ಜರ್ಮನಿಯಲ್ಲಿ ಹಲವಾರು ವಿಶ್ವವಿದ್ಯಾನಿಲಯಗಳು (University) ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಜಾಗತಿಕ ಮಾನ್ಯತೆ ಪಡೆದುಕೊಳ್ಳಲು ಸಹಾಯ ಮಾಡುತ್ತಿವೆ. ನೀವೂ ಕೂಡ ಬೇರೆ ಕಡೆ ಇಂಟರ್ನ್‌ಶಿಪ್ (Internship) ಮಾಡಬೇಕು ವಿದೇಶಕ್ಕೆ ಹೋಗಬೇಕು ಎಂಬ ಆಸೆ ಹೊಂದಿದ್ದರೆ ಈ ಮಾಹಿತಿಯನ್ನು ಸರಿಯಾಗಿ ಓದಿ. ಜರ್ಮನಿಯ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಒಂದು ಹೊಸ ಅವಕಾಶ ನೀಡುತ್ತಿದೆ. ದಾದ್ ವೈಸ್ ಸ್ಕಾಲರ್‌ಶಿಪ್ (Scholarship), ಇದು ಜರ್ಮನಿಯ ಸಾರ್ವಜನಿಕ ವಿಶ್ವವಿದ್ಯಾಲಯದಲ್ಲಿ ಇಂಟರ್ನಿಂಗ್ ಅವಕಾಶಗಳನ್ನು ನೀಡುತ್ತಿದೆ.
ವೈಸ್ ಎಂದರೆ ವಿಜ್ಞಾನ ಇದೇ ಹೆಸರಿನಲ್ಲಿ ಸ್ಕಾಲರ್ ಶಿಪ್ ನೀಡಲಾಗುತ್ತದೆ. ಇಂಟರ್ನ್‌ಶಿಪ್‌ಗಳು ಮತ್ತು ಈ ವಿದ್ಯಾರ್ಥಿವೇತನವು ಭಾರತೀಯ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಇಂಟರ್ನ್ ಆಗಿ ಅನುಭವ ಪಡೆಯಲು ಸಹಾಯ ಮಾಡುತ್ತದೆ. ಅತ್ಯುತ್ತಮ ತರಬೇತಿ ಕಾರ್ಯಕ್ರಮಗಳಲ್ಲಿ ಇದೂ ಕೂಡಾ ಒಂದಾಗಿದೆ. DAAD ವೈಸ್ ವಿದ್ಯಾರ್ಥಿವೇತನದ ಬಗ್ಗೆ ಎಲ್ಲವನ್ನೂ ತಿಳಿಯಲು ಇದನ್ನು ಸಂಪೂರ್ಣವಾಗಿ ಓದಿ.
ದಾದ್ ವೈಸ್ ಸ್ಕಾಲರ್‌ಶಿಪ್ ಮೆರಿಟ್ ಆಧಾರಿತ ವಿದ್ಯಾರ್ಥಿವೇತನವಾಗಿದ್ದು, ಸಂಶೋಧನಾ ಸಂಸ್ಥೆಗಳಿಂದ ಈ ಇಂಟರ್ನ್‌ಶಿಪ್ ನಡೆಯುತ್ತದೆ. ವಿದ್ಯಾರ್ಥಿವೇತನ ಕಾರ್ಯಕ್ರಮವು ಭಾರತೀಯ ವಿದ್ಯಾರ್ಥಿಗಳಿಗೆ ಸಾರ್ವಜನಿಕವಾಗಿ ಅನುದಾನಿತ ಜರ್ಮನ್ ಸಂಸ್ಥೆಗಳು ಅಥವಾ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಹಾಯವಾಗುವಂತಿರುತ್ತದೆ.
ಇದನ್ನೂ ಓದಿ: Technology: ವಿದ್ಯಾರ್ಥಿಗಳಲ್ಲಿ ಒತ್ತಡ ಸೃಷ್ಟಿಸುತ್ತಿದೆ ತಂತ್ರಜ್ಞಾನ; ಹೇಗೆ ಗೊತ್ತಾ? ಇಲ್ಲಿದೆ ಮಾಹಿತಿ
ಜರ್ಮನಿಯಲ್ಲಿ DAAD ವೈಸ್ ಸ್ಕಾಲರ್‌ಶಿಪ್ ಅನ್ನು ಪಡೆದರೆ ನೀವು ಸಾರ್ವಜನಿಕ ಅಥವಾ ರಾಜ್ಯ-ಅನುದಾನಿತ ವಿಶ್ವವಿದ್ಯಾನಿಲಯದಲ್ಲಿ ಅಥವಾ ದೇಶದ ಯಾವುದೇ ಸಂಶೋಧನೇತರ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತೀರಿ. ಇದು ಪದವಿಪೂರ್ವ ವಿದ್ಯಾರ್ಥಿಗಳಿಗೆ 750 ಯುರೋಗಳ ಮಾಸಿಕ ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ. ಮಾಸಿಕ ಕಂತನ್ನು ದೈನಂದಿನ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ. ವಿದ್ಯಾರ್ಥಿಗಳು 1050 EUR (ಸರಿಸುಮಾರು 93k INR) ಮೊತ್ತದ ಪ್ರಯಾಣ ಭತ್ಯೆಯನ್ನು ಸಹ ಪಡೆಯುತ್ತಾರೆ.
ನೀವು 2022-2023ರ ತರಗತಿಯಲ್ಲಿ ಜರ್ಮನ್ DAAD ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ನಾವು ಇಲ್ಲಿ ನೀಡಿರುವ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲೇ ಬೇಕಾಗುತ್ತದೆ. ಆ ಅಂಶಗಳನ್ನು ಇಲ್ಲಿ ನೀಡಿದ್ದೇವೆ ಗಮನಿಸಿ. ಏಪ್ರಿಲ್ 2023ರಲ್ಲಿ ಸಾಮಾನ್ಯವಾಗಿ ಇದರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಇರುತ್ತದೆ. ಜರ್ಮನಿಯಲ್ಲಿ ಅಧ್ಯಯನ ಮಾಡಲು ಬಯಸುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ DAAD 100 ಕ್ಕೂ ಹೆಚ್ಚು ವಿದ್ಯಾರ್ಥಿವೇತನವನ್ನು ಒದಗಿಸುತ್ತದೆ.
DAAD ವೈಸ್ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಈ ಎಲ್ಲಾ ಅರ್ಹತೆಗಳಿರಬೇಕು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ