• ಹೋಂ
  • »
  • ನ್ಯೂಸ್
  • »
  • Jobs
  • »
  • Higher Education: ಊರಲ್ಲಿ ಕಾಲೇಜ್​ ಇಲ್ಲವೆಂದು ಓದಿಗೆ ಗುಡ್‌ಬೈ ಹೇಳಿದ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದಲ್ಲಿ ಮಹತ್ವದ ಕ್ರಮ ಕೈಗೊಂಡ ಸರ್ಕಾರ!

Higher Education: ಊರಲ್ಲಿ ಕಾಲೇಜ್​ ಇಲ್ಲವೆಂದು ಓದಿಗೆ ಗುಡ್‌ಬೈ ಹೇಳಿದ ವಿದ್ಯಾರ್ಥಿಗಳು, ಗ್ರಾಮೀಣ ಪ್ರದೇಶದಲ್ಲಿ ಮಹತ್ವದ ಕ್ರಮ ಕೈಗೊಂಡ ಸರ್ಕಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳು ದೂರ ಇದೆಯಂತ ಮತ್ತು ತಮ್ಮ ಊರಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಕಾಲೇಜುಗಳು ಇಲ್ಲ ಅಂತ ಕಾರಣ ಹೇಳಿ ಶಿಕ್ಷಣದಿಂದ ವಂಚಿತರಾಗಬಾರದು ಅಂತ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುತ್ತಿದ್ದಾರೆ.

  • Trending Desk
  • 4-MIN READ
  • Last Updated :
  • Chhattisgarh, India
  • Share this:

ಮೊದಲೆಲ್ಲಾ ನಮ್ಮ ಹಿರಿಯರು ಈ ಹಳ್ಳಿಗಳಲ್ಲಿ ತಮ್ಮ ಪ್ರೌಢ ಶಾಲೆಯ ವಿದ್ಯಾಭ್ಯಾಸವನ್ನು (Education) ಮುಗಿಸಿದ ನಂತರ ಕಾಲೇಜಿಗೆ ಹೋಗಬೇಕು ಅಂತ ಹೇಳಿದರೆ, ಸುಮಾರು ಮೈಲಿಗಳಷ್ಟು ದೂರ ನಡೆದುಕೊಂಡು ಅಥವಾ ಎತ್ತಿನಗಾಡಿಯಲ್ಲಿ ಕೂತು ಹೋಗಬೇಕಾಗಿತ್ತು. ಎಂದರೆ ಆಗೆಲ್ಲಾ ಊರುಗಳಲ್ಲಿ ಈಗಿನ ಹಾಗೆ ದೊಡ್ಡ ದೊಡ್ಡ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು (Education Organisation) ಅಷ್ಟಾಗಿ ಇರಲಿಲ್ಲ. ಈಗೆಲ್ಲಾ ರಾಜ್ಯ ಸರ್ಕಾರಗಳು ವಿದ್ಯಾರ್ಥಿಗಳು ದೂರ ಇದೆಯಂತ ಮತ್ತು ತಮ್ಮ ಊರಿನಲ್ಲಿ ಉನ್ನತ ಶಿಕ್ಷಣ ಪಡೆಯಲು ಕಾಲೇಜುಗಳು (College) ಇಲ್ಲ ಅಂತ ಕಾರಣ ಹೇಳಿ ಶಿಕ್ಷಣದಿಂದ ವಂಚಿತರಾಗಬಾರದು ಅಂತ ಅನೇಕ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುತ್ತಿದ್ದಾರೆ.


ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕೊಡಿಸೋದಕ್ಕೆ ಏನ್ ಪ್ಲ್ಯಾನ್ ಮಾಡಿದೆ ಛತ್ತೀಸ್‌ಘಡ್ ಸರ್ಕಾರ?


ಇಂತಹದೇ ಒಂದು ಪ್ರಯತ್ನ ಈಗ ಛತ್ತೀಸ್‌ಘಡ್ ಸರ್ಕಾರದಿಂದ ಸಹ ಆಗುತ್ತಿದೆ ನೋಡಿ. ದೂರದ ಪ್ರದೇಶಗಳು ಎಂದರೆ ರಾಜ್ಯದಲ್ಲಿ ತುಂಬಾನೇ ಒಳಗಿರುವಂತಹ ಊರುಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ರಾಜ್ಯದಾದ್ಯಂತ ಶಿಕ್ಷಣವನ್ನು ವಿಸ್ತರಿಸಲು ಪ್ರಯತ್ನಗಳನ್ನು ಮಾಡುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ದೂರದ ಊರಿಗೆ ಪ್ರಯಾಣಿಸುವ ಅಗತ್ಯವನ್ನು ತೆಗೆದು ಹಾಕುತ್ತದೆ.


ಆವಪಲ್ಲಿ, ಕುಕೊಂಡ ಮತ್ತು ಟೋಂಗ್ಪಾಲ್ ಸ್ಥಳಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಛತ್ತೀಸ್‌ಘಡ್ ಸರ್ಕಾರ ತೆರೆದಿದೆಯಂತೆ. ಛತ್ತೀಸ್‌ಘಡ್ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ದಿಗೆ ಕುಕೊಂಡ ಸಾಕ್ಷಿಯಾಗಿದೆ ಅಂತ ಹೇಳಬಹುದು.


ಈ ಹಿಂದೆ, ಒಳನಾಡಿನ ಹಳ್ಳಿಗಳ ವಿದ್ಯಾರ್ಥಿಗಳು ಜಿಲ್ಲಾ ಕೇಂದ್ರದಲ್ಲಿರುವ ಕಾಲೇಜನ್ನು ತಲುಪಲು ಸುಮಾರು 80 ಕಿಲೋ ಮೀಟರ್ ದೂರವನ್ನು ಕ್ರಮಿಸಬೇಕಾಗಿತ್ತು.


ಹತ್ತಿರದಲ್ಲಿ ಕಾಲೇಜುಗಳಿಲ್ಲದ ಕಾರಣ ಅನೇಕರು ಹೈಯರ್ ಸೆಕೆಂಡರಿ ಆದ ನಂತರ ಓದು ನಿಲ್ಲಿಸಿದ್ರಂತೆ..


"ಈ ಅಡೆತಡೆಯಿಂದಾಗಿ ಅನೇಕ ವಿದ್ಯಾರ್ಥಿಗಳು ಹೈಯರ್ ಸೆಕೆಂಡರಿ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ತಮ್ಮ ಓದಿಗೆ ಗುಡ್‌ಬೈ ಹೇಳಿದ್ದರು" ಎಂದು ರಾಜ್ಯ ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


"ಈಗ, ತಮ್ಮ ಹಳ್ಳಿಗಳಿಗೆ ಹತ್ತಿರದ ಪ್ರದೇಶಗಳಲ್ಲಿ ಕಾಲೇಜುಗಳ ಲಭ್ಯತೆಯೊಂದಿಗೆ, ಉನ್ನತ ಶಿಕ್ಷಣವು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗಿದೆ, ಇದು ಈ ದೂರದ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುತ್ತಿದೆ."


ಇದನ್ನೂ ಓದಿ: ಪದವಿ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿದ ಮಂಗಳೂರಿನ ವಿವಿ ಕಾಲೇಜ್


ಇದಲ್ಲದೆ, ಛತ್ತೀಸ್‌ಘಡ್ ಸರ್ಕಾರವು ಕಾಲೇಜು ಪ್ರವೇಶಕ್ಕೆ ಇದ್ದಂತಹ ವಯಸ್ಸಿನ ಮಿತಿಯನ್ನು ಸಹ ಈಗ ರದ್ದುಪಡಿಸಿತು, ಇದರಿಂದಾಗಿ ವಿವಿಧ ಕಾರಣಗಳಿಗಾಗಿ ತಮ್ಮ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸಿದವರಿಗೆ ಮತ್ತೆ ತಮ್ಮ ಶಿಕ್ಷಣವನ್ನು ಮುಂದುವರೆಸುವ ಅವಕಾಶವನ್ನು ಇದು ಒದಗಿಸುತ್ತದೆ.


ಸರ್ಕಾರದ ಈ ಪ್ರಯತ್ನಗಳಿಂದಾಗಿ, ಕಾಲೇಜು ದಾಖಲಾತಿಯಲ್ಲಿ ಏರಿಕೆ ಕಂಡು ಬಂದಿದೆಯಂತೆ..


"2022-23ರ ಶೈಕ್ಷಣಿಕ ವರ್ಷದಲ್ಲಿ, ಸರಿ ಸುಮಾರು 3,35,139 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ, ಇದು 2018-19 ರಲ್ಲಿ ದಾಖಲಾದ 2,26,373 ವಿದ್ಯಾರ್ಥಿಗಳಿಗೆ ಹೋಲಿಸಿದರೆ ಶೇಕಡಾ 48 ರಷ್ಟು ಗಮನಾರ್ಹ ಹೆಚ್ಚಳವನ್ನು ತೋರಿಸುತ್ತದೆ. ಈ ವರ್ಷ ಸುಮಾರು 1,08,766 ವಿದ್ಯಾರ್ಥಿಗಳು ಹೆಚ್ಚಿಗೆ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ" ಎಂದು ಛತ್ತೀಸ್‌ಘಡ್ ಸರ್ಕಾರ ಹೇಳಿದೆ.


ಹೆಚ್ಚುತ್ತಿರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು, ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರವು 33 ಹೊಸ ಸರ್ಕಾರಿ ಕಾಲೇಜುಗಳನ್ನು ಸ್ಥಾಪಿಸಿದೆ ಮತ್ತು 76 ಹೊಸ ಸರ್ಕಾರೇತರ ಕಾಲೇಜುಗಳನ್ನು ಅನುಮೋದಿಸಿದೆ ಎಂದು ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.


ಮಹಿಳಾ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಗೆ ಮಾಡಲು ಮುಂದಾಗಿರುವ ಸರ್ಕಾರ


ಈಗ ಮಹಿಳಾ ವಿದ್ಯಾರ್ಥಿಗಳಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಛತ್ತೀಸ್‌ಘಡ್ ಸರ್ಕಾರವು ದಾಪುಗಾಲು ಇಟ್ಟಿದೆ. ಬಾಲಕಿಯರು ಮತ್ತು ಮಹಿಳೆಯರಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ, ರಾಜ್ಯ ಸರ್ಕಾರವು 26 ಮಹಿಳಾ ಕಾಲೇಜುಗಳನ್ನು ಸ್ಥಾಪಿಸಿದೆ.


ಇದನ್ನೂ ಓದಿ: Medical College ಕನಸು ಕಂಡಿದ್ದವರಿಗೆ ನಿರಾಸೆ, ಅಸಮಾಧಾನದಲ್ಲಿ ಜನತೆ


2018-19ರ ಶೈಕ್ಷಣಿಕ ವರ್ಷದಲ್ಲಿ 1,34,391 ವಿದ್ಯಾರ್ಥಿನಿಯರು ಕಾಲೇಜುಗಳಿಗೆ ದಾಖಲಾಗಿದ್ದು, 91,982 ಪುರುಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದಾಗ್ಯೂ, 2022-23 ರಲ್ಲಿ, ಪುರುಷ ವಿದ್ಯಾರ್ಥಿಗಳ ಸಂಖ್ಯೆ 1,28,310 ಕ್ಕೆ ಏರಿದರೆ, ಮಹಿಳಾ ವಿದ್ಯಾರ್ಥಿಗಳ ಸಂಖ್ಯೆ 2,06,829 ಕ್ಕೆ ಏರಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




ಛತ್ತೀಸ್‌ಘಡ್ ದ ಕಾಲೇಜುಗಳು ತಮ್ಮ ಮೂಲಸೌಕರ್ಯ ಮತ್ತು ಸಂಪನ್ಮೂಲಗಳಿಗಾಗಿ ಮಾನ್ಯತೆ ಪಡೆಯುತ್ತಿವೆ. 'ಎಜುಕೇಶನ್ ವರ್ಲ್ಡ್ ಅಟೋನಮಸ್ ಕಾಲೇಜ್ ರ್ಯಾಂಕಿಂಗ್ 2023-2024' ರಲ್ಲಿ ರಾಜ್ಯದ ಆರು ಕಾಲೇಜುಗಳು ಅಗ್ರ 100 ರ ಪಟ್ಟಿಯಲ್ಲಿ ಸ್ಥಾನವನ್ನು ಗಳನ್ನು ಗಳಿಸಿವೆ.

First published: