ದೆಹಲಿ ವಿಶ್ವವಿದ್ಯಾಲಯದ ನಾನ್-ಕಾಲೇಜಿಯೇಟ್ (ಕಾಲೇಜಿನ ವಿದ್ಯಾರ್ಥಿ ಅಥವಾ ಭಾಗವಲ್ಲದವರು) ಮಹಿಳಾ ಶಿಕ್ಷಣ ಮಂಡಳಿ (DU NCWEB) 2022-23 ಶೈಕ್ಷಣಿಕ ವರ್ಷಕ್ಕೆ ಆನ್‌ಲೈನ್ ಸ್ನಾತಕೋತ್ತರ ಪ್ರವೇಶ ವೇಳಾಪಟ್ಟಿಯನ್ನು (Time Table) ಪ್ರಕಟಿಸಿದೆ. ಶಿಕ್ಷಣ ಮಂಡಳಿಯು ಡಿಸೆಂಬರ್ 12 ರಂದು ವೆಬ್‌ಸೈಟ್‌ನಲ್ಲಿ ಮೊದಲ ಪ್ರವೇಶ ಪಟ್ಟಿಯನ್ನು ಪ್ರದರ್ಶಿಸಲಿದೆ ಎಂದು ತಿಳಿಸಿದ್ದು, ಅಭ್ಯರ್ಥಿಗಳು ಡಿಸೆಂಬರ್ 13 (10 am) ಮತ್ತು ಡಿಸೆಂಬರ್ 14 (11:59 pm) ದಿನಾಂಕಗಳ ನಡುವೆ ಅರ್ಜಿ ಸಲ್ಲಿಸಲು ಸಾಧ್ಯವಾಗಲಿದೆ ಎಂದು ಮಂಡಳಿ ತಿಳಿಸಿದೆ. NCWEB ಡಿಸೆಂಬರ್ 17 ಮತ್ತು ಡಿಸೆಂಬರ್ 23 ರಂದು ಇನ್ನೂ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಲಿದೆ ಎಂದು ತಿಳಿಸಿದೆ.
ದೆಹಲಿ ವಿಶ್ವವಿದ್ಯಾಲಯದ ಪಿಜಿ ಪ್ರವೇಶ ವೇಳಾಪಟ್ಟಿ ಇಂತಿದೆ:
DU NCWEB PG ಪ್ರವೇಶ ವೇಳಾಪಟ್ಟಿ 2022-23 ರ ಪ್ರಕಾರ, ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದ ನಂತರ, ಶಿಕ್ಷಣ ಮಂಡಳಿಯು ವಿದ್ಯಾರ್ಥಿಗಳ ಪ್ರವೇಶ ವಿವರವನ್ನು ಪರಿಶೀಲಿಸುತ್ತದೆ ಮತ್ತು ಪ್ರವೇಶಕ್ಕೆ ಅನುಮೋದನೆ ನೀಡುತ್ತದೆ ಎಂದು ತಿಳಿಸಿದೆ. ವಿದ್ಯಾರ್ಥಿಗಳು ಅಡ್ಮಿಶನ್ ಲಿಸ್ಟ್‌ಗೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಮೊದಲ ಅಡ್ಮಿಶನ್ ಲಿಸ್ಟ್‌ಗೆ ಶುಲ್ಕ ಪಾವತಿ ಡಿಸೆಂಬರ್ 15 ರವರೆಗೆ ಇರುತ್ತದೆ, ಹಾಗೂ ಕ್ರಮವಾಗಿ ಎರಡನೇ ಮತ್ತು ಮೂರನೇ ಲಿಸ್ಟ್‌ಗಳಿಗೆ ಶುಲ್ಕ ಪಾವತಿ ದಿನಾಂಕ ಡಿಸೆಂಬರ್ 21 ಮತ್ತು ಡಿಸೆಂಬರ್ 27 ಆಗಿದೆ.
ಶುಲ್ಕ ಪಾವತಿಗಾಗಿ, NCWEB ವೇಳಾಪಟ್ಟಿಯನ್ನು ಪ್ರಕಟಿಸಿದ ಸಮಯದಲ್ಲಿ, ಅರ್ಜಿದಾರರು ಶುಲ್ಕವನ್ನು ಆನ್‌ಲೈನ್ ಪಾವತಿ ಮಾಡಲು PG ಪ್ರವೇಶ (ಅಡ್ಮಿಶನ್) ಪೋರ್ಟಲ್‌ಗೆ ಲಾಗಿನ್ ಮಾಡಬೇಕಾಗುತ್ತದೆ. ಅಗತ್ಯವಿದ್ದರೆ ನಂತರದ ಅಡ್ಮಿಶನ್ ಲಿಸ್ಟ್‌ಗಳು ಮತ್ತು ವೇಳಾಪಟ್ಟಿಯನ್ನು ವಿಶ್ವವಿದ್ಯಾಲಯವು ತಿಳಿಸುತ್ತದೆ ಎಂದು NCWEB ತಿಳಿಸಿದೆ. ದೆಹಲಿ ಯುನಿವರ್ಸಿಟಿಯು ಪಿಎಚ್‌ಡಿ ಅಡ್ಮಿಶನ್ ನೋಟೀಸ್ ಅನ್ನು ಬಿಡುಗಡೆ ಮಾಡಿದೆ.
ದೆಹಲಿ ವಿಶ್ವವಿದ್ಯಾನಿಯದ ಪಿಜಿ ಅಡ್ಮಿಶನ್ ಅರ್ಜಿ ಸಲ್ಲಿಸುವುದು ಹೇಗೆ
pgadmission.uod.ac.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
ಅರ್ಜಿದಾರರು ತಮ್ಮ ಐಡಿ ಹಾಗೂ ಪಾಸ್‌ವರ್ಡ್ ಮೂಲಕ ಲಾಗಿನ್ ಮಾಡಬೇಕು
ಕಾಲೇಜು ಹಾಗೂ ಕೋರ್ಸ್‌ನಂತಹ ಅಗತ್ಯ ವಿವರಗಳನ್ನು ಅರ್ಜಿದಾರರು ತುಂಬಬೇಕು
ಅಗತ್ಯ ಡಾಕ್ಯುಮೆಂಟ್‌ಗಳನ್ನು ಅರ್ಜಿದಾರರು ಅಪ್‌ಲೋಡ್ ಮಾಡಬೇಕು
ಅಪ್ಲಿಕೇಶನ್ ಸಲ್ಲಿಸಿ ಹಾಗೂ ಮುಂದಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ
ದೆಹಲಿ ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರವೇಶಕ್ಕೆ ಅರ್ಜಿ ತುಂಬಲು ಕೊನೆಯ ದಿನಾಂಕ ಯಾವುದು?
2022-23ರ ಶೈಕ್ಷಣಿಕ ವರ್ಷಕ್ಕೆ ದೆಹಲಿ ವಿಶ್ವವಿದ್ಯಾಲಯದ ಪಿಎಚ್‌ಡಿ ಪ್ರವೇಶಕ್ಕೆ ಈಗಾಗಲೇ ನೋಂದಾಯಿಸಿಕೊಂಡಿರುವ ಮತ್ತು ಇತ್ತೀಚೆಗೆ NET/CSIR/JRF ಇತ್ಯಾದಿಗಳಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ದೆಹಲಿ ವಿಶ್ವವಿದ್ಯಾಲಯದ ಆರ್ಡಿನೆನ್ಸ್ VI ಪ್ರಕಾರ ನೇರವಾಗಿ ಸಂದರ್ಶನಕ್ಕೆ ಹಾಜರಾಗಬಹುದು. ಫಾರ್ಮ್ ಅನ್ನು ಭರ್ತಿ ಮಾಡಲು ಕೊನೆಯ ದಿನಾಂಕವು ಭಾನುವಾರ, ಡಿಸೆಂಬರ್ 11, 2022 ಆಗಿದೆ” ಎಂದು ಅಧಿಕೃತ ಸೂಚನೆ ತಿಳಿಸಿದೆ.
ತಮ್ಮ ಹೆಸರು ಲಿಸ್ಟ್‌ನಲ್ಲಿದೆಯೇ ಎಂಬುದನ್ನು ವಿದ್ಯಾರ್ಥಿಗಳು ಹೇಗೆ ಕಂಡುಕೊಳ್ಳಬಹುದು?
ವಿಶ್ವವಿದ್ಯಾಲಯವು ವಿವಿಧ ಎಮ್‌ಎ ಹಾಗೂ ಎಮ್‌ಎಸ್‌ಸಿ ಕೋರ್ಸ್‌ಗಳಿಗೆ ಮೆರಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಅಡ್ಮಿಶನ್ ಲಿಸ್ಟ್ ಬಿಡುಗಡೆಯಾದ ನಂತರ ಅಭ್ಯರ್ಥಿಗಳು ದೆಹಲಿ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್ ncweb.du.ac.in ಗೆ ಹೋಗಿ ತಮ್ಮ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆಯೇ ಎಂಬುದನ್ನು ಅರಿತುಕೊಳ್ಳಬಹುದಾಗಿದೆ. DU PG NCWEBಯ 2 ನೇ ಪ್ರವೇಶ ಪಟ್ಟಿಯ ವಿರುದ್ಧ ಅರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 20 ರವರೆಗೆ ಅವಕಾಶವಿದೆ .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ