• ಹೋಂ
  • »
  • ನ್ಯೂಸ್
  • »
  • Jobs
  • »
  • Karnataka Education: ಅನಧಿಕೃತ ಶಾಲೆಗಳಿಗೆ ಕಡಿವಾಣ; ಶಿಕ್ಷಣ ಇಲಾಖೆ ಹೊಸ ನಿರ್ಧಾರ

Karnataka Education: ಅನಧಿಕೃತ ಶಾಲೆಗಳಿಗೆ ಕಡಿವಾಣ; ಶಿಕ್ಷಣ ಇಲಾಖೆ ಹೊಸ ನಿರ್ಧಾರ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಶಾಲೆ 45 ದಿನಗಳಿಗೆ ಮುಚ್ಚಬೇಕು. ಈ ಸಂಬಂಧ ವರದಿ ಮೇ 25ರ ಒಳಗೆ ಸಲ್ಲಿಕೆ ಆಗಬೇಕು ಅಂತ ಆದೇಶ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಅನಧಿಕೃತ ಶಾಲೆಗಳಿಗೂ ಇದೇ ಮಾಹಿತಿಯನ್ನು ನೀಡಿದೆ. ಆದಷ್ಟು ಬೇಗ ಇದೆಲ್ಲದಕ್ಕೆ ಪರಿಹಾರ ಸಿಗುವಂತಾಗಬೇಕು ಎಂದಿದೆ.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • Karnataka, India
  • Share this:

ಈಗಾಗಲೇ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಯಾಗಿದೆ. ಶಿಕ್ಷಣ ಒಂದು ಉಧ್ಯಮವಾಗಿ ಬದಲಾಗಿದೆ. ಆದರೆ ಇನ್ನು ಎಷ್ಟೋ ಕಡೆ ಸರ್ಕಾರಿ ಶಾಲೆಗಳಿಗಿಂತ ಹೆಚ್ಚಾಗಿ ಖಾಸಗಿ ಶಾಲೆಗಳೇ (School) ಪ್ರಭಾವ ಬೀರುತ್ತಿದೆ. ಇದೆಲ್ಲವನ್ನು ತಪ್ಪಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಸರಿಯಾದ ರೀತಿಯಲ್ಲಿ ನ್ಯಾಯಯುತ ಶಿಕ್ಷಣ ನೀಡುವ ಸಲುವಾಗಿ ಕೆಲವು ನಿರ್ಧಾರವನ್ನು ಕರ್ನಾಟಕ ಶಿಕ್ಷಣ (Education) ಇಲಾಖೆ ತೆಗೆದುಕೊಂಡಿದೆ. ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕಲು ಮುಂದಾದ ಸಾರ್ವಜನಿಕ ಶಿಕ್ಷಣ ಇಲಾಖೆ (Department)ಹೊಸ ಆದೇಶ ರೂಪಿಸಲು ಸಿದ್ದವಾಗಿದೆ. 


ಎಚ್ಚೆತ್ತ ಶಿಕ್ಷಣ ಇಲಾಖೆ, ಅನಧಿಕೃತ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದೆ ಪೋಷಕರೂ ಸಹ ಇದರ ಬಗ್ಗೆ ಸಹಮತ ಸೂಚಿಸಿದ್ದಾರೆ. ಈ ಸಂಬಂಧ ವಿಸ್ತ್ರತ ವರದಿ ಮಾಡಿ ಇಲಾಖೆಯನ್ನು ಎಚ್ಚರಿಸಲಾಗಿತ್ತು. ಕೊನೆಗೂ ಅಲರ್ಟ್ ಆದ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಉಪ ನಿರ್ದೇಶಕರಿಗೆ ನಿರ್ದೇಶನದ ಮೇರೆಗೆ ಹೊಸ ನಿರ್ಧಾರವನ್ನು ಕೈಗೊಂಡಿದೆ.


ರಾಜ್ಯದಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಶಾಲೆ 45 ದಿನಗಳಿಗೆ ಮುಚ್ಚಬೇಕು. ಈ ಸಂಬಂಧ ವರದಿ ಮೇ 25ರ ಒಳಗೆ ಸಲ್ಲಿಕೆ ಆಗಬೇಕು ಅಂತ ಆದೇಶ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಅನಧಿಕೃತ ಶಾಲೆಗಳಿಗೂ ಇದೇ ಮಾಹಿತಿಯನ್ನು ನೀಡಿದೆ. ಆದಷ್ಟು ಬೇಗ ಇದೆಲ್ಲದಕ್ಕೆ ಪರಿಹಾರ ಸಿಗುವಂತಾಗಬೇಕು ಎಂದಿದೆ.


ಇದನ್ನೂ ಓದಿ: Compulsory Maths: 18 ವರ್ಷ ವಯಸ್ಸಿನ ಎಲ್ಲಾ ವಿದ್ಯಾರ್ಥಿಗಳಿಗೆ ಬ್ರಿಟನ್‌ನಲ್ಲಿ ಗಣಿತ ಕಡ್ಡಾಯ: ರಿಷಿ ಸುನಕ್


ಈ ಹಿಂದೆಯೇ ಅನಧಿಕೃತ ಶಾಳೆಗಳ ಪಟ್ಟಿ ಮಾಡಲಾಗಿದೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಒಂದು ವೇಳೆ ಆದೇಶ ಮೀರಿದ್ರೆ ಜಿಲ್ಲಾ ಉಪ ನಿರ್ದೇಶಕರೇ ನೇರ ಹೊಣೆ ಅಂತ ಖಡಕ್ ಎಚ್ಚರಿಕೆ ನೀಡಿದೆ. ಜಿಲ್ಲಾ ಉಪ ನಿರ್ದೇಶಕರನ್ನೇ ನೇರ ಹೊಣೆ ಮಾಡಲಾಗುವುದು ಅಂತ ವಾರ್ನಿಂಗ್ ಕೂಡಾ ಮಾಡಿದೆ.


ಅನಧಿಕೃತ ಶಾಲೆಗಳು


ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಲೆ ಹಾಕಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ 1316ಖಾಸಗಿ ಶಾಲೆಗಳನ್ನು ಅಧಿಕೃತವಾಗಿ ನಡೆಸಲಾಗುತ್ತಿದೆ. 1316 ಶಾಲೆಗಳ ಪೈಕಿ 63 ಶಾಲಾ ನೋಂದಣಿ ಅನುಮತಿ ಪಡೆಯದೇ ರನ್ ಆಗುತ್ತಿದೆ. , 74 ನೋಂದಣಿ ಇಲ್ಲದೇ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿ ನಡೆಯುತ್ತಿದೆ. 95 ಶಾಲೆಗಳು ರಾಜ್ಯ ಪಠ್ಯಕ್ರಮದ ಅನುಮತಿ ಪಡೆದು ಬೇರೆ ಪಠ್ಯ ಕ್ರಮ ಬೋಧನೆ ಮಾಡುತ್ತಿದೆ ಎಂದು ಈ ಹಿಂದೆಯೇ ವರದಿ ಮಾಲಾಗಿತ್ತು.




294 ಶಾಲೆ ಅನಧಿಕೃತ ಮಾಧ್ಯಮದಲ್ಲಿ ರನ್ ಆಗ್ತಿದೆ. 620 ಶಾಲೆ ಅನಧಿಕೃತ ವಿಭಾಗಗಳನ್ನು ಹೊಂದಿವೆ. 141 ಶಾಲೆ ಅನುಮತಿ ಇಲ್ಲದೇ ಸ್ಥಳಾಂತರ ಮಾಡಿವೆ. 8 ಶಾಲೆಗಳು ಅನುಮತಿ ಇಲ್ಲದೆಯೇ ಹಸ್ತಾಂತರ ಆಗಿವೆ. 21 ಶಾಲೆಗಳು ಕೇಂದ್ರ ಪಠ್ಯ ಕ್ರಮಕ್ಕೆ ಸಂಯೋಜನೆ ಪಡೆದು ಅನಂತರ ಅನಧಿಕೃತವಾಗಿ ಅದೇ ಕಟ್ಟಡದಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ಮುಂದುವರಿಕೆ ಮಾಡುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೊನೆಗೂ ಇಲಾಖೆ ಸೂಚನೆ ನೀಡಿದೆ.


ಅನಧಿಕೃತ ಶಾಲೆಗಳನ್ನು ಮುಚ್ಚಿಸುವಂತೆ ಈ ಹಿಂದೆ ನೀಡಿದ್ದ ಆದೇಶ


ರಾಜ್ಯ ಶಿಕ್ಷಣ ಇಲಾಖೆ ಅನುಮತಿ ನೀಡುವ ಮೊದಲೇ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿಯನ್ನು ಮಾಡಿಕೊಂಡಿವೆ. ಮೇ ಮತ್ತು ಜೂನ್ ತಿಂಗಳಲ್ಲಿ ದಾಖಲಾತಿಯನ್ನು ಮಾಡಿಕೊಂಡಿರುವ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡಿದೆ. ಇದರಿಂದಾಗಿ ಎಚ್ಚೆತ್ತ ಶಿಕ್ಷಣ ಇಲಾಖೆ ಅಧಿಕೃತ ಶಾಲೆಗಳನ್ನು ಸಮೀಪದ ಪೊಲೀಸರಿಗೆ ದೂರು ನೀಡಿ ಮುಚ್ಚಿಸುವಂತೆ ಆದೇಶ ಮಾಡಿತ್ತು.

top videos


    ವರದಿ: ಅಥರ್ವ ರಾಜನ್​

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು