• Home
  • »
  • News
  • »
  • jobs
  • »
  • Anganwadi Workers: ಮತ್ತೆ ರೊಚ್ಚಿಗೆದ್ದ ಅಂಗನವಾಡಿ ಕಾರ್ಯಕರ್ತೆಯರು, ಶುರುವಾಯ್ತು ಹೊಸ ಪ್ರತಿಭಟನೆ

Anganwadi Workers: ಮತ್ತೆ ರೊಚ್ಚಿಗೆದ್ದ ಅಂಗನವಾಡಿ ಕಾರ್ಯಕರ್ತೆಯರು, ಶುರುವಾಯ್ತು ಹೊಸ ಪ್ರತಿಭಟನೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಂಗನವಾಡಿಗಳಿಗೂ ಸಹ NEP ಜಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ ನಂತರ ಪ್ರತಿಭಟನೆಗೆ ಬ್ರೇಕ್​ ಬಿದ್ದಿತ್ತು ಆದರೆ  ಈಗ ಮತ್ತೊಂದು ರೀತಿಯಲ್ಲಿ ಇನ್ನೂ ಬೇರೆ ಬೇರೆ ರೀತಿಯಲ್ಲಿ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರಿಸುವ ವರೆಗೂ ಕೂಡ ಮುಷ್ಕರ ನಿಲ್ಲಲ್ಲ ಅಂತ ಎಚ್ಚರಿಕೆ ಕೂಡಾ ನೀಡಿದ್ದಾರೆ. ಇನ್ನೆಷ್ಟು ದಿನಗಳ ಕಾಲ ಈ ಮುಷ್ಕರ ಮುಂದುವರೆಯಲಿದೆ ಎಂದು ತಿಳಿಯದಾಗಿದೆ.

ಮುಂದೆ ಓದಿ ...
  • Share this:

ನಿನ್ನೆಯಷ್ಟೇ ಮುಕ್ತಾಯವಾಗಿದ್ದ ಪ್ರತಿಭಟನೆ ಇಂದು ಮತ್ತೆ ಹೊಸ ರೂಪ ಪಡೆದಿದೆ. ನಾಲ್ಕು ದಿನಗಳ ಕಾಲ ನಿರಂತರವಾಗಿ  ಪ್ರತಿಭಟನೆ ಮಾಡಿ ಇನ್ನೇನು ಮನೆಗೆ ತೆರಳುವ ಸಮಯದಲ್ಲಿ (Time) ಮತ್ತೊಂದಷ್ಟು ಬೇಡಿಕೆಯನ್ನು ಅಂಗನವಾಡಿ ಕಾರ್ಯಕರ್ತೆಯರು (Anganwadi Workers)  ಮುಂದಿಟ್ಟುಕೊಂಡು ಅದನ್ನೂ ಈಡೇರಿಸುವಂತೆ ಕೇಳುತ್ತಿದ್ದಾರೆ. ಈ ಬಾರಿ ಬೇರೊಂದು ಸಂಘಟನೆಯ ಮೂಲಕ ಪ್ರತಿಭಟನೆ (Protest) ನಡೆಯುತ್ತಿದೆ. 4 ದಿನದಿಂದ ಹಗಲು ರಾತ್ರಿ (Night) ಪ್ರತಿಭಟನೆ ನಡೆಸಿದ್ದ ಅಂಗನವಾಡಿ ಕಾರ್ಯಕರ್ತೆಯರ ಸ್ವಾತಂತ್ರ್ಯ  ಸಂಘಟನೆಯು ಇದೀಗ ಸಚಿವರು ನೀಡಿರುವ ಆಶ್ವಾಸನೆಯ ಮೇರೆಗೆ ಒಂದು ಹಂತದ ಸಮಾಧಾನ ಪಡೆದುಕೊಂಡು ತಮ್ಮ ಕೆಲಸಕ್ಕೆ ಹಿಂದಿರುಗುತ್ತಿದ್ದರು.


ಈಗ ಮತ್ತೊಂದಿಷ್ಟು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಈ ಬಾರಿಯೂ ಸಹ ಬಾರಿ ಪ್ರಮಾಣದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.


ಅಂಗನವಾಡಿಗಳಿಗೂ ಸಹ NEP ಜಾರಿ ಮಾಡಲಾಗುವುದು ಎಂದು ಸಚಿವರು ತಿಳಿಸಿದ ನಂತರ ಪ್ರತಿಭಟನೆಗೆ ಬ್ರೇಕ್​ ಬಿದ್ದಿತ್ತು ಆದರೆ  ಈಗ ಮತ್ತೊಂದು ರೀತಿಯಲ್ಲಿ ಇನ್ನೂ ಬೇರೆ ಬೇರೆ ರೀತಿಯಲ್ಲಿ ಬೇಡಿಕೆ ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರಿಸುವ ವರೆಗೂ ಕೂಡ ಮುಷ್ಕರ ನಿಲ್ಲಲ್ಲ ಅಂತ ಎಚ್ಚರಿಕೆ ಕೂಡಾ ನೀಡಿದ್ದಾರೆ. ಇನ್ನೆಷ್ಟು ದಿನಗಳ ಕಾಲ ಈ ಮುಷ್ಕರ ಮುಂದುವರೆಯಲಿದೆ ಎಂದು ತಿಳಿಯದಾಗಿದೆ.




ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳು


1.ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವೆ ಖಾಯಂ ಮಾಡಬೇಕು


2) ಅಂಗನವಾಡಿ ಕಾರ್ಯಕರ್ತೆಯರಿಗೆ 21 ಸಾವಿರ ವೇತನ ನೀಡಬೇಕು


3) ಮಿನಿ ಅಂಗನವಾಡಿ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಬೇಕು


4) ಗ್ರಾಚ್ಯುಟಿ ಹಣ , ಪೆನ್‌ಷನ್ ಜಾರಿ ಮಾಡಬೇಕು


5) ಆರೋಗ್ಯವಿಮೆಯಾದ ಇ.ಎಸ್.ಐ. ಬಾರಿ ಮಾಡಬೇಕು


5) ಕಾಯಿಲೆಗಳಿಂದ ಬಳಲುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸಂಬಳ ಸಹಿತ ರಜೆ ನೀಡಬೇಕು


ಇದನ್ನೂ ಓದಿ: ChatGPT ನಿಷೇಧ ಮಾಡೋದಿಲ್ಲ ಎಂದ ಬೆಂಗಳೂರು ಶಾಲೆಗಳು


ಈ ಐದು ಬೇಡಿಕೆಗಳನ್ನು ಮುಂದಿಟ್ಟು CITU ಸಂಘಟನೆಯಿಂದ ಪ್ರತಿಭಟನೆ ಆರಂಭವಾಗಿದೆ. ಈ ಎಲ್ಲಾ ಬೇಡಿಕೆಗಳು ಈಡೇರಿದ ನಂತರವೇ ಮುಷ್ಕರ ನಿಲ್ಲಿಸುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಪಟ್ಟು ಹಿಡಿದು ಕೂತಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಯನ್ನು ಮತ್ತು ಅವರ ಕೆಲಸವನ್ನು ಖಾಯಂ ಮಾಡಬೇಕು ಅಂದರೆ ತಮಗೆ ಕೆಲಸದ ಭದ್ರತೆ ಬೇಕು ಎಂಬ ನಿಲುವನ್ನು ಸೂಚಿಸಿದ್ದಾರೆ.


ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸಬೇಕು 21 ಸಾವಿರ ವೇತನ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಖಾಯಂ ವೇತನ ನಿಗದಿಮಾಡಿ ಹೆಚ್ಚಿನ ಮೊತ್ತವನ್ನು ಸಂಬಳವಾಗಿ ನೀಡಬೇಕು ಎಂದು ಕೇಳಿಕೊಂಡಿದ್ದಾರೆ. ಅಂಗನವಾಡಿಗಳಿಗೆ NEP ಜಾರಿ ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ ಆದರೆ ಈಗ ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂಬ ಹೊಸ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಗ್ರಾಚ್ಯುಟಿ ಹಣ , ಪೆನ್‌ಷನ್ ಜಾರಿ ಮಾಡಬೇಕು ಈಗಿರುವ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಪೆನ್‌ಷನ್ ಹಣ ಸಿಗುತ್ತಿಲ್ಲ ಆದರೆ ಇನ್ನು ಮುಂದೆ ಕೆಲಸದಿಂದ ನಿವೃತ್ತರಾದ ನಂತರ ಪೆನ್‌ಷನ್ ಹಣ ನೀಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ.


ಈಹಿಂದೆ ಇಟ್ಟ ಬೇಡಿಕೆಗಳು


ಪ್ರಾಥಮಿಕ ಶಾಲೆಗಳಲ್ಲಿ ಹೊಸ ಶಿಕ್ಷಣ ನೀತಿ ಅನ್ವಯವಾಗುತ್ತಿದೆ. ಅದನ್ನು ಅಲ್ಲಿಗೇ ಸ್ಥಗಿತ ಗೊಳಿಸದೆ ಅಂಗನವಾಡಿ ಹಂತಗಳಿಗೂ ನೀವು ತರಬೇಕು ಎಂದು ಹೇಳುತ್ತಿದ್ದಾರೆ. ಈ ಮೂಲಕ ಕಳೆದ ಮೂರ್ನಾಲ್ಕು ದಶಕದಿಂದ ಯಾವುದೇ ಸವಲತ್ತುಗಳಿಲ್ಲದೆ ದುಡಿಯುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಶಾಲಾ ಶಿಕ್ಷಕರ ಸ್ಥಾನಮಾನ ನೀಡಬೇಕು ಎಂಬುದು ಈ ಹಿಂದೆ ನಡೆದ ಪ್ರತಿಭಟನೆಯ ಬೇಡಿಕೆಯಾಗಿತ್ತು 

First published: