• ಹೋಂ
  • »
  • ನ್ಯೂಸ್
  • »
  • Jobs
  • »
  • CUET UG 2023ರ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಸಿಲಬಸ್​ ಮಾಹಿತಿ ಇಲ್ಲಿದೆ ನೋಡಿ

CUET UG 2023ರ ಮಾದರಿ ಪ್ರಶ್ನೆ ಪತ್ರಿಕೆ ಹಾಗೂ ಸಿಲಬಸ್​ ಮಾಹಿತಿ ಇಲ್ಲಿದೆ ನೋಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಪ್ರವೇಶ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ನಡೆಸಲಾಗುತ್ತದೆ. ವಸ್ತುನಿಷ್ಠ ಹಾಗೂ ಬಹು ಆಯ್ಕೆ ಪ್ರಶ್ನೆಗಳನ್ನೂ ಕೂಡಾ ಪರೀಕ್ಷೆಯಲ್ಲಿ (MCQ ಗಳು) ನೀಡಲಾಗುತ್ತದೆ. ಪರೀಕ್ಷೆಯನ್ನು ಎರಡು ಸ್ಲಾಟ್‌ಗಳಲ್ಲಿ ನಡೆಸಲಾಗುತ್ತದೆ. 

  • Share this:

CUET UG 2023 ಗಾಗಿ ನೋಂದಣಿ ಶೀಘ್ರದಲ್ಲೇ ಪ್ರಾರಂಭವಾಗುವುದರಿಂದ ಪರೀಕ್ಷೆಯ (Exam) ಮಾದರಿ ಪ್ರಶ್ನೆ ಪತ್ರಿಕೆ  ಮತ್ತು ಪಠ್ಯಕ್ರಮವನ್ನು ನೀವು ತಿಳಿದಿರುವುದು ಉತ್ತಮ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್​ನಲ್ಲಿ (Website) ಮಾಹಿತಿಯನ್ನು ಪರಿಶೀಲಿಸಬಹುದು. ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಶೀಘ್ರದಲ್ಲೇ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (Entrance Exam), ಪದವಿಪೂರ್ವ (ಸಿಯುಇಟಿ ಯುಜಿ) ಪರೀಕ್ಷೆಯ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಿದೆ ಇದನ್ನು ಮೇ 21 ಮತ್ತು 31 ರ ನಡುವೆ ನಡೆಸಲಾಗುವುದು. ಅಧಿಕೃತ NTA ಕ್ಯಾಲೆಂಡರ್ ಪ್ರಕಾರ CUET-UG 2023 ರ ಫಲಿತಾಂಶಗಳನ್ನು ತಾತ್ಕಾಲಿಕವಾಗಿ ಜೂನ್ 2023 ರ ಮೂರನೇ ವಾರದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. 


ಪ್ರವೇಶ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮೋಡ್‌ನಲ್ಲಿ ನಡೆಸಲಾಗುತ್ತದೆ. ವಸ್ತುನಿಷ್ಠ ಹಾಗೂ ಬಹು ಆಯ್ಕೆ ಪ್ರಶ್ನೆಗಳನ್ನೂ ಕೂಡಾ ಪರೀಕ್ಷೆಯಲ್ಲಿ (MCQ ಗಳು) ನೀಡಲಾಗುತ್ತದೆ. ಪರೀಕ್ಷೆಯನ್ನು ಎರಡು ಸ್ಲಾಟ್‌ಗಳಲ್ಲಿ ನಡೆಸಲಾಗುತ್ತದೆ.


ಇಂಗ್ಲಿಷ್ ಮತ್ತು ಇತರ 12 ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಬಹುದು


ಇಂಗ್ಲಿಷ್ ಮತ್ತು ಇತರ 12 ಭಾರತೀಯ ಭಾಷೆಗಳಲ್ಲಿ ನಡೆಸಲಾಗುತ್ತದೆ - ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು.vವಿಭಾಗ I: ಈ ವಿಭಾಗವನ್ನು ಮತ್ತೆ ಎರಡು ಭಾಗಗಳಾಗಿ ವಿಂಗಡಿಸಲಾಗಿದೆ - IA ಮತ್ತು IB. ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಉರ್ದು, ಅಸ್ಸಾಮಿ, ಬೆಂಗಾಲಿ, ಪಂಜಾಬಿ ಅಥವಾ ಒಡಿಯಾ - ಇಂಗ್ಲಿಷ್ ಅಥವಾ 12 ಭಾರತೀಯ ಭಾಷೆಗಳಲ್ಲಿ ಅಭ್ಯರ್ಥಿಯ ಪ್ರಾವೀಣ್ಯತೆಯನ್ನು IA ಯಲ್ಲಿ ಪರೀಕ್ಷಿಸಲಾಗುತ್ತದೆ.


ಇದನ್ನೂ ಓದಿ: High Court: ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದರೆ, ಬೈದರೆ ಅದು ತಪ್ಪಲ್ಲ: ಬಾಂಬೆ ಹೈಕೋರ್ಟ್


ಪರೀಕ್ಷೆ ಬರೆಯಲು 45 ನಿಮಿಷದ ಕಾಲಾವಧಿಯನ್ನು ನೀಡಲಾಗುತ್ತದೆ. ಬೋಡೋ, ಡೋಗ್ರಿ, ಮೈಥಿಲಿ, ಮಣಿಪುರಿ, ಸಂತಾಲಿ, ಕಾಶ್ಮೀರಿ, ಚೈನೀಸ್, ಜಪಾನೀಸ್, ರಷ್ಯನ್, ಟಿಬೆಟಿಯನ್, ಫ್ರೆಂಚ್, ಸ್ಪ್ಯಾನಿಷ್, ಜರ್ಮನ್, ಇಟಾಲಿಯನ್, ಅರೇಬಿಕ್ ಮತ್ತು ಇತರ ಭಾಷೆಗಳಲ್ಲಿ ಪದವಿಪೂರ್ವ ಹಾಗೂ  ಪದವಿ ಕೋರ್ಸ್​ಗಳನ್ನು ಆಯ್ಕೆ ಮಾಡುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಡೆಸಲಾಗುತ್ತದೆ.
ವಿಭಾಗ II: ಈ ವಿಭಾಗವು ಅಭ್ಯರ್ಥಿಯು ಆಯ್ಕೆಮಾಡುತ್ತಿರುವ ಪದವಿಪೂರ್ವ ವಿಭಾಗಗಳ ವಿಷಯವನ್ನು ಆಧರಿಸಿರುತ್ತದೆ. ಅಕೌಂಟೆನ್ಸಿ/ಬುಕ್ ಕೀಪಿಂಗ್, ಬಯಾಲಜಿ/ಬಯೋಲಾಜಿಕಲ್ ಸ್ಟಡೀಸ್/ಬಯೋಟೆಕ್ನಾಲಜಿ/ಬಯೋಕೆಮಿಸ್ಟ್ರಿ, ಬಿಸಿನೆಸ್ ಸ್ಟಡೀಸ್, ಕೆಮಿಸ್ಟ್ರಿ, ಕಂಪ್ಯೂಟರ್ ಸೈನ್ಸ್/ಇನ್ಫರ್ಮ್ಯಾಟಿಕ್ಸ್ ಪ್ರಾಕ್ಟೀಸಸ್, ಅರ್ಥಶಾಸ್ತ್ರ/ಬಿಸಿನೆಸ್ ಎಕನಾಮಿಕ್ಸ್, ಇಂಜಿನಿಯರಿಂಗ್ ಗ್ರಾಫಿಕ್ಸ್, ಎಂಟ್ರೆಪ್ರೆಪ್ರಿಕ್ಸ್ ಸೇರಿದಂತೆ ಒಟ್ಟು 27 ವಿಷಯಗಳು ಅಭ್ಯರ್ಥಿಗಳಿಗೆ ಆಯ್ಕೆ ಮಾಡಲು ಲಭ್ಯವಿವೆ.


ಭೂವಿಜ್ಞಾನ, ಇತಿಹಾಸ, ಹೋಮ್​ ಸೈನ್ಸ್​, ಜ್ಞಾನ ಸಂಪ್ರದಾಯ ಮತ್ತು ಭಾರತದ ಅಭ್ಯಾಸಗಳು, ಕಾನೂನು ಅಧ್ಯಯನಗಳು, ಪರಿಸರ ವಿಜ್ಞಾನ, ಗಣಿತ, ದೈಹಿಕ ಶಿಕ್ಷಣ/NCC/ಯೋಗ, ಭೌತಶಾಸ್ತ್ರ, ಇತ್ಯಾದಿ. 27 ವಿಷಯಗಳ ಈ ಪಟ್ಟಿಯಿಂದ ಅಭ್ಯರ್ಥಿಗಳು ಆರು ವಿಷಯಗಳನ್ನು ಆಯ್ಕೆ ಮಾಡಬಹುದು.


ಮೈನಸ್​ ಅಂಗದ ಬಗ್ಗೆ ಗಮನವಿರಲಿ


ಮೇಲಿನ ಎರಡೂ ವಿಭಾಗಗಳಲ್ಲಿ ಅಭ್ಯರ್ಥಿಗಳು ತಲಾ 45 ನಿಮಿಷಗಳ ಅವಧಿಯಲ್ಲಿ 50 ರಲ್ಲಿ 40 ಪ್ರಶ್ನೆಗಳನ್ನು ಉತ್ತರಿಸ ಬೇಕಾಗುತ್ತದೆ. ಪ್ರತಿ ಸರಿಯಾದ ಉತ್ತರಕ್ಕೆ ಐದು ಅಂಕಗಳನ್ನು ನೀಡಲಾಗುತ್ತದೆ ಮತ್ತು ಪ್ರತಿ ತಪ್ಪು ಉತ್ತರಕ್ಕೆ ಒಂದು ಅಂಕವನ್ನು ಕಡಿತಗೊಳಿಸಲಾಗುತ್ತದೆ. ಮೈನಸ್​ ಅಂಕ ಇರುವುದರಿಂದ ನೀವು ಜಾಗರೂಕರಾಗಿ ಪರೀಕ್ಷೆ ಬರೆಯಬೇಕಾಗುತ್ತದೆ.


cuet.samarth.ac.in ಈ ಲಿಂಕ್​ ಕ್ಲಿಕ್ ಮಾಡುವ ಮೂಲಕ ನೀವು ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಆಸಕ್ತರು ಹಾಗೂ ಈ ಬಾರಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಈ ಲಿಂಕ್​ ಕ್ಲಿಕ್​ ಮಾಡಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು.

First published: