• Home
  • »
  • News
  • »
  • jobs
  • »
  • Anganwadi: ಅಂಗನವಾಡಿ ಟೀಚರ್​ ಆಗಲು ಇನ್ಮೇಲೆ ಡಿಪ್ಲೊಮಾ ಮಾಡಿರಲೇಬೇಕು! ಬಂದಿದೆ ಹೊಸ ನಿಯಮ

Anganwadi: ಅಂಗನವಾಡಿ ಟೀಚರ್​ ಆಗಲು ಇನ್ಮೇಲೆ ಡಿಪ್ಲೊಮಾ ಮಾಡಿರಲೇಬೇಕು! ಬಂದಿದೆ ಹೊಸ ನಿಯಮ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಕ್ಕಳನ್ನು ನೋಡಿಕೊಳ್ಳಲು ಮತ್ತು ಅವರಿಗೆ ಪ್ರಾಥಮಿಕ ಶಿಕ್ಷಣ ನೀಡಲು ಅಂಗನವಾಡಿ ಟೀಚರ್ಸ್​ ಅಥವಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿರುತ್ತಾರೆ.  ಈ ಅಂಗನವಾಡಿ ಕೇಂದ್ರಗಳು ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಗೆ ಕೆಲಸ ಮಾಡುವಲ್ಲಿ ಸಾಕಷ್ಟು ಕೊಡುಗೆ ನೀಡಿವೆ. ಗ್ರಾಮೀಣ ಭಾಗದಲ್ಲಿ ಶಿಶು ಮರಣ ಮತ್ತು ರೋಗಗಳು ಕಡಿಮೆಯಾಗುತ್ತಿರುವುದರ ಹಿಂದೆ ಅಂಗನವಾಡಿ ಕೇಂದ್ರದ ಕೊಡುಗೆ ಪ್ರಮುಖವಾಗಿದೆ

ಮುಂದೆ ಓದಿ ...
  • News18 Kannada
  • Last Updated :
  • Karnataka, India
  • Share this:

ಅಂಗನವಾಡಿ (Anganawadi) ಕಾರ್ಯಕರ್ತೆಯರಿಗೆ ಡಿಪ್ಲೋಮಾ ಅಥವಾ ಯಾವುದಾದರೂ ತರಬೇತಿ ಆಗಿರುವುದು ತುಂಬಾ ಮುಖ್ಯ. ಇವುಗಳನ್ನು ಮಾಡಿದ್ದರೆ ಮಾತ್ರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಆದೇಶ (Order) ಹೊರಡಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ (NEP) ಅನುಸಾರ ಪ್ರಾಥಮಿಕ ಹಂತದ ಮಕ್ಕಳ ಶೈಕ್ಷಣಿಕ (Education) ಗುಣಮಟ್ಟ ಹೆಚ್ಚಿಸುವ ಸಲುವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದೂ ಸಹ ಹೇಳಲಾಗಿದೆ. ಇನ್ನು ಮುಂದೆ ಅಂಗನವಾಡಿ ಕಾರ್ಯಕರ್ತೆಯರಾಗಲು 10 ಹಾಗೂ ಸಹಾಯಕಿಯಾಗಲು 12ನೇ ತರಗತಿ (Class) ಪೂರ್ಣಗೊಳಿಸಿರಬೇಕು. 


ಹಾಗಾದರೆ ನೀವು ಯಾವ ಡಿಪ್ಲೋಮಾ ಕೋರ್ಸ್​ ಮಾಡಬಹುದು ಎಂಬ ಕುರಿತು ಇಲ್ಲಿದೆ ಮಾಹಿತಿ. ಅಂಗನವಾಡಿ ಒಂದು ರೀತಿಯ ಮಕ್ಕಳ ಆರೈಕೆ ಮತ್ತು ಅಭಿವೃದ್ಧಿ ಕೇಂದ್ರವಾಗಿದೆ. ಅಂಗನವಾಡಿ ಕೇಂದ್ರಗಳನ್ನು ಹಲವು ವರ್ಷಗಳ ಹಿಂದೆ ಸರ್ಕಾರವು ಸ್ಥಾಪಿಸಿತು, ಅವುಗಳ ಉದ್ದೇಶವು ಭಾರತದಲ್ಲಿ ಬಡ ಮತ್ತು ಚಿಕ್ಕ ಮಕ್ಕಳಿಗೆ ಶಿಕ್ಷಣ, ಪೌಷ್ಟಿಕತೆ ಮತ್ತು ಆರೋಗ್ಯ ಸಂಬಂಧಿತ ಸೌಲಭ್ಯಗಳನ್ನು ಒದಗಿಸುವುದು. ಇಂದಿಗೂ, ಈ ಅಂಗನವಾಡಿ ಕೇಂದ್ರಗಳು ಭಾರತದಲ್ಲಿ ಮಕ್ಕಳ ಆರೋಗ್ಯ ಮತ್ತು ಕಲ್ಯಾಣ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ ಮತ್ತು ತಮ್ಮ ಸೇವೆಗಳನ್ನು ನೀಡುತ್ತಿವೆ.


ಅಂಗನವಾಡಿ ಶಿಕ್ಷಕಿಯರ ಪಾತ್ರ


ಇದರಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಮತ್ತು ಅವರಿಗೆ ಪ್ರಾಥಮಿಕ ಶಿಕ್ಷಣ ನೀಡಲು ಅಂಗನವಾಡಿ ಟೀಚರ್ಸ್​ ಅಥವಾ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿರುತ್ತಾರೆ.  ಈ ಅಂಗನವಾಡಿ ಕೇಂದ್ರಗಳು ಭಾರತದಲ್ಲಿ ಮಕ್ಕಳ ಅಪೌಷ್ಟಿಕತೆಯ ಸಮಸ್ಯೆಗೆ ಕೆಲಸ ಮಾಡುವಲ್ಲಿ ಸಾಕಷ್ಟು ಕೊಡುಗೆ ನೀಡಿವೆ. ಗ್ರಾಮೀಣ ಭಾಗದಲ್ಲಿ ಶಿಶು ಮರಣ ಮತ್ತು ರೋಗಗಳು ಕಡಿಮೆಯಾಗುತ್ತಿರುವುದರ ಹಿಂದೆ ಅಂಗನವಾಡಿ ಕೇಂದ್ರದ ಕೊಡುಗೆ ಪ್ರಮುಖವಾಗಿದೆ. ಅದರಷ್ಟೇ ಮುಖ್ಯ ಪಾತ್ರ ಈ ಅಂಗನವಾಡಿ ಕಾರ್ಯರ್ತೆ ಹಾಗೂ ಸಹಾಯಕಿಯರದ್ದೂ ಇದೆ.


ಇದನ್ನೂ ಓದಿ: ಅಂಗನವಾಡಿ ನೇಮಕಾತಿಗೆ ಹೊಸ ನಿಯಮ, 10, 12ನೇ ತರಗತಿ ಪಾಸ್​ ಆದ್ರೆ ಮಾತ್ರ ಕೆಲಸ


ಮಹಿಳಾ ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ಅಂಗನವಾಡಿ ಕಾರ್ಯಕರ್ತೆಯರ ಜವಾಬ್ದಾರಿಗಳಿಗೆ ಮಾರ್ಗಸೂಚಿಗಳನ್ನು ನೀಡಿದೆ. ಈ ಮಾರ್ಗಸೂಚಿಗಳು ಯೋಜನೆಯನ್ನು ಕಾರ್ಯಗತಗೊಳಿಸುವುದು, ಎಲ್ಲಾ ಗ್ರಾಮೀಣ ಕುಟುಂಬಗಳ ನಿಯಮಿತ ಕ್ಷಿಪ್ರ ಸಮೀಕ್ಷೆಗಳನ್ನು ನಡೆಸುವುದು, ಸಾರ್ವಜನಿಕ ಬೆಂಬಲ ಮತ್ತು ಪ್ರಿಸ್ಕೂಲ್ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆ ಜವಾಬ್ಧಾರಿಯನ್ನು ಒಳಗೊಂಡಿರುತ್ತದೆ.


ಅಂಗನವಾಡಿ ಕಾರ್ಯಕರ್ತೆಯರ ಕೋರ್ಸ್‌ನಲ್ಲಿ ಡಿಪ್ಲೊಮಾಗೆ ಅರ್ಹತೆಯ ಮಾನದಂಡಗಳು:
ಕನಿಷ್ಠ 12 ನೇ ತೇರ್ಗಡೆಯಾದ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು.


ವಯಸ್ಸಿನ ಮಾನದಂಡ:
18 ವರ್ಷ ಮೇಲ್ಪಟ್ಟವರು ಈ ಕೋರ್ಸ್‌ಗೆ ಸೇರಬಹುದು.


ಕೋರ್ಸ್‌ನ ಅವಧಿ
ಇದು ಒಂದು ವರ್ಷದ ಡಿಪ್ಲೊಮಾ ಕೋರ್ಸ್


ಈ ಕೋರ್ಸ್​ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದರೆ ಇಲ್ಲಿ ಕ್ಲಿಕ್ ಮಾಡಿ


ಅಂಗನವಾಡಿ ಕೆಲಸಕ್ಕೆ ಸಂಬಂಧಿಸಿದ ನಿಮ್ಮದೇ ಆದ NGO ಆರಂಭಿಸಿ.
ಸರ್ಕಾರಿ ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ ಅರ್ಜಿ ಸಲ್ಲಿಸಿ. ಇಲಾಖೆಗಳು.
ನಿಮ್ಮದೇ ಅಂಗನವಾಡಿ ಕಾರ್ಯಕರ್ತೆಯರ ತರಬೇತಿ ಕೇಂದ್ರ ಅಥವಾ ಸಂಸ್ಥೆಯನ್ನು ಆರಂಭಿಸಿ. ನೀವು ಸ್ವಯಂಸೇವಕರಾಗಿ ಅಂಗನವಾಡಿ ಕಾರ್ಯಕರ್ತೆಯ ಕೆಲಸವನ್ನು ಮಾಡಬಹುದು.


ಆರಂಭವಾಗಲಿದೆ ಅಂಗನವಾಡಿ ನೇಮಕಾತಿ


ಈ ರೀತಿ ಕೋರ್ಸ್​ ನೀವು ಮಾಡಿದರೆ ಖಂಡಿತ ನೀವು ಮುಂದಿನ ದಿನಗಳಲ್ಲಿ ಬಡ್ತಿ ಹೊಂದುತ್ತೀರಿ ಮತ್ತು ಹೆಚ್ಚಿನ ಸ್ಯಾಲರಿ ಪಡೆಯುತ್ತೀರಿ. ಈಗ ಹೊಸದಾಗಿ ನೇಮಕಾತಿ ಆರಂಭಿಸುವಾಗಲೂ ಸಹ ಇದೇ ಮಾನದಂಡವನ್ನು ಆಧರಿಸಿ ಶಿಕ್ಷಕರ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಹಿಂದೆ ನೇಮಕಾತಿಗೊಂಡವರಿಗೆ ಕೆಲಸ ಕಳೆದು ಕೊಳ್ಳುವ ಭಯವಿಲ್ಲ ಯಾಕೆಂದರೆ ಅವರಿಗೆ ಈ ನಿಯಮ ಅನ್ವಹಿಸುವುದಿಲ್ಲ. ಆದರೆ ಅವರ ಕೆಸದ ಬಡ್ತಿಗೆ ಇದು ಅನ್ವಯವಾಗುತ್ತದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು