• ಹೋಂ
  • »
  • ನ್ಯೂಸ್
  • »
  • jobs
  • »
  • CUET UG 2023 ನೋಂದಣಿ ನಾಳೆಯಿಂದಲೇ ಪ್ರಾರಂಭ, ಈ ಲಿಂಕ್​ ಬಳಸಿ ಅಪ್ಲೈ ಮಾಡಿ

CUET UG 2023 ನೋಂದಣಿ ನಾಳೆಯಿಂದಲೇ ಪ್ರಾರಂಭ, ಈ ಲಿಂಕ್​ ಬಳಸಿ ಅಪ್ಲೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

CUET 2023 ನೋಂದಣಿಗಳು ನಾಳೆ ಅಂದರೆ ಶುಕ್ರವಾರ, ಫೆಬ್ರವರಿ 10, 2023 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಬಾರಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ - cuet.samarth.ac.in ಮೂಲಕ ನೋಂದಾಯಿಸಿಕೊಳ್ಳಬಹುದು .

  • Share this:

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮೇ ತಿಂಗಳಲ್ಲಿ CUET UG 2023 ಅನ್ನು ನಡೆಸಲಿದೆ. ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದೆ. ಈ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ ಪದವಿಪೂರ್ವ ಪರೀಕ್ಷೆ 2023 ದಿನಾಂಕವು ಮೇ 21 ರಿಂದ ಮೇ 31, 2023 ರವರೆಗೆ ಇರುತ್ತದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಿದ್ದೇವೆ ಗಮನಿಸಿ. 


ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಸಾಮಾನ್ಯ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ ಪದವಿಪೂರ್ವ 2023ಅನ್ನು ನಡೆಸಲು ಸಿದ್ಧವಾಗಿದೆ. ಅಧಿಕೃತ ವೇಳಾಪಟ್ಟಿಯ ಪ್ರಕಾರ, ಸಿಯುಇಟಿ ಯುಜಿ 2023 ಪರೀಕ್ಷೆಯು ಮೇ 21 ರಿಂದ ಮೇ 31, 2023 ರವರೆಗೆ ನಡೆಯಲಿದೆ. ಹೀಗಿರುವಾಗ ಸಿಯುಇಟಿ ಯುಜಿ ನೋಂದಣಿ ದಿನಾಂಕವನ್ನು ಇಲ್ಲಿಯವರೆಗೆ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಸದ್ಯದಲ್ಲೇ ನೋಂದಣಿ ದಿನಾಂಕವನ್ನು ಪ್ರಕಟಿಸುತ್ತೇವೆ ಎಂಬ ಮಾಹಿತಿ ತಿಳಿದುಬಂದಿದೆ.


CUET 2023 ನೋಂದಣಿಗಳು ನಾಳೆ ಅಂದರೆ ಶುಕ್ರವಾರ, ಫೆಬ್ರವರಿ 10, 2023 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಬಾರಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ - cuet.samarth.ac.in ಮೂಲಕ ನೋಂದಾಯಿಸಿಕೊಳ್ಳಬಹುದು . NTA CUET (UG)-2023 ಗಾಗಿ ವೆಬ್‌ಸೈಟ್ ನಿಂದ ಮಾಹಿತಿ ಪಡೆಯಬಹುದು. ಫೆಬ್ರವರಿ 06, 2023 ರಂದು, ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಅವರು ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ 2023 ಪದವಿಪೂರ್ವ ನೋಂದಣಿ ಮತ್ತು ಅರ್ಜಿಗಳನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ. ಈ ಕುರಿತು ಅಧಿಕೃತ ಟ್ವೀಟ್​ ಕೂಡಾ ಮಾಡಿದ್ದಾರೆ.


ಇದನ್ನೂ ಓದಿ: After PUC: ಪಿಯು ಆಯ್ತು ಮುಂದೇನು? ಗೊಂದಲ ಇದ್ದವರು ಈ ಕೋರ್ಸ್​ ಮಾಡಿ


"ಕೇಂದ್ರ ವಿಶ್ವವಿದ್ಯಾನಿಲಯಗಳು ಮತ್ತು ಇತರ ಭಾಗವಹಿಸುವ ವಿಶ್ವವಿದ್ಯಾನಿಲಯಗಳಿಗೆ ಪದವಿಪೂರ್ವ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆಯ ನೋಂದಣಿ ಮತ್ತು ಅರ್ಜಿ ಪ್ರಕ್ರಿಯೆಯನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು" ಎಂದು ಅವರು ಟ್ವಿಟರ್ ಮೂಲಕ ಮಾಹಿತಿ ನೀಡಿದ್ದಾರೆ.
CUET UG 2023 ಗೆ ಅರ್ಜಿ ಸಲ್ಲಿಸುವುದು ಹೇಗೆ?


ಹಂತ 1: ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ಪೂರ್ಣ ಹೆಸರು, ಜನ್ಮ ದಿನಾಂಕ, ಇಮೇಲ್ ಐಡಿ, ಇತ್ಯಾದಿ ವಿವರಗಳನ್ನು ಭರ್ತಿ ಮಾಡುವ ಮೂಲಕ ನೋಂದಾಯಿಸಿ
ಹಂತ 3: ಯಶಸ್ವಿ ನೋಂದಣಿಯ ನಂತರ ನಿಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಪಾಸ್‌ವರ್ಡ್‌ನೊಂದಿಗೆ ಸೈನ್ ಇನ್ ಮಾಡಿ.
ಹಂತ 4: CUET UG ಅರ್ಜಿ ನಮೂನೆ 2023 ಅನ್ನು ಭರ್ತಿ ಮಾಡಿ.
ಹಂತ 5: ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಆನ್‌ಲೈನ್ ಶುಲ್ಕವನ್ನು ಪಾವತಿಸಿ.
ಹಂತ 6: ಅಂತಿಮ ಪುಟವನ್ನು ಡೌನ್‌ಲೋಡ್ ಮಾಡಿ ಮತ್ತು ಅದನ್ನು ಉಳಿಸಿ. ಎಲ್ಲಾ CUET UG ಆಕಾಂಕ್ಷಿಗಳು ಹೆಚ್ಚಿನ ವಿವರಗಳಿಗಾಗಿ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಲು ಮತ್ತು ಅಧಿಕೃತ ಪ್ರಕಟಣೆಗಾಗಿ ಕಾಯಲು ಸೂಚಿಸಲಾಗಿದೆ. CUET UG 2023 ಕುರಿತು ಮೇಲೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.


ಯಾರೆಲ್ಲಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರೋ ಅವರೆಲ್ಲರೂ ಸಹ ಈ ಬಾರಿ ಉತ್ತಮ ರೀತಿಯಲ್ಲಿ ಅಭ್ಯಾಸ ನಡೆಸಿ ಪರೀಕ್ಷೆ ಬರೆಯಿರಿ. ನೋಂದಣಿ ದಿನಾಂಕ ಹತ್ತಿರವಿರುವ ಕಾರಣ ಬೇಕಾಗವ ಅಗತ್ಯ ದಾಖಲೆಗಳನ್ನು ಈಗಾಗಲೇ ಹೊಂದಿಸಿಕೊಳ್ಳಿ ಮತ್ತು ನೋಂದಣಿ ಮಾಡಲೂ ಸಹ ಸಿದ್ಧರಾಗಿರಿ.

First published: