• ಹೋಂ
  • »
  • ನ್ಯೂಸ್
  • »
  • jobs
  • »
  • Education: ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ, ಖಾಸಗಿ ಶಾಲೆಗಳ ಮೇಲೆ ಹೆಚ್ಚಾಗುತ್ತಿರುವ ಪೋಷಕರ ವ್ಯಾಮೋಹ! ಕಾರಣವೇನು?

Education: ಸರ್ಕಾರಿ ಶಾಲೆಗಳ ಬಗ್ಗೆ ತಾತ್ಸಾರ, ಖಾಸಗಿ ಶಾಲೆಗಳ ಮೇಲೆ ಹೆಚ್ಚಾಗುತ್ತಿರುವ ಪೋಷಕರ ವ್ಯಾಮೋಹ! ಕಾರಣವೇನು?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜಗತ್ತಲ್ಲಿ ಎಲ್ಲಾ ಕಡೆ ಶಿಕ್ಷಣ ಪ್ರಮುಖವಾದ ಮತ್ತು ಮಹತ್ವಾಕಾಂಕ್ಷೆಯ ಒಂದು ಕಲಿಕೆ. ಇದಕ್ಕೆ ಭಾರತ ಹೊರತಾಗಿಲ್ಲ. ಭಾರತದಲ್ಲೂ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಸ್ಥಾನಮಾನವಿದೆ. ಎಲ್ಲರೂ ಕೂಡ ಶಿಕ್ಷಣಕ್ಕೆ ಒತ್ತು ನೀಡುತ್ತಲೇ ಬಂದಿದ್ದಾರೆ. ಇತ್ತಿಚಿನ ಎಫ್‌ಎಸ್‌ಜಿ ವರದಿಯು ಭಾರತದಲ್ಲಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳು ಹೆಚ್ಚು ಪ್ರಸ್ತುತವಾಗಿದೆ ಎಂದಿವೆ.

ಮುಂದೆ ಓದಿ ...
  • Trending Desk
  • 3-MIN READ
  • Last Updated :
  • Share this:

ಶಿಕ್ಷಣ (Education) ಅನ್ನೋದು ಮನುಷ್ಯನಿಗೆ ಪ್ರತಿ ಅಂಶಗಳ ಬಗ್ಗೆ ತಿಳಿಸಿಕೊಡುತ್ತದೆ. ಜೀವನಕ್ಕೆ ಮತ್ತು ಆದರ್ಶ ಜೀವನಕ್ಕೆ ಬೇಕಾದ ಪ್ರತಿ ವಿಚಾರಗಳನ್ನು ಕಲಿಸುತ್ತದೆ. ಶಾಲಾ(School) ಮಟ್ಟದಲ್ಲಿ ಒಂದು ರೀತಿಯ ಶಿಕ್ಷಣವಾದರೆ ಮುಂದೆ ಹಂತಹಂತಗಳು ಬೇರೆಯಾಗುತ್ತಾ ಬೇರೆ ಉನ್ನತ ಮಟ್ಟದ ಶಿಕ್ಷಣವನ್ನು ಕಾಲೇಜುಗಳು(College) ವಿದ್ಯಾರ್ಥಿಗಳಿಗೆ (Students) ಕಲಿಸುತ್ತದೆ. ಶಿಕ್ಷಣ ಎಂಬುವುದು ಎಂದೂ ಅಳಿಯದ ಒಂದು ಸಂಸ್ಕೃತಿ (culture), ಸಾಧನ ಎನ್ನಬಹುದು, ಹಿಂದೆ ಗುರುಕುಲ ಪದ್ಧತಿ (Gurukula System), ಮನೆ ಪಾಠ ಎಂತಲ್ಲಾ ಶಿಕ್ಷಣವನ್ನು ಹೇಳಿಕೊಡಲಾಗುತ್ತಿತ್ತು. ಆದರೆ ಈಗ ಕಾನ್ವೆಂಟ್‌, ಅಂಗನವಾಡಿ, ಶಾಲೆ, ಕಾಲೇಜುಗಳು ಕಲಿಸುವ ಮಾದರಿ, ಸ್ಥಳಗಳು ಬದಲಾವಣೆಯಾಗಿದೆ ಅಷ್ಟೇ.


 ಜಗತ್ತಲ್ಲಿ ಎಲ್ಲಾ ಕಡೆ ಶಿಕ್ಷಣ ಪ್ರಮುಖವಾದ ಮತ್ತು ಮಹತ್ವಾಕಾಂಕ್ಷೆಯ ಒಂದು ಕಲಿಕೆ. ಇದಕ್ಕೆ ಭಾರತ ಹೊರತಾಗಿಲ್ಲ. ಭಾರತದಲ್ಲೂ ಶಿಕ್ಷಣ ಕ್ಷೇತ್ರಕ್ಕೆ ದೊಡ್ಡ ಸ್ಥಾನಮಾನವಿದೆ. ಎಲ್ಲರೂ ಕೂಡ ಶಿಕ್ಷಣಕ್ಕೆ ಒತ್ತು ನೀಡುತ್ತಲೇ ಬಂದಿದ್ದಾರೆ. ಇತ್ತಿಚಿನ ಎಫ್‌ಎಸ್‌ಜಿ ವರದಿಯು ಭಾರತದಲ್ಲಿ ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳು ಹೆಚ್ಚು ಪ್ರಸ್ತುತವಾಗಿದೆ ಎಂದಿವೆ. ಈ ವಿಚಾರವನ್ನೂ ಎಲ್ಲರೂ ಒಪ್ಪಬೇಕಾಗಿದ್ದೇ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟ ಇಲ್ಲ ಎಂದು ಉತ್ತಮ ಶಿಕ್ಷಣಕ್ಕಾಗಿ ಪೋಷಕರು ಖಾಸಗಿ ಶಾಲೆಗಳ ಹಿಂದೆ ಓಡುತ್ತಿದ್ದಾರೆ.


ಖಾಸಗಿ ಶಾಲೆಗಳ ಮೇಲೆ ಪೋಷಕರ ಒಲವು


ಎಫ್‌ಎಸ್‌ಜಿ ವರದಿಯ ಪ್ರಕಾರ ಭಾರತದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಗಳಿಗೆ ಪೈಪೋಟಿಯಾಗಿ ಸುಮಾರು 50% ಮಕ್ಕಳಿಗೆ ಕೈಗೆಟುಕುವಂತೆ ಶಿಕ್ಷಣ ನೀಡುವ ಖಾಸಗಿ ಶಾಲೆಗಳು (APS) ಇದೆ. ಭಾರತದಲ್ಲಿ, ಈ ಕಡಿಮೆ-ಶುಲ್ಕ ಪಾವತಿಸಲಾಗುವ ಶಾಲೆಗಳು ಅಂದಾಜು $5.2 ಶತಕೋಟಿ ಮಾರುಕಟ್ಟೆ ಗಾತ್ರವನ್ನು ಹೊಂದಿವೆ. 87% ನಗರದ ಕಡಿಮೆ ಆದಾಯ ಹೊಂದಿರುವ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗಿಂತ ಇಂತಹ ಶಾಲೆಗಳಿಗೆ ಕಳುಹಿಸಲು ಬಯಸುತ್ತಾರೆ ಎಂದು ವರದಿಯು ಹೇಳಿದೆ.


ಇಂಗ್ಲಿಷ್‌ ಮಾಧ್ಯಮದ ಕಲ್ಪನೆ ಈಗ ಹೆಚ್ಚಿದ್ದು ಇಂತಹ ಶಾಲೆಗಳು ಪೋಷಕರ ಮೊದಲ ಆಯ್ಕೆ ಕೂಡ ಹೌದು ಎಂದು ಸೆಂಟ್ರಲ್ ಸ್ಕ್ವೇರ್ ಫೌಂಡೇಶನ್ (CSF) ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶವೇತಾ ಶರ್ಮಾ ಕುಕ್ರೇಜಾ ಹೇಳಿದ್ದಾರೆ.


ಇದನ್ನೂ ಓದಿ: Vivek Ramaswamy: ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗ್ತಾರಾ ಭಾರತೀಯ? ನಾನೇ ಪ್ರಬಲ ಸ್ಪರ್ಧಿ ಎಂದ ವಿವೇಕ್ ರಾಮಸ್ವಾಮಿ


ಸರ್ಕಾರಿ ಶಾಲೆಗಳ ಶಿಕ್ಷಣದ ಬಗ್ಗೆ ಕಳವಳ


ಭಾರತದಲ್ಲಿ ಸರ್ಕಾರಿ ಸವಲತ್ತು ಬೇಕು ಎನ್ನುವವರು ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುತ್ತಾರೆ. ಸರ್ಕಾರಿ ಶಾಲೆ ಎಂದರೆ ತಾತ್ಸಾರ ಮನೋಭಾವ. ಹೆಚ್ಚು ಡೊನೇಷನ್ ಕೊಟ್ಟು ಖಾಸಗಿ ಶಾಲೆಯಲ್ಲಿ ಓದಿದರೆ ಮಾನ್ಯತೆ ಎಂಬ ತಪ್ಪು ತಿಳುವಳಿಕೆ ನಮ್ಮ ಪೋಷಕರಲ್ಲಿದೆ. ಪೋಷಕರು ತಮ್ಮ ಮಕ್ಕಳು ಖಾಸಗಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದಿದರೆ ಮತ್ತು ಕಂಪ್ಯೂಟರ್ ಕಲಿತರೆ ಉತ್ತಮ ಉದ್ಯೋಗಾವಕಾಶವನ್ನು ಹೊಂದಿರುತ್ತಾರೆ ಎಂದು ಭಾವಿಸುತ್ತಾರೆ.
ಶಿಕ್ಷಣ ಒಂದು ಮಾರಾಟ ಸರುಕು


ಈ ಎಲ್ಲಾ ಕಾರಣಗಳಿಂದಾಗಿ ನಮ್ಮ ದೇಶದಲ್ಲಿ ಶಿಕ್ಷಣ ಕೂಡ ದುಬಾರಿಯಾಗಿ ಬಿಟ್ಟಿದೆ. ತಮ್ಮ ಮಕ್ಕಳ ಇಷ್ಟದ ಶಾಲೆಗಿಂತ ನೆರೆಹೊರೆಯವರ ಮಕ್ಕಳ ಶಾಲೆ ನೋಡಿ ಸೇರಿಸುವ ನೀತಿಯಿಂದಾಗಿ ಶಿಕ್ಷಣ ಒಂದು ಮಾರಾಟದ ಸರುಕು ಆಗಿದೆ. ಹೆಚ್ಚಿನ ಪೋಷಕರು ಸರ್ಕಾರಿ ಶಾಲೆಗಳಲ್ಲಿ ಕಳಪೆ ಶಿಕ್ಷಣ ಮತ್ತು ಸೌಲಭ್ಯಗಳ ಕೊರತೆ ಇದೆ ಎಂಬ ಹಣೆಪಟ್ಟಿಯನ್ನು ಕಟ್ಟಿಬಿಟ್ಟಿದ್ದಾರೆ. ಪ್ರಸ್ತುತ, ಖಾಸಗಿ ಮತ್ತು ಸಾರ್ವಜನಿಕ ಶಾಲೆಗಳ ಕಲಿಕೆಯ ಫಲಿತಾಂಶಗಳನ್ನು ಪರಿಶೀಲಿಸಲು ಭಾರತದಲ್ಲಿ ಯಾವುದೇ ಮೆಟ್ರಿಕ್‌ಗಳು ಲಭ್ಯವಿಲ್ಲ.


ವಾಸ್ತವವಾಗಿ, ಕಡಿಮೆ ಶುಲ್ಕದ ಖಾಸಗಿ ಶಾಲೆಗಳಲ್ಲಿ ಶಿಕ್ಷಣದ ವೆಚ್ಚದ ಕಲಿಕೆಯ ಫಲಿತಾಂಶಗಳು ಸರ್ಕಾರಿ ಶಾಲೆಗಳಿಗೆ ಹೋಲುತ್ತವೆ ಎನ್ನುತ್ತಾರೆ ಶರ್ಮಾ ಕುಕ್ರೇಜಾ.


ಖಾಸಗಿ ಶಾಲೆ ಮತ್ತು ಸರ್ಕಾರಿ ಶಾಲೆ ಎಂಬ ವಾದದ ನಡುವೆ, ಭಾರತದಲ್ಲಿನ ಮಕ್ಕಳು ಪ್ರಸ್ತುತ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದಲ್ಲಿ ಹಿಂದುಳಿದಿದ್ದಾರೆ ಎಂದು ಕೆಲ ವರದಿಗಳು ಹೇಳುತ್ತವೆ. ಆದಾಗ್ಯೂ, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಶಿಕ್ಷಣದ ಗುಣಮಟ್ಟವನ್ನು ಬದಲಾಯಿಸಲು ಹೊಸ ದಾರಿ ಎನ್ನಲಾಗಿದೆ.

Published by:Rajesha M B
First published: