• ಹೋಂ
 • »
 • ನ್ಯೂಸ್
 • »
 • Jobs
 • »
 • After Diploma: ಡಿಪ್ಲೊಮಾ ಆದ್ಮೇಲೆ ನೀವು ಈ ಕೋರ್ಸ್​​ ಮಾಡ್ಬಹುದು

After Diploma: ಡಿಪ್ಲೊಮಾ ಆದ್ಮೇಲೆ ನೀವು ಈ ಕೋರ್ಸ್​​ ಮಾಡ್ಬಹುದು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವೃತ್ತಿಪರ ಪದವಿ ಕೋರ್ಸ್‌ಗಳನ್ನು ನೀವು ಮಾಡಬಹುದು. ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ಪತ್ರಿಕೋದ್ಯಮ, ವ್ಯವಹಾರ ಅಧ್ಯಯನ ಇತ್ಯಾದಿ ಬಿ.ಎಸ್ಸಿ, ಬಿ.ಕಾಂ, ಬಿಎ ವಿವಿಧ ವಿಭಾಗಗಳಲ್ಲಿ ಕೂಡಾ ನೀವು ಮತ್ತೆ ಪದವಿ ಪಡೆದುಕೊಳ್ಳಬಹುದು.

 • News18 Kannada
 • 3-MIN READ
 • Last Updated :
 • New Delhi, India
 • Share this:

ಡಿಪ್ಲೊಮಾ ಕೋರ್ಸ್​ಗಳನ್ನು(Diploma Course) ಯಶಸ್ವಿಯಾಗಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ದೊಡ್ಡ ಉದ್ಯೋಗಾವಕಾಶ (Job Opportunity) ಇರುವ ಕಾರಣ ಸುಮಾರು ವಿದ್ಯಾರ್ಥಿಗಳು ಡಿಪ್ಲೊಮಾ ಮಾಡಲು ಬಯಸುತ್ತಾರೆ. ಈಗ ಡಿಪ್ಲೊಮಾ ಆದ ವಿದ್ಯಾರ್ಥಿಗಳು ಮುಂದೇನು ಮಾಡುವುದು ಎಂದು ಯೋಚನೆಯಲ್ಲಿರುತ್ತಾರೆ. ಅಂತಹ ವಿದ್ಯಾರ್ಥಿಗಳಿಗೆ ಸಹಾಯವಾಗುವಂತ (Help) ಮಾಹಿತಿಯನ್ನು ನಾವಿಂದು ಇಲ್ಲಿ ನೀಡುತ್ತಿದ್ದೇವೆ ನೋಡಿ. ನೀವೂ ಸಹ ಈ ಬಾರಿ ಡಿಪ್ಲೊಮಾ ತೆಗೆದುಕೊಂಡಿದ್ದರೆ ಈ ಸುದ್ದಿ (News) ಗಮನಿಸಿ. 


ವೃತ್ತಿಪರ ಪದವಿ ಕೋರ್ಸ್‌ಗಳನ್ನು ನೀವು ಮಾಡಬಹುದು. ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ಪತ್ರಿಕೋದ್ಯಮ, ವ್ಯವಹಾರ ಅಧ್ಯಯನ ಇತ್ಯಾದಿ ಬಿ.ಎಸ್ಸಿ, ಬಿ.ಕಾಂ, ಬಿಎ ವಿವಿಧ ವಿಭಾಗಗಳಲ್ಲಿ ಕೂಡಾ ನೀವು ಮತ್ತೆ ಪದವಿ ಪಡೆದುಕೊಳ್ಳಬಹುದು. ವೃತ್ತಿಪರ ಕೋರ್ಸ್‌ಗಳು, ತಾಂತ್ರಿಕ ತರಬೇತಿ, ನರ್ಸಿಂಗ್, ಕೃಷಿ ಮುಂತಾದ ಹಲವಾರು ಇತರ ವಿಭಾಗಗಳಲ್ಲಿ ಮತ್ತೆ ಡಿಪ್ಲೊಮಾ ಮಾಡಬಹುದು. ಹಲವಾರು ಕ್ಷೇತ್ರದಲ್ಲಿ ನೀವು ಪರಿಣಿತಿ ಹೊಂದಿದ್ದರೆ ನಿಮ್ಮ ಉದ್ಯೋಗಾವಕಾಶಗಳೂ ಸಹ ಅಷ್ಟೇ ಹೆಚ್ಚಿರುತ್ತದೆ.


ಇದನ್ನೂ ಓದಿ: Life Saving Window: ಅಗ್ನಿ ಅವಘಡ ತಪ್ಪಿಸಲು ಲೈಫ್​​ ಸೇವಿಂಗ್​ ವಿಂಡೋ ತಯಾರಿಸಿದ ವಿದ್ಯಾರ್ಥಿ!


ಡಿಪ್ಲೊಮಾವು ವಿವಿಧ ಡೊಮೇನ್‌ಗಳಲ್ಲಿ ಆಳವಾದ ಜ್ಞಾನ, ತರಬೇತಿ ಮತ್ತು ಅನುಭವವನ್ನು ನೀಡುವ ಮೂಲಕ ವಿದ್ಯಾರ್ಥಿಗಳನ್ನು ಹೆಚ್ಚು ಕೌಶಲ್ಯಯುತರನ್ನಾಗಿಸಲು ಡಿಪ್ಲೊಮಾಗಳು ಸಹಕಾರಿಯಾಗಿರುತ್ತದೆ. ಕರ್ನಾಟಕದಲ್ಲೇ ಹಲವಾರು ಕಾಲೇಜುಗಳು ಡಿಪ್ಲೊಮಾ ಕಲಿಸಲಾಗುತ್ತದೆ.
ಡಿಪ್ಲೊಮಾ ಆದ ನಂತರ ನೀವೇನು ಮಾಡ್ಬಹುದು?


ಡಿಪ್ಲೊಮಾ ಆದ ನಂತರ ಮೂರು ವರ್ಷಗಳ ಮುಂದುವರೆದ ಭಾಗವಾಗಿ ಇಂಜಿನಿಯರಿಂಗ್ ಇರುತ್ತದೆ. ಜಿಟಿಟಿಸಿಯಲ್ಲಿ 3 ವರ್ಷಗಳು ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಕಡ್ಡಾಯವಾಗಿ ಪಠ್ಯಕ್ರಮವನ್ನು ಅಧ್ಯಯನ ಮಾಡುತ್ತಿದೆ. ಪಠ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕೈಗಾರಿಕೆಗಳಲ್ಲಿ ಅಳವಡಿಸಲಾಗಿರುವ ತಂತ್ರಗಳಿಗೆ ಪ್ರಾಯೋಗಿಕ ಮಾನ್ಯತೆ ಪಡೆಯುತ್ತಾರೆ. ಇದರ ಪಠ್ಯಕ್ರಮವು ಅಗತ್ಯವಾದ ಜೀವನ ಕೌಶಲ್ಯಗಳನ್ನು ಕಲಿಸುವುದರಿಂದ ಹಿಡಿದು ವಿವಿಧ ಉದ್ಯಮಗಳಲ್ಲಿ ಪ್ರಚಲಿತದಲ್ಲಿರುವ ಆಧುನಿಕ ತಂತ್ರಜ್ಞಾನಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ.


ಇಲ್ಲಿ ನೀಡಿರುವ ಕೋರ್ಸ್​ಗಳನ್ನೂ ಸಹ ಮಾಡಬಹುದು


ಎಂಜಿನಿಯರಿಂಗ್, ವೈದ್ಯಕೀಯ, ಕಾನೂನು, ಪತ್ರಿಕೋದ್ಯಮ, ವ್ಯವಹಾರ ಅಧ್ಯಯನಗಳು, ಫ್ಯಾಷನ್ ಡಿಸೈನಿಂಗ್ ಇತ್ಯಾದಿಗಳನ್ನು ಒಳಗೊಂಡಿರುವ ವೃತ್ತಿಪರ ಪದವಿ ಕೋರ್ಸ್‌ಗಳು ಪೂರ್ಣ ಸಮಯದ 4 ವರ್ಷಗಳ  ​​ಕೋರ್ಸ್‌ಗಳಾಗಿವೆ ಇದನ್ನೂ ಸಹ ನೀವು ಮಾಡಬಹುದು. ಇಲ್ಲಿ ಕೆಲವು ಬಿಟೆಕ್​ಗೆ ಸಂಬಂಧಿಸಿದ ಡಿಪ್ಲೊಮಾ ಕೋರ್ಸ್​​ಗಳನ್ನು ನೀಡಲಾಗಿದೆ ಈ ವಿವರಗಳನ್ನು ಗಮನಿಸಿ ಆಯ್ಕೆ ಮಾಡಿ.


ಲ್ಯಾಟರಲ್​ ಎಂಟ್ರಿ ಬಿ.ಟೆಕ್. ಡಿಪ್ಲೊಮಾ ನಂತರದ ಕೋರ್ಸ್‌ಗಳು:
1. ಏರೋನಾಟಿಕಲ್ ಇಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ
2. ಆಟೋಮೊಬೈಲ್ ಇಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ
3. ಸಿವಿಲ್ ಇಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ
4 ಜೈವಿಕ ತಂತ್ರಜ್ಞಾನ ಲ್ಯಾಟರಲ್ ಎಂಟ್ರಿ
5. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ
6. IBM- ಲ್ಯಾಟರಲ್ ಎಂಟ್ರಿ (ಕ್ಲೌಡ್ ಕಂಪ್ಯೂಟಿಂಗ್, ಬಿಸಿನೆಸ್ ಅನಾಲಿಟಿಕ್ಸ್ ಮತ್ತು ಆಪ್ಟಿಮೈಸೇಶನ್, ಸೈಬರ್ ಸೆಕ್ಯುರಿಟಿ ಮತ್ತು ಫೋರೆನ್ಸಿಕ್ಸ್, ಗ್ರಾಫಿಕ್ಸ್ ಮತ್ತು ಗೇಮಿಂಗ್ ಟೆಕ್ನಾಲಜಿ) ಸಹಯೋಗದೊಂದಿಗೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ನೀಡಲಾಗುತ್ತದೆ.
7. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ಲ್ಯಾಟರಲ್ ಎಂಟ್ರಿ (IOT) ನಲ್ಲಿ ವಿಶೇಷತೆಯೊಂದಿಗೆ
8. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ
9. ಮೆಕ್ಯಾನಿಕಲ್ ಇಂಜಿನಿಯರಿಂಗ್ ಲ್ಯಾಟರಲ್ ಎಂಟ್ರಿ
10. ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಲ್ಯಾಟರಲ್ ಎಂಟ್ರಿ
11. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಕ್ಸೆಬಿಯಾ ಜೊತೆಗೆ ವಿಶೇಷತೆಯೊಂದಿಗೆ:
12. ಡೇಟಾ ಸೈನ್ಸ್ & ಮೆಷಿನ್ ಲರ್ನಿಂಗ್ ಲ್ಯಾಟರಲ್ ಎಂಟ್ರಿ,
ಡಿಜಿಟಲ್ ರೂಪಾಂತರ ಲ್ಯಾಟರಲ್ ಎಂಟ್ರಿ

First published: