• Home
  • »
  • News
  • »
  • jobs
  • »
  • CBSE Guidelines: 10 ಹಾಗೂ 12ನೇ ತರಗತಿ ಪ್ರಾಯೋಗಿಕ ಪರೀಕ್ಷಾ ಮಾರ್ಗಸೂಚಿ ಪ್ರಕಟ

CBSE Guidelines: 10 ಹಾಗೂ 12ನೇ ತರಗತಿ ಪ್ರಾಯೋಗಿಕ ಪರೀಕ್ಷಾ ಮಾರ್ಗಸೂಚಿ ಪ್ರಕಟ

CBSC

CBSC

CBSE ಬೋರ್ಡ್ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ಮಾರ್ಗಸೂಚಿಗಳನ್ನು CBSE ಪ್ರಧಾನ ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಹಾಗೂ ಪಾಲಕರು ಈ ಸೂಚನೆಗಳ ಬಗ್ಗೆ ಗಮನ ಕೊಡುವಂತೆ ಸೂಚಿಸಲಾಗಿದೆ.

  • Share this:

ಇದೀಗ ಹತ್ತು ಹಾಗೂ ಹನ್ನೆರಡನೆ ತರಗತಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಇದಕ್ಕೆ ಸಂಬಂಧಿಸಿದಂತೆ,  ಕೆಲವು ಸಿದ್ಧತೆಗಳು ನಡೆಯುತ್ತಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 2022-23ರ ಶೈಕ್ಷಣಿಕ ಅವಧಿಗೆ 10, 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು (Practical Exam), ಮೌಲ್ಯಮಾಪನಗಳು ಮತ್ತು ಯೋಜನೆಗಳಿಗಾಗಿ (Plan) ಮಾರ್ಗಸೂಚಿಗಳನ್ನು(Guideline) ಬಿಡುಗಡೆ ಮಾಡಿದೆ. CBSE ಬೋರ್ಡ್ ಪ್ರಾಯೋಗಿಕ ಪರೀಕ್ಷೆಗಳು 2022-23 ಜನವರಿ 1, 2023 ರಂದು ಪ್ರಾರಂಭವಾಗಲಿದೆ. ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳು, ಶಾಲೆಗಳು ಮತ್ತು ಪ್ರಾದೇಶಿಕ ಕಚೇರಿಗಳಿಗೆ CBSE ಬೋರ್ಡ್ ಪ್ರಾಯೋಗಿಕ ಪರೀಕ್ಷೆಗಳ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 


ಅಧಿಕೃತ ಬಿಡುಗಡೆಯ ಪ್ರಕಾರ, ಶಾಲೆಗಳು ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಅಧ್ಯಯನದ ವಿಷಯಗಳನ್ನು ಸರಿಯಾಗಿ ನಮೂದಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು CBSE ವಿದ್ಯಾರ್ಥಿಗಳು ಹಾಗೂ ಅದನ್ನು ಗಮನಿಸುವಂತೆ ಪೋಷಕರಿಗೆ ಸೂಚನೆ ನೀಡಿದೆ. ಪಠ್ಯಕ್ರಮ ಮತ್ತು ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಬೇಕಾದ ವಿಷಯಗಳ ಬಗ್ಗೆ ತಿಳಿದಿರುವಂತೆ ಮಂಡಳಿಯು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದೆ.


ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗಲು ಅಭ್ಯರ್ಥಿಗಳಿಗೆ ಹೆಚ್ಚಿನ ಸಮಯಾವಕಾಶವನ್ನು  ಒದಗಿಸಲಾಗುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ವೇಳಾಪಟ್ಟಿಯ ಪ್ರಕಾರ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ.


ಇದನ್ನೂ ಓದಿ: PUC Marks: ಪಿಯು ಪರೀಕ್ಷಾ ಪದ್ಧತಿಯಲ್ಲಿ ಮಹತ್ತರ ಬದಲಾವಣೆ ತರಲು ರಾಜ್ಯ ಸರ್ಕಾರ ನಿರ್ಧಾರ


CBSE ಬೋರ್ಡ್ ಪ್ರಾಯೋಗಿಕ ಪರೀಕ್ಷೆಗಳು 2022-23 ಶಾಲೆಗಳಿಗೆ ಮಾರ್ಗಸೂಚಿಗಳು ಹೀಗಿವೆ


1. ಪ್ರಾಯೋಗಿಕ ಪರೀಕ್ಷೆಗಳ ಪಠ್ಯಕ್ರಮವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಂತೆ ಸಿಬಿಎಸ್‌ಇ ಶಾಲೆಗಳಿಗೆ ಸೂಚನೆ ನೀಡಿದೆ.
2. ಪ್ರಯೋಗಾಲಯಗಳ ತಯಾರಿ, ಅವಶ್ಯಕ ಸಾಮಗ್ರಿಗಳ ಸಂಗ್ರಹಣೆ ಮತ್ತು ಆಂತರಿಕ ಪರೀಕ್ಷಕರ ಗುರುತಿನ ಚೀಟಿಗಳಂತಹ ಅಗತ್ಯ ವ್ಯವಸ್ಥೆಗಳನ್ನು ಸಮಯಕ್ಕೆ ಸರಿಯಾಗಿ ಮಾಡಲಾಗಿದೆ ಎಂದು ಶಾಲೆಗಳು ಖಚಿತಪಡಿಸಿಕೊಳ್ಳಬೇಕು.
3. ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಪ್ರಾಯೋಗಿಕ ಪರೀಕ್ಷೆಗಳ CBSE ದಿನಾಂಕವನ್ನು ಈಗಲೇ ಸೂಚಿಸಲಾಗಿದ್ದ ಅದರ ಪ್ರಕಾರ ವಿಳಂಬ ಮಾಡದೆ ಹಾಜರಿರಲು ಸೂಚಿಸಲಾಗಿದೆ.
4. CBSE ಬೋರ್ಡ್ 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳನ್ನು ಮಂಡಳಿಯು ನೇಮಿಸಿದ ಬಾಹ್ಯ ಪರೀಕ್ಷಕರು ಮಾತ್ರ ನಡೆಸುತ್ತಾರೆ.
5. ಶಾಲೆಯಿಂದ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳ ಪಟ್ಟಿಯನ್ನು (LOC) ಆನ್‌ಲೈನ್ ವ್ಯವಸ್ಥೆಯಿಂದ ಪರಿಶೀಲಿಸಬೇಕು.


CBSE ಬೋರ್ಡ್ ಪ್ರಾಯೋಗಿಕ ಪರೀಕ್ಷೆ ನಿಯಮಗಳು
CBSE ಬೋರ್ಡ್ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ಮಾರ್ಗಸೂಚಿಗಳನ್ನು CBSE ಪ್ರಧಾನ ಕಚೇರಿಯಿಂದ ಬಿಡುಗಡೆ ಮಾಡಲಾಗಿದೆ.  ತಕ್ಷಣ ಶಾಲೆಗಳೊಂದಿಗೆ ಹಂಚಿಕೊಳ್ಳಲಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದು ಪ್ರಾದೇಶಿಕ ಕಚೇರಿಗಳಿಗೆ ಸೂಚನೆ ನೀಡಿದೆ. ಪ್ರಾಯೋಗಿಕ ಪರೀಕ್ಷೆಗಳನ್ನು ಎಲ್ಲಾ ಶಾಲೆಗಳು ಅಧಿಸೂಚಿತ ವೇಳಾಪಟ್ಟಿಯೊಳಗೆ ಪೂರ್ಣಗೊಳಿಸಬೇಕು ಮತ್ತು ಅಂಕಗಳನ್ನು ಸಹ ಬೇಗ ನಿಗದಿತ ಸಮಯದೊಳಗೆ ಅಪ್‌ಲೋಡ್ ಮಾಡಬೇಕು ಎಂದು ಸೂಚಿಸಲಾಗಿದೆ.  ಈ ವ್ಯವಸ್ಥೆ ಸರಿಯಾಗಿ ಆಗಿದೆಯೋ ಇಲ್ಲವೋ ಎಂಬ ಬಗ್ಗೆ ಪ್ರಾದೇಶಿಕ ಕಛೇರಿಗಳು ಮಾಹಿತಿ ಸಂಗ್ರಹಿಸಬೇಕು ಎಂದು ತಿಳಿಸಲಾಗಿದೆ.


ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಸಲಹೆ
ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ಇಬ್ಬರಿಗೂ ಈ ಸೂಚನೆಗಳ ಬಗ್ಗೆ ಗಮನ ಕೊಡುವಂತೆ ಸೂಚಿಸಲಾಗಿದೆ. ಈ ವಿಷಯದಲ್ಲಿ ಯಾವುದಾದರು ತೊಂದರೆಗಳಿದ್ದರೆ ಅದನ್ನು ಈ ತಕ್ಷಣವೇ ಸರಿಪಡಿಸಿಕೊಳ್ಳಲು ಸೂಚಿಸಲಾಗಿದೆ. ಈ ಮೇಲೆ ನೀಡಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಪಾಲಿಸುವುದರ ಜೊತೆಗೆ ಪರೀಕ್ಷಾ ತಯಾರಿ ನಡೆಸಿಕೊಳ್ಳಬೇಕು. ಪ್ರಾಯೋಗಿಕ ಪರೀಕ್ಷೆಗಳು ಲಿಖಿತ ಪರೀಕ್ಷೆಗಳಿಗಿಂತ ಭಿನ್ನವಾಗಿದ್ದು ಇದರ ತಯಾರಿಕೂಡ ಭಿನ್ನವಾಗಿರುತ್ತದೆ.


ಪರೀಕ್ಷೆ ಕುರಿತು ಭಯ ಪಡದೇ ಈಗಿನಿಂದಲೇ ತಯಾರಿನಡೆಸಿ. ಪರೀಕ್ಷಾ ಮಂಡಳಿಯ ಸೂಚನೆಗಳನ್ನು ಪಾಲಿಸುತ್ತಿರಿ ಮತ್ತು ಅನುಸರಿಸುತ್ತಿರಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು