• ಹೋಂ
  • »
  • ನ್ಯೂಸ್
  • »
  • Jobs
  • »
  • CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

CBSE 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

CBSE ಅಧಿಕೃತ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಹಲವಾರು ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿರುವ ನೋಟೀಸ್ ನಕಲಿ ಎಂದು CBSEಯ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

  • Share this:

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರತಿಯ ಫಲಿತಾಂಶಗಳನ್ನು ಶೀಘ್ರದಲ್ಲೇ ಪ್ರಕಟಿಸಲಿದೆ.  ವಿದ್ಯಾರ್ಥಿಗಳಿಗೆ ಫಲಿತಾಂಶದ ಕುರಿತು ತುಂಬಾ ಆಸಕ್ತಿ ಇದೆ. ಇದರಿಂದ ವಿದ್ಯಾರ್ಥಿಗಳು ಎಲ್ಲಾ ಪ್ರಮುಖ ಮಾಹಿತಿಗಳನ್ನು ಗಮನಿಸುತ್ತಾ ಬಂದಿದ್ದಾರೆ. ಪರೀಕ್ಷಾ (Exam) ಮಂಡಳಿ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಫಲಿತಾಂಶವನ್ನು ಪ್ರಕಟಿಸುವುದಾಗಿ ತಿಳಿಸಿಕೊಟ್ಟಿದೆ.  ಹಿಂದಿನ ಆವೃತ್ತಿಯು ಮೇ 11 ರಂದು ಫಲಿತಾಂಶಗಳನ್ನು (Result) ಪ್ರಕಟಿಸಲಾಗುವುದು ಎಂದು ಹೇಳಿತ್ತು ಆದರೆ ಫಲಿತಾಂಶ ಪ್ರಕಟವಾಗಿಲ್ಲಾ. ದಿನಾಂಕವನ್ನು ಮುಂದೂಡಲಾಗಿದೆ. 


ಆದರೆ ಅಧಿಕೃತ ದಿನಾಂಕವನ್ನು ಇನ್ನೂ ಪ್ರಕಟಿಸಲಾಗಿಲ್ಲ. ಹಲವಾರು ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿರುವ ನೋಟೀಸ್ ನಕಲಿ ಎಂದು CBSE ಯ ಹಿರಿಯ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ. ನಾವು ನಮ್ಮಿಂದಾದ ವಿಳಂಬಕ್ಕಾಗಿ ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದೂ ಸಹ ಹೇಳಿದ್ದಾರೆ.


ಇದನ್ನೂ ಓದಿ: Sewa Fellowship 2023: ಮೇ 21ರ ಒಳಗೆ ಅಪ್ಲೈ ಮಾಡಿ, 20 ಸಾವಿರ ಫೆಲೋಶಿಪ್ ಪಡೆಯಿರಿ


ಫಲಿತಾಂಶ ಬಿಡುಗಡೆಯಾದ ನಂತರ ವಿದ್ಯಾರ್ಥಿಗಳು ತಮ್ಮ ಹೆಸರು ಮತ್ತು ರೋಲ್ ಸಂಖ್ಯೆಯನ್ನು ನಮೂದಿಸುವ ಮೂಲಕ cbse.nic.in, cbseresults.nic.in, cbseresults.gov.in ಮತ್ತು cbse.gov.in ನಲ್ಲಿ ತಮ್ಮ ಫಲಿತಾಂಶವನ್ನು ಪರಿಶೀಲಿಸಬಹುದು .CBSE 10 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಮಾರ್ಚ್ 21 ರವರೆಗೆ ನಡೆದವು ಮತ್ತು ಪರೀಕ್ಷೆಗಳನ್ನು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ನಡೆಸಲಾಯಿತು. 2023 ರಲ್ಲಿ CBSE 10 ನೇ ತರಗತಿಯ ಪರೀಕ್ಷೆಗಳಿಗೆ 21.87 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.


2022 ರಲ್ಲಿ, ಸುಮಾರು 20 ಲಕ್ಷ ವಿದ್ಯಾರ್ಥಿಗಳು 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಿದ್ದರು. 2022 ಕ್ಕೆ, CBSE ಬೋರ್ಡ್ 10 ನೇ ತರಗತಿ ಪರೀಕ್ಷೆ 2022 ಅನ್ನು ವಿಭಜಿತ ಸ್ವರೂಪದಲ್ಲಿ ನಡೆಸಲಾಯಿತು ಅಂದರೆ ನವೆಂಬರ್-ಡಿಸೆಂಬರ್‌ನಲ್ಲಿ ಟರ್ಮ್ 1 ಪರೀಕ್ಷೆ ಮತ್ತು ಮೇ-ಜೂನ್‌ನಲ್ಲಿ ಟರ್ಮ್ 2- ರೀತಿಯಲ್ಲಿ ಪರೀಕ್ಷೆ ಜರುಗಿತು.
2020 ರಲ್ಲಿ 91.46% ಮತ್ತು 2019 ರಲ್ಲಿ 91.10% ಗೆ ಹೋಲಿಸಿದರೆ 2022 ರಲ್ಲಿ, ಒಟ್ಟಾರೆ ಉತ್ತೀರ್ಣ ಶೇಕಡಾ 94.40 ರಷ್ಟಿತ್ತು. 2021 ರಲ್ಲಿ, ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶಗಳನ್ನು ಪರ್ಯಾಯ ಮೌಲ್ಯಮಾಪನದ ಆಧಾರದ ಮೇಲೆ ನಿರ್ಧರಿಸಲಾಗಿತ್ತು.  CBSE 10 ನೇ ತರಗತಿ ಪರೀಕ್ಷೆಗಳು ಫೆಬ್ರವರಿ 15 ರಿಂದ ಮಾರ್ಚ್ 21 ರವರೆಗೆ ನಡೆದವು ಮತ್ತು ಪರೀಕ್ಷೆಗಳನ್ನು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ ನಡೆಸಲಾಯಿತು. 2023 ರಲ್ಲಿ CBSE 10 ನೇ ತರಗತಿಯ ಪರೀಕ್ಷೆಗಳಿಗೆ 21.87 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈಗ ಎಲ್ಲಾ ವಿದ್ಯಾರ್ಥಿಗಳು ತಮ್ಮ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ ಸಧ್ಯದಲ್ಲೇ ಫಲಿತಾಂಶ ಬಿಡುಗಡೆಯಾಗಲಿದೆ.


ಸೇವಾ ಫೆಲೋಶಿಪ್ ಮಾಹಿತಿ
ಸೇವಾ ಫೆಲೋಶಿಪ್ 2023ಕ್ಕೆ ನೀವೂ ಸಹ ಅರ್ಜಿ ಸಲ್ಲಿಸಬಹುದು. ಇದರಿಂದ ನಿಮ್ಮ ಶೈಕ್ಷಣಿಕ ಪ್ರಗತಿಗಾಗಿ ಹಣ ನೀಡಲಾಗುತ್ತದೆ. ನೀವೂ ಇದರ ಪ್ರಯೋಜನ ಪಡೆದುಕೊಳ್ಳಬಹುದು. ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಹಾಯ ಮಾಡುವ ದೃಷ್ಟಿಯಿಂದ ಈ ಫೆಲೋಶಿಪ್​ ನೀಡಲಾಗುತ್ತದೆ. ಯುವ ಶಕ್ತಿಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ನೀವು ಅಪ್ಲೈ ಮಾಡುವುದಾದರೆ ನಾವು ಇಲ್ಲಿ ನೀಡಿರುವ ದಿನಾಂಕಕ್ಕೂ ಮುನ್ನ ಅಪ್ಲೈ ಮಾಡಿ. ಇದಕ್ಕೆ ಅಪ್ಲೈ ಮಾಡಲು ಕೊನೆ ದಿನ ಇದೇ ತಿಂಗಳು ಅಂದರೆ ಮೇ 21.


top videos
    First published: