• ಹೋಂ
 • »
 • ನ್ಯೂಸ್
 • »
 • Jobs
 • »
 • CBSE Webinar: ಮಕ್ಕಳ ಕೌಶಲ್ಯಾಭಿವೃದ್ಧಿಗೆ CBSE ಹೊಸ ಪ್ರಯತ್ನ; 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವೆಬಿನಾರ್​

CBSE Webinar: ಮಕ್ಕಳ ಕೌಶಲ್ಯಾಭಿವೃದ್ಧಿಗೆ CBSE ಹೊಸ ಪ್ರಯತ್ನ; 6ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ವೆಬಿನಾರ್​

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ವಿದ್ಯಾರ್ಥಿಗಳ ಕೌಶಲಲ್ಯವನ್ನು ಹೆಚ್ಚಿಸುವ ಸಲುವಾಗಿ CBSE ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದೆ. ವಿಶೇಷವೆಂದರೆ ಎಲ್ಲಾ ವಿದ್ಯಾರ್ಥಿಗಳಿಗೂ ಈ ತರಬೇತಿ ಸಿಗುವಂತಾಗಲಿ ಎಂದು ಯುಟ್ಯೂಬ್ ಮೂಲಕ ಈ ವೆಬಿನಾರ್​ ನಡೆಸಲಾಗುತ್ತಿದೆ.

 • Share this:

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಗುರಿಯ ಅನುಸಾರವಾಗಿ 6-8 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಹಲವಾರು ಕೌಶಲ್ಯ ತರಬೇತಿಗಳನ್ನು ಪ್ರಾರಂಭಿಸಿದೆ. ಇದು 6 ಹಾಗೂ 8ನೇ ತರಗತಿಗಳಿಗೆ ಮುಖ್ಯವಾಘಿ ನೀಡಲಾಗುತ್ತಿರುವ ತರಬೇತಿಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ವೃತ್ತಿಪರ ಶಿಕ್ಷಣವನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು ಎಂದು ಈ ರೀತಿ ಮಾಡಲಾಗುತ್ತಿದೆ. ಈ ಪ್ರಯತ್ನವನ್ನು ಮುನ್ನಡೆಸುವ ಸಲುವಾಗಿ, ಕೌಶಲ್ಯ ಮಾಡ್ಯೂಲ್‌ಗಳ ಬಗ್ಗೆ ಸಾಮೂಹಿಕ ಅರಿವು ಮೂಡಿಸಲು CBSE ಮೇ 1 ರಿಂದ ವೆಬ್‌ನಾರ್‌ಗಳನ್ನು ಆಯೋಜಿಸುತ್ತಿದೆ.


ಈ ಕೌಶಲ್ಯ ಶಿಕ್ಷಣವನ್ನು ಯಾವ ಯಾವ ಕ್ಷೇತ್ರಗಳ ಬಗ್ಗೆ ನೀಡಲಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನಾವಿಲ್ಲಿ ನಿಮ್ಮೊಂದಿಗೆ ಹಂಚಿಕೊಂಡಿದ್ದೇವೆ ಗಮನಿಸಿ. ಮಕ್ಕಳು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಕೌಶಲ್ಯವನ್ನು ಬೆಳೆಸಿಕೊಂಡು ವೃತ್ತಿಪರತೆ ಕಾಪಾಡಿಕೊಳ್ಳಲಿ ಎಂಬುದೇ ಇದರ ಉದ್ದೇಶವಾಗಿದೆ.


ಕುಂಬಾರಿಕೆ, ಬೇಕಿಂಗ್, ಖಾದಿ, ಬ್ಲಾಕ್ ಪ್ರಿಂಟಿಂಗ್, ಮಾಸ್ಕ್ ತಯಾರಿಕೆ, ಕಾಶ್ಮೀರಿ ಕಸೂತಿ, ಆಹಾರ ಸಂರಕ್ಷಣೆ, ಸಮೂಹ ಮಾಧ್ಯಮ ಮತ್ತು ಇತರ ವಿಷಯಗಳ ಕುರಿತು ಹಲವಾರು ವೆಬ್‌ನಾರ್‌ಗಳನ್ನು ಏರ್ಪಡಿಸಲಾಗಿದೆ. ಈ ವೆಬ್‌ನಾರ್‌ಗಳು CBSE YouTube ಚಾನಲ್‌ನಲ್ಲಿ ಮೇ 19 ರವರೆಗೆ ವೀಕ್ಷಿಸಲು ಲಭ್ಯವಿದೆ. ಯಾರು ಬೇಕಾದರೂ ಈ  ಕುರಿತು ತರಬೇತಿಯನ್ನು ಪಡೆದುಕೊಳ್ಳಲು ಈ ಯೂಟ್ಯೂಬ್​ ಚಾನೆಲ್ ಮಾಹಿತಿ ತುಂಬಾ ಸಹಕಾರಿಯಾಗುತ್ತದೆ.


ಕೌಶಲ್ಯ ವೆಬ್‌ನಾರ್‌ಗಳಿಗಾಗಿ ವೇಳಾಪಟ್ಟಿ ಹೀಗಿದೆ
ಮೇ 1 - ಶಾಲೆಗಳಲ್ಲಿ ಸ್ಕಿಲ್ ಮಾಡ್ಯೂಲ್‌ಗಳನ್ನು ಪರಿಚಯಿಸುವ ಕುರಿತು ಮಾಹಿತಿ


ಇದನ್ನೂ ಓದಿ: College Admission: ಪಿಯುಸಿ ಮುಗಿಸಿ ಪದವಿ ಶಿಕ್ಷಣಕ್ಕಾಗಿ ಕಾಲೇಜ್ ಹುಡುಕುತ್ತಿದ್ದೀರಾ? ಹಾಗಾದ್ರೆ ಇಲ್ಲಿ ಗಮನಿಸಿ


ಮೇ 2 - ಕುಂಬಾರಿಕೆ


ಮೇ 3 - ಬೇಕರಿ


ಮೇ 4 - ಖಾದಿ


ಮೇ 8 - ಗ್ರಾಫಿಕ್


ಮೇ 9 - ಬ್ಲಾಕ್ ಪ್ರಿಂಟಿಂಗ್


ಮೇ 10 - ಮಾಸ್ಕ್ ತಯಾರಿಕೆ


ಮೇ 11 - ಸಮೂಹ ಮಾಧ್ಯಮ


ಮೇ 12 - ಹರ್ಬಲ್ ಹೆರಿಟೇಜ್


ಮೇ 15 - ಆಹಾರ ಸಂರಕ್ಷಣೆ


ಮೇ 16 - ಕುಂಬಾರಿಕೆ


ಮೇ 17 - ಕಾಶ್ಮೀರಿ ಕಸೂತಿ


ಮೇ 18 - ಆಹಾರ


ಮೇ 19 - ಕಸೂತಿ
ಕರಕುಶಲ, ಕೋಡಿಂಗ್, ಹಣಕಾಸು ಸಾಕ್ಷರತೆ, ಕೃತಕ ಬುದ್ಧಿಮತ್ತೆ, ವಿನ್ಯಾಸ ಚಿಂತನೆ, ಡಿಜಿಟಲ್ ಪೌರತ್ವ,  (AR) ಮತ್ತು ವರ್ಚುವಲ್ ರಿಯಾಲಿಟಿ (VR), ಗಿಡಮೂಲಿಕೆಗಳಂತಹ ವಿಷಯಗಳ ಕುರಿತು 6-8 ತರಗತಿಗಳಿಗೆ ಅಧ್ಯಯನ ಸಾಮಗ್ರಿಗಳು ಮತ್ತು ಕೌಶಲ್ಯ ಮಾಡ್ಯೂಲ್‌ಗಳನ್ನು ಅಭಿವೃದ್ಧಿಪಡಿಸಲು CBSE ನಿರ್ಧಾರ ತೆಗೆದುಕೊಂಡಿದೆ. ಪರಂಪರೆ, ಮತ್ತು ಇನ್ನಷ್ಟು ವಿಷಯಗಳ ಮಾಹಿತಿ ನೀಡುತ್ತದೆ. ಸಂಪೂರ್ಣ ಐಚ್ಛಿಕ ಕೋರ್ಸ್‌ಗಳಾಗಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿರುವ ಈ ಮಾಡ್ಯೂಲ್‌ಗಳು ಒಟ್ಟು ಸುಮಾರು 10-15 ಗಂಟೆಗಳ ಅಧ್ಯಯನಕ್ಕೆ ಪೂರಕವಾಗಿದೆ.

top videos


  ECO CLUBS ಮೂಲಕ ಈ ಮಾಡ್ಯೂಲ್‌ಗಳನ್ನು ಹೇಗೆ ಸೇರಿಸುವುದು ಮತ್ತು ಹೇಗೆ ವಿದ್ಯಾರ್ಥಿಗಳಿಗೆ ನೀಡುವುದು ಎಂದು ತಿಳಿಸಲಾಗುತ್ತದೆ. ಇದಕ್ಕಾಗಿ ಬೇರೆ ಅವಧಿಯನ್ನು ಮೀಸಲಿಡುವ ಬದಲು ಈಗ ನಿಗದಿಪಡಿಸಿದ ಅವಧಿಯಲ್ಲೇ ಮಕ್ಕಳಿಗೆ ಈ ಕುರಿತು ತರಬೇತಿ ನೀಡಲಾಗುತ್ತದೆ. ಇದಕ್ಕಾಗಿ ಬೇರೆ ಶಿಕ್ಷಕರ ಅಗತ್ಯ ಬೀಳುವುದಿಲ್ಲ ಎಂದು ಹೇಳಲಾಗಿದೆ. ನೀವೂ ಈ ಯುಟ್ಯೂಬ್ ಜಾನೆಲ್ಗೆ ಭೇಟಿ ನೀಡಿ ಅಲ್ಲಿ ಬರುವ ಮಾಹಿತಿಗಳನ್ನು ನೀವು ಪಡೆದುಕೊಳ್ಳಬಹುದು.

  First published: