• ಹೋಂ
 • »
 • ನ್ಯೂಸ್
 • »
 • Jobs
 • »
 • ChatGPT ಬಳಕೆಗೆ ಕಡಿವಾಣ ಹಾಕಲು ಮುಂದಾದ ಬೆಂಗಳೂರಿನ ಕಾಲೇಜುಗಳು

ChatGPT ಬಳಕೆಗೆ ಕಡಿವಾಣ ಹಾಕಲು ಮುಂದಾದ ಬೆಂಗಳೂರಿನ ಕಾಲೇಜುಗಳು

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಋಣಾತ್ಮಕ ಲಾಭಗಳನ್ನು ಆಧರಿಸಿ ಬೆಂಗಳೂರಿನ ಕೆಲ ಕಾಲೇಜುಗಳು ಈ ಚಾಟ್‌ಜಿಪಿಟಿಯ ಮೇಲೆ ನಿಷೇಧ ಹೇರಿವೆ. ಅಮೇರಿಕಾದಲ್ಲಿ ಕಾನೂನು ಮತ್ತು ವೈದ್ಯಕೀಯ ಪರವಾನಗಿ ಪರೀಕ್ಷೆಯನ್ನು ಚಾಟ್‌ಜಿಪಿಟಿ ಬರೆದು ಉತ್ತೀರ್ಣವಾಗಿದೆ. ಈ ಎಲ್ಲಾ ವಿಚಾರಗಳಿಂದ ಚಿಂತಿತವಾಗಿರುವ ಬೆಂಗಳೂರಿನ ಕೆಲ ಕಾಲೇಜುಗಳು ವಿದ್ಯಾರ್ಥಿಗಳಿಗೆ ಇದರ ಬಳಕೆ ಮಾಡದಂತೆ ಆದೇಶಿಸಿವೆ.

ಮುಂದೆ ಓದಿ ...
 • News18 Kannada
 • 5-MIN READ
 • Last Updated :
 • Karnataka, India
 • Share this:

ಚಾಟ್‌ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸಂಶೋಧನಾ ಕಂಪನಿ ಓಪನ್‌ಎಐ ಅಭಿವೃದ್ಧಿಪಡಿಸಿದ AI-ಚಾಲಿತ ಚಾಟ್‌ಬಾಟ್ ಸದ್ಯ ಟೆಕ್‌ ವಲಯದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡುತ್ತಿದ್ದು, ಚಾಟ್‌ ಜಿಪಿಟಿಯ (ChatGPT) ಪ್ರಯೋಜನದ ಜೊತೆ ಜೊತೆಯೇ ಅದರ ವಿರುದ್ಧ ಅಪಸ್ವರ ಸಹ ಕೇಳಿಬರುತ್ತಿದೆ. ಗೂಗಲ್‌ ಸರ್ಚ್‌ (Google Serach) ಅನ್ನೇ ಹಿಂದಿಕ್ಕಿ ಓಡುತ್ತಿರುವ ಚಾಟ್‌ಜಿಪಿಟಿ ಈಗ ಎಲ್ಲ ವಲಯದಲ್ಲೂ ಬಳಕೆ ಆಗುತ್ತಿದೆ. ಕಾಲೇಜು ವಿದ್ಯಾರ್ಥಿಗಳಂತೂ (College Students) ಈ ಸೇವೆಯ ಹೆಚ್ಚು ಲಾಭಪಡೆದುಕೊಳ್ಳುತ್ತಿದ್ದಾರೆ. ಚಾಟ್‌ ಜಿಪಿಟಿ ಅನ್ನು ಪ್ರಶ್ನೆಗಳಿಗೆ ಉತ್ತರಿಸಲು, ವರದಿಗಳನ್ನು ಬರೆಯಲು, ಕವನಗಳನ್ನು ಬರೆಯಲು ವಿದ್ಯಾರ್ಥಿಗಳು ತಮ್ಮ ಶಿಕ್ಷಣದ (Education) ಒಂದು ಭಾಗವಾಗಿ ಬಳಸುತ್ತಿದ್ದಾರೆ.


ಚಾಟ್‌ಜಿಪಿಟಿ ಬಳಸದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ
ಚಾಟ್‌ಜಿಪಿಟಿಯ ಹೆಚ್ಚಿನ ಬಳಕೆ ಸಾಂಪ್ರದಾಯಿಕ ಶಾಲಾ ಶಿಕ್ಷಣಕ್ಕೆ ತೊಂದರೆ ಉಂಟುಮಾಡಬಹುದು ಎಂದು ಅಭಿಪ್ರಾಯ ಪಟ್ಟಿರುವ ಕಾಲೇಜು, ಶಿಕ್ಷಣ ಸಂಸ್ಥೆಗಳು ಈ ಸೇವೆಯ ಬಳಕೆಗೆ ಕಡಿವಾಣ ಹಾಕಲು ನಿರ್ಧಾರ ಮಾಡಿವೆ.


ಹೌದು, ಋಣಾತ್ಮಕ ಲಾಭಗಳನ್ನು ಆಧರಿಸಿ ಬೆಂಗಳೂರಿನ ಕೆಲ ಕಾಲೇಜುಗಳು ಈ ಚಾಟ್‌ಜಿಪಿಟಿಯ ಮೇಲೆ ನಿಷೇಧ ಹೇರಿವೆ. ಅಮೇರಿಕಾದಲ್ಲಿ ಕಾನೂನು ಮತ್ತು ವೈದ್ಯಕೀಯ ಪರವಾನಗಿ ಪರೀಕ್ಷೆಯನ್ನು ಚಾಟ್‌ಜಿಪಿಟಿ ಬರೆದು ಉತ್ತೀರ್ಣವಾಗಿದೆ. ಈ ಎಲ್ಲಾ ವಿಚಾರಗಳಿಂದ ಚಿಂತಿತವಾಗಿರುವ ಬೆಂಗಳೂರಿನ ಕೆಲ ಕಾಲೇಜುಗಳು ವಿದ್ಯಾರ್ಥಿಗಳಿಗೆ ಇದರ ಬಳಕೆ ಮಾಡದಂತೆ ಆದೇಶಿಸಿವೆ.


ಆರ್‌ವಿ ಕಾಲೇಜಿನಲ್ಲಿ ಚಾಟ್‌ಜಿಪಿಟಿ ಬಳಕೆಗೆ ಕಡಿವಾಣ
ಬೆಂಗಳೂರಿನ ಆರ್‌ವಿ ವಿಶ್ವವಿದ್ಯಾನಿಲಯದ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ಶಾಲೆಯ ಡೀನ್ ಸಂಜಯ್ ಚಿಟ್ನಿಸ್, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಸಲಹೆಯನ್ನು ನೀಡಿದ್ದು, ಕೃತಕ ಬುದ್ಧಿಮತ್ತೆ (AI) ಏಜೆಂಟ್‌ಗಳಾದ ChatGPT, Github Copilot ಮತ್ತು Blackbox ಅನ್ನು ಮೂಲ ಸಲ್ಲಿಕೆ ಸಂದರ್ಭದಲ್ಲಿ ಬಳಸಬಾರದು ಎಂದು ಹೇಳಿದ್ದಾರೆ. RV ವಿಶ್ವವಿದ್ಯಾನಿಲಯದಲ್ಲಿ ಈ ನೀತಿಯು ಜನವರಿ 1 ರಿಂದ ಜಾರಿಗೆ ಬಂದಿದೆ.


ಲ್ಯಾಬ್ ಮತ್ತು ಟ್ಯುಟೋರಿಯಲ್ ಅವಧಿಗಳಲ್ಲಿ ವಿಶ್ವವಿದ್ಯಾನಿಲಯವು ಚಾಟ್‌ಜಿಪಿಟಿ ಬಳಸಲು ನಿರ್ಬಂಧ ಹೇರಿದೆ. ಕಾಲೇಜಿನ ಆದೇಶದ ವಿರುದ್ಧವೂ ಬಳಕೆ ಮಾಡಿದ್ದಲ್ಲಿ ವಿಶ್ವವಿದ್ಯಾಲಯವು ಶಿಸ್ತು ಕ್ರಮವನ್ನು ತೆಗೆದುಕೊಳ್ಳುವುದಾಗಿ ತಿಳಿಸಿದೆ.


ಇದನ್ನೂ ಓದಿ: Amit Shah: ವಿದ್ಯಾ ಕಾಶಿಗೆ ಆಗಮಿಸಿದ ಅಮಿತ್​ ಶಾ, ಶಿಕ್ಷಣ ಕ್ಷೇತ್ರಕ್ಕೆ ಕೇಂದ್ರದಿಂದ ಭಾರಿ ಕೊಡುಗೆ


ಐಐಟಿ-ಬೆಂಗಳೂರಿನಲ್ಲಿ ಸಮಿತಿ ರಚನೆ
ಬೆಂಗಳೂರಿನ ಮತ್ತೊಂದು ಶಿಕ್ಷಣ ಸಂಸ್ಥೆ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು (IIIT-B) ಚಾಟ್‌ಜಿಪಿಟಿ ಅನ್ನು ಬಳಸುವ ಬಗ್ಗೆ ರಚನಾತ್ಮಕ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಸಮಿತಿಯನ್ನು ರಚಿಸಿದೆ.
IIIT-B ಯ ನಿರ್ದೇಶಕರಾದ ದೇಬಬ್ರತ ದಾಸ್, ಚಾಟ್‌ಜಿಪಿಟಿ ತುಂಬಾ ಸಾಮಾನ್ಯವಾಗಿದೆ ಮತ್ತು ವಾಡಿಕೆಯ ದಾಖಲೆ, ಸರಳ ಪ್ರೋಗ್ರಾಮಿಂಗ್ ಇತ್ಯಾದಿಗಳನ್ನು ಬರೆಯಲು ಉಪಯುಕ್ತವಾಗಿದೆ ಎಂದು ಹೇಳಿದರು. "ನಮ್ಮ ಕೆಲವು ಕಾರ್ಯಯೋಜನೆಯು ಆಳವಾದ ತಂತ್ರಜ್ಞಾನವಾಗಿದೆ, ಅಲ್ಲಿ ಚಾಟ್‌ಜಿಪಿಟಿ ಸಹಾಯಕವಾಗುವುದಿಲ್ಲ. ಆದರೆ ನಾವು ಕೃತಿಚೌರ್ಯದ ಬಗ್ಗೆ ಯೋಚಿಸಬೇಕಾಗಿದೆ. ತಾಂತ್ರಿಕವಲ್ಲದ ವಿಷಯಗಳಲ್ಲಿ ಇದು ಅನ್ವಯಿಸುತ್ತದೆ. ಹೀಗಾಗಿ ಸಮಿತಿಯು ಚಾಟ್‌ಜಿಪಿಟಿ ಗೆ ಸಂಬಂಧಿಸಿದ ಕೆಲ ನಿಯಮಗಳ ಪಟ್ಟಿಯನ್ನು ಶೀಘ್ರದಲ್ಲೇ ರಚಿಸುತ್ತದೆ" ಎಂದು ಅವರು ತಿಳಿಸಿದರು.
"ಚಾಟ್‌ಜಿಟಿಪಿಯಿಂದ ಉಂಟಾಗುವ ಸವಾಲನ್ನು ತಪ್ಪಿಸಲು ಕ್ರಮ"
ದಯಾನಂದ ಸಾಗರ್ ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಎನ್.ಬಾಲಸುಬ್ರಹ್ಮಣ್ಯ ಮೂರ್ತಿ ಮಾತನಾಡಿ, ಚಾಟ್‌ಜಿಪಿಟಿಯಿಂದ ಎದುರಾಗುವ ಸವಾಲನ್ನು ತಪ್ಪಿಸಲು, ಸಾಧ್ಯವಾದಷ್ಟು ತಾಂತ್ರಿಕ ಮತ್ತು ಗಣಿತದ ಕಾರ್ಯಯೋಜನೆಗಳನ್ನು ಮಾಡುವುದಾಗಿ ಹೇಳಿದರು.


ಇನ್ನೂ ಕ್ರೈಸ್ಟ್ ವಿಶ್ವವಿದ್ಯಾಲಯದ ಉಪಕುಲಪತಿ ಅಬ್ರಹಾಂ ವಿ, ವಿಭಾಗಗಳ ಮುಖ್ಯಸ್ಥರೊಂದಿಗಿನ ಸಭೆ ನಡೆಸಿ ಇನ್ನು ಮುಂದೆ ಮೌಲ್ಯಮಾಪನಕ್ಕಾಗಿ ಚಾಟ್‌ಜಿಪಿಟಿ ಕಾರ್ಯಯೋಜನೆಗಳನ್ನು ಪರಿಗಣಿಸಬಾರದು ಎಂದು ಹೇಳಿದ್ದಾರೆ. "ಮೌಲ್ಯಮಾಪನಕ್ಕಾಗಿ ಕಾರ್ಯಯೋಜನೆಗಳನ್ನು ಪರಿಗಣಿಸಬೇಕಾದರೆ, ತರಗತಿಯ ಸಮಯದಲ್ಲಿ ವಿದ್ಯಾರ್ಥಿಗಳನ್ನು ಅದರ ಮೇಲೆ ಕೆಲಸ ಮಾಡಿರಬೇಕು" ಎಂದು ಆದೇಶಿಸಿದ್ದಾರೆ.


ಚಾಟ್‌ಜಿಪಿಟಿ
ನವೆಂಬರ್‌ನಲ್ಲಿ ಪ್ರಾರಂಭವಾದ ಚಾಟ್‌ಜಿಪಿಟಿ , ಇಮೇಲ್‌ಗಳು ಮತ್ತು ಪ್ರಬಂಧಗಳನ್ನು ಬರೆಯಲು, ಕವನ ಬರೆಯಲು, ಪ್ರಶ್ನೆಗಳಿಗೆ ಉತ್ತರಿಸಲು, ಭಾಷಾ ಅನುವಾದ, ಪಠ್ಯ ಸಾರೀಕರಣದಂತಹ ವಿವಿಧ ಕೆಲಸದಲ್ಲಿ ಬಳಕೆದಾರರ ಎಲ್ಲಾ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ಈ ಚಾಟ್‌ಜಿಪಿಟಿ ನೀಡುತ್ತದೆ. ನಿಖರವಾದ ಉತ್ತರ ನೀಡುವುದರಿಂದ ಇದರ ಬಳಕೆ ಎಲ್ಲೆಡೆ ಹೆಚ್ಚಿದೆ ಮತ್ತು ಟೆಕ್‌ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.

First published: