• ಹೋಂ
 • »
 • ನ್ಯೂಸ್
 • »
 • Jobs
 • »
 • CBSE 10th Result 2023: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಟಕ; ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

CBSE 10th Result 2023: ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಟಕ; ಚೆಕ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿದ್ಯಾರ್ಥಿಗಳು ತಮ್ಮ CBSE 10 ನೇ ತರಗತಿಯ ಫಲಿತಾಂಶಗಳನ್ನು ಚೆಕ್ ಮಾಡಲು ನಾವಿಲ್ಲಿ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಈ ಕೂಡಲೆ ಫಲಿತಾಂಶ ಪರಿಶೀಲಿಸಿ.

 • Share this:

ಬೆಳಿಗ್ಗೆಯಷ್ಟೇ ಹನ್ನೆರಡನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿತ್ತು ಈಗ ಅದರ ಬೆನ್ನಲ್ಲೇ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಕೂಡಾ ಪ್ರಕಟವಾಗಿದೆ. CBSE 10 ನೇ ತರಗತಿ ಫಲಿತಾಂಶ 2023 ಅನ್ನು ಮೇ 12, 2023 ರಂದು ಬಿಡುಗಡೆ ಮಾಡಲಾಗಿದೆ.  ಇದನ್ನು ನೀವು ಚೆಕ್ ಮಾಡಲು ನಾವು ನೀಡಿದ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬಹುದು. CBSE 10ನೇ ಫಲಿತಾಂಶ 2023 cbseresults.nic.in ನಲ್ಲಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀವು ಪರಿಶೀಲಿಸಬಹುದು. 


ಈ ನಾಲ್ಕು ಅಧಿಕೃತ ಜಾಲತಾಣಕ್ಕೆ ಯಾವುದಕ್ಕೆ ಬೇಕಾದರೂ ವಿಸಿಟ್​ ಮಾಡಿ ನೀವು ನಿಮ್ಮ ಫಲಿತಾಂಶವನ್ನು ಚೆಕ್ ಮಾಡಬಹುದು. ಡಿಜಿಲಾಕರ್​ ಎಂಬ ಇನ್ನೊಂದು ಆ್ಯಪ್​ ಇದೆ. ಅದರ ಮೂಲಕವೂ ನೀವು ಫಲಿತಾಂಶವನ್ನು ಚೆಕ್ ಮಾಡಬಹುದು.


ಇದನ್ನೂ ಓದಿ: CBSE ಫಲಿತಾಂಶದಲ್ಲಿ ಈ ಬಾರಿ ಬೆಂಗಳೂರು ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ? ಇಲ್ಲಿದೆ ಉತ್ತರ


BSE 10 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 24 ರಿಂದ ಮಾರ್ಚ್ 10, 2023 ರವರೆಗೆ ನಡೆದಿದ್ದವು. 21.4 ಲಕ್ಷ ಹುಡುಗಿಯರು ಮತ್ತು 13.4 ಲಕ್ಷ ಹುಡುಗರು ಸೇರಿದಂತೆ ಒಟ್ಟು 34.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದರು. ಈ ಎಲ್ಲಾ ವಿದ್ಯಾರ್ಥಿಗಳು ಸಹ ಈಗ ತಮ್ಮ ಫಲಿತಾಂಶವನ್ನು ಚೆಕ್ ಮಾಡಬಹುದು. ನಾವು ಈ ಮೇಲೆ ನೀಡಿರುವ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಚೆಕ್ ಮಾಡಿ.
CBSE ಬೋರ್ಡ್ ಫಲಿತಾಂಶ 2023 ಪರಿಶೀಲಿಸಲು ಮತ್ತೇನು ಮಾಡಬಹುದು? 
ಅಧಿಕೃತ ವೆಬ್‌ಸೈಟ್ ಜೊತೆಗೆ, ವಿದ್ಯಾರ್ಥಿಗಳು ತಮ್ಮ CBSE ಫಲಿತಾಂಶ 2023 ಅನ್ನು ಪರಿಶೀಲಿಸಲು ಪರ್ಯಾಯ ಮಾರ್ಗಗಳನ್ನು ಬಳಸಬಹುದು ಅದೇನೆಂದರೆ. ಡಿಜಿಲಾಕರ್ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ CBSE ಫಲಿತಾಂಶಗಳನ್ನು ಪರಿಶೀಲಿಸಬಹುದು. ಇದನ್ನು ಮಾಡಲು, ಅವರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು ಅಥವಾ ವೆಬ್‌ಸೈಟ್,digilocker.gov.inನಲ್ಲಿ ನೋಂದಾಯಿಸಿಕೊಳ್ಳಬೇಕು.


ಫಲಿತಾಂಶಗಳನ್ನು ಪ್ರಕಟಿಸಿದ ದಿನದಂದು, ಡಿಜಿಲಾಕರ್ ಮುಖಪುಟದಲ್ಲಿ ಅಂಕಪಟ್ಟಿಗಳನ್ನು ವೀಕ್ಷಿಸಲು ಲಿಂಕ್‌ಗಳನ್ನು ಪ್ರದರ್ಶಿಸಲಾಗುತ್ತದೆ. ಹೆಚ್ಚುವರಿಯಾಗಿ, ವಿದ್ಯಾರ್ಥಿಗಳು ತಮ್ಮ ಮಾರ್ಕ್‌ಶೀಟ್‌ಗಳ ಡಿಜಿಟಲ್ ಪ್ರತಿಗಳನ್ನು, ಪಾಸ್ ಪ್ರಮಾಣಪತ್ರಗಳು ಮತ್ತು ಇತರ ಸಂಬಂಧಿತ ದಾಖಲೆಗಳನ್ನು ಕೂಡಾ ಅಲ್ಲೇ ಪಡೆದುಕೊಳ್ಳಲು ಇದು ಸಹಾಯಕವಾಗಿದೆ.


ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್,CBSE12ನೇ ತರಗತಿಯ ಫಲಿತಾಂಶ ಹೊರಬಿದ್ದಿದೆ. ಎಲ್ಲಾ 87.33% ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
CBSE 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಒಟ್ಟಾರೆ ವಿದ್ಯಾರ್ಥಿಗಳ ಫಲಿತಾಂಶ ಕೂಡಾ ಈಗಾಗಲೇ ಪ್ರಕಟವಾಗಿದೆ. ಈ ಬಾರಿಯೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಒಟ್ಟಾರೆ ಪಾಸ್​ ಆದ ವಿದ್ಯಾರ್ಥಿಗಳ ಸಂಖ್ಯೆ 87.33% ಹೀಗಿದೆ.

top videos


  ಬೆಂಗಳೂರಿಗೆ ಎರಡನೇ ಸ್ಥಾನ
  ಹಾಗಾದರೆ ಬೆಂಗಳೂರಿನ ವಿದ್ಯಾರ್ಥಿಗಳು ಎಷ್ಟು ಜನ ಪಾಸ್​ ಆಗಿದ್ದಾರೆ. ಈ ಬಾರಿ ಫಲಿತಾಂಶದಲ್ಲಿ ಬೆಂಗಳೂರು ಎಷ್ಟನೇ ಸ್ಥಾನ ಪಡೆದುಕೊಂಡಿದೆ ಎಂಬ ನಿಖರ ಮಾಹಿತಿ ಇಲ್ಲಿದೆ ಗಮನಿಸಿ.ಬೆಂಗಳೂರಿನ ವಿದ್ಯಾರ್ಥಿಗಳು ಈ ಬಾರಿ 2ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. 2ನೇ ಅತಿ ಹೆಚ್ಚು ಉರ್ತೀರ್ಣರಾದ ವಿದ್ಯಾರ್ಥಿಗಳು ಬೆಂಗಳೂರಿನವರಾಗಿದ್ದಾರೆ. ಹಾಗಾದರೆ ಮೊದಲನೇ ಸ್ಥಾನ ಪಡೆದುಕೊಂಡದ್ದು ಯಾರಿರಬಹುದು ಎಂಬ ಕುತೂಹಲ ಈಗ ನಿಮ್ಮಲ್ಲಿರುತ್ತದೆ.

  First published: