• ಹೋಂ
  • »
  • ನ್ಯೂಸ್
  • »
  • Jobs
  • »
  • CBSE 12th Results 2023: ಸಿಬಿಎಸ್‌ಸಿ 12ನೇ ತರಗತಿ ಫಲಿತಾಂಶ ಪ್ರಕಟ; ಈ ಲಿಂಕ್ ಬಳಸಿ ಚೆಕ್ ಮಾಡಿ

CBSE 12th Results 2023: ಸಿಬಿಎಸ್‌ಸಿ 12ನೇ ತರಗತಿ ಫಲಿತಾಂಶ ಪ್ರಕಟ; ಈ ಲಿಂಕ್ ಬಳಸಿ ಚೆಕ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಇಂದು ಪ್ರಕಟಿಸಲಾಗಿದೆ. ಈ ವರ್ಷ ಫೆಬ್ರವರಿ 15 ರಿಂದ ಏಪ್ರಿಲ್ 5, 2023 ರವರೆಗೆ ನಡೆದ ಪರೀಕ್ಷೆಗೆ ಸುಮಾರು 16.9 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.

  • News18 Kannada
  • 3-MIN READ
  • Last Updated :
  • Karnataka, India
  • Share this:

ವಿದ್ಯಾರ್ಥಿಗಳೆಲ್ಲರೂ ಕಾತರದಿಂದ ಕಾಯುತ್ತಿದ್ದ CBSE ಫಲಿತಾಂಶ ಈಗಾಗಲೇ ಪ್ರಕಟವಾಗಿದೆ. ಆದರೆ ಕೇವಲ 12ನೇ ತಗರತಿ ವಿದ್ಯಾರ್ಥಿಗಳ ಫಲಿತಾಂಶ ಮಾತ್ರ ಪ್ರಕಟವಾಗಿದೆ. ನೀವೂ ಕೂಡಾ ಫಲಿತಾಂಶ ಚೆಕ್ ಮಾಡಲು ಬಯಸಿದರೆ ನಾವಿಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಚೆಕ್ (Check) ಮಾಡಿ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಈಗ 12ನೇ ತರಗತಿ ಫಲಿತಾಂಶ ಬಿಡುಗಡೆಯಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳ ಫಲಿತಾಂಶಗಳನ್ನು ಇಂದು ಪ್ರಕಟಿಸಲಾಗಿದೆ. ಈ ವರ್ಷ ಫೆಬ್ರವರಿ 15 ರಿಂದ ಏಪ್ರಿಲ್ 5, 2023 ರವರೆಗೆ ನಡೆದ ಪರೀಕ್ಷೆಗೆ ಸುಮಾರು 16.9 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.


16.9 ಲಕ್ಷ ವಿದ್ಯಾರ್ಥಿಗಳು ಇಂದು ಫಲಿತಾಂಶವನ್ನು ಚೆಕ್ ಮಾಡಲಿದ್ದಾರೆ. ಫೆಬ್ರವರಿ 15 ರಿಂದ ಏಪ್ರಿಲ್ 5, 2023 ರವರೆಗೆ ನಡೆದ ಪರೀಕ್ಷೆಗಳೊಂದಿಗೆ ಈ ವರ್ಷ ಸುಮಾರು 39 ಲಕ್ಷ ವಿದ್ಯಾರ್ಥಿಗಳು CBSE ಬೋರ್ಡ್ ಪರೀಕ್ಷೆ ಬರೆದಿದ್ದಾರೆ. ಹತ್ತು ಮತ್ತು ಹನ್ನೆರಡನೇ ತರಗತಿಗಳ ಎರಡೂ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಮತ್ತು ಈಗ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.


ಆದರೆ ಹತ್ತನೇ ತರಗತಿ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ.  ನೀವು 12ನೇ ತರಗತಿ ಪರೀಕ್ಷೆಯ ಫಲಿತಾಂಶವನ್ನು ಚೆಕ್ ಮಾಡಲು ನೀವು https://cbseresults.nic.in/ ಈ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ


ಇದನ್ನೂ ಓದಿ: Life Lesson: ಮಕ್ಕಳಿಗೆ ಹೇಳಿಕೊಡಲೇಬೇಕಾದ ಜೀವನ ಪಾಠ ಇದು!


ಶೇಕಡಾ 87.33ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ವರದಿಯಾಗಿದೆ. ಈ ವರ್ಷ ಸುಮಾರು 16.9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 7.4 ಲಕ್ಷ ವಿದ್ಯಾರ್ಥಿನಿಯರು, 9.51 ಲಕ್ಷ ಪುರುಷ ಅಭ್ಯರ್ಥಿಗಳು ಮತ್ತು 5 ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ. 36 ದಿನಗಳಲ್ಲಿ ಒಟ್ಟು 115 ವಿಷಯಗಳಿಗೆ ಪರೀಕ್ಷೆಗಳನ್ನು ನಡೆಸಲಾಗಿದ್ದು ಫಲಿತಾಂಶ ಈಗ ಪ್ರಕಟವಾಗಿದೆ. ಹತ್ತನೇ ತಗರತಿ ವಿದ್ಯಾರ್ಥಿಗಳ ಫಲಿತಾಂಶ ಕೂಡಾ ಶೀಫ್ರವೇ ಬಿಡುಗಡೆಯಾಗಲಿದೆ.




ಯಾವುದೇ ಮೆರಿಟ್​ ಪಟ್ಟಿಯನ್ನು ಬಿಡುಗಡೆ ಮಾಡಲಾಗಿಲ್ಲ. ಈ ವರ್ಷದ ಉತ್ತೀರ್ಣ ಶೇಕಡಾವಾರು ಲೆಕ್ಕ ಹಾಕಿದರೆ ಉತ್ತಮ ಫಲಿತಾಂಶ ಪ್ರಕಟವಾಗಿದೆ. 2019 ರ ಶೇಕಡಾ 83.40%  ಉತ್ತೀರ್ಣರಾಗಿದ್ದರು. ಆ ವರ್ಷಕ್ಕಿಂತ 2023ರಲ್ಲಿ ಉತ್ತಮ ಫಲಿತಾಂಶ ವರದಿಯಾಗಿದೆ.

top videos


    ಇದರಲ್ಲೂ ಫಲಿತಾಂಶ ಚೆಕ್ ಮಾಡಬಹುದು
    cbseresults.nic.in, results.cbse.nic.in, cbse.nic.in, ಮತ್ತು cbse.gov.in ಸೇರಿದಂತೆ ಅಧಿಕೃತ ವೆಬ್‌ಸೈಟ್‌ಗಳಲ್ಲಿ ವಿದ್ಯಾರ್ಥಿಗಳು ತಮ್ಮ CBSE ತರಗತಿ 10 ಮತ್ತು 12 ಫಲಿತಾಂಶಗಳನ್ನು ಪರಿಶೀಲಿಸಬಹುದು. ಅವರು DigiLocker ಮತ್ತು UMANG ಅಪ್ಲಿಕೇಶನ್‌ನಂತಹ ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಸಹ ಬಳಸಬಹುದು.

    First published: