• Home
  • »
  • News
  • »
  • jobs
  • »
  • Kalika Habba: ಶಾಲೆಗಳಲ್ಲಿ ಕಲಿಕಾ ಹಬ್ಬ ಆಯೋಜಿಸಲು ಸಜ್ಜಾಗಿರುವ ಕರ್ನಾಟಕ ಶಿಕ್ಷಣ ಇಲಾಖೆ; ಉದ್ದೇಶ ಹಾಗೂ ಆಚರಣೆಯ ವಿವರಗಳು ಇಲ್ಲಿದೆ

Kalika Habba: ಶಾಲೆಗಳಲ್ಲಿ ಕಲಿಕಾ ಹಬ್ಬ ಆಯೋಜಿಸಲು ಸಜ್ಜಾಗಿರುವ ಕರ್ನಾಟಕ ಶಿಕ್ಷಣ ಇಲಾಖೆ; ಉದ್ದೇಶ ಹಾಗೂ ಆಚರಣೆಯ ವಿವರಗಳು ಇಲ್ಲಿದೆ

ಕಲಿಕಾ ಹಬ್ಬ

ಕಲಿಕಾ ಹಬ್ಬ

ಕಲಿಕಾ ಹಬ್ಬದ ನೋಡಲ್ ಅಧಿಕಾರಿ ಜಿಎನ್ ಮಾತಾಪತಿ ಈ ಸಂದರ್ಭದಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಜಿಲ್ಲಾ ಮಟ್ಟದ ಕಾರ್ಯಾಗಾರಗಳನ್ನು 115 ತಾಲೂಕು ಸಂಪನ್ಮೂಲ ವ್ಯಕ್ತಿಗಳಿಗೆ ಧಾರವಾಡದಲ್ಲಿ ಮೂರು ದಿನಗಳ ಕಾಲ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ

  • Trending Desk
  • Last Updated :
  • Karnataka, India
  • Share this:

ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಸ್ತುತ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ಎಂದು ಘೋಷಿಸಿದ್ದು, ಈ ನಿಟ್ಟಿನಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಕಾ ಹಬ್ಬವನ್ನು ಆಯೋಜಿಸಿದೆ. ಅನ್ವಯಿಕ ಶಿಕ್ಷಣ, (Education) ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಪ್ರಸಾರಗೊಳಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ (Students) ಆತ್ಮವಿಶ್ವಾಸವನ್ನು ಹೆಚ್ಚಿಸುವುದು ಕಲಿಕಾ ಹಬ್ಬದ (Kalika Habba) ಗುರಿಯಾಗಿದೆ ಎಂದು ಇಲಾಖೆ ತಿಳಿಸಿದೆ. ಕಲಿಕೆ ಎಂಬುದು ಮಕ್ಕಳಿಗೆ ಹೊರೆ ಹಾಗೂ ಒತ್ತಡವನ್ನುಂಟು ಮಾಡದೇ ಆನಂದಮಯ ಚಟುವಟಿಕೆಯ (Activity) ರೂಪದಲ್ಲಿರಬೇಕು ಎಂಬುದೇ ಕಲಿಕಾ ಹಬ್ಬದ ಉದ್ದೇಶವಾಗಿದೆ ಎಂದು ಇಲಾಖೆ ತಿಳಿಸಿದೆ.


ಕಲಿಯುವುದನ್ನು ಹೆಚ್ಚು ಆನಂದಮಯ ಚಟುವಟಿಕೆಯನ್ನಾಗಿಸುವುದೇ ಕಲಿಕಾ ಹಬ್ಬದ ಮುಖ್ಯ ಇಂಗಿತವಾಗಿದೆ. ಧಾರವಾಡದಲ್ಲಿರುವ ಶಿಕ್ಷಕರಿಗಾಗಿ ಇಲಾಖೆಯು ಇತ್ತೀಚೆಗೆ ತಾನೇ ಚಟುವಟಿಕೆಗಳಿಂದ ಕೂಡಿದ ರಾಜ್ಯ-ಮಟ್ಟದ ಕಾರ್ಯಾಗಾರವನ್ನು ಆಯೋಜಿಸಿದೆ.


ಜನವರಿ ಮೊದಲ ವಾರದಿಂದ ಕಲಿಕಾ ಹಬ್ಬ ಆರಂಭ


ಕಲಿಕಾ ಹಬ್ಬವು ಜನವರಿ ತಿಂಗಳ ಮೊದಲ ವಾರದಿಂದ ಆರಂಭವಾಗಬಹುದು ಎಂದು ಇಲಾಖೆ ತಿಳಿಸಿದೆ. ರಾಜ್ಯದ 4,103 ಸಮೂಹಗಳು ಹಾಗೂ 35 ಶಿಕ್ಷಣ ಜಿಲ್ಲೆಗಳಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತದೆ. ವಿದ್ಯಾರ್ಥಿಗಳ ನಾಯಕತ್ವದಲ್ಲಿ ಪ್ರತಿಯೊಂದು ಶಾಲೆಗಳಲ್ಲಿ ಕಲಿಕಾ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಅಧಿಕಾರಿ ವರ್ಗ ತಿಳಿಸಿದೆ.


ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವುದು ಕಲಿಕಾ ಹಬ್ಬದ ಉದ್ದೇಶ


ಕೋವಿಡ್-19 ಸಾಂಕ್ರಾಮಿಕವು ಶಾಲೆಗಳಲ್ಲಿ ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರಿದ್ದು ಕಲಿಕಾ ಚೇತರಿಕೆ ಕಾರ್ಯಕ್ರಮದ ಯೋಜನೆಯನ್ನು ಈ ಸಮಸ್ಯೆಯ ನಿವಾರಣೆಗಾಗಿಯೇ ಹಮ್ಮಿಕೊಳ್ಳಲಾಗಿದೆ. ಇದೇ ಕಾರ್ಯಕ್ರಮದ ಭಾಗವಾಗಿ ಕಲಿಕಾ ಹಬ್ಬ ಇದೀಗ ಪ್ರಸ್ತುತಗೊಂಡಿದೆ. ಹಿಂದಿನ ಎರಡು ವರ್ಷಗಳು ಹಾಗೂ ಪ್ರಸ್ತುತ ವರ್ಷದ ಮಹತ್ವದ ಮತ್ತು ನಿರಂತರ ಕಲಿಕಾ ಅಂಶಗಳನ್ನು ಮರುಕಳಿಸುವ ರೀತಿಯಲ್ಲಿ ಚಟುವಟಿಕೆಗಳನ್ನು ವಿನ್ಯಾಸಗೊಳಿಸಲಾಗಿದೆ.


ತರಗತಿಗಳಿಂದ ಈ ಚಟುವಟಿಕೆ ಭಿನ್ನವಾಗಿರುತ್ತದೆ


ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಷಣ್ಮುಖ ಸ್ವಾಮಿ ಕಾಲ್ದಿಮಟ್ ಕಲಿಕಾ ಹಬ್ಬದ ಬಗ್ಗೆ ಅನಿಸಿಕೆಗಳನ್ನು ತಿಳಿಸಿದ್ದು ಕಲಿಕಾ ಹಬ್ಬ ಎಂಬುದು ಶೈಕ್ಷಣಿಕ ಅಂಶಗಳನ್ನೊಳಗೊಂಡಿದ್ದು ತರಗತಿಯೊಳಗಿನ ಕಲಿಕೆಗಿಂತ ಭಿನ್ನವಾಗಿ ಮಕ್ಕಳಲ್ಲಿ ಪ್ರಾಯೋಗಿಕ, ವೈಜ್ಞಾನಿಕ ಹಾಗೂ ಕ್ರಿಯಾತ್ಮಕ ಕಲಿಕೆಯನ್ನು ಅಭಿವೃದ್ಧಿಪಡಿಸುತ್ತದೆ ಎಂದು ತಿಳಿಸಿದ್ದಾರೆ. ಕಲಿಯುವ ಹಬ್ಬ ಇದಾಗಿದ್ದು ಮಕ್ಕಳಲ್ಲಿನ ಕೌಶಲ್ಯವನ್ನು ಸುಧಾರಿಸಲು ಇದು ಸಹಕಾರಿಯಾಗಿದೆ. ಮಕ್ಕಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಹಾಗೂ ಹೊಸ ವಿಷಯಗಳನ್ನು ಅರಿತುಕೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯು ಉತ್ತಮ ವೇದಿಕೆಯನ್ನೊದಗಿಸಿದ್ದು ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Telangana: ಶಾಲೆಗೆ ಬರದ 10ನೇ ಕ್ಲಾಸ್ ವಿದ್ಯಾರ್ಥಿಯ ಮನೆಗೇ ಹೋದ ಶಿಕ್ಷಕ!

ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿ


ಕಲಿಕಾ ಹಬ್ಬದ ನೋಡಲ್ ಅಧಿಕಾರಿ ಜಿಎನ್ ಮಾತಾಪತಿ ಈ ಸಂದರ್ಭದಲ್ಲಿ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಜಿಲ್ಲಾ ಮಟ್ಟದ ಕಾರ್ಯಾಗಾರಗಳನ್ನು 115 ತಾಲೂಕು ಸಂಪನ್ಮೂಲ ವ್ಯಕ್ತಿಗಳಿಗೆ ಧಾರವಾಡದಲ್ಲಿ ಮೂರು ದಿನಗಳ ಕಾಲ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ನಂತರ ಸಂಪನ್ಮೂಲ ವ್ಯಕ್ತಿಗಳು ಬೇರೆ ಬೇರೆ ಬ್ಲಾಕ್‌ಗಳು, ಕ್ಲಸ್ಟರ್‌ಗಳು ಹಾಗೂ ಶಾಲೆಗಳನ್ನು ಸಂಪರ್ಕಿಸುತ್ತಾರೆ. ಕಲಿಕಾ ಹಬ್ಬದ ಭಾಗವಾಗಿ ಚಟುವಟಿಕೆಗಳ ಮೇಲೆ ತರಬೇತಿ ಕೇಂದ್ರೀಕೃತವಾಗಿರುತ್ತದೆ ಎಂದು ತಿಳಿಸಿದ್ದಾರೆ.


ಮಕ್ಕಳ ನಾಯಕತ್ವದಲ್ಲಿ ಕಲಿಕಾ ಹಬ್ಬ ಆಚರಣೆ


ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನದ ಉಪ ಯೋಜನಾ ಸಂಯೋಜಕರಾದ ಎಸ್‌ಎಮ್ ಹುದೇಡ್‌ದಮನಿ ಅನಿಸಿಕೆ ತಿಳಿಸಿದ್ದು ಬೆಳಗಾವಿ ಹಾಗೂ ಕಲಬುರ್ಗಿ ವಿಭಾಗಗಳ ಸಂಪನ್ಮೂಲ ವ್ಯಕ್ತಿಗಳಿಗೆ ಯಶಸ್ವಿಯಾಗಿ ರಾಜ್ಯ ಮಟ್ಟದ ಕಾರ್ಯಾಗಾರಗಳನ್ನು ನವೆಂಬರ್ 23 ರಿಂದ 25 ರವರೆಗೆ ಧಾರವಾಡದಲ್ಲಿ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದಲ್ಲಿ 16 ಜಿಲ್ಲೆಗಳ ಎಂಭತ್ತು ಶಿಕ್ಷಕರಿಗೆ ತರಬೇತಿ ನೀಡಲಾಯಿತು. ವಿದ್ಯಾರ್ಥಿಗಳ ನಾಯಕತ್ವದಲ್ಲಿ ಕಾರ್ಯಕ್ರಮ ನಡೆಯುವುದರಿಂದ ಶಿಕ್ಷಕರು ಈ ಕಾರ್ಯಾಗಾರದಲ್ಲಿ ಅತಿಥಿಗಳಾಗಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ವೇದಿಕೆಗಳಲ್ಲಿ ಆಸೀನರಾಗಿರುವುದರಿಂದ ನಾಯಕತ್ವ ಗುಣಗಳ ಬಗ್ಗೆ ಅವರು ಇನ್ನಷ್ಟು ತಿಳಿದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.


First published: