• ಹೋಂ
 • »
 • ನ್ಯೂಸ್
 • »
 • Jobs
 • »
 • Result: ಇಂದು ಪ್ರಮುಖ ಪರೀಕ್ಷೆಯ ಫಲಿತಾಂಶ ಪ್ರಕಟ-ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

Result: ಇಂದು ಪ್ರಮುಖ ಪರೀಕ್ಷೆಯ ಫಲಿತಾಂಶ ಪ್ರಕಟ-ರಿಸಲ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

DHSE Kerala Improvement Exams 2022: DHSE ಪ್ಲಸ್ ಒನ್ ಪರೀಕ್ಷೆಯನ್ನು ತೆರವುಗೊಳಿಸಲು, ಅಭ್ಯರ್ಥಿಗಳು ಪ್ರತಿ ವಿಷಯದಲ್ಲಿ 100 ಅಂಕಗಳಲ್ಲಿ ಕನಿಷ್ಠ 35 ಶೇಕಡಾ ಅಂಕಗಳನ್ನು ಗಳಿಸಬೇಕು.

 • Trending Desk
 • 4-MIN READ
 • Last Updated :
 • Kerala, India
 • Share this:

DHSE ಕೇರಳ ಸುಧಾರಣಾ ಪರೀಕ್ಷೆಗಳು 2022: ಕೇರಳದ ಹೈಯರ್ ಸೆಕೆಂಡರಿ ಶಿಕ್ಷಣ ನಿರ್ದೇಶನಾಲಯವು (The Directorate of Higher Secondary Education, Kerala) ಇಂದು ಮೊದಲ ವರ್ಷದ ಸುಧಾರಣೆ ಪರೀಕ್ಷೆಗಳು, NSQF ಮೊದಲ ವರ್ಷದ ಸುಧಾರಣೆ ಪರೀಕ್ಷೆಗಳು ಮತ್ತು VHSE ಮೊದಲ ವರ್ಷದ ಸುಧಾರಣೆ ಪರೀಕ್ಷೆಗಳ ಫಲಿತಾಂಶಗಳನ್ನು ಪ್ರಕಟಿಸಿದೆ.


ಈ ಪರೀಕ್ಷೆಗಳಿಗೆ ಹಾಜರಾದ ಅಭ್ಯರ್ಥಿಗಳು ಅದರ ಅಧಿಕೃತ ವೆಬ್‌ಸೈಟ್, keralaresults.nic.in ನಲ್ಲಿ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಬಹುದು.


ಕೇರಳ ಪ್ಲಸ್ ಒನ್ ಸುಧಾರಣೆ ಫಲಿತಾಂಶ 2022 ಅನ್ನು ಪ್ರವೇಶಿಸಲು, ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕದೊಂದಿಗೆ ಲಾಗ್ ಇನ್ ಮಾಡಬೇಕಾಗುತ್ತದೆ.


2021-2022ರ ಶೈಕ್ಷಣಿಕ ಅವಧಿಯ DHSE 11ನೇ ತರಗತಿ/ಪ್ಲಸ್ ಒನ್ ಪರೀಕ್ಷೆಯ ಫಲಿತಾಂಶವನ್ನು ಆನ್‌ಲೈನ್ ಮೋಡ್ ಮೂಲಕ 17ನೇ ಆಗಸ್ಟ್ 2022 ರಂದು ಬಿಡುಗಡೆ ಮಾಡಿತ್ತು.


ಪರೀಕ್ಷೆಯಲ್ಲಿ ವಿಫಲವಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯನ್ನು ಅಕ್ಟೋಬರ್‌ 25 ರಿಂದ ಅಕ್ಟೋಬರ್ 29, 2022 ರವರೆಗೆ ಇಲಾಖೆಯು ಪರೀಕ್ಷೆಗಳನ್ನು ನಡೆಸಿತ್ತು.


ಈಗ ರಿಸಲ್ಟ್‌ ಹೊರಬಂದಿದ್ದು, ಪರೀಕ್ಷೆಗೆ ಕುಳಿತ ಅಭ್ಯರ್ಥಿಗಳು ಸಂಬಂಧಪಟ್ಟ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ತಿಳಿದುಕೊಳ್ಳಬಹುದು.


DHSE ಕೇರಳ ಸುಧಾರಣೆ ಪರೀಕ್ಷೆಗಳು 2022: ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ ಎಂಬುದನ್ನು ತಿಳಿಯಲು ಕೆಳಗಿನ ಈ ಮಾಹಿತಿಯನ್ನು ಓದಿ. ಇಲ್ಲಿ ಅಭ್ಯರ್ಥಿಗಳು ಕೆಲವು ಪ್ರಮುಖ ಹಂತಗಳನ್ನು ಅನುಸರಿಸಬೇಕಾಗುತ್ತದೆ. ಅವು,


ಇದನ್ನೂ ಓದಿ: 2nd PUC Preparatory Exam: ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಪ್ರಕಟ


ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಂದರೆ ಅಭ್ಯರ್ಥಿಗಳು ಇಲ್ಲಿ keralaresults.nic.in ಅಥವಾ dhsekerala.gov.in ವೆಬ್‌ಸೈಟ್‌ ನಲ್ಲಿ ತಮ್ಮ ರಿಸಲ್ಟ್‌ ನೋಡಬಹುದು.


ಹಂತ 2: ಈ ವೆಬ್‌ಸೈಟ್‌ಗೆ ಹೋದ ನಂತರ ನೀವಿಲ್ಲಿ ಮೂರು ಆಯ್ಕೆಗಳನ್ನು ನೋಡುತ್ತಿರಿ. ಮೊದಲ ವರ್ಷದ ಸುಧಾರಣೆ ಪರೀಕ್ಷೆಯ ಫಲಿತಾಂಶಗಳು ಅಥವಾ NSQF ಮೊದಲ ವರ್ಷದ ಸುಧಾರಣೆ ಪರೀಕ್ಷೆಯ ಫಲಿತಾಂಶಗಳು ಅಥವಾ VHSE ಮೊದಲ ವರ್ಷದ ಸುಧಾರಣೆ ಪರೀಕ್ಷೆಯ ಫಲಿತಾಂಶದ ಆಯ್ಕೆ ತೋರುತ್ತದೆ, ನೀವು ಯಾವ ಪರೀಕ್ಷೆ ಬರೆದಿದ್ದೀರಿ ಎಂದು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್ ಮಾಡಿ.


ಹಂತ 3: ಮೊದಲ ವರ್ಷದ ಸುಧಾರಣೆಯ ಫಲಿತಾಂಶಗಳಿಗಾಗಿ ನಿಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಮತ್ತು NSQF ಮತ್ತು VHSE ಪರೀಕ್ಷೆಯ ಫಲಿತಾಂಶಗಳಿಗಾಗಿ ರೋಲ್ ನಂಬರ್‌ ಅನ್ನು ನಮೂದಿಸಿ.


ಹಂತ 4: ಈ ಮೇಲಿನ ಮೂರು ಹಂತಗಳನ್ನು ತಲುಪಿದ ನಂತರ ಅಭ್ಯರ್ಥಿಗಳಿಗೆ ಪರೀಕ್ಷೆ ಫಲಿತಾಂಶ ಕಾಣುತ್ತದೆ. ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ನಿಮ್ಮ ರಿಸಲ್ಟ್‌ ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು.


ಪಾಸ್‌ ಅಂಕ


DHSE ಪ್ಲಸ್ ಒನ್ ಪರೀಕ್ಷೆಯನ್ನು ತೆರವುಗೊಳಿಸಲು, ಅಭ್ಯರ್ಥಿಗಳು ಪ್ರತಿ ವಿಷಯದಲ್ಲಿ 100 ಅಂಕಗಳಲ್ಲಿ ಕನಿಷ್ಠ 35 ಶೇಕಡಾ ಅಂಕಗಳನ್ನು ಗಳಿಸಬೇಕು.


ಮರುಮೌಲ್ಯಮಾಪನ ಶುಲ್ಕ


ಅಧಿಕೃತ ಬಿಡುಗಡೆಯ ಪ್ರಕಾರ, ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ಪ್ರತಿ ವಿಷಯಕ್ಕೆ ರೂ 500 ಪಾವತಿಸಿ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಬಹುದು.


ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ಪ್ರತಿ ವಿಷಯಕ್ಕೆ ರೂ 100 ಪಾವತಿಸಬೇಕಾಗುತ್ತದೆ. ಹಾಗೆಯೇ ನವೀಕರಣಗಳಿಗಾಗಿ ಕೇರಳ DHSE ಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಲು ಅಭ್ಯರ್ಥಿಗಳಿಗೆ ಸಲಹೆ ನೀಡಲಾಗುತ್ತದೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ 25 ಪ್ರೊಫೆಸರ್ & ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ-ತಿಂಗಳಿಗೆ 2.20 ಲಕ್ಷ ಸಂಬಳ


ಕೇರಳದ ಹೈಯರ್ ಸೆಕೆಂಡರಿ ಶಿಕ್ಷಣ ನಿರ್ದೇಶನಾಲಯ


ಶಿಕ್ಷಣದ ರಾಷ್ಟ್ರೀಯ ನೀತಿಯ ಅನುಸಾರವಾಗಿ ಕೇರಳ ಸರ್ಕಾರವು 1990 ರಲ್ಲಿ ಹೈಯರ್ ಸೆಕೆಂಡರಿ ಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸಿತು.

top videos


  ಸೂಕ್ತ ತತ್ವಶಾಸ್ತ್ರಗಳನ್ನು ಸ್ಥಾಪಿಸುವ ಮೂಲಕ ಹೈಯರ್ ಸೆಕೆಂಡರಿ ಶಿಕ್ಷಣದಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸಲು ರಾಜ್ಯ ಸರ್ಕಾರದ ಕೇಂದ್ರ ಸಂಸ್ಥೆಯಾಗಿ ನಿರ್ದೇಶನಾಲಯವನ್ನು ಕಲ್ಪಿಸಲಾಗಿದೆ.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು