• ಹೋಂ
 • »
 • ನ್ಯೂಸ್
 • »
 • Jobs
 • »
 • CUET UG 2023 ಅರ್ಜಿ ತಿದ್ದುಪಡಿ ದಿನಾಂಕ ಪ್ರಕಟ; ಈ ಲಿಂಕ್ ಬಳಸಿ ಸರಿಪಡಿಸಿ

CUET UG 2023 ಅರ್ಜಿ ತಿದ್ದುಪಡಿ ದಿನಾಂಕ ಪ್ರಕಟ; ಈ ಲಿಂಕ್ ಬಳಸಿ ಸರಿಪಡಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕಾಮನ್ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ ಪದವಿಪೂರ್ವ ಅಥವಾ CUET UG 2023 ಗಾಗಿ ಅರ್ಜಿ ತಿದ್ದುಪಡಿ ವಿಂಡೋವು ಮೇ 1 ರಿಂದ 2, 2023 ರವರೆಗೆ ತೆರೆದಿರುತ್ತದೆ ಎಂದು ಹೇಳಲಾಗಿದೆ. ಈ ಸಮಯದಲ್ಲೇ ನೀವು ಬದಲಾವಣೆಗಳಿದ್ದಲ್ಲಿ ಮಾಡಿ ಮುಗಿಸಬೇಕಾಗುತ್ತದೆ. ಆ ನಂತರದ ದಿನಾಂಕಗಳಲ್ಲಿ ಏನೂ ಬದಲಾವಣೆ ಮಾಡಲು ಆಗುವುದಿಲ್ಲ. ಈಗಾಗಲೇ ಈ ಮಾಹಿತಿಯನ್ನು ತಿಳಿಸಿಯಾಗಿದೆ. 

ಮುಂದೆ ಓದಿ ...
 • Share this:

CUET UG 2023ಕ್ಕೆ ಅರ್ಜಿ ಸಲ್ಲಿಸಿದ ಅಥವಾ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ನಾವಿಲ್ಲಿ ನೀಡಿರುವ ಮಾಹಿತಿಯನ್ನು ಗಮನವಿಟ್ಟು ನೋಡಿ. ನಿಮಗೆ ಈಗ ಹೊಸ ಅವಕಾಶ ನೀಡಲಾಗುತ್ತಿದೆ. ಈ ಹಿಂದೆ ನೀವು ಅಪ್ಲೈ (Apply) ಮಾಡಿದ್ದರೆ ಖಂಡಿತ ಈ ಮಾಹಿತಿಯನ್ನು (Information) ಓದಲೇ ಬೇಕು. ನೀವು ಹಾಕಿರುವ ಅರ್ಜಿಯನ್ನು ನವೀಕರಿಸಬಹುದು. ಅಥವಾ ಏನಾದರೂ ಸೇರಿಸಲು ಮರೆತಿದ್ದರೆ ಅದನ್ನು ಸೇರಿಸಬಹುದು. ನಿಮ್ಮ ಪರೀಕ್ಷೆಯ (Exam) ಪತ್ರಿಕೆಯನ್ನು ನವೀಕರಿಸಲೂಬಹುದು. ಇಷ್ಟು ಅವಕಾಶಗಳನ್ನು ನಿಮಗೀಗ ನೀಡಲಾಗಿದೆ. ಹೊಸ ವಿಶ್ವವಿದ್ಯಾಲಯವನ್ನು (University) ಬೇಕಾದರು ಸೇರಿಸಬಹುದು.


ಕಾಮನ್ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ ಪದವಿಪೂರ್ವ ಅಥವಾ CUET UG 2023 ಗಾಗಿ ಅರ್ಜಿ ತಿದ್ದುಪಡಿ ವಿಂಡೋವು ಮೇ 1 ರಿಂದ 2, 2023 ರವರೆಗೆ ತೆರೆದಿರುತ್ತದೆ ಎಂದು ಹೇಳಲಾಗಿದೆ. ಈ ಸಮಯದಲ್ಲೇ ನೀವು ಬದಲಾವಣೆಗಳಿದ್ದಲ್ಲಿ ಮಾಡಿ ಮುಗಿಸಬೇಕಾಗುತ್ತದೆ. ಆ ನಂತರದ ದಿನಾಂಕಗಳಲ್ಲಿ ಏನೂ ಬದಲಾವಣೆ ಮಾಡಲು ಆಗುವುದಿಲ್ಲ. ಈಗಾಗಲೇ ಈ ಮಾಹಿತಿಯನ್ನು ತಿಳಿಸಿಯಾಗಿದೆ.


ಇದನ್ನೂ ಓದಿ: Bengaluru: ಹಾಸ್ಟೆಲ್​ ಖಾಲಿ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ UVCE


ಈ ಎಲ್ಲಾ ಮಾಹಿತಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಭಾನುವಾರ ತಿಳಿಸಿದೆ. ವಿದ್ಯಾರ್ಥಿಗಳು ತಮ್ಮ ನಮೂನೆಗಳಲ್ಲಿ ಆಯ್ದ ಬದಲಾವಣೆಗಳನ್ನು ಮಾಡಲು ಅನುವು ಮಾಡಿಕೊಡುತ್ತದೆ.  ಒಟಿಪಿ ಮೂಲಕ ತಮ್ಮ ಬದಲಾವಣೆಗಳನ್ನು ದೃಢೀಕರಿಸಲು ಸಾಧ್ಯವಾಗದ ಸುಮಾರು 14000 ಅಭ್ಯರ್ಥಿಗಳ ಅರ್ಜಿಗಳು ಡ್ರಾಫ್ಟ್‌ನಲ್ಲಿವೆ. ಈ ಅಭ್ಯರ್ಥಿಗಳನ್ನು ಹೊರಗಿಡಬಾರದು ಎಂಬ ಉದ್ದೇಶದಿಂದ ಖಚಿತಪಡಿಸಿಕೊಳ್ಳಲು, ನವೀಕರಣಕ್ಕಾಗಿ ವಿಂಡೋವನ್ನು ತೆರೆಯಲು ನಿರ್ಧರಿಸಲಾಗಿದೆ.
ಇನ್ನು ಯಾವೆಲ್ಲಾ ವಿದ್ಯಾರ್ಥಿಗಳು ಇದುವರೆಗು ತಮ್ಮ ಅರ್ಜಿಯನ್ನು ಸಂಪೂರ್ಣವಾಗಿ ತುಂಬಿಲ್ಲವೋ ಅವರಿಗೆ ಅದನ್ನು ಇನ್ನೊಮ್ಮೆ ಭರ್ತಿ ಮಾಡಲು  NTA ಅವಕಾಶ ಮಾಡಿಕೊಟ್ಟಿದೆ. ಈ ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸಾಧ್ಯವಾದಷ್ಟು ಸರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಅಂತಹ ಅಭ್ಯರ್ಥಿಗಳು ಈ ವಿಂಡೋದಲ್ಲಿ ಹೆಚ್ಚುವರಿ ಶುಲ್ಕದ ಪಾವತಿಯ ಮೇಲೆ ಅನ್ವಯಿಸಿದರೆ, ವಿಷಯಗಳು ಮತ್ತು ಪರೀಕ್ಷೆಗಳನ್ನು ತೆಗೆದುಹಾಕಬಹುದು ಅಥವಾ ಬದಲಾಯಿಸಬಹುದು ಎಂದು ಹೇಳಲಾಗಿದೆ. ಹಾಗಾಗಿ ಶುಲ್ಕದ ಬಗ್ಗೆಯೂ ಗಮನವಿರಲಿ.


ಪ್ರವೇಶ ಪರೀಕ್ಷೆ ದಿನಾಂಕ
ಪ್ರವೇಶ ಪರೀಕ್ಷೆಯು ಮೇ 21 ರಂದು ಪ್ರಾರಂಭವಾಗಲಿದೆ. NTA ಸೂಚನೆಯ ಪ್ರಕಾರ, ಪರೀಕ್ಷೆಯ ಸಿಟಿ ಸ್ಲಿಪ್‌ಗಳನ್ನು ಮೇ 14 ರಂದು ನೀಡಲಾಗುತ್ತದೆ. ಪರೀಕ್ಷೆ ನಡೆಯುವುದಕ್ಕಿಂತ ಮೂರ್ನಾಲ್ಕು ದಿನ ಮುಂಚಿತವಾಗಿ ಪ್ರವೇಶ ಕಾರ್ಡ್​ ನೀಡಲಾಗುತ್ತದೆ.


ಈ ಹಿಂದಿನ ಪರೀಕ್ಷಾ ಮಾಹಿತಿ


ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಮೇ ತಿಂಗಳಲ್ಲಿ CUET UG 2023 ಅನ್ನು ನಡೆಸಲಿದೆ. ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದೆ. ಈ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಸಾಮಾನ್ಯ ವಿಶ್ವವಿದ್ಯಾನಿಲಯ ಪ್ರವೇಶ ಪರೀಕ್ಷೆ ಪದವಿಪೂರ್ವ ಪರೀಕ್ಷೆ 2023 ದಿನಾಂಕವು ಮೇ 21 ರಿಂದ ಮೇ 31, 2023 ರವರೆಗೆ ಇರುತ್ತದೆ. ಈ ಕುರಿತು ಹೆಚ್ಚಿನ ವಿವರಗಳನ್ನು ಇಲ್ಲಿ ನೀಡಿದ್ದೇವೆ ಗಮನಿಸಿ.


ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಸಾಮಾನ್ಯ ವಿಶ್ವವಿದ್ಯಾನಿಲಯದ ಪ್ರವೇಶ ಪರೀಕ್ಷೆ ಪದವಿಪೂರ್ವ 2023ಅನ್ನು ನಡೆಸಲು ಸಿದ್ಧವಾಗಿದೆ. ಅಧಿಕೃತ ವೇಳಾಪಟ್ಟಿಯ ಪ್ರಕಾರ, ಸಿಯುಇಟಿ ಯುಜಿ 2023 ಪರೀಕ್ಷೆಯು ಮೇ 21 ರಿಂದ ಮೇ 31, 2023 ರವರೆಗೆ ನಡೆಯಲಿದೆ. ಹೀಗಿರುವಾಗ ಸಿಯುಇಟಿ ಯುಜಿ ನೋಂದಣಿ ದಿನಾಂಕವನ್ನು ಇಲ್ಲಿಯವರೆಗೆ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಸದ್ಯದಲ್ಲೇ ನೋಂದಣಿ ದಿನಾಂಕವನ್ನು ಪ್ರಕಟಿಸುತ್ತೇವೆ ಎಂಬ ಮಾಹಿತಿ ತಿಳಿದುಬಂದಿದೆ.

top videos


  ನೋಂದಣಿ ಮಾಡಿಕೊಳ್ಳಲು ಜಾಲತಾಣ

   CUET 2023 ನೋಂದಣಿಗಳು ನಾಳೆ ಅಂದರೆ ಶುಕ್ರವಾರ, ಫೆಬ್ರವರಿ 10, 2023 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಬಾರಿ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್- cuet.samarth.ac.inಮೂಲಕ ನೋಂದಾಯಿಸಿಕೊಳ್ಳಬಹುದು

  First published: