• ಹೋಂ
  • »
  • ನ್ಯೂಸ್
  • »
  • Jobs
  • »
  • Viral News: ಪುಟ್ಟ ಬಾಲಕನ ಉತ್ತರ ಪತ್ರಿಕೆ ವೈರಲ್; ಸಾಮಾಜಿಕ ಪಿಡುಗಿನ ಕುರಿತು ಈತ ಬರೆದದ್ದೇನು ನೋಡಿ

Viral News: ಪುಟ್ಟ ಬಾಲಕನ ಉತ್ತರ ಪತ್ರಿಕೆ ವೈರಲ್; ಸಾಮಾಜಿಕ ಪಿಡುಗಿನ ಕುರಿತು ಈತ ಬರೆದದ್ದೇನು ನೋಡಿ

ವಿದ್ಯಾರ್ಥಿ

ವಿದ್ಯಾರ್ಥಿ

ಬಾಲಕನ ಉತ್ತರಕ್ಕೆ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಉತ್ತಮ ಉತ್ತರ ಎಂದು ಪರಿಗಣಿಸಿದ್ದಾರೆ. ಮಹೇಶ್ವರ್ ತಮ್ಮ ಮಗ ಐದನೇ ತರಗತಿಯ ಪ್ರಶ್ನೆ ಪತ್ರಿಕೆಗೆ ಈ ರೀತಿ ಉತ್ತರಿಸಿದ್ದಾರೆ ಎಂದು ಮಹೇಶ್ವರ್ ಪೆರಿ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

  • Share this:

ಮಕ್ಕಳು ನಾವು ಅಂದುಕೊಂಡಿದ್ದಕ್ಕಿಂತ ಕಿಲಾಡಿಗಳು ಹಾಗೂ ಬುದ್ಧಿವಂತರು ಎಂಬುದಕ್ಕೆ ಹಲವಾರು  ನಿದರ್ಶನಗಳು ನಮ್ಮ ಕಣ್ಣಮುಂದೆಯೇ ನಡೆಯುತ್ತಿರುತ್ತದೆ. ತಂತ್ರಜ್ಞಾನದ (Technology) ಪ್ರಭಾವವೋ ಅಥವಾ ಆಧುನಿಕತೆಯ ಮಾರ್ಪಾಡೋ ತಿಳಿದಿಲ್ಲ ಈ ಶತಮಾನದ ಮಕ್ಕಳು ಹಿರಿಯರಿಗಿಂತಲೂ ಒಂದು ಕೈ ಮುಂದಿರುತ್ತಾರೆ ಹಾಗೂ ಆಟ (Game) ಪಾಠಗಳಿಂದ ಆರಂಭಿಸಿ ಪ್ರತಿಯೊಂದು ಚಟುವಟಿಕೆಗಳಲ್ಲೂ (Activity) ಮುಂದಿರುತ್ತಾರೆ. ಇದೀಗ ಇಂಟರ್ನೆಟ್‌ನಲ್ಲಿ ಮಕ್ಕಳು ಎಷ್ಟು ಬುದ್ಧಿವಂತರು ಎಂಬುದನ್ನು ತಿಳಿಸುವ ವಿಡಿಯೋ ಒಂದು ವೈರಲ್ ಆಗುತ್ತಿದ್ದು ನೆಟ್ಟಿಗರ ಪ್ರಶಂಸೆಗೆ ಕಾರಣವಾಗಿದೆ.


ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾಜಿಕ ಅನಿಷ್ಟಗಳ ಕುರಿತು ಪುಟ್ಟ ಬಾಲಕನು ನೀಡಿದ ಉತ್ತರ ಪತ್ರಿಕೆಯ ಚಿತ್ರ ಟ್ವಿಟರ್‌ನಲ್ಲಿ ಭಾರೀ ವೈರಲ್ ಆಗುತ್ತಿದೆ. 5 ನೇ ತರಗತಿಯ ಈ ಬಾಲಕನು ನೀಡಿದ ಉತ್ತರ ಅಂತರ್ಜಾಲದಲ್ಲಿ ಹೊಸ ಹವಾ ಸೃಷ್ಟಿಸಿದ್ದು ಟ್ವಿಟರ್ ಬಳಕೆದಾರರು ಹುಡುಗನ ಬುದ್ಧಿವಂತಿಕೆಗೆ ಮಾರುಹೋಗಿದ್ದಾರೆ.


ತಂದೆ ಮಗನ ಉತ್ತರ ಪತ್ರಿಕೆಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ


ಈ ಪೋಸ್ಟ್ ಅನ್ನು ಪಾತ್‌ಫೈಂಡರ್ ಪಬ್ಲಿಷಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಸಿಇಒ, ಮಹೇಶ್ವರ ಪೆರಿ ಅವರು ಹಂಚಿಕೊಂಡಿದ್ದಾರೆ. ತಮ್ಮ ಮಗನ ಐದನೇ ಉತ್ತರ ಪತ್ರಿಕೆಯ ತುಣಕೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಮಹೇಶ್ವರ ಪೆರಿ, ಸ್ವಾತಂತ್ರ್ಯ ಪೂರ್ವದಲ್ಲಿ ಸಾಮಾಜಿಕ ಅನಿಷ್ಟಗಳ ಬಗ್ಗೆ ಬಾಲಕ ಹೇಗೆ ಉತ್ತರಿಸಿದ್ದಾನೆ ಎಂಬುದನ್ನು ಕಾಣಬಹುದಾಗಿದೆ.


ವಿಧವೆಯರ ಪುನರ್‌ವಿವಾಹ ವಿಷಯಕ್ಕೆ ಮಹತ್ವ ಕೊಟ್ಟ ಐದನೇ ತರಗತಿಯ ಬಾಲಕ


ನೀವು ಸ್ವಾತಂತ್ರ್ಯ ಪೂರ್ವದ ಸಮಾಜ ಸುಧಾರಕರಾಗಿದ್ದರೆ, ಭಾರತವು ಹಿಂದುಳಿಯದಂತೆ ತಡೆಯಲು ಆ ಸಮಯದಲ್ಲಿ ಜಾರಿಯಲ್ಲಿದ್ದ ಯಾವ ಒಂದು ಸಾಮಾಜಿಕ ಅನಿಷ್ಟವನ್ನು ನಿರ್ಮೂಲನೆ ಮಾಡಲು ಬಯಸುತ್ತೀರಿ? ಏಕೆ ವಿವರಿಸಿ ಎಂಬುದು ಪ್ರಶ್ನೆಯಾಗಿದೆ.


ಇದನ್ನೂ ಓದಿ: Science Project: ಪ್ಲಾಸ್ಟಿಕ್ ತ್ಯಾಜ್ಯದಿಂದ ಪೆಟ್ರೋಲಿಯಂ ಉತ್ಪನ್ನ ತಯಾರಿಸಿದ ವಿದ್ಯಾರ್ಥಿ; ನಿಮ್ಮ ಸ್ಕೂಲ್​ನಲ್ಲೂ ಮಾಡಿ ಈ ಪ್ರಾಜೆಕ್ಟ್​


ಪುಟ್ಟ ಬಾಲಕನ ಉತ್ತರ ಪತ್ರಿಕೆ ವೈರಲ್


ಇದಕ್ಕೆ ಬಾಲಕನು ನಾನು ವಿಧವೆಯರ ಮರುವಿವಾಹ ಕಾಯಿದೆಯನ್ನು ಪ್ರಾರಂಭಿಸಲು ಇಷ್ಟಪಡುತ್ತೇನೆ ಎಂದು ಉತ್ತರಿಸಿದ್ದು, ಒಬ್ಬ ಮಹಿಳೆ ವಿಧವೆಯಾಗಿದ್ದರೆ ಒಂದಾ ಅವರು ಸತಿ ಸಹಗಮನ ಪದ್ಧತಿಯನ್ನು ಅನುಸರಿಸಬೇಕು ಇಲ್ಲದಿದ್ದರೆ ಬಿಳಿ ಸೀರೆಯನ್ನು ಉಡಬೇಕು, ತಲೆಕೂದಲು ಕಟ್ಟಬಾರದು ಹಾಗೂ ಹೊರಗಡೆ ಹೋಗಬಾರದು ಎಂಬ ನಿಯಮವಿದೆ. ಈ ವಿಧವೆಯರು ಮರುವಿವಾಹವಾದರೆ, ಅವರು ಉತ್ತಮ ಜೀವನವನ್ನು ಪಡೆಯಬಹುದು ಹಾಗೂ ಸಂತೋಷಕರ ಜೀವನವನ್ನು ಅನುಭವಿಸಬಹುದು ಎಂದು ತಿಳಿಸಿದ್ದಾನೆ.


ಮನಸೋ ಇಚ್ಛೆ ಕೊಂಡಾಡಿದ ಟ್ವಿಟರ್ ಬಳಕೆದಾರರು


ಬಾಲಕನ ಉತ್ತರಕ್ಕೆ ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಉತ್ತಮ ಉತ್ತರ ಎಂದು ಪರಿಗಣಿಸಿದ್ದಾರೆ. ಮಹೇಶ್ವರ್ ತಮ್ಮ ಮಗ ಐದನೇ ತರಗತಿಯ ಪ್ರಶ್ನೆ ಪತ್ರಿಕೆಗೆ ಈ ರೀತಿ ಉತ್ತರಿಸಿದ್ದಾರೆ ಎಂದು ಮಹೇಶ್ವರ್ ಪೆರಿ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.


ನಿಸ್ಸಂದೇಹವಾಗಿ ಈ ಪೋಸ್ಟ್ ಉತ್ತಮ ಕಾರಣಕ್ಕಾಗಿ ಹಲವು ನೆಟ್ಟಿಗರ ಗಮನ ಸೆಳೆದಿದ್ದು ಟ್ವಿಟರ್ ಬಳಕೆದಾರರು ಚಿಕ್ಕ ಹುಡುಗನಾದರೂ ಆತನ ಮನಸ್ಸಿನಲ್ಲಿರುವ ದಯೆ ಹಾಗೂ ಉದಾತ್ತ ಚಿಂತನೆಯನ್ನು ಹೊಗಳಿದ್ದಾರೆ.


ಪುಟ್ಟ ಹುಡುಗನಾದರೂ ಆತ ಇತರರ ಬಗೆಗೆ ಅನುಕಂಪ ಹಾಗೂ ಉದಾತ್ತ ಮನೋಭಾವವನ್ನು ಹೊಂದಿದ್ದಾನೆ ಹಾಗೂ ಆತನ ಹೃದಯ ಕಾಳಜಿಯಿಂದ ತುಂಬಿದೆ ಆತನ ಪೋಷಕರಾದ ನೀವು ಮಗನ ಬಗ್ಗೆ ಹೆಮ್ಮೆಪಡಬೇಕು ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.




ಬಾಲಕ ದಯಾಪರ ಎಂದು ಕೊಂಡಾಡಿದ ಟ್ವಿಟರಾರ್ಥಿಗಳು


ಮಕ್ಕಳನ್ನು ಬೆಳೆಸುವಲ್ಲಿ ಮಾತಾ ಪಿತರ ಕೊಡುಗೆ ಅನನ್ಯವಾದುದು. ನಿಮ್ಮ ಮಗ ಇಷ್ಟು ಸಣ್ಣ ವಯಸ್ಸಿಗೆ ಇಂತಹ ಉದಾತ್ತ ಆದರ್ಶವನ್ನು ಮೈಗೂಡಿಸಿದ್ದಾನೆ ಎಂದರೆ ನೀವು ಆತನನ್ನು ಹೇಗೆ ಬೆಳೆಸಿದ್ದೀರಿ ಎಂಬುದು ವ್ಯಕ್ತವಾಗುತ್ತದೆ. ನಿಮಗೆ ಅಭಿನಂದನೆಗಳು ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


ಐದನೇ ತರಗತಿಯಲ್ಲಿಯೇ ಇಷ್ಟೊಂದು ದೊಡ್ಡ ಹೃದಯವಂತಿಕೆ ಎಂದರೆ ಇದು ನಿಜಕ್ಕೂ ಅದ್ಭುತ. ದೇವರು ಮಗುವನ್ನು ಚೆನ್ನಾಗಿಟ್ಟಿರಲಿ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಮಗು ತುಂಬಾ ದಯಾಪರ ಎಂದು ಇನ್ನೊಬ್ಬರು ಬರೆದಿದ್ದಾರೆ. ಇದು ನಿಜಕ್ಕೂ ಅತ್ಯದ್ಭುತ ಎಂದು ಟ್ವಿಟರ್ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು