• Home
  • »
  • News
  • »
  • jobs
  • »
  • Sirsi: ಶಿರಸಿಯಲ್ಲಿ ಜೀವಪರಿಸರ ವಿಶ್ವವಿದ್ಯಾಲಯ ಸ್ಥಾಪನೆ, ಸಿಎಂ ಘೋಷಣೆ

Sirsi: ಶಿರಸಿಯಲ್ಲಿ ಜೀವಪರಿಸರ ವಿಶ್ವವಿದ್ಯಾಲಯ ಸ್ಥಾಪನೆ, ಸಿಎಂ ಘೋಷಣೆ

ಬಸವರಾಜ್ ಬೊಮ್ಮಾಯಿ, ಸಿಎಂ

ಬಸವರಾಜ್ ಬೊಮ್ಮಾಯಿ, ಸಿಎಂ

ಶಿರಸಿಯಲ್ಲಿ ಅರಣ್ಯ ಮತ್ತು ತೋಟಗಾರಿಕೆ ಕಾಲೇಜು ಇರುವುದರಿಂದ ಅರಣ್ಯ, ತೋಟಗಾರಿಕೆ, ಕೃಷಿ, ಜೀವವೈವಿಧ್ಯ, ವನ್ಯಜೀವಿ ರಕ್ಷಣೆ, ಜನ ಅಭಿವೃದ್ಧಿ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕೆ ಈ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ ಎಂದು ಹೇಳಲಾಗಿದೆ.

  • Share this:

ಈಗಾಗಲೇ ಧಾರವಾಡದಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಮಾಹಿತಿ ಲಭ್ಯವಾಗಿದೆ. ಅದೇ ರೀತಿ ಈಗ ಉತ್ತರ ಕನ್ನಡದ (Kannada) ಶಿರಸಿಯಲ್ಲೂ ಸಹ ವಿಶ್ವವಿದ್ಯಾಲಯದ ಸ್ಥಾಪನೆಗೆ ಸರಕಾರ ಮುಂದಾಗಿದೆ. ಈಗಾಗಲೇ ರಾಮಕೃಷ್ಣ ಹೆಗಡೆಯವರ (Ramakrishna Hegde) ಹೆಸರಿನಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯದಲ್ಲಿ (University) ಪೀಠ ಮಾಡಲಾಗಿದೆ. ಹೆಗಡೆಯವರು ಕೇವಲ ಒಂದು ವಿಚಾರದಲ್ಲಿ ಮಾತ್ರವಲ್ಲ ಹಲವು ಕ್ಷೇತ್ರಗಳಲ್ಲಿ ಪರಿಣಿತರು. ಹೀಗಾಗಿ ಸಮಗ್ರ ಅಧ್ಯಯನಕ್ಕಾಗಿ (Study) ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವರಿಗೆ ಒಂದು ಪೀಠ ಮಾಡಲಾಗುವುದು ಎಂದು ಹೇಳಲಾಗಿದೆ.


ಶಿರಸಿಗೆ ಮುಖ್ಯಮಂತ್ರಿಗಳು ಆಗಮಿಸಿದ ಸಂದರ್ಭದಲ್ಲಿ ಈ ವಿಚಾರ ಪ್ರಸ್ಥಾವನೆಯಾಗಿದೆ. ಶಿರಸಿಯಲ್ಲಿ ಜೀವಪರಿಸರ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗುವುದು ಎಂಬ ಮಾತು ಕೇಳಿಬರುತ್ತಿದೆ. ಶೈಕ್ಷಣಿಕ ಜಿಲ್ಲೆಯಲ್ಲಿ ಈಗಾಗಲೇ ಹಲವಾರು ಶಾಲಾ ಕಾಲೇಜುಗಳು ಇದ್ದು ಉತ್ತಮ ಶಿಕ್ಷಣ ಮಕ್ಕಳಿಗೆ ದೊರೆಯುತ್ತಿದೆ ಇನ್ನೂ ಹಲವು ಸುಧಾರಣೆಗಳೊಂದಿಗೆ ಹೊಸದೊಂದು ವಿಶ್ವವಿದ್ಯಾಲಯ ಮಾಡಲಾಗುವುದು ಎಂದು ಹೇಳಲಾಗಿದೆ.


ಶಿರಸಿಯಲ್ಲಿ ಅರಣ್ಯ ಮತ್ತು ತೋಟಗಾರಿಕೆ ಕಾಲೇಜು ಇರುವುದರಿಂದ ಅರಣ್ಯ, ತೋಟಗಾರಿಕೆ, ಕೃಷಿ, ಜೀವವೈವಿಧ್ಯ, ವನ್ಯಜೀವಿ ರಕ್ಷಣೆ, ಜನ ಅಭಿವೃದ್ಧಿ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕೆ ಈ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಸಹಾಯಕವಾಗಿದೆ ಎಂದು ಹೇಳಲಾಗಿದೆ. ಈ ವಿಶ್ವವಿದ್ಯಾಲಯದ ಜತೆಗೆ ಸಾಂಪ್ರದಾಯಿಕ ಶಿಕ್ಷಣವಾದ ಕಲೆ, ವಾಣಿಜ್ಯ, ವಿಜ್ಞಾನ ಪದವಿ ಕೂಡ ಇರಲಿದೆ. ಈ ಕಾಂಪೋಸಿಟ್ ವಿಶ್ವವಿದ್ಯಾಲಯ ಸ್ಥಾಪನೆಗೆ ಈ ಬಾರಿಯ ಬಜೆಟ್ ನಲ್ಲಿ ಅನುದಾನ ನೀಡಲಾಗುವುದು ಎಂದು ಘೋಷಿಸಿದರು.


ಇದನ್ನೂ ಓದಿ: School Uniform: ಶಾಲಾ ವಿದ್ಯಾರ್ಥಿಗಳು ಈ ರೀತಿ ಬಟ್ಟೆ ಧರಿಸಬೇಕು


ನಗರ ವಲಯದಲ್ಲಿ ಹೆಸರಾಂತ ಕಾಲೇಜುಗಳು ಈಗಾಗಲೇ ಸ್ಥಾಪನೆಯಾಗಿದ್ದು ಆ ಸಾಲಿಗೆ ಈ ವಿಶ್ವವಿದ್ಯಾಲಯವೂ ಸೇರುವ ನಿರೀಕ್ಷೆ ಇದೆ. ಇನ್ನೂ ಹೆಚ್ಚಿನ ಸೌಕರ್ಯಗಳೊಂದಿಗೆ ಈ ಕಾಲೇಜು ನಿರ್ಮಾಣವಾದರೆ ವಿದ್ಯಾರ್ಥಿಗಳಿಗೂ ಸಹಾಯವಾಗುತ್ತದೆ. ಉನ್ನತ ಶಿಕ್ಷಣಕ್ಕಾಗಿ ಹೊರ ವಲಯಕ್ಕೆ ಭೇಟಿ ನೀಡಿ ಅಲ್ಲಿ ತಂಗಿ ಕಲಿಯುವ ಅಗತ್ಯತೆ ಕಡಿಮೆಯಾಗುತ್ತದೆ.




ಇದೇ ಸಂದರ್ಭದಲ್ಲಿ ಮಾತು ಮುಂದುವರಿಸಿದ ಅವರು ಶಿರಸಿಯಲ್ಲಿ ಎನ್ವಿರಾನ್ಮೆಂಟ್ ಯುನಿವರ್ಸಿಟಿ ಮಾಡುವ ಯೋಜನೆ ಇದೆ ಅದನ್ನು ಆದಷ್ಟು ಬೇಗ ಅನುಷ್ಠಾನಗೊಳಿಸುತ್ತೇವೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮೊದಲ ಬಾರಿ ಶಿರಸಿಯಲ್ಲಿ ಎನ್ವಿರಾನ್ಮೆಂಟ್ ಯುನಿವರ್ಸಿಟಿ ಮಾಡುವ ನಿರ್ಧರ ಮಾಡಲಾಗಿದೆ. ಬರುವಂತ ಬಜೆಟ್‌ನಲ್ಲಿ ಅನುಧಾನ ಮೀಸಲಿಟ್ಟು ಎನ್ವಿರಾನ್ಮೆಂಟ್ ಯುನಿವರ್ಸಿಟಿ ಮಾಡಲಾಗುತ್ತೆ ಎಂದು ಹೇಳಿದ್ದಾರೆ.


ಧಾರವಾಡದಲ್ಲೂ ಸ್ಥಾಪನೆಯಾಗಲಿದೆ ವಿಶ್ವವಿದ್ಯಾಲಯ


ಕೇಂದ್ರ ಸರ್ಕಾರದಿಂದ ಅವಳಿ ನಗರಕ್ಕೆ ಮತ್ತೊಂದು ಬಂಪರ್ ಕೊಡುಗೆ ಸಿಕ್ಕಿದೆ. ಶೀಘ್ರವೇ ಅವಳಿ ನಗರದಲ್ಲಿ ಎನ್‌ಎಫ್‌ಎಸ್ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಈ ವಿ.ವಿ. ಸ್ಥಾಪನೆಯಾಗುತ್ತಿದೆ. ಹಲವಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಸಲುವಾಗಿ ಈ ವಿ.ವಿ ಸ್ತಾಪಿಸಲಾಗುತ್ತಿದ್ದೆ ಎಂದು ತಿಳಿದುಬಂದಿದೆ.


ಹೊಸ ಶೈಕ್ಷಣಿಕ ನೀತಿಯೊಟ್ಟಿಗೆ ಕರ್ನಾಟಕದಲ್ಲಿ ಹಲವಾರು ರೀತಿಯ ಶೈಕ್ಷಣಿಕ ಸುಧಾರಣೆ


ಹೌದು ರಾಷ್ಟ್ರೀಯ ವಿಧಿವಿಜ್ಞಾನ ಶಾಸ್ತ್ರದ ವಿ.ವಿ. ಕ್ಯಾಂಪಸ್ ಧಾರವಾಡದಲ್ಲಿ ಸ್ಥಾಪನೆಯಾಗಲಿದೆ. ವಿಶ್ವವಿದ್ಯಾಲಯ ಹುಬ್ಬಳ್ಳಿ- ಧಾರವಾಡದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿಯಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ವಿ.ವಿ ಯಲ್ಲಿ ರಾಜ್ಯ ಸರ್ಕಾರ ಸ್ಥಳ ಗುರುತು ಮಾಡಿದೆ. ಹೊಸ ಶೈಕ್ಷಣಿಕ ನೀತಿಯೊಟ್ಟಿಗೆ ಕರ್ನಾಟಕದಲ್ಲಿ ಹಲವಾರು ರೀತಿಯ ಶೈಕ್ಷಣಿಕ ಸುಧಾರಣೆಯಾಗುವ ಭರವಸೆಗಳು ಕಂಡುಬರುತ್ತಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಹೇಗೆ ಕಾರ್ಯ ರೂಪಕ್ಕೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

First published: