• Home
  • »
  • News
  • »
  • jobs
  • »
  • Hassan: ಕಿರಿಕ್​ ಪಾರ್ಟಿ ಶೂಟಿಂಗ್​ ನಡೆದ ಈ ಕಾಲೇಜ್​ನಲ್ಲಿ ಮಾರಾಮಾರಿ! ಆಗಿದ್ದೇನು ನೋಡಿ

Hassan: ಕಿರಿಕ್​ ಪಾರ್ಟಿ ಶೂಟಿಂಗ್​ ನಡೆದ ಈ ಕಾಲೇಜ್​ನಲ್ಲಿ ಮಾರಾಮಾರಿ! ಆಗಿದ್ದೇನು ನೋಡಿ

ಮಲೆನಾಡು ಇಂಜಿನಿಯರಿಂಗ್ ಕಾಲೇಜು

ಮಲೆನಾಡು ಇಂಜಿನಿಯರಿಂಗ್ ಕಾಲೇಜು

ಕಲಿಕೆಗೆಂದು ಬರುವ ವಿದ್ಯಾರ್ಥಿಗಳ ಈ ರೀತಿ ವರ್ತನೆ ಸರಿಯಲ್ಲ. ಅವರಿಗೂ ಕೆಲವು ಜವಾಬ್ಧಾರಿಗಳಿರುತ್ತವೆ. ಸೌಜನ್ಯದಿಂದ ವರ್ತಿಸಬೇಕು. ಮುಂದಿನ ಜೀವನಕ್ಕೆ ಬೇಕಾದ ಅಂಶಗಳನ್ನು ರೂಪಿಸಿಕೊಳ್ಳಬೇಕು ಹೊರತಾಗಿ ಈ ರೀತಿ ವರ್ತನೆ ಸರಿಯಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ.

  • News18 Kannada
  • Last Updated :
  • Hassan, India
  • Share this:

ವಿದ್ಯಾರ್ಥಿಗಳು ಕಾಲೇಜಿಗೆ ಕಲಿಕೆ ಬರುವ ಬದಲು ಗುಂಡಾಗಿರಿ ಮಾಡಲೆಂದೇ ಬರುತ್ತಿದ್ದಾರೇನೋ ಎನ್ನುವ ಮಟ್ಟಿಗೆ ಹಾಸನದ (Hassan) ಪ್ರತಿಷ್ಟಿತ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ (Malnad College of Engineering)  ವಿದ್ಯಾರ್ಥಿಗಳ (Students) ನಡುವೆ ಮಾರಾಮಾರಿ ನಡೆದಿದೆ. ಈ ಘಟನೆ ನಿಜಕ್ಕೂ ಸಾರ್ಬಜನಿಕರನ್ನು ಆತಂಕಕ್ಕೀಡು ಮಾಡಿದೆ. ಇದರಿಂದ ಶಾಲಾ ಸಿಬ್ಬಂಧಿಗಳು ಹಾಗೂ ಪಾಲಕರೂ (Parents) ಸಹ ಆತಂಕಕ್ಕೊಳಗಾಗಿದ್ದಾರೆ. ಇತ್ತೀಚಿನ ದಿನದಲ್ಲಿ ಈ ರೀತಿ ಘಟನೆಗಳು ಹೆಚ್ಚಾಗುತ್ತಿದೆ. ಈ ಘಟನೆಯ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ. 


ಕಾಲೇಜು ಚುನಾವಣೆ ಸಂದರ್ಭದಲ್ಲಿ ನಡೆದ ಘಟನೆ
ಪ್ರತಿಯೊಂದು ಕಾಲೇಜಿನಲ್ಲೂ ಸಹ ವರ್ಷದಲ್ಲಿ ಒಂದು ಬಾರಿ ವಿದ್ಯಾರ್ಥಿ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ಚುನಾವಣೆ ನಡೆಸಲಾಗುತ್ತದೆ. ಅದೇ ರೀತಿ ಹಾಸನದ  ಪ್ರತಿಷ್ಟಿತ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹ ವಿದ್ಯಾರ್ಥಿ ಪ್ರತಿನಿಧಿಗಳ ಆಯ್ಕೆ ಪ್ರಕ್ರಿಯೆ ಮಾಡಲು ಚುನಾವಣೆ ನಡೆಸಿದಾಗ ಅಸಮಾಧಾನ ಉಂಟಾಗಿ ಹೊಡೆದಾಟ ಆರಂಭವಾಗಿದೆ ಎಂದು ತಿಳಿದು ಬಂದಿದೆ.


ಗೆದ್ದವರು ಹಾಗೂ ಸೋತವರ ನಡುವೆ ಗಲಾಟೆ
ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತವರ ನಡುವೆ ಮನಸ್ಥಾಪ ಕಾಮನ್​ ಆದ್ರೆ ಈ ಮಟ್ಟಿಗೆ ಹೊಡೆದಾಡುತ್ತಿರುವುದು ಸರಿಯಲ್ಲ. ಕಾಲೇಜು ವಿದ್ಯಾರ್ಥಿ ಪ್ರತಿನಿಧಿ ಆಯ್ಕೆ ಬಳಿಕ ಗೆದ್ದವರು ಸೋತವರ ನಡುವೆ ಗಲಾಟೆ ನಡೆದಿದೆ. ಇದರಿಂದ ಹತ್ತಿರದ ಜನರಿಗೂ ತೊಂದರೆಯಾಗಿದೆ. ನಿನ್ನೆ ಸಂಜೆ ಅಂದರೆ ಡಿ. 20 ರಂದು ಚುನಾವಣೆ ನಡೆದಿತ್ತು ಇದಾದ ನಂತರ ಈ ಘಟನೆ ಆರಂಭಗೊಂಡಿದೆ.


ಇದನ್ನೂ ಓದಿ: Kerala Hostel Rules: ಹಾಸ್ಟೆಲ್ ವಿದ್ಯಾರ್ಥಿನಿಯರು ರಾತ್ರಿ ಹೊತ್ತು ಹೊರಗೆ ಹೋಗ್ಬಹುದು! ಇದು ಹೈಕೋರ್ಟ್​ ಆದೇಶ


ನೆನ್ನೆ ಸಂಜೆ ಚುನಾವಣಾ ಫಲಿತಾಂಶ ಬಂದ ಬಳಿಕ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದೆ. ಇದಕ್ಕೆ ಅವರೊಳಗಿನ ಮನಸ್ತಾಪವೇ ಕಾರಣವಾಗಿದೆ. ಹಾಸನದ ಹಳೆಬೀಡು ರಸ್ತೆಯ ಮಲೆನಾಡು ತಾಂತ್ರಿಕ ಕಾಲೇಜಿನಲ್ಲಿ ಘಟನೆ ನಡೆದಿದೆ. ಸಾರ್ವಜನಿಕರ ಗಮನಕ್ಕೂ ಕೂಡ ಬರುವಂತೆ ಹೊರವಲಯದಲ್ಲೂ ಸಹ ಗಲಾಟೆ ನಡೆದಿದೆ. ಇದರಿಂದ ಸಾರ್ವಜನಿಕರಿಗೂ ತೊಂದರೆ ಉಂಟಾಗಿದೆ.


ತಕ್ಷಣ ಸ್ಥಳಕ್ಕೆ‌ಬಂದು ಲಾಟಿ ಬೀಸಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು
ಗಲಾಟೆ ನಿಯಂತ್ರಣಕ್ಕೆ ಬಾರದೇ ಇರುವ ಸಂದರ್ಭದಲ್ಲಿ ಪೊಲೀಸರು ಮಧ್ಯ ಪ್ರವೇಶಿಸ ಬೇಕಾದ ಅನಿವಾರ್ಯತೆ ಉಂಟಾಯಿತು. ಪೊಲೀಸರು ಸಹ ಇದನ್ನು ನಿಯಂತ್ರಿಸಲು ಸಾಧ್ಯವಾಗದೇ ಇರುವ ಸಂದರ್ಭದಲ್ಲಿ ಲಾಟಿ ಚಾರ್ಜ್ ಮಾಡುವ ಮೂಲಕ ವಿದ್ಯಾರ್ಥಿಗಳನ್ನು ತಡೆಯುವ ಪ್ರಯತ್ನ ಮಾಡಲಾಯಿತು. ಈ ರೀತಿ ಆ ಸ್ಥಳದಿಂದ ವಿದ್ಯಾರ್ಥಿಗಳನ್ನು ಚದುರಿಸಲಾಯಿತು ಎಂದು ತಿಳಿದುಬಂದಿದೆ.


ಮಲೆನಾಡು ಇಂಜಿನಿಯರಿಂಗ್ ಕಾಲೇಜು


ವಿದ್ಯಾರ್ಥಿಗಳ ವರ್ತನೆ ಸರಿಯಲ್ಲ
ಕಲಿಕೆಗೆಂದು ಬರುವ ವಿದ್ಯಾರ್ಥಿಗಳ ಈ ರೀತಿ ವರ್ತನೆ ಸರಿಯಲ್ಲ. ಅವರಿಗೂ ಕೆಲವು ಜವಾಬ್ಧಾರಿಗಳಿರುತ್ತವೆ. ಸೌಜನ್ಯದಿಂದ ವರ್ತಿಸಬೇಕು. ಮುಂದಿನ ಜೀವನಕ್ಕೆ ಬೇಕಾದ ಅಂಶಗಳನ್ನು ರೂಪಿಸಿಕೊಳ್ಳಬೇಕು ಹೊರತಾಗಿ ಈ ರೀತಿ ವರ್ತನೆ ಸರಿಯಲ್ಲ ಎಂಬುದು ಹಲವರ ಅಭಿಪ್ರಾಯವಾಗಿದೆ. ಮಕ್ಕಳ ಈ ವರ್ತನೆ ಪಾಲಕರಲ್ಲಿಯೂ ಸಹ ಬೇಸರ ಮೂಡಿಸಿದೆ. ಈಗಲೇ ಹೀಗಾದರೆ ಮುಂದಿನ ದಿನ ಉತ್ತಮ ಸಮಾಜದ ನಿರ್ಮಾಣ ಹೇಗೆ ಎಂಬ ಪ್ರಶ್ನೆ ಮೂಡುತ್ತದೆ. ವಿದ್ಯಾರ್ಥಿಗಳ ವರ್ತನೆ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಚುನಾವಣೆ ಹೆಸರಿನಲ್ಲಿ ‌ಪುಂಡಾಟ ನಡೆಸಿರೋ ಬಗ್ಗೆ ಕಿಡಿಕಾರಿದ ಜನರು
ಚುನಾವಣೆಯ ಹೆಸರಿನಲ್ಲಿ ಹಲವಾರು ಜನ ಸೇರಿಕೊಂಡು ಗುಂಡಾಗಿರಿ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಈ ರೀತಿ ಮಾಡುವುದರಿಂದ ಇತರ ವಿದ್ಯಾರ್ಥಿಗಳಿಗೂ ಸಹ ತೊಂದರೆಯಾಗುತ್ತದೆ. ಹಾಸನ‌ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.


ಕಿರಿಕ್​ ಪಾರ್ಟಿ ಸಿನಿಮಾ ಶೂಟಿಂಗ್​ ನಡೆದ ಕಾಲೇಜು
ಸೇಮ್​ ಕಿರಿಕ್​ ಪಾರ್ಟಿ ಸಿನಿಮಾದಲ್ಲಿ ನಡೆದ ದೃಷ್ಯಗಳು ಇಲ್ಲಿ ನಿಜವಾಗಿದೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದಿದೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು