿಎಂ ಅವರ ಬಳಿ ಕೇಳಿ ಉತ್ತರ ಪಡೆದುಕೊಂಡಿದ್ದಾರೆ. ಯುವ ಸಂಭಾಷಣೆ ಚರ್ಚೆ (Discussion) ವಿತ್ ಕಾಮನ್ ಮ್ಯಾನ್ ಸಿಎಂ ಸಂವಾದ ಕಾರ್ಯಕ್ರಮ ಜೆಪಿ ನಗರದ ಆರ್ ವಿ ಡೆಂಟಲ್ ಕಾಲೇಜಿನ ಆಡಿಟೋರಿಯಂನಲ್ಲಿ ಆಯೋಜನೆಯಾಗಿದೆ. ಈ ಕುರಿತು ಇನ್ನಷ್ಟು ಮಾಹಿತಿ (Information) ಇಲ್ಲಿದೆ ನೋಡಿ.


ಸಂವಾದದಲ್ಲಿ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ.
ಹಲವು ಕಾಲೇಜಿನಿಂದ ಆಗಮಿಸಿದ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದ್ದಾರೆ. ಕಾಲೇಜಿನಲ್ಲಿ ಚುನಾವಣೆ ಮಾಡುವ ಕುರಿತು ಹಾಗೂ ವಿದ್ಯಾರ್ಥಿ ವೇತನದ ಕುರಿತು ಪ್ರಶ್ನೆಗಳನ್ನು ಕೇಳಲಾಗಿದೆ. ಕಾಲೇಜಿನಲ್ಲಿ ಚುನಾವಣೆ ನಡೆಸುವ ವಿಚಾರದ ಬಗ್ಗೆ ವಿದ್ಯಾರ್ಥಿ ಪ್ರಸ್ತಾಪಿಸಿದ್ದು ಇದಕ್ಕೆ ಸಿಎಂ ಬೊಮ್ಮಾಯಿ ಓದುವ ಸಮಯದಲ್ಲಿ ಓದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ಎಂಬ ಕಿವಿ ಮಾತು ಹೇಳಿದ್ದಾರೆ.


ಕಾಲೇಜು ಸಮಯವನ್ನು ಕಲಿಯೊಟ್ಟಿಗೆ ಎಂಜಾಯ್​ ಮಾಡಿ ಎಂದು ಹೇಳಿದ್ದಾರೆ. ಚುನಾವಣೆ ನಾಯಕತ್ವ ಎಂಬುದು ಒಂದು ದೊಡ್ಡ ಜವಾಬ್ಧಾರಿ  ಅದನ್ನು ಈಗಿಂದಲೇ ತೆಗೆದುಕೊಳ್ಳಬೇಕೆಂದೇನಿಲ್ಲ ಎಂದು ಹೇಳಿದ್ದಾರೆ.


ಇದನ್ನೂ ಓದಿ; Republic Day Speech: ಗಣರಾಜ್ಯೋತ್ಸವದ ದಿನ ಶಭಾಷ್ ಎನಿಸಿಕೊಳ್ಳೋಕೆ ಇಲ್ಲಿದೆ ನೋಡಿ ಸುಲಭ ಭಾಷಣ 


ಸಂಭಾಷಣೆ ಚರ್ಚೆ ವೇಳೆ ಬೋರ್ಡ್ ಎಕ್ಸಾಮ್‌ಗಳನ್ನು ಮತ್ತಷ್ಟು ಡಿಜಿಟಲೈಸ್ ಮಾಡಬೇಕು ಎಂದು ವಿದ್ಯಾರ್ಥಿನಿ ಮನವಿ ಮಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಉತ್ತರಿಸಿದ ಸಿಎಂ ಇನ್ನು ಕೆಲವು ಹಳ್ಳಿಗಳಲ್ಲಿ ಸರಿಯಾದ ನೆಟ್​ವರ್ಕ್​ ಸೌಲಭ್ಯ ಇಲ್ಲ ಆ ಕಾರಣದಿಂದ ಸಂಪೂರ್ಣ ಡಿಜಿಟಲೈಸ್​ ಮಾಡುವುದು ಕಷ್ಟ ಎಂದು ಅವರು ಹೇಳಿದ್ದಾರೆ. ಟ್ಯಾಬ್, ಮೊಬೈಲ್ ಅನೇಕ ವ್ಯವಸ್ಥೆಗಳು ಮಕ್ಕಳ ಬಳಿ ಇಲ್ಲ. ಮುಂದಿನ ದಿನಗಳಲ್ಲಿ ಡಿಜಿಟಲ್ ಶಿಕ್ಷಣ ಹೆಚ್ಚಾಗಲಿದೆ. ಆದರೆ ಅದಕ್ಕೆ ಇನ್ನೂ ಕೆಲವು ಸಮಯ ಬೇಕು ಎಂದು ಹೇಳಿದ್ದಾರೆ.ಡೆಂಟಲ್​ ಹೆಲ್ತ್​ ಬಗ್ಗೆ ಸರ್ಕಾರದ ಕಡೆಯಿಂದ ಯಾವ ಕ್ರಮವನ್ನು ಕೈಗೊಳ್ಳಬಹುದು. ಹೇಗೆ ಕ್ಯಾನ್ಸರ್​ ಕಡಿಮೆ ಮಾಡಬಹುದು ಎಂದು ಪರಿಣಿತಾ ಎಂಬ ವೈದ್ಯಕೀಯ ಅಧ್ಯಯನ ವಿದ್ಯಾರ್ಥಿನಿ ಪ್ರಶ್ನೆ ಮಾಡಿದಾಗ, ಯುವ ಶಕ್ತಿಗಳೇ ಜಾಗೃತಿ ಮೂಡಿಸಿದರೆ ಅದು ಹೆಚ್ಚು ಪರಿಣಾಮಕಾರಿ ನಿಮ್ಮಿಂದಲೇ ಈ ಕಾರ್ಯ ಆರಂಭವಾಗಲಿ ಸರ್ಕಾರವೂ ಈಗಾಗಲೇ ಕ್ಯಾಂಪೇನ್​ ಮಾಡಿದೆ. ಮುಂದಿನ ದಿನದಲ್ಲೂ ಪ್ರಯತ್ನ ಮಾಡುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.
ನಾವು ಸ್ಕಿಲ್​ ಹೊಂದಿದ್ದೇವೆ ಯುವಜನತೆಯ ಸಂಖ್ಯೆ ನಮ್ಮಲ್ಲಿ ಹೆಚ್ಚಿದೆ ಸ್ಟಾರ್ಟ್​ಅಪ್​ಗಳನ್ನು ಆರಂಭಿಸಿ ಎಲ್ಲಾ ಕ್ಷೇತ್ರಗಳನ್ನು ನಾವು ತಲುಪಬಹುದು. ಭಾರತದ ಗ್ರೌಥ್​​ ಇಂಜಿನ್ ಯಾವುದಾದರೂ ಇದ್ದರೆ ಅದು ಕರ್ನಾಟಕ ಎಂಬ ಅಭಿಪ್ರಾಯ ತಿಳಿಸಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಸಾರಿಗೆ ಸಮಸ್ಯೆ ಕೂಡಾ ಗಮನಕ್ಕೆ ಬಂದಿದೆ ಅದನ್ನೂ ನಾವು ಪರಿಹರಿಸುತ್ತೇವೆ ಎಂದು ಹೇಳಿದ್ದಾರೆ.


ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಾಕಾಗುತ್ತಿಲ್ಲ


ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಾಕಾಗುತ್ತಿಲ್ಲ ವಿದ್ಯಾರ್ಥಿ ವೇತನ ಹೆಚ್ಚಳ ಮಾಡಿ ಎಂದು ಸ್ಕಾಲರ್ಶಿಪ್ ಬಗ್ಗೆ ವಿದ್ಯಾರ್ಥಿ ಕೀರ್ತನ್ ಪ್ರಶ್ನೆ ಕೇಳಿದಾಗ ವಿದ್ಯಾರ್ಥಿ ವೇತನಕ್ಕೆ ಇರೋ ಆದಾಯ ಮಿತಿಯನ್ನ ಹೆಚ್ಚಳ ಮಾಡುತ್ತೇವೆ. ಈ‌ ಬಗ್ಗೆ ಕ್ರಮ ತಗೋತೀನಿ ಎಂದು ಸಿಎಂ ಹೇಳಿದ್ದಾರೆ.  ನೀವು ಬಿಸಿನೆಸ್ ಮ್ಯಾನ್ ಆಗಿದ್ರಿ, ರಾಜಕೀಯಕ್ಕೆ ಬಂದ್ರಿ, ಕೆಲಸ ಮಾಡಿದ್ರಿ, ಸ್ಟೂಡೆಂಟ್ ಲೈಫ್ ಗಳಲ್ಲಿ ಇದರಲ್ಲಿ ಯಾವುದನ್ನ ತುಂಬಾ ಎಂಜಾಯ್ ಮಾಡಿದ್ದೀರಾ? ಎಂದು ಕೇಳಿದಾಗ ಅವರು ವಿದ್ಯಾರ್ಥಿ ಜೀವನವನ್ನು ಇಷ್ಟ ಪಡುತ್ತೇನೆ ಎಂದು ತಿಳಿಸಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು