• ಹೋಂ
 • »
 • ನ್ಯೂಸ್
 • »
 • Jobs
 • »
 • CUET 2023 ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ, ಪರಿಶೀಲಿಸಲು ಈ ಲಿಂಕ್ ಕ್ಲಿಕ್ ಮಾಡಿ

CUET 2023 ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ, ಪರಿಶೀಲಿಸಲು ಈ ಲಿಂಕ್ ಕ್ಲಿಕ್ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ದೇಶದ 80 ಕೇಂದ್ರ, ರಾಜ್ಯ, ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ(ಸಿಯುಇಟಿ) ನಡೆಸುತ್ತಿದೆ.

 • Share this:
 • published by :

CUET 2023 ಪ್ರಶ್ನೆ ಪತ್ರಿಕೆಗಾಗಿ ಹುಡುಕುತ್ತಿರುವ ಅಭ್ಯರ್ಥಿಗಳು ಇಲ್ಲಿ ನಾವು ನೀಡಿರುವ ಲಿಂಕ್ ಕ್ಲಿಕ್ (Click) ಮಾಡಿ ಪರಿಶೀಲಿಸಬಹುದು. ಈಗಾಗಲೇ ಮಾದರಿ ಪ್ರಶ್ನೆ ಪತ್ರಿಕೆ ಈಗಾಗಲೇ ಪ್ರಕಟವಾಗಿದೆ. ನೀವೂ ಕೂಡಾ ಈಗಲೇ ಇದನ್ನು ಪರಿಶೀಲಿಸಬಹುದು. ಮಾದರಿ  ಪ್ರಶ್ನೆ ಪತ್ರಿಕೆ (Question Paper) ಅಭ್ಯಾಸ ಮಾಡುವುದರಿಂದ ವಿದ್ಯಾರ್ಥಿಗಳಿಗೆ (Students) ಹೆಚ್ಚಿನ  ಅಂಕ ಗಳಿಸಲು ಪ್ರಯೋಜನವಾಗುತ್ತದೆ. ಸಾಧ್ಯವಾದಷ್ಟು ಮಾದರಿ ಪ್ರಶ್ನೆ ಪತ್ರಿಕೆಗಳನ್ನು (Model Quesion Paper) ಬಿಡಿಸಿ ಉತ್ತರಿಸಿದರೆ ಮುಂದಿನ ಪರೀಕ್ಷೆ ಎದುರಿಸಲು ಸುಲಭವಾಗುತ್ತದೆ. 


ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ದೇಶದ 80 ಕೇಂದ್ರ, ರಾಜ್ಯ, ಡೀಮ್ಡ್ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ(ಸಿಯುಇಟಿ) ನಡೆಸುತ್ತಿದೆ. ಈ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು 13 ಭಾಷೆಗಳಲ್ಲಿ ನಡೆಸಲಾಗುತ್ತದೆ. ಈ ವರ್ಷ ಈ ಪರೀಕ್ಷೆಯನ್ನು 21 ರಿಂದ 31 ಮೇ 2023 ರವರೆಗೆ ನಡೆಸಲಾಗುತ್ತದೆ.


ಈ ಪರೀಕ್ಷೆಯ ಪಠ್ಯಕ್ರಮ ಮತ್ತು ಭಾಗವಹಿಸುವ ವಿಶ್ವವಿದ್ಯಾಲಯಗಳ ವಿವರಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ನೋಡಬಹುದು. ಪರೀಕ್ಷೆಯು ನಿಮ್ಮ ಜ್ಞಾನ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ನಿರ್ಣಯಿಸಲು ವಿನ್ಯಾಸಗೊಳಿಸಲಾದ ಪ್ರಶ್ನೆಗಳನ್ನು ಒಳಗೊಂಡಿದೆ. ಈ ರೀತಿಯ ಪ್ರಶ್ನೆಗಳಿಗೆ ಉತ್ತರಿಸಲು ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಮತ್ತು ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯಗಳ ಅಗತ್ಯವಿರುತ್ತದೆ.


ಈ ಪರೀಕ್ಷೆಗೆ ತಯಾರಾಗಲು ವಿಭಿನ್ನ ಕೌಶಲ್ಯಗಳನ್ನು ಪರೀಕ್ಷಿಸುವ ವಿಭಿನ್ನ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಅಭ್ಯಾಸ ಮಾಡುವುದು ಮುಖ್ಯ. ಆಯಾ ವಿಷಯಗಳಲ್ಲಿ ಉತ್ತಮ ಜ್ಞಾನ ಪಡೆಯಲು ಎನ್‌ಸಿಇಆರ್‌ಟಿ ಪುಸ್ತಕಗಳನ್ನು ಅಧ್ಯಯನ ಮಾಡಬೇಕು. ಹಿಂದಿನ ವರ್ಷದ ಪತ್ರಿಕೆಗಳನ್ನೂ ಅಭ್ಯಾಸ ಮಾಡಬೇಕು.


ಇದನ್ನೂ ಓದಿ: Education: ದೇಶದಾದ್ಯಂತ 9 ಸಾವಿರ ಶಾಲೆಗಳಲ್ಲಿ ಆರಂಭವಾಗಲಿದೆ PM SHRI ಯೋಜನೆ!


ಈ ಸಂದರ್ಭದಲ್ಲಿ ನೀವು TOPPER ಕಂಪನಿ ಒದಗಿಸಿದ ಮಾದರಿ ಪೇಪರ್‌ಗಳನ್ನು  ಪರಿಹರಿಸಬೇಕು. CUET 2023 ಪರೀಕ್ಷೆಯನ್ನು ಬರೆಯಲು ಬಯಸುವ ಆಕಾಂಕ್ಷಿಗಳು ಪರೀಕ್ಷೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು CUET 2023 ಮಾದರಿ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ನಾವು ಇಲ್ಲಿ ಪ್ರಶ್ನೆ ಪತ್ರಕೆ ಮಾದರಿ ಲಿಂಕ್​ಅನ್ನು ನೀಡಿದ್ದೇವೆ ಇದನ್ನು ಗಮನಿಸಿ ನೀವು ಪ್ರಶ್ನೆ ಪತ್ರಿಕೆ ಡೌನ್​ಲೋಡ್​ ಮಾಡಬಹುದು. ಇಲ್ಲಿ ಕ್ಲಿಕ್ ಮಾಡಿ


ನೀವು ನಿಮಗೆ ಬೇಕಾದ ವಿಷಯದ ಮಾದರಿ ಪ್ರಶ್ನೆ ಪತ್ರಿಕೆಯನ್ನು ಇಲ್ಲಿ ಡೌನ್​ಲೋಡ್​ ಮಾಡಿಕೊಳ್ಳಬಹುದು.


CUET PG 2023 ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳು ಗಮನಿಸಿ


CUET PG 2023 ಪರೀಕ್ಷೆಯನ್ನು ಬರೆಯುವ ಅಭ್ಯರ್ಥಿಗಳು ಈಗಾಗಲೇ ಸೂಚನೆಗಳಿಗಾಗಿ ಕಾಯುತ್ತಿರಬಹುದು. ಇನ್ನೇನು ಪರೀಕ್ಷಾ ದಿನಾಂಕ ಕೂಡಾ ಪ್ರಕಟವಾಗಲಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳು ನಾವು ಇಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶೀಘ್ರದಲ್ಲೇ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ ದಿನಾಂಕವನ್ನು ಪ್ರಕಟಗೊಳಿಸಲು ಸಿದ್ಧವಾಗಿದ್ದು ವಿದ್ಯಾರ್ಥಿಗಳಿಗೆ ಈ ಕುರಿತು ಸೂಚನೆಯನ್ನು ನೀಡುತ್ತಿದೆ.


ಸದ್ಯದಲ್ಲೇ ನೋಂದಣಿ ಪ್ರಾರಂಭವಾಗುತ್ತದೆ

top videos


  cuet.nta.nic.inನಲ್ಲಿ ನೋಂದಣಿ ಪ್ರಾರಂಭವಾಗುತ್ತದೆ. (CUET-PG) 2023 ಪರೀಕ್ಷೆಯ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ — cuet.nta.nic.in ನಲ್ಲಿ ಡೇಟ್‌ಶೀಟ್ ಅನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ. ಸದ್ಯಕ್ಕೆ ಅಧಿಕೃತ ಡೇಟ್‌ಶೀಟ್ ಬಿಡುಗಡೆಯಾಗಿಲ್ಲ. ಆದರೂ ಯುಜಿಸಿ ಮುಖ್ಯಸ್ಥ ಎಂ ಜಗದೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಈ ಕುರಿತು ಅಲರ್ಟ್​ ಆಗಿರುವಂತೆ ಟ್ವೀಟ್​ ಒಂದನ್ನು ಹಂಚಿಕೊಂಡಿದ್ದಾರೆ.ಪರೀಕ್ಷಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

  First published: