CUET PG 2023 ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳು ಈಗಾಗಲೇ ಸೂಚನೆಗಳಿಗಾಗಿ ಕಾಯುತ್ತಿರಬಹುದು. ಇನ್ನೇನು ಪರೀಕ್ಷಾ ದಿನಾಂಕ ಕೂಡಾ ಪ್ರಕಟವಾಗಲಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ನಾವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶೀಘ್ರದಲ್ಲೇ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ದಿನಾಂಕವನ್ನು ಪ್ರಕಟಗೊಳಿಸಲು ಸಿದ್ಧವಾಗಿದ್ದು ವಿದ್ಯಾರ್ಥಿಗಳಿಗೆ ಈ ಕುರಿತು ಸೂಚನೆಯನ್ನು ನೀಡುತ್ತಿದೆ.
cuet.nta.nic.in ನಲ್ಲಿ ನೋಂದಣಿ ಪ್ರಾರಂಭವಾಗುತ್ತದೆ. (CUET-PG) 2023 ಪರೀಕ್ಷೆಯ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ — cuet.nta.nic.in ನಲ್ಲಿ ಡೇಟ್‌ಶೀಟ್ ಅನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಅಧಿಕೃತ ಡೇಟ್‌ಶೀಟ್ ಬಿಡುಗಡೆಯಾಗಿಲ್ಲ. ಆದರೂ ಯುಜಿಸಿ ಮುಖ್ಯಸ್ಥ ಎಂ ಜಗದೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಈ ಕುರಿತು ಅಲರ್ಟ್ ಆಗಿರುವಂತೆ ಟ್ವೀಟ್ ಒಂದನ್ನು ಹಂಚಿಕೊಂಡಿದ್ದಾರೆ.
ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ. “ಕೆಲವೇ ದಿನಗಳಲ್ಲಿ, ನಾವು CUET-PG ದಿನಾಂಕದ ಶೀಟ್ಅನ್ನು ಪ್ರಕಟಿಸುತ್ತೇವೆ. ಈ ಬಗ್ಗರ ಎನ್‌ಟಿಎ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.ಎಂದು ಅವರು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: Study Tips: ಗಟ್ಟಿಯಾಗಿ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನ ಇದೆ ನೋಡಿ
ಈ ಹಿಂದೆ, CUET PG 2023 ಪರೀಕ್ಷೆಯನ್ನು ಜೂನ್ 1 ರಿಂದ ಜೂನ್ 10, 2023 ರವರೆಗೆ ನಡೆಸಲಾಗುವುದು ಎಂದು ಕುಮಾರ್ ಘೋಷಿಸಿದ್ದರು. ಅದರ ಫಲಿತಾಂಶಗಳು ಜುಲೈನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂತಿಮ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಲಾಗಿಲ್ಲ, ಆದರೆ ಮುಂದಿನ ತಿಂಗಳೊಳಗೆ ನಿರೀಕ್ಷಿಸಬಹುದು ಎಂದು NTA ಹೇಳಿಕೊಂಡಿದೆ.
ಈ ವರ್ಷ, NTA CUET PG ಯ ಅರ್ಜಿ ಶುಲ್ಕವನ್ನು Rs 200 ರಷ್ಟು ಹೆಚ್ಚಿಸಿದೆ , ಅಂದರೆ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ Rs 1000, ಮತ್ತು OBC-NCL/Gen-EWS ವರ್ಗದ ವಿದ್ಯಾರ್ಥಿಗಳಿಗೆ Rs 800, SC/ ST/ ತೃತೀಯಲಿಂಗಿಗಳಿಗೆ Rs 750, ಮತ್ತು PwBD ಅಭ್ಯರ್ಥಿಗಳಿಗೆ 700 ರೂ. ಇರಲಿದೆ.
In a few days, we will announce the date sheet of CUET-PG. NTA is working on it. https://t.co/6511A38EDk
— Mamidala Jagadesh Kumar (@mamidala90) March 26, 2023
ಇದನ್ನೂ ಓದಿ: Fellowship: ಪ್ರತಿ ತಿಂಗಳೂ ನಿಮಗೆ ಹಣ ಬರಬೇಕಾ? ಹಾಗಾದ್ರೆ ಇದಕ್ಕೆ ಅಪ್ಲೈ ಮಾಡಿ
ವರ್ಷದಿಂದ ವರ್ಷಕ್ಕೆ ಪರೀಕ್ಷ ಶುಲ್ಕದಲ್ಲಿ ಹೆಚ್ಚು ಕಡಿಮೆ ಆಗುತ್ತದೆ. ಈ ವರ್ಷದ ಪರೀಕ್ಷೆಯಲ್ಲಿ ಭಾಗಿಯಾಗುವ ವಿದ್ಯಾರ್ಥಿಗಳು ಅಭ್ಯಾಸ ಆರಂಭಿಸಿ ತಯಾರಿ ನಡೆಸಬೇಕು ಎಂದು ಹೇಳಲಾಗಿದೆ. ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾಲಯಗಳನ್ನು ಈ ಬಾರಿ ಒಳಗೊಳ್ಳಲಾಗಿದೆ ಆ ಕಾರಣದಿಂದ ಶುಲ್ಕವೂ ಹೆಚ್ಚಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ, ಅವರು ವಿಭಿನ್ನ ರೀತಿಯ ವಿಷಯಗಳು ಮತ್ತು ವಿಭಿನ್ನ ನಿರೀಕ್ಷೆಗಳನ್ನು ಹೊಂದಿದ್ದಾರೆ, ಆದ್ದರಿಂದ ನೀವು ಹೆಚ್ಚಿನ ವಿಷಯಗಳನ್ನು ಹೊಂದಿದ್ದರೆ ಸ್ವಾಭಾವಿಕವಾಗಿ ನೀವು ಹೆಚ್ಚಿನ ವೆಚ್ಚವನ್ನು ಎದುರಿಸಬೇಕಾಗುತ್ತದೆ ಎಂದು ಎನ್‌ಟಿಎ ಮುಖ್ಯಸ್ಥ ವಿನೀತ್ ಜೋಶಿ ವಿವರಿಸಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ