CBSE 10 ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಹಲವಾರು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಅತಿ ಹೆಚ್ಚು ಅಂಕ (Marks) ತೆಗೆದುಕೊಂಡ ವಿದ್ಯಾರ್ಥಿಯೊಬ್ಬನ ಗುರಿಯ (Goal) ಕಥೆ ಇಲ್ಲಿದೆ ನೋಡಿ. ಬೆಂಗಳೂರಿನ ಸನತ್ ಕೌಂಡಿಲಿಯಾ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಯಾಗಿದ್ದಾರೆ (Student). ಅವರಿಗೆ ತಾನು ಉತ್ತಮ ಅಂಕ ಗಳಿಸುತ್ತೇನೆ ಎಂಬ ನಂಬಿಕೆ ಇತ್ತು ಆದರೆ ಇಷ್ಟೊಂದು ಹೆಚ್ಚಿನ ಅಂಕ ಗಳಿಸುತ್ತೇನೆ ಎಂದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.
ಸನತ್ ಅವರು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ನೇ ತರಗತಿ ಪರೀಕ್ಷೆಗಳಲ್ಲಿ ಗಣಿತ, ವಿಜ್ಞಾನ ಐಟಿ ಮತ್ತು ಸಂಸ್ಕೃತದಲ್ಲಿ 100 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ. ನಂತರ ಇಂಗ್ಲಿಷ್‌ನಲ್ಲಿ 99 ಮತ್ತು ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಗಳಿಸಿದ್ದಾರೆ, ಅದರ ಫಲಿತಾಂಶವು ಮೇ 12 ರಂದು ಬಿಡುಗಡೆಯಾಗಿದೆ.
ಸನತ್ ಅವರು ಪರೀಕ್ಷೆಗೆ ಯಾವ ರೀತಿ ಸಿದ್ಧತೆ ನಡೆಸಿದ್ದರು ಎಂದು ನೀವು ತಿಳಿದುಕೊಳ್ಳಲು ಇಷ್ಟ ಪಡುವುದಾದರೆ ಅವರು ಪರೀಕ್ಷೆ ಒಂದು ಕಠಿಣ ವಿಷಯ ಎಂದು ಭಾವಿಸಿಯೇ ಇರಲಿಲ್ಲ. ಪರೀಕ್ಷೆಯನ್ನು ಸುಲಭವಾಗಿ ಎದುರಿಸುವ ತಯಾರಿ ನಡೆಸಿದ್ದರು. ಪರೀಕ್ಷೆಯಲ್ಲಿ ಪ್ರಶ್ನೆಗಳು ಅಷ್ಟೇನೂ ಕಠಿಣವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Good News: ಬಿಟೆಕ್ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ! ಜೆಎನ್‌ಟಿಯು ಮಹತ್ವದ ನಿರ್ಧಾರ
ರೆಡಾಕ್ಸ್ ಪ್ರತಿಕ್ರಿಯೆಗಳನ್ನು ಆಧರಿಸಿದ ಪ್ರಶ್ನೆಗಳು ಮತ್ತು ಗಣಿತದ ಪತ್ರಿಕೆಯು ಪೂರ್ವ-ಬೋರ್ಡ್ ಪರೀಕ್ಷೆಗಳಿಗಿಂತ ಕಠಿಣವಾಗಿತ್ತು ಎಂದು ಅವರು ಹೇಳಿದ್ದಾರೆ. ತಪ್ಪಾದ ಪ್ರಶ್ನೆಗೆ ಭೋನಸ್ ಅಂಕ ನೀಡಿದ್ದಾರೆ ಎಂದು ಅವರು ಅಂದುಕೊಂಡಿದ್ದರಂತೆ. ಕೌಂಡಿಲಿಯಾ ತನ್ನ ಬಾಲ್ಯದಿಂದಲೂ ಗಣಿತಶಾಸ್ತ್ರದಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದರಂತೆ 11 ನೇ ತರಗತಿಯಲ್ಲಿ PCMC (ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ) ತೆಗೆದುಕೊಳ್ಳಲು ಯೋಜಿಸಿದ್ದರಂತೆ. ಅವರು ಇಂಜಿನಿಯರ್ ಆಗಲು ಮತ್ತು ಗಣಿತವನ್ನು ಅಧ್ಯಯನ ಮಾಡಲು ಬಯಸುತ್ತಿದ್ದಾರಂತೆ.
ಇದರ ಜೊತೆಗೆ ಆರ್ಟೀಫಿಶಿಯಲ್ ಇಂಟೆಲಿಜೆನ್ಸಿಯ ಬಗ್ಗೆಯೂ ಇವರು ತೀವೃ ಆಸಕ್ತಿ ಹೊಂದಿದ್ದಾರೆ. ಆ ಕಾರಣದಿಂದ ಈ ವಿಷಯಗಳನ್ನೇ ಕಲಿಯಲು ನಿರ್ಧರಿಸಿದ್ದಾರೆ.
ಪ್ರಸ್ತುತ, ಅವರು ಜಂಟಿ ಪ್ರವೇಶ ಪರೀಕ್ಷೆ (JEE), IOQM ಮತ್ತು ICHO (ಇಂಟರ್ನ್ಯಾಷನಲ್ ಕೆಮಿಸ್ಟ್ರಿ ಒಲಿಂಪಿಯಾಡ್) ಗೆ ತಯಾರಿ ನಡೆಸುತ್ತಿದ್ದಾರೆ. ಅವರು ಒಲಂಪಿಯಾಡ್‌ಗಳಿಗೆ ಕ್ಯಾಂಪಿಂಗ್ ಮಾಡಲು ಮತ್ತು ಈ ಬೇಸಿಗೆಯ ವಿರಾಮದ ಸಮಯದಲ್ಲಿ ಕೋಡಿಂಗ್ ಕಲಿಕೆ ಪ್ರಾರಂಭಿಸಲು ಯೋಜಿಸಿದ್ದಾರೆ. ಸನತ್ ಐಐಟಿಗೆ ಸೇರಲು ಬಯಸುತ್ತಾರೆ ಏಕೆಂದರೆ ಇದು ವಿಜ್ಞಾನ ಮತ್ತು ಗಣಿತದಲ್ಲಿ ವಿವಿಧ ಆಯ್ಕೆಗಳನ್ನು ನೀಡುತ್ತದೆ.
ಇವರಿಗೆ ಯಾರು ಸ್ಪೂರ್ತಿ ಗೊತ್ತಾ?
ಸ್ವಾಮಿ ವಿವೇಕಾನಂದರು ಅವರ ಸ್ಫೂರ್ತಿಯ ಮೂಲವಂತೆ. ವಿವೇಕಾನಂದರು ಎಲ್ಲಾ ದಿನನಿತ್ಯದ ಸಮಸ್ಯೆಗಳಿಗೆ ಸರಳೀಕೃತ ವಿಧಾನವನ್ನು ನೀಡಿದ್ದಾರೆ ಆದ್ದರಿಂದ ನಿಮ್ಮ ಗುರಿಗಳನ್ನು ಸಾಧಿಸಲು ಹೇಗೆ ಪರಿಹಾರಗಳನ್ನು ನೀವೆ ಕಂಡುಕೊಳ್ಳಬಹುದು ಎಂಬುದನ್ನು ವಿವೇಕಾನಂದರು ಹೇಳಿಕೊಟ್ಟಿದ್ದಾರೆ ಎಂದು ಸನತ್ ಹೇಳಿದ್ದಾರೆ.
ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳ ಮಗನಾದ ಕೌಂಡಿಲಿಯಾ ಅವರು ಗಣಿತ ಮತ್ತು ವಿಜ್ಞಾನದ ಮೇಲಿನ ಪ್ರೀತಿಯೇ ಎಂಜಿನಿಯರಿಂಗ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡಲು ಕಾರಣವಾಯಿತು ಎಂದು ಹೇಳಿದರು. ಸನತ್ ಅವರು UIMO (ಯುನಿಫೈಡ್ ಇಂಟರ್ನ್ಯಾಷನಲ್ ಮ್ಯಾಥಮೆಟಿಕ್ಸ್ ಒಲಿಂಪಿಯಾಡ್) ನಂತಹ ವಿವಿಧ ಒಲಂಪಿಯಾಡ್‌ಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲಿ ಅವರು 30 ನೇ ಶ್ರೇಣಿಯನ್ನು ಪಡೆದಿದ್ದಾರೆ ಮತ್ತು CBSE ನಡೆಸಿದ ಆರ್ಯಭಟ ಗಣಿತ್ ಚಾಲೆಂಜ್‌ನಲ್ಲಿ ಅವರು ಬೆಂಗಳೂರು ಪ್ರದೇಶದ ಟಾಪರ್‌ಗಳಲ್ಲಿ ಒಬ್ಬರಾಗಿದ್ದರು.ಪ್ರಸ್ತುತ, ಬೇಸಿಗೆ ರಜೆಯಲ್ಲಿ, ಅವರು ಬೆಳಿಗ್ಗೆ ಈಜು ಅಭ್ಯಾಸ ಮಾಡಲು ಮತ್ತು ಸಂಜೆ ಫುಟ್ಬಾಲ್ ಆಡಲು ಆದ್ಯತೆ ನೀಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ