ಬೆಂಗಳೂರು: ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಲು ಅಗತ್ಯವಾಗಿರುವ, ಗುಣಮಟ್ಟದಶಿಕ್ಷಣವನ್ನುನೀಡುವ ಉದ್ದೇಶದಿಂದ 2020 ರಲ್ಲಿ ನಮ್ಮ ಕೇಂದ್ರ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ (Education) ನೀತಿ-2020 ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದು ಗೊತ್ತೇ ಇದೆ. ಐದನೇ ತರಗತಿಯವರೆಗೂ ಮಾತೃ ಭಾಷೆಯಲ್ಲಿ ಶಿಕ್ಷಣ, ಮೌಲ್ಯಮಾಪನ ಮತ್ತು ಪರೀಕ್ಷಾ ಮಾನದಂಡಗಳ ಸುಧಾರಣೆ, ತ್ರಿ ಭಾಷಾ ಸೂತ್ರ ಅಳವಡಿಕೆ, ಖಾಸಗಿ (Private) ಹಾಗೂ ಸಾರ್ವಜನಿಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಒಂದೇ ರೀತಿಯ ನಿಯಮಗಳ ಅನ್ವಯ ಹಾಗೂ ನಾಲ್ಕು ವರ್ಷದ ಪದವಿ ಸೇರಿದಂತೆ ಹಲವು ಉತ್ತಮ ವಿಷಯಗಳನ್ನು (Subject) ಇದರಲ್ಲಿ ಪ್ರಸ್ತಾಪಿಸಲಾಗಿತ್ತು.
ಇದೀಗ ರಾಷ್ಟ್ರೀಯ ಶಿಕ್ಷಣ ನೀತಿಯ ಜಾರಿಯ ನಂತರದ (NEP) ವಿದ್ಯಾರ್ಥಿಗಳ ಮೊದಲ ಬ್ಯಾಚ್ ಶೀಘ್ರದಲ್ಲೇ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ.
ಈ ಹಿನ್ನೆಲೆಯಲ್ಲಿ ಯಾವುದೇ ಪದವಿ ಕಾಲೇಜುಗಳು ನಾಲ್ಕನೇ ವರ್ಷದ ಪದವಿ ಕಾರ್ಯಕ್ರಮವನ್ನು ನೀಡಲು ಇಚ್ಚಿಸಿದಲ್ಲಿ, ಸಂಬಂಧಪಟ್ಟ ವಿಶ್ವವಿದ್ಯಾಲಯಗಳೊಂದಿಗೆ ತಮ್ಮ ಒಪ್ಪಿಗೆಯನ್ನು ವಿಸ್ತರಿಸಿಕೊಳ್ಳಬೇಕಾಗುತ್ತದೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು (ಕೆಎಸ್‌ಹೆಚ್‌ಇಸಿ) ಶೀಘ್ರದಲ್ಲೇ ಈ ಬಗ್ಗೆ ಸುತ್ತೋಲೆ ಹೊರಡಿಸುವ ನಿರೀಕ್ಷೆಯಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ, ವಿದ್ಯಾರ್ಥಿಗಳು ನಾಲ್ಕು ವರ್ಷಗಳನ್ನು ಪೂರ್ಣಗೊಳಿಸಿದರೆ ಪದವಿ ಪಡೆಯಬಹುದು. ಆದರೆ, ವಿದ್ಯಾರ್ಥಿಗಳು ಕೇವಲ ಮೂರು ವರ್ಷಗಳಿಗೆ ತಮ್ಮ ಪದವಿಯನ್ನು ಸೀಮಿತಗೊಳಿಸಿಕೊಳ್ಳುವ ಆಯ್ಕೆಯನ್ನು ಸಹ ನೀಡಲಾಗಿದೆ.
ಯಾವುದೇ ಕಾಲೇಜು ನಾಲ್ಕು ವರ್ಷದ ಪದವಿ ನೀಡಲು ಬಯಸಿದರೆ ತನ್ನಲ್ಲಿರುವ ಮೂಲಸೌಕರ್ಯ, ಅಧ್ಯಾಪಕರು ಮತ್ತು ಇತರ ಸೌಲಭ್ಯಗಳನ್ನು ತೋರಿಸಿ ಆ ಮೂಲಕ ವಿಶ್ವವಿದ್ಯಾನಿಲಯದೊಡನೆ ತನ್ನ ಒಪ್ಪಂದನ್ನು ವಿಸ್ತರಿಸಿಕೊಳ್ಳಬೇಕಾಗುತ್ತದೆ.
ಮುಂದಿನ ವರ್ಷದೊಳಗೆ ಸಂಯೋಜನೆ ಮಾಡಿಕೊಳ್ಳಲು ಗಡುವು
ಕಾಲೇಜುಗಳು ನಾಲ್ಕು ವರ್ಷದ ಪದವಿಯನ್ನು ನೀಡಲು ಬಯಸಿದರೆ ಮುಂದಿನ ವರ್ಷವೇ ಸಂಯೋಜಿತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕಾಗುತ್ತದೆ.
ನಾಲ್ಕು ವರ್ಷಗಳ ಪದವಿ ಜಾಗತಿಕವಾಗಿ ಸ್ವೀಕರವಾಗಿರುವ ಮಾದರಿಯಾಗಿರುವುದರಿಂದ ಮತ್ತು ಎನ್‌ಇಪಿಯ ಮೂಲ ಕಲ್ಪನೆಯೂ ಆಗಿರುವುದರಿಂದ, ನಾಲ್ಕು ವರ್ಷಗಳ ಸ್ವರೂಪವನ್ನು ಆಯ್ಕೆ ಮಾಡಲು ನಾವು ಕಾಲೇಜುಗಳಿಗೆ ಶಿಫಾರಸ್ಸು ಮಾಡುತ್ತೇವೆ” ಎಂದು ಸಲಹೆಗಾರ ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ (ಕೆಎಸ್‌ಹೆಚ್‌ಇಸಿ) ಮಾಜಿ ಉಪಾಧ್ಯಕ್ಷ ತಿಮ್ಮೇಗೌಡ ಬಿ ಹೇಳಿದ್ದಾರೆ.
ಇದನ್ನೂ ಓದಿ: Education System: ಫಿನ್‌ಲ್ಯಾಂಡ್ ಎಂಬ ಪುಟಾಣಿ ದೇಶದ ಶಿಕ್ಷಣ ವ್ಯವಸ್ಥೆ ಹೇಗಿದೆ ನೋಡಿ
"ಕೆಲವು ಕಾಲೇಜುಗಳು ಮೂರು ವರ್ಷಗಳ ಪದವಿ ಮತ್ತು ಇನ್ನಿತರ ಕಾಲೇಜುಗಳ ನಾಲ್ಕು ವರ್ಷಗಳ ಪದವಿ ಆಯ್ಕೆಯನ್ನು ನೀಡಿದರೆ, ವಿದ್ಯಾರ್ಥಿಗಳು ನಾಲ್ಕು ವರ್ಷಗಳ ಕಾಲೇಜಿಗೆ ಆದ್ಯತೆ ನೀಡಬಹುದು. ಹಾಗಾಗಿ, ಕಾಲೇಜುಗಳು ಒಪ್ಪಂದವನ್ನು ವಿಸ್ತರಿಸಿಕೊಳ್ಳುವುದು ಸೂಕ್ತ” ಎಂದು ಅವರು ಹೇಳಿದ್ದಾರೆ.
ಪಿಹೆಚ್ ಡಿ ಪಡೆಯಲು ಸ್ನಾತಕೋತ್ತರ ಪದವಿಯ ಅಗತ್ಯವಿಲ್ಲ
ಹೌದು, ನಾಲ್ಕು ವರ್ಷಗಳ ಪದವಿಯನ್ನು ಸಂಶೋಧನಾ ಘಟಕದೊಂದಿಗೆ ಅಥವಾ ಅದಿಲ್ಲದೆಯೇ ನೀಡಬಹುದು. ನಾಲ್ಕನೇ ವರ್ಷದ ಪದವಿಯನ್ನು ಸಂಶೋಧನೆಯ ಘಟಕದೊಂದಿಗೆ ನೀಡಿದರೆ, ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆಯದೆಯೇ ಇಲ್ಲದೆ ಪಿಎಚ್‌ಡಿ ಮಾಡಬಹುದು
ಕಾಲೇಜು ಸಂಶೋಧನಾ ಘಟಕದೊಂದಿಗೆ ಕಾರ್ಯಕ್ರಮವನ್ನು ನೀಡಲು ಬಯಸಿದರೆ, ಅದಕ್ಕೆ ಪದವಿಪೂರ್ವ ಹಂತದಲ್ಲಿ ಇಬ್ಬರು ಪಿಎಚ್‌ಡಿ-ಮಾನ್ಯತೆ ಪಡೆದ ಮಾರ್ಗದರ್ಶಿಗಳ ಅಗತ್ಯವಿರುತ್ತದೆ.
ಇಲ್ಲದಿದ್ದರೆ, ನಾಲ್ಕನೇ ವರ್ಷಕ್ಕೆ ಪದವಿಯನ್ನು ಮುಂದುವರಿಸಲು ಬಯಸುವ ವಿದ್ಯಾರ್ಥಿಗಳನ್ನು ನಾಲ್ಕನೇ ವರ್ಷದ ಪದವಿ ನೀಡಲು ಅನುಮತಿ ಪಡೆದಿರುವ ವಿಶ್ವವಿದ್ಯಾಲಯ ಅಥವಾ ಕಾಲೇಜಿಗೆ ಸ್ಥಳಾಂತರಿಸಬೇಕಾಗುತ್ತದೆ. ಪ್ರಸ್ತುತ, ಅಧ್ಯಯನ ಮಂಡಳಿ ಮತ್ತು 40 ಉಪ ಸಮಿತಿಗಳು ಐದನೇ, ಆರನೇ, ಏಳನೇ ಮತ್ತು ಎಂಟನೇ ಸೆಮಿಸ್ಟರ್‌ಗಳಿಗೆ ಪಠ್ಯಕ್ರಮವನ್ನು ಸಿದ್ಧಪಡಿಸುತ್ತಿವೆ. ಒಟ್ಟಿನಲ್ಲಿ ಈ ಹಿಂದೆ ಇದ್ದಂತಹ ಶಿಕ್ಷಣ ಕ್ರಮದ ವ್ಯವಸ್ಥೆಯಲ್ಲಿ ಈಗಿನ ದಿನಮಾನಗಳಲ್ಲಿ ಸಾಕಷ್ಟು ಬದಲಾವಣೆ ಆಗುವುದನ್ನು ಗಮನಿಸಬಹುದಾಗದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ