ಕೊಯಮತ್ತೂರಿನ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಮಕ್ಕಳನ್ನು (Students) ಶಾಲೆಗೆ ಕರೆದೊಯ್ಯಲು ಎನ್ಜಿಒ ಸಂಘಟನೆಯೊಂದಿಗೆ ಕೆಲಸ ಮಾಡುತ್ತಿರುವ ಕಾಲೇಜು ವಿದ್ಯಾರ್ಥಿಗಳ ಗುಂಪು ಕಾರನ್ನು ಕೊಡುಗೆಯಾಗಿ ನೀಡಿದೆ. ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಆನೈಕಟ್ಟಿ ಬೆಟ್ಟದ ಕುಗ್ರಾಮದಲ್ಲಿ, ಸುತ್ತಮುತ್ತಲಿನ ಗುಡ್ಡಗಾಡು ಹಳ್ಳಿಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ಖಾಸಗಿ ಟ್ರಸ್ಟ್ನಿಂದ ಶಾಲೆಯನ್ನು ತೆರೆಯಲಾಗಿದೆ. ಈ ಶಾಲೆಯಲ್ಲಿ (School) ಓದುತ್ತಿರುವ ಮಕ್ಕಳಿಗೆ (Students) ಸರಿಯಾದ ಸಾರಿಗೆ ಸೌಲಭ್ಯಗಳಿಲ್ಲ. ಇದರ ಪರಿಣಾಮವಾಗಿ, ರೋಟರಾಕ್ಟ್ ಕ್ಲಬ್ ಆಫ್ ಕೊಯಮತ್ತೂರಿನ ಕಾಲೇಜು (College) ವಿದ್ಯಾರ್ಥಿಗಳು ಸಂಸ್ಥೆಗೆ ಕಾರನ್ನು ಕೊಡುಗೆಯಾಗಿ ನೀಡಿದ್ದಾರೆ.
ಸಂತೋಷಪಟ್ಟ ಸ್ಥಳೀಯರು ಹೇಳಿದ್ದೇನು?
ಈ ಬಗ್ಗೆ ಮಾತನಾಡಿದ ಸ್ಥಳೀಯರು ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಕಾಲೇಜು ವಿದ್ಯಾರ್ಥಿಗಳು ವಾಹನ ವ್ಯವಸ್ಥೆ ಮಾಡಿದ್ದಾರೆ. ಇದು ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗಿದೆ. ಇಲ್ಲಿ ಯಾವುದೇ ವಾಹನ ವ್ಯವಸ್ಥೆ ಇಲ್ಲ. ಹಾಗಾಗಿ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಶಾಲೆಗೆ ಹೋಗಿ ಬಂದು ಮಾಡಲು ತುಂಬಾ ತೊಂದರೆ ಉಂಟಾಗುತ್ತಿತ್ತು. ಆದರೆ ಈ ವಿದ್ಯಾರ್ಥಿಗಳು ಕಲ್ಪಿಸಿದ ಕಾರಿನ ಸೌಕರ್ಯ ಪ್ರತಿಯೊಂದು ವಿದ್ಯಾರ್ಥಿಗಳಿಗೂ ತುಂಬಾ ಪ್ರಯೋಜನವಾಗಿದೆ ಎಂದು ಹೇಳಿದ್ದಾರೆ.
100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಉಚಿತ ಸಂಚಾರ ವ್ಯವಸ್ಥೆ
ಹೌದು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವಿದ್ಯಾರ್ಥಿಗಳನ್ನು ಅವರ ಮನೆಗಳಿಗೆ ಕರೆದೊಯ್ಯಲು ಮತ್ತು ಹಿಂದಿರುಗಿಸಲು ಕಾರ್ ಅನ್ನು ಒದಗಿಸಲಾಗಿದೆ. ಆನೈಕಟ್ಟಿ ಬೆಟ್ಟದ ಕುಗ್ರಾಮ ಮತ್ತು ಸುತ್ತಮುತ್ತಲಿನ ಕನಿಷ್ಠ 100 ಮಕ್ಕಳು ಉಚಿತ ಸೇವೆಯ ಮೂಲಕ ಪ್ರಯೋಜನ ಪಡೆದು ಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: NEP 2020ರ ಬಗ್ಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ ಮಹತ್ವದ ಮಾಹಿತಿ ಇಲ್ಲಿದೆ
ರೋಟರಾಕ್ಟ್ ವಿದ್ಯಾರ್ಥಿಗಳ ಪ್ರಕಾರ ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣವನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಈ ಪ್ರಯತ್ನ ಮಾಡಲಾಗಿದೆ. 3.5 ಲಕ್ಷ ವೆಚ್ಚದಲ್ಲಿ ಈ ಕಾರನ್ನು ಖರೀದಿಸಲಾಗಿದ್ದು, ಮಕ್ಕಳನ್ನು ಶಾಲೆಗೆ ಸಾಗಿಸುವುದು ಮಾತ್ರವಲ್ಲದೆ ಶನಿವಾರ ಮತ್ತು ಭಾನುವಾರದಂದು ರಕ್ತದಾನ ಶಿಬಿರ ಸೇರಿದಂತೆ ವಿವಿಧ ಶಿಬಿರಗಳಿಗೆ ಈ ವಾಹನವನ್ನು ಬಳಸಲಾಗುವುದು ಎಂದು ತಿಳಿಸಿದ್ದಾರೆ.
ಬೆಲೆ ಬಾಳು ಈ ಕಾರ್ ಕೊಳ್ಳಲು ಇವರು ಮಾಡಿದ್ದೇನು?
ಈ ರೀತಿ ಅಂದರೆ ಮೂರು ಲಕ್ಷಕ್ಕೂ ಅಧಿಕ ಬೆಲೆ ಬಾಳು ಈ ಕಾರ್ ಕೊಳ್ಳಲು ವಿದ್ಯಾರ್ಥಿಗಳಿಗೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ನಿಮಗೆ ಎದುರಾದರೆ ಅದಕ್ಕೆ ಉತ್ತರ ಇಲ್ಲಿದೆ. ಸ್ವಯಂಸೇವಕರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಸಿ ನಿಧಿ ಸಂಗ್ರಹಣೆ ಮಾಡಿದ್ದಾರೆ ಇದರಿಂದ ಸಂಗ್ರಹವಾದ ಹಣದಿಂದ ಗುಡ್ಡಗಾಡು ಪ್ರದೇಶದಲ್ಲಿ ವಾಸಮಾಡಿಕೊಂಡು ಶಾಲೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ.
ಅಷ್ಟೇ ಅಲ್ಲ ಇನ್ನೂ ಕೆಲವು ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಸಂಗ್ರಹಿಸಿದ ಹಣದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ಮತ್ತಿತರ ಸಾಮಗ್ರಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಅದೇ ರೀತಿಯಲ್ಲಿ, ಅವರು ಇತ್ತೀಚಿನ ಪಂದ್ಯಾವಳಿಯಿಂದ ಗಳಿಸಿದ ಹಣವನ್ನು ಬಳಸಿಕೊಂಡು ದೂರದ ಹಳ್ಳಿಯ ಮಕ್ಕಳು ಶಾಲೆಗೆ ಹೋಗಲು ಸಹಾಯ ಮಾಡಲು ಈ ಕಾರನ್ನು ನೀಡಿದ್ದಾರೆ.
ಕುಗ್ರಾಮಗಳಲ್ಲಿನ ಮಕ್ಕಳು ಶಾಲೆಗೆ ತೆರಳಲು ಕಾರ್ ಮಾತ್ರವಲ್ಲ ಚಾಲಕನನ್ನೂ ನೀಡಿದ್ದಾರೆ
ಕುಗ್ರಾಮಗಳಲ್ಲಿನ ಮಕ್ಕಳು ಶಾಲೆಗೆ ತೆರಳಲು ಕಾರ್ ಮಾತ್ರವಲ್ಲ ಒಬ್ಬ ಚಾಲಕನನ್ನೂ ಸಹ ನೀಡಲಾಗಿದೆ. ಪ್ರತಿಯೊಂದು ಮನೆಗೂ ತೆರಳಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವುದು ಚಾಲಕನ ನಿತ್ಯದ ಕಾಯಕವಾಗಿದೆ. ಶಾಲೆ ಮುಗಿದ ತಕ್ಷಣ ವಿದ್ಯಾರ್ಥಿಗಳನ್ನು ಮರಳಿ ಮನೆಗೆ ಬಿಡುವ ಕಾರ್ಯವನ್ನೂ ಇವರೇ ಮಾಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ