• Home
  • »
  • News
  • »
  • jobs
  • »
  • ChatGPT ನಿಷೇಧ ಮಾಡೋದಿಲ್ಲ ಎಂದ ಬೆಂಗಳೂರು ಶಾಲೆಗಳು

ChatGPT ನಿಷೇಧ ಮಾಡೋದಿಲ್ಲ ಎಂದ ಬೆಂಗಳೂರು ಶಾಲೆಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಂಪೂರ್ಣವಾಗಿ ChatGPT ನಿಷೇಧಿಸಿದರೆ ವಿದ್ಯಾರ್ಥಿಗಳು ಕದ್ದುಮುಚ್ಚಿ ಅದನ್ನೇ ಬಳಸಲು ಪ್ರಯತ್ನಿಸುತ್ತಾರೆ. ಆ ಕಾರಣದಿಂದ ಇದನ್ನು ಬಳಸಬೇಡಿ ಎಂದು ಹೇಳುವುದಕ್ಕಿಂತ ಬಳಸದೇ ಇರುವುದು ನಿಮಗೇ ಉತ್ತಮ ಎಂದು ಮಕ್ಕಳಿಗೆ ಮನವರಿಕೆ ಮಾಡುವುದು ಮುಖ್ಯವಾಗಿರುತ್ತದೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಪ್ರತೀ ಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ (Students) ಕೆಲವೊಂದು ಪ್ರಾಯೋಗಿಕ ಚಟುವಟಿಕೆ ನೀಡಲಾಗುತ್ತದೆ. ಪ್ರಾಜೆಕ್ಟ್​​ ವರ್ಕ್​, ಹೋಮ್​ ವರ್ಕ್ (Home Work)​ ಹೀಗೆ ಹಲವಾರು ಅಸೈನ್ಮೆಂಟ್​ ನೀಡಲಾಗುತ್ತದೆ. ವಿದ್ಯಾರ್ಥಿಗಳು ಇದನ್ನು ಸರಿಯಾದ ಕ್ರಮದಲ್ಲಿ ಮಾಡಿ ಮುಗಿಸಿದರೆ ಮಾತ್ರ ಅಂಕ ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ChatGPT ಬಳಕೆಯನ್ನು ವಿದ್ಯಾರ್ಥಿಗಳು ಹೆಚ್ಚಾಗಿ ಮಾಡುತ್ತಿದ್ದಾರೆ ಎಂಬ ದೂರು ಕೇಳಿ ಬರುತ್ತಿದೆ. ವಿದ್ಯಾರ್ಥಿಗಳಿಗೆ ನೀಡುವ ಕಾರ್ಯಯೋಜನೆಗಳಲ್ಲಿ ನಕಲು ಮಾಡಿರುವ ರೀತಿ ಕಂಡುಬರುತ್ತಿತ್ತು. ಆ ಕಾರಣದಿಂದ ChatGPTಯನ್ನು ನ್ಯೂಯಾರ್ಕ್‌ನ ಶಾಲೆಗಳಲ್ಲಿ (School) ನಿಷೇಧಿಸಲಾಗಿದೆ.


ಇದು ಹೊರ ದೇಶದಲ್ಲಿ ಬ್ಯಾನ್​ ಆಗಿದ್ದರೂ ಸಹ ಬೆಂಗಳೂರಿನ ಶಾಲೆಗಳು ಈ ತಂತ್ರಜ್ಞಾನವನ್ನು ನಿಭಾಯಿಸಲು ಮತ್ತು ಇದಕ್ಕೆ ಹೊಸ ಮಾರ್ಗ ಕಂಡುಕೊಳ್ಳಲು ಪ್ರಯತ್ನ ಮಾಡುತ್ತಿವೆ. ಕೃತಕ ಬುದ್ಧಿಮತ್ತೆ ಸಂಶೋಧನಾ ಕಂಪನಿಯಾದ OpenAI ಅಭಿವೃದ್ಧಿಪಡಿಸಿದ, ನಾವು ಕೇಳಿದ ಪ್ರಶ್ನೆಗೆ ವಿವರವಾದ ಉತ್ತರಗಳನ್ನು ಬರವಣಿಗೆ ರೂಪದಲ್ಲಿ ನೀಡುವ ಈ ChatGPT ವ್ಯಕ್ತಿಯು ಕೇಳುವ ಸಾಲು ಸಾಲು ಪ್ರಶ್ನೆಗಳಿಗೆ ಉತ್ತರಿಸುವ ಮತ್ತು ಏನಾದರು ತಪ್ಪು ಉತ್ತರವನ್ನು ನೀಡಿದ್ದರೆ ಅದನ್ನು ಒಪ್ಪಿಕೊಳ್ಳುವ ಗುಣವನ್ನು ಹೊಂದಿದೆ.


ಇದನ್ನು ಬೆಂಗಳೂರಿನ ಶಾಲೆಗಳಲ್ಲಿ ಇನ್ನೂ ನಿಷೇಧಿಸಿಲ್ಲ ಮತ್ತು ನಿಷೇಧಿಸುವ ಕುರಿತಾಗಿಯೂ  ಯಾವ ವಿಚಾರವನ್ನೂ ಮಾಡಿಲ್ಲ. ವಿದ್ಯಾರ್ಥಿಗಳ ಬಳಿ ಇದನ್ನು ಬಳಸ ಬೇಡಿ ಎಂದರೂ ಸಹ ಕದ್ದು ಮುಚ್ಚಿ ಬಳಸುವ ಹಲವು ಸಾಧ್ಯತೆಗಳಿರುತ್ತದೆ ಆದ್ದರಿಂದ ನಾವು ಅಷ್ಟೋಂದು ಒತ್ತಾಯ ಹೇರುತ್ತಿಲ್ಲ ಎಂದು ಹೇಳಿದ್ದಾರೆ ಈ ಕುರಿತು ಇನ್ನಷ್ಟು ಮಾಹಿತಿ ಇಲ್ಲಿದೆ.


ಇದನ್ನೂ ಓದಿ: Viral News: ಲಂಡನ್‌ನಲ್ಲಿ ನಡೆದ ಪದವಿ ಪ್ರದಾನ ಸಮಾರಂಭದಲ್ಲಿ ಕನ್ನಡ ಧ್ವಜ ಹಾರಿಸಿದ ವಿದ್ಯಾರ್ಥಿ


ನ್ಯೂಯಾರ್ಕ್ ಸಾರ್ವಜನಿಕ ಶಾಲೆಗಳು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಇದು ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿಷೇಧ ಹೇರಿದೆ. ಆದರೆ ಬೆಂಗಳೂರಿನ ಶಾಲೆಯಲ್ಲಿ ಈ ಕುರಿತು ಚರ್ಚೆ ನಡೆದಾಗ ಸಮಸ್ಯೆಯನ್ನು ತಪ್ಪಿಸಲು ತಮ್ಮದೇ ಆದ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ.


ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಯಾರಿಗೂ ಸಹ ಇದನ್ನು ಬಳಸುವಂತೆ ಪ್ರೇರೇಪಿಸುವುದಿಲ್ಲ. ಬದಲಾಗಿ ನಿಷೇಧವನ್ನೂ ಸಹ ನಾವು ಹೇರುವುದಿಲ್ಲ ಎಂದು ಗ್ರೀನ್‌ವುಡ್ ಹೈ ಇಂಟರ್‌ನ್ಯಾಶನಲ್‌ನ ಪ್ರಾಂಶುಪಾಲ ಅಲೋಶಿಯಸ್ ಡಿ'ಮೆಲ್ಲೊ ಹೇಳಿದರು. ಬೆಂಗಳೂರಿನ ಕೆನಡಿಯನ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ಶಾಲೆಯ ಮುಖ್ಯಸ್ಥ ಟೆಡ್ ಮೋಕ್ರಿಶ್ ಕೂಡಾ ಈ ಕುರಿತು ಇದೇ ರೀತಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.




ಸಂಪೂರ್ಣವಾಗಿ ChatGPT ನಿಷೇಧಿಸಿದರೆ ವಿದ್ಯಾರ್ಥಿಗಳು ಕದ್ದುಮುಚ್ಚಿ ಅದನ್ನೇ ಬಳಸಲು ಪ್ರಯತ್ನಿಸುತ್ತಾರೆ. ಆ ಕಾರಣದಿಂದ ಇದನ್ನು ಬಳಸಬೇಡಿ ಎಂದು ಹೇಳುವುದಕ್ಕಿಂತ ಬಳಸದೇ ಇರುವುದು ನಿಮಗೇ ಉತ್ತಮ ಎಂದು ಮಕ್ಕಳಿಗೆ ಮನವರಿಕೆ ಮಾಡುವುದು ಮುಖ್ಯವಾಗಿರುತ್ತದೆ. ವೈಟ್‌ಫೀಲ್ಡ್ ಗ್ಲೋಬಲ್ ಸ್ಕೂಲ್‌ನ ಶಾರದ ಚಂದ್ರಶೇಖರ್ ಅವರೂ ಸಹ ಇದೇ ರೀತಿ ಮಾತನಾಡಿದ್ದಾರೆ. ಯಾರು ಕೃತಿಚೌರ್ಯ ಮಾಡುತ್ತಾರೆ ಎಂಬುದನ್ನು ಶಿಕ್ಷಕರು ಕಂಡುಹಿಡಿಯುತ್ತಾರೆ. ಶಿಕ್ಷಕರನ್ನು ಈ ನಿಟ್ಟಿನಲ್ಲಿ ಸಜ್ಜುಗೊಳಿಸಲಾಗಿದೆ. ಅದೇನಾದರೂ ChatGPTಯಿಂದ ಬಟ್ಟಿ ಇಳಿಸಲಾದ ಸಂಗತಿ ಎಂದು ತಿಳಿದು ಬಂದರೆ ಅದನ್ನು  ನಿರಾಕರಿಸುವ ಕಾರ್ಯವನ್ನು ಇವರೇ ಮಾಡುತ್ತಾರೆ.


ಗೂಗಲ್​ನಂತೆ ಇದರ ಕಾರ್ಯ


ಗೂಗಲ್​ನಂತೆ ಕೆಲಸ ಮಾಡುವ ಇನ್ನೊಂದು ಸಾಧನ ಇದಾಗಿದ್ದು ಈಗಾಗಲೇ ಹಲವಾರು ಜನ ಇದನ್ನು ಉಪಯೋಗಿಸುತ್ತಿದ್ದಾರೆ. ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ನ ಪ್ರಕಾರ ಇದು ಕಾರ್ಯ ನಿರ್ವಹಿಸುತ್ತದೆ. ಜನರು ಕೇಳುವ ಪ್ರಶ್ನೆಗಳಿಗೆ ಲಿಖಿತ ರೂಪದಲ್ಲಿ ಉದ್ದ ವಾಕ್ಯಗಳಲ್ಲಿ ಉತ್ತರ ನೀಡುತ್ತದೆ.

First published: