• Home
  • »
  • News
  • »
  • jobs
  • »
  • CLAT 2023 Result 2022: ಕಾನೂನು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ, ಪರಿಶೀಲಿಸಲು ಈ ಲಿಂಕ್​ ಕ್ಲಿಕ್ ಮಾಡಿ

CLAT 2023 Result 2022: ಕಾನೂನು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ, ಪರಿಶೀಲಿಸಲು ಈ ಲಿಂಕ್​ ಕ್ಲಿಕ್ ಮಾಡಿ

ಪರಿಶೀಲಿಸಿ

ಪರಿಶೀಲಿಸಿ

ನೀವು ಫಲಿತಾಂಶವನ್ನು ಆನ್​ಲೈನ್​ನಲ್ಲಿ ಪರಿಶೀಲಿಸಿದ ನಂತರ ಮತ್ತೆ ಇದನ್ನು ಡೌನ್ಲೋಡ್ ಕೂಡ ಮಾಡಬಹುದು. ಇದರಿಂದ ನೀವು ಆಪ್​ಲೈನ್ ಮೂಲಕವೂ ಸಹ ಪರೀಕ್ಷಾ ಫಲಿತಾಂಶವನ್ನು ಪರಿಶೀಲಿಸಬಹುದು. ಸೇವ್​ ಕೂಡ ಮಾಡಬಹುದು. 

  • News18 Kannada
  • Last Updated :
  • Karnataka, India
  • Share this:

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು (NLU) ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (CLAT) 2023 ಫಲಿತಾಂಶವನ್ನು ಇಂದು ಡಿಸೆಂಬರ್ 23, 2022 ರಂದು ಬಿಡುಗಡೆ ಮಾಡಿದೆ. ಪರೀಕ್ಷಾ ಫಲಿತಾಂಶಕ್ಕಾಗಿ (Exam Result) ಕಾದು ಕುಳಿತವರಿಗೆ ಇಲ್ಲಿದೆ ಮುಖ್ಯ ಮಾಹಿತಿ. ನಾವು ಇಲ್ಲಿ ನೀಡಿರುವ ಲಿಂಕ್ (Link) ಬಳಸಿ ನೀವು ನಿಮ್ಮ ಫಲಿತಾಂಶ ಪರಿಶೀಲಿಸಬಹುದು. ಹೇಗೆ ನೀವು ಫಲಿತಾಂಶವನ್ನು ಪರಿಶೀಲಿಸಬಹುದು ಎಂಬ ಹಂತಗಳನ್ನೂ ಇಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ (Information) ಮುಂದೆ ಓದಿ. 


ಇಂದು ಡಿಸೆಂಬರ್ 23, 2022 ರಂದು ಘೋಷಿಸಿದೆ. CLAT 2023 ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ ನಲ್ಲಿ ಬಿಡುಗಡೆಯಾಗಿದ್ದು ಇಲ್ಲಿ ಕ್ಲಿಕ್ ಮಾಡಿ ನೀವು ನಿಮ್ಮ ಪರೀಕ್ಷಾ ಫಲಿತಾಂಶವನ್ನು ಪರಿಶೀಲಿಸಬಹುದು. ಅಭ್ಯರ್ಥಿಗಳು ತಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು CLAT 2023 ಸ್ಕೋರ್ ಕಾರ್ಡ್ ಅನ್ನು ಪರಿಶೀಲಿಸಬಹುದು ಮತ್ತು ಡೌನ್‌ಲೋಡ್ ಮಾಡಬಹುದು.


ನೀವು ಫಲಿತಾಂಶವನ್ನು ಆನ್​ಲೈನ್​ನಲ್ಲಿ ಪರಿಶೀಲಿಸಿದ ನಂತರ ಮತ್ತೆ ಇದನ್ನು ಡೌನ್ಲೋಡ್ ಕೂಡ ಮಾಡಬಹುದು. ಇದರಿಂದ ನೀವು ಆಪ್​ಲೈನ್ ಮೂಲಕವೂ ಸಹ ಪರೀಕ್ಷಾ ಫಲಿತಾಂಶವನ್ನು ಪರಿಶೀಲಿಸಬಹುದು. ಸೇವ್​ ಕೂಡ ಮಾಡಬಹುದು.


ಇದನ್ನೂ ಓದಿ: Puneeth Rajkumar Text Book: ಬೆಂಗಳೂರು ವಿವಿ ಪಠ್ಯದಲ್ಲಿ ಅಪ್ಪು ಜೀವನಗಾಥೆ, 'ಲೋಹಿತ್ ಎಂಬ ಮರಿಮುದ್ಧ'ನ ಪಾಠ ಓದಲು ಸ್ಟೂಡೆಂಟ್ಸ್ ಕಾತರ!


NLU ಗಳ ಒಕ್ಕೂಟವು ಡಿಸೆಂಬರ್ 18, 2022 ರಂದು CLAT 2023 ಪರೀಕ್ಷೆಯನ್ನು ನಡೆಸಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್​ಗಳ ಪ್ರವೇಶಕ್ಕಾಗಿ ಅಖಿಲ ಭಾರತ ಮಟ್ಟದ ಕಾನೂನು ಪ್ರವೇಶ ಪರೀಕ್ಷೆಯನ್ನು ಮಧ್ಯಾಹ್ನ 2 ರಿಂದ 4 ಗಂಟೆಯವರೆಗೆ ಮಧ್ಯಾಹ್ನದ ಅವಧಿಯಲ್ಲಿ ನಡೆಸಲಾಗಿತ್ತು. ಇದೀಗ ಈ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಭಾರತದಾದ್ಯಂತ 23 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ 127 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿತ್ತು.


ನೂರಕ್ಕೆ ನೂರು ಅಂಕ ಗಳಿಸಿದ ವಿದ್ಯಾರ್ಥಿಗಳು


ಅಧಿಕೃತ ಬಿಡುಗಡೆಯ ಪ್ರಕಾರ, UG CLAT 2023 ರಲ್ಲಿ ಇಬ್ಬರು ಅಭ್ಯರ್ಥಿಗಳು 100 ಪರ್ಸೆಂಟೈಲ್ ಗಳಿಸಿದ್ದಾರೆ. ನಾಲ್ಕು ಅಭ್ಯರ್ಥಿಗಳು 99.99 ಶೇಕಡಾ, ಮೂರು ವಿದ್ಯಾರ್ಥಿಗಳು 99.98 ಶೇಕಡಾ, ಐದು ವಿದ್ಯಾರ್ಥಿಗಳು 99.97 ಶೇಕಡಾ ಮತ್ತು ಐದು ವಿದ್ಯಾರ್ಥಿಗಳು 99.96 ಶೇಕಡಾ ಅಂಕಗಳನ್ನು ಗಳಿಸಿದ್ದಾರೆ. CLAT 2023 UG ನಲ್ಲಿ ಗಳಿಸಿದ ಅತ್ಯಧಿಕ ಮಾರ್ಕ್ 116.75 ಆಗಿದೆ. CLAT PG 2023 ರಲ್ಲಿ, ಒಬ್ಬ ವಿದ್ಯಾರ್ಥಿ ಮಾತ್ರ 99.99 ಪರ್ಸೆಂಟೈಲ್ ಗಳಿಸಿದ್ದಾರೆ ಮತ್ತು CLAT 2023 PG ನಲ್ಲಿ ಗಳಿಸಿದ ಅತ್ಯಧಿಕ ಅಂಕ 95.25 ಆಗಿದೆ.


CLAT 2023ರ ಫಲಿತಾಂಶ ನೋಡುವುದು ಹೇಗೆ? 
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
2. ಇಲ್ಲಿ ಕ್ಲಿಕ್ ಮಾಡಿ 
3. ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ನೊಂದಿಗೆ ಲಾಗಿನ್ ಮಾಡಿ
4. CLAT 2023 ಸ್ಕೋರ್ ಕಾರ್ಡ್ ಮುಖಪುಟ ತೆರೆಯುತ್ತದೆ.
5. CLAT ಫಲಿತಾಂಶ PDF ಅನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ
6. ಹೆಚ್ಚಿನ ಉಲ್ಲೇಖಕ್ಕಾಗಿ ಪ್ರಿಂಟ್ ತೆಗೆದುಕೊಳ್ಳಿ.


ಪರೀಕ್ಷೆಯ ಕುರಿತು ಮಾಹಿತಿ


CLAT ಅನ್ನು ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟವು ಪ್ರತಿನಿಧಿಸುವ ವಿಶ್ವವಿದ್ಯಾಲಯಗಳನ್ನು ಒಳಗೊಂಡಿದೆ. ಹಲವಾರು ಅಂಗಸಂಸ್ಥೆಗಳು ವಿಶ್ವವಿದ್ಯಾನಿಲಯಗಳು ಮತ್ತು ಸಂಸ್ಥೆಗಳು ಸಹ ಕ್ರಮವಾಗಿ ಪ್ರವೇಶ ಮತ್ತು ನೇಮಕಾತಿಗಾಗಿ CLAT ಪರೀಕ್ಷೆಯನ್ನು ಬಳಸುತ್ತವೆ. 5 ವರ್ಷಗಳ ಸಂಯೋಜಿತ LL.B ಮತ್ತು LL.M ಗೆ ಎಲ್ಲಾ ಪ್ರವೇಶಗಳು ಇದರ ಆಧಾರದ ಮೇಲೆ ನಡೆಯುತ್ತದೆ.


ಇದಕ್ಕೆ ಸಂಬಂಧಿಸಿದಂತೆ ನೀವು ಈ ಕೋರ್ಸ್​ಗಳನ್ನು ಮಾಡಬಹುದು


1. ಪದವಿಪೂರ್ವ ಕೋರ್ಸ್‌ಗಳು BA
2. LLB (ಬ್ಯಾಚುಲರ್ ಆಫ್ ಆರ್ಟ್ಸ್ LLB)
3. BCom LLB (ಬ್ಯಾಚುಲರ್ ಆಫ್ ಕಾಮರ್ಸ್ LLB)
4. BSc LLB (ಬ್ಯಾಚುಲರ್ ಆಫ್ ಸೈನ್ಸ್ LLB)
5. BBA LLB (ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ LLB)
6. BSW LLB (ಸಮಾಜ ಕಾರ್ಯದ ಪದವಿ)

First published: