ನವದೆಹಲಿ: ಶಿಕ್ಷಣವನ್ನು (Education) ಅತ್ಯುತ್ತಮ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದು ಪಣ ತೊಟ್ಟಿರುವ ದೆಹಲಿ ಸರ್ಕಾರ (Delhi Government) ಶಿಕ್ಷಣಕ್ಕೆ ಸಂಬಂಧಿಸಿದಂತೆ ನೂತನ ಯೋಜನೆಗಳನ್ನು ಪರಿಚಯಿಸುತ್ತಿದೆ. ದೆಹಲಿಯಲ್ಲಿ ನಡೆದ ಎಕ್ಸಲೆನ್ಸ್ ಇನ್ ಎಜುಕೇಶನ್ ಅವಾರ್ಡ್ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, (Arvind Kejriwal) ದೆಹಲಿಯನ್ನು ವಿಶ್ವ ಶಿಕ್ಷಣದ ಕೇಂದ್ರವನ್ನಾಗಿ ಮಾಡುವುದು ನನ್ನ ಕನಸು ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಯೋಜನೆಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದ್ದು, ಜೀವನದಲ್ಲಿ ಏನಿರಲಿ, ಇಲ್ಲದಿರಲಿ ಖುಷಿಯಾಗಿ ಬದುಕೋದು ಬಹಳ ಮುಖ್ಯ. ಇಲ್ಲದರ ಬಗ್ಗೆ ಚಿಂತಿಸುತ್ತ, ಇದ್ದ ಖುಷಿಯನ್ನು ಕಳೆದುಕೊಳ್ಳವ ಬದಲು ನಮ್ಮ ಬಳಿ ಇರುವುದರಲ್ಲಿ ಸಂತೃಪ್ತಿಯಾಗಿ ಬದುಕಬೇಕು. ಹೀಗೆ ಖುಷಿ ಮತ್ತು ತೃಪ್ತಿಕರ ಜೀವನವನ್ನು ಹೇಗೆ ನಡೆಸುವುದು ಎಂಬುದನ್ನು ವಿದ್ಯಾರ್ಥಿ ಹಂತದಲ್ಲಿಯೇ ಮಕ್ಕಳಿಗೆ ಕಲಿಸಲು ದೆಹಲಿ ಸರ್ಕಾರ ಈಗಾಗಲೇ ಶಾಲೆಗಳಲ್ಲಿ ʼಹ್ಯಾಪಿನೆಸ್ʼ ಕ್ಲಾಸ್ ಅನ್ನು 2018ರಲ್ಲಿ ಆರಂಭಿಸಿದೆ.
ಇದನ್ನೂ ಓದಿ: Education: ದೆಹಲಿಯನ್ನು ವಿಶ್ವ ಶಿಕ್ಷಣದ ಕೇಂದ್ರವನ್ನಾಗಿಸುವುದು ನನ್ನ ಕನಸು: ಅರವಿಂದ್ ಕೇಜ್ರಿವಾಲ್
'ಹ್ಯಾಪಿನೆಸ್' ಪಠ್ಯಕ್ರಮದ ವಿಡಿಯೋ ಸರಣಿ ಬಿಡುಗಡೆ
ದೆಹಲಿಯ ಶಿಕ್ಷಣ ಸಚಿವ ಅತಿಶಿ ಅವರು ಭಾನುವಾರ ದೆಹಲಿ ಸರ್ಕಾರದ ಹ್ಯಾಪಿನೆಸ್ ಪಠ್ಯಕ್ರಮದ 36-ಕಂತುಗಳ ವಿಡಿಯೋ ಸರಣಿಯನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡಿದ್ದು, ಇದು ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಸಂತೋಷ ಮತ್ತು ತೃಪ್ತಿಕರ ಜೀವನವನ್ನು ಹೇಗೆ ನಡೆಸಬೇಕೆಂದು ಕಲಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ, ಪಠ್ಯಕ್ರಮದ ಮುಖ್ಯ ಗುರಿಗಳು ಸ್ವಯಂ-ಅರಿವು, ಅಭಿವ್ಯಕ್ತಿ, ಪರಾನುಭೂತಿ ಮತ್ತು ಸಂಬಂಧಿತ ಗ್ರಹಿಕೆಯನ್ನು ಅಭಿವೃದ್ಧಿಪಡಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.
ದೆಹಲಿ ಶಿಕ್ಷಣ ಇಲಾಖೆಯು ಪ್ರಪಂಚದಾದ್ಯಂತ ಉನ್ನತ ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳೊಂದಿಗೆ ವಿಡಿಯೋ ಸರಣಿಯನ್ನು ಹಂಚಿಕೊಂಡಿದ್ದು, ವಿಡಿಯೋಗೆ ಬಂದ ಸಲಹೆಗಳನ್ನು ತೆಗೆದುಕೊಂಡು ಹ್ಯಾಪಿನೆಸ್ ಪಠ್ಯಕ್ರಮವನ್ನು ಮತ್ತಷ್ಟು ಉತ್ಕೃಷ್ಟಗೊಳಿಸುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಈ ವಿಡಿಯೋ ಸರಣಿಯು ಉಪಶೀರ್ಷಿಕೆಗಳೊಂದಿಗೆ ಲಭ್ಯವಿದೆ. ಈ ಮಹತ್ವದ ಉಪಕ್ರಮದ ಮೂಲಕ ನಾವು ನಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಬಹುದು. ಜನರು ಸರಿಯಾದ ದಿಕ್ಕನ್ನು ಪಡೆಯಲು ಮತ್ತು ನಿಜವಾದ ಅರ್ಥದಲ್ಲಿ ಮಾನವೀಯತೆಗೆ ಸೇವೆ ಸಲ್ಲಿಸಲು, ಕಲಿಯಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಸಚಿವ ಅತಿಶಿ ಹೇಳಿದ್ದಾರೆ.
ಇದನ್ನೂ ಓದಿ: Fraud Thing: ದೆಹಲಿಯಿಂದ ದುಬೈಗೆ ಉಚಿತ ಪ್ರಯಾಣವಂತೆ! ಟ್ರಾವೆಲ್ ಕಂಪನಿಗೆ ಮೋಸ ಮಾಡಿದ್ರಾ?
ಪ್ರತಿ ಬುಧವಾರ ಸರಣಿಯ ಸಂಚಿಕೆ ಪ್ರಸಾರ
ಹ್ಯಾಪಿನೆಸ್ ದೆಹಲಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿ ಬುಧವಾರ ಸರಣಿಯ ಹೊಸ ಸಂಚಿಕೆಗಳನ್ನು ಪ್ರಸಾರ ಮಾಡಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಶಿಕ್ಷಣ ಇಲಾಖೆಯ ನಿರ್ದೇಶಕ ಹಿಮಾಂಶು ಗುಪ್ತಾ ಮಾತನಾಡಿ, 'ದೆಹಲಿ ಸರ್ಕಾರಿ ಶಾಲಾ ಶಿಕ್ಷಕರ ಚಾರಿತ್ರ್ಯ ನಿರ್ಮಾಣ ಮತ್ತು ವೃತ್ತಿಪರ ಬೆಳವಣಿಗೆಯಲ್ಲಿ ಹ್ಯಾಪಿನೆಸ್ ಪಠ್ಯಕ್ರಮವು ಪ್ರಮುಖ ಪಾತ್ರ ವಹಿಸಿದೆ. ನಮ್ಮ ಶಿಕ್ಷಕರು ಪಡೆದ ಜ್ಞಾನವನ್ನು ಪ್ರಪಂಚದ ಇತರ ಭಾಗಗಳೊಂದಿಗೆ ನಾವು ಹರಡುವ ಸಮಯ ಇದು" ಎಂದು ಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಹ್ಯಾಪಿನೆಸ್ ಪಠ್ಯಕ್ರಮ ಮತ್ತು ಉದ್ದೇಶ
ರಾಷ್ಟ್ರ ರಾಜಧಾನಿಯ 1,030 ಸರ್ಕಾರಿ ಶಾಲೆಗಳಲ್ಲಿ ಶಿಶುವಿಹಾರದ ಮಕ್ಕಳಿಂದ ಹಿಡಿದು 8 ನೇ ತರಗತಿಯವರೆಗೆ ಪ್ರತಿದಿನ 35 ನಿಮಿಷಗಳ ತರಗತಿಯ ಮೂಲಕ ಸಂತೋಷ ಮತ್ತು ಯೋಗಕ್ಷೇಮಕ್ಕಾಗಿ ವಿದ್ಯಾರ್ಥಿಗಳ ಅಡಿಪಾಯವನ್ನು ಬಲಪಡಿಸುವ ಗುರಿಯೊಂದಿಗೆ ಹ್ಯಾಪಿನೆಸ್ ಪಠ್ಯಕ್ರಮವನ್ನು 2018 ರಲ್ಲಿ ಪರಿಚಯಿಸಲಾಯಿತು.
ಈ ಪಠ್ಯಕ್ರಮವನ್ನು 2018 ರಲ್ಲಿ ದೆಹಲಿಯ ಉಪ ಮುಖ್ಯಮಂತ್ರಿ ಮತ್ತು ಶಿಕ್ಷಣ ಇಲಾಖೆ ಉಸ್ತುವಾರಿ ಮನೀಶ್ ಸಿಸೋಡಿಯಾ ರೂಪಿಸಿದ್ದರು. ಇದನ್ನು 40 ದೆಹಲಿ ಸರ್ಕಾರಿ ಶಿಕ್ಷಕರು, ಶಿಕ್ಷಕರು ಮತ್ತು ಸ್ವಯಂಸೇವಕರ ತಂಡವು ಆರು ತಿಂಗಳ ಅವಧಿಯಲ್ಲಿ ವಿನ್ಯಾಸಗೊಳಿಸಿ ಸಿದ್ಧಪಡಿಸಿದೆ. 'ಸಂತೋಷದ ಪಠ್ಯಕ್ರಮ' ಮುಖ್ಯವಾಗಿ ಧ್ಯಾನ, ಮೌಲ್ಯ ಶಿಕ್ಷಣ ಮತ್ತು ಮಾನಸಿಕ ವ್ಯಾಯಾಮಗಳನ್ನು ಒಳಗೊಂಡಿರುತ್ತದೆ.
ಈ ತರಗತಿಯು ಜೀವನದ ಅರ್ಥ ಮತ್ತು ಆ ಗುರಿಯನ್ನು ಸಾಧಿಸುವಲ್ಲಿ ಶಿಕ್ಷಣವು ವಹಿಸುವ ಪಾತ್ರದ ಅರಿವನ್ನು ಹರಡುವ ಪ್ರಯತ್ನವಾಗಿದೆ ಎಂದು ದೆಹಲಿ ಸರ್ಕಾರದ ಶಿಕ್ಷಣ ಇಲಾಖೆ ತಿಳಿಸಿದೆ. ಈ ಕಾರ್ಯಕ್ರಮದ ಮೂಲಕ ಜನರು ನಿಜವಾಗಿಯೂ ಮಾನವೀಯತೆಗೆ ಸೇವೆ ಸಲ್ಲಿಸಲು ಅಗತ್ಯವಾದ ಕೌಶಲ್ಯಗಳನ್ನು ಪಡೆಯುತ್ತಾರೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ