Chat GPT3 Wharton MBA ಬರೆದು ಪಾಸ್ ಆಗಿದೆ. 2023 ಪ್ರಾರಂಭದಿಂದಲೂ Chat GPT ಎಂಬ ಆನ್‌ಲೈನ್ (Online) ಸಾಫ್ಟ್‌ವೇರ್ ಅಪ್ಲಿಕೇಶನ್ (Application) ಪ್ರಪಂಚದ ಗಮನವನ್ನು ಸೆಳೆಯುತ್ತಿದೆ. ಮಾನವರಾಗಿ ನಾವು ನಮ್ಮ ಇಂದ್ರಿಯಗಳ ಮೂಲಕ ಸ್ವೀಕರಿಸುವ ಮಾಹಿತಿಯ ಆಧಾರದ ಮೇಲೆ ಜಗತ್ತನ್ನು (World) ಅರ್ಥಮಾಡಿಕೊಳ್ಳುತ್ತೇವೆ. ಉದಾಹರಣೆಗೆ (Example) ನಾವು ವಸ್ತುವನ್ನು ಗುರುತಿಸ ಬೇಕಾದರೆ ಅದರ ಗಾತ್ರ, ಆಕಾರ, ಬಣ್ಣ ಅಗಲ, ಎತ್ತರ ಮತ್ತು ತೂಕದಂತಹ ಗುಣಲಕ್ಷಣಗಳಿಂದ ಆ ವಸ್ತುವನ್ನು ಗುರುತಿಸುತ್ತೇವೆ.
ಆದರೆ ಈ ಅಪ್ಲಿಕೇಶನ್ ಇಂಟರ್ನೆಟ್‌ನಿಂದ ಮಾಹಿತಿಯನ್ನು ಪಡೆದುಕೊಂಡು ಮತ್ತೆ ನಮಗೆ ಇಂಟರ್ನೆಟ್ ಮೂಲಕವೇ ಮಾಹಿತಿಯನ್ನು ಹಿಂದಿರುಗಿಸುತ್ತದೆ. ಆದರೆ ಶಿಕ್ಷಣ ಕ್ಷೇತ್ರಕ್ಕೆ ಇದೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇದೀಗ ಬಂದ ವರದಿಯ ಪ್ರಕಾರ ChatGPT ಪರೀಕ್ಷೆಯನ್ನೂ ಸಹ ಬರೆದು ಪಾಸ್ ಆಗಿದೆ!
ಇದು ಉತ್ತಮ ವ್ಯಾಖ್ಯಾನದೊಂದಿಗೆ ವಾಕ್ಯಗಳನ್ನು ರಚಿಸಿ ನಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಇಂದಿನ ಸಮಕಾಲೀನ ಸಂದರ್ಭದಲ್ಲಿ ಈ ಅಪ್ಲಿಕೇಶನ್ ನಾವು ಊಹಿಸಿದ್ದಕ್ಕಿಂತ ಹಲವು ಪಟ್ಟು ಹೆಚ್ಚು ಶಕ್ತಿಶಾಲಿ ಎಂದು ವಿವಿಧ ಸಂಶೋಧಕರು ಹೇಳುತ್ತಿದ್ದಾರೆ.
ಇದನ್ನೂ ಓದಿ: Ballari: ವಿದ್ಯಾರ್ಥಿಗಳಿಗೆ ಗೇಟ್ಪಾಸ್ ನೀಡಿದ ಡಿಸಿಯನ್ನು ಅಮಾನತು ಮಾಡಿ; ಸಿದ್ಧರಾಮಯ್ಯ ಆಗ್ರಹ
ಈಗಿನ ದಿನಮಾನದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಕೋರ್ಸ್‌ಗಳನ್ನು ಒದಗಿಸುವ ವಾರ್ಟನ್ ಸ್ಕೂಲ್‌ನ ಪ್ರಾಧ್ಯಾಪಕ ಕ್ರಿಶ್ಚಿಯನ್ ಟೆರ್ವಿಶ್ ಈ ಅಪ್ಲಿಕೇಶನ್‌ನ ಕುರಿತು ಮಹತ್ವದ ಸಂಶೋಧನಾ ಪ್ರಬಂಧವನ್ನು ಪ್ರಕಟಿಸಿದ್ದಾರೆ. ಎಂಬಿಎ ಕೋರ್ಸ್‌ನಲ್ಲಿ ಆಪರೇಷನ್ ಮ್ಯಾನೇಜ್‌ಮೆಂಟ್ ಪ್ರಮುಖ ವಿಷಯ ಒಂದನ್ನು ಇದರಲ್ಲಿ ತಿಳಿಸಿದೆ.
ಅಂತಿಮ ವರ್ಷದ ಪರೀಕ್ಷೆಯನ್ನು Chat GPT3 ಬರೆದು ಪಾಸ್ ಆಗಿದೆ
GPT3 ಚಾಟ್ ಮಾಡಿ ವಾರ್ಟನ್ ಎಂಬಿಎ ಪರೀಕ್ಷೆಯ ಎಲ್ಲಾ ಪ್ರಶ್ನೆಗಳಿಗೂ ಸಹ ಉತ್ತರ ನೀಡಿದೆ. ಈ ಕುರಿತು ಅಧ್ಯಯನ ಮಾಡಲಾಗಿದೆ. ಈ ಪರೀಕ್ಷೆಯಲ್ಲಿನ ಚಾಟ್ ಜಿಪಿಟಿ ಕಾರ್ಯಗಳ ಕುರಿತು ವಿಶ್ಲೇಷಕರು ಹೇಳಿದ್ದಾರೆ. ಚಾಟ್ ಜಿಪಿಟಿ3 ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದೆ. ಅಂಕಗಣಿತದ ಲೆಕ್ಕಾಚಾರದಲ್ಲಿ ಕೂಡಾ ಸಾಕಷ್ಟು ಪರಿಣಿತಿ ಹೊಂದಿದೆ ಎಂದು ತಿಳಿಸಿದ್ದಾರೆ. ಹಿಂದೊಮ್ಮೆ ಮಾಡಿದ ತಪ್ಪನ್ನು ತಿದ್ದಿಕೊಂಡು ಈಗ ಸರಿಯಾದ ಉತ್ತರವನ್ನು ನೀಡುತ್ತದೆ ಎಂದು ತಿಳಿದುಬಂದಿದೆ.
ಐಐಟಿ-ಬೆಂಗಳೂರಿನಲ್ಲಿ ಸಮಿತಿ ರಚನೆ
ಬೆಂಗಳೂರಿನ ಮತ್ತೊಂದು ಶಿಕ್ಷಣ ಸಂಸ್ಥೆ, ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಬೆಂಗಳೂರು (IIIT-B) ಚಾಟ್‌ಜಿಪಿಟಿ ಅನ್ನು ಬಳಸುವ ಬಗ್ಗೆ ರಚನಾತ್ಮಕ ಚೌಕಟ್ಟನ್ನು ಅಭಿವೃದ್ಧಿಪಡಿಸಲು ಸಮಿತಿಯನ್ನು ರಚಿಸಿದೆ.
IIIT-B ಯ ನಿರ್ದೇಶಕರಾದ ದೇಬಬ್ರತ ದಾಸ್, ಚಾಟ್‌ಜಿಪಿಟಿ ತುಂಬಾ ಸಾಮಾನ್ಯವಾಗಿದೆ ಮತ್ತು ವಾಡಿಕೆಯ ದಾಖಲೆ, ಸರಳ ಪ್ರೋಗ್ರಾಮಿಂಗ್ ಇತ್ಯಾದಿಗಳನ್ನು ಬರೆಯಲು ಉಪಯುಕ್ತವಾಗಿದೆ ಎಂದು ಹೇಳಿದರು.
ಬೆಂಗಳೂರಿನ ಶಾಲೆಗಳು ChatGPT ಮೇಲೆನಿಷೇಧ ಹೇರಿದ್ದಾರೆ
"ನಮ್ಮ ಕೆಲವು ಕಾರ್ಯಯೋಜನೆಯು ಆಳವಾದ ತಂತ್ರಜ್ಞಾನವಾಗಿದೆ, ಅಲ್ಲಿ ಚಾಟ್‌ಜಿಪಿಟಿ ಸಹಾಯಕವಾಗುವುದಿಲ್ಲ. ಆದರೆ ನಾವು ಕೃತಿಚೌರ್ಯದ ಬಗ್ಗೆ ಯೋಚಿಸಬೇಕಾಗಿದೆ. ತಾಂತ್ರಿಕವಲ್ಲದ ವಿಷಯಗಳಲ್ಲಿ ಇದು ಅನ್ವಯಿಸುತ್ತದೆ. ಹೀಗಾಗಿ ಸಮಿತಿಯು ಚಾಟ್‌ಜಿಪಿಟಿ ಗೆ ಸಂಬಂಧಿಸಿದ ಕೆಲ ನಿಯಮಗಳ ಪಟ್ಟಿಯನ್ನು ಶೀಘ್ರದಲ್ಲೇ ರಚಿಸುತ್ತದೆ" ಎಂದು ಅವರು ತಿಳಿಸಿದರು.
"ಚಾಟ್‌ಜಿಟಿಪಿಯಿಂದ ಉಂಟಾಗುವ ಸವಾಲನ್ನು ತಪ್ಪಿಸಲು ಕ್ರಮ"
ಹೌದು ದಯಾನಂದ ಸಾಗರ್ ವಿಶ್ವವಿದ್ಯಾಲಯದ ಉಪಕುಲಪತಿ ಕೆ.ಎನ್.ಬಾಲಸುಬ್ರಹ್ಮಣ್ಯ ಮೂರ್ತಿ ಮಾತನಾಡಿ, ಚಾಟ್‌ಜಿಪಿಟಿಯಿಂದ ಎದುರಾಗುವ ಸವಾಲನ್ನು ತಪ್ಪಿಸಲು, ಸಾಧ್ಯವಾದಷ್ಟು ತಾಂತ್ರಿಕ ಮತ್ತು ಗಣಿತದ ಕಾರ್ಯಯೋಜನೆಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ